೧
ಎಳೆವಯಸಿನಿಂದ ಇಹುದೊಂದು ಆಸೆ
ಒಳಮನದ ಆಸೆ ತಾಲಾತಲದ ಆಸೆ
ಸೂರ್ಯ ಶಿಖರ ಮುಟ್ಟುವಾಸೆ
ಗುಡಿ ಗೋಪುರ ಪೂರಾ ನೋಡುವಂಥ ಒತ್ತಡದಾಸೆ
ಕಲ್ಲುಕಲ್ಲು ಮುಟ್ಟುವಾಸೆ ಶಿಖರಗಾಳಿ ಸವಿಯುವಾಸೆ
ಶಿಖರ ಸುತ್ತ ಸುಳಿಯುವಾಸೆ ಶಿಲೆಶಿಲೆಯ ತಟ್ಟುವಾಸೆ
ಆಸೆ ಮನಸಿನಿಂದ ಬೆಳೆಯುತ್ತಾ ಬಂದ ಒಳಗಿನೊಳಗಿನಾಸೆ\
* * * *
ಎನಿತೆನಿತೋ ಎತ್ತರ ಸುತ್ತ ನೀಲ ನೀಲಾಂಬರ
ಕಣ್ತುಂಬ ಕಾಣುವಾಸೆ ಸೂರ್ಯದೇಗುಲ ಚಿತ್ತಾರ
ಸೋಪಾನ ಸೋಪಾನ ಸುಂದರ ಸೌಂದರ್ಯ ಬಿತ್ತರ
ಇಡೀ ಬೆಟ್ಟ ಮೆಟ್ಟಿಲು ಹಸಿಹಸಿರ ಮೆಟ್ಟಿಲು!
ಹುಲ್ಲು ಬೆಳೆದ ತೊಟ್ಟಿಲು ಗರಿಕೆ ಹುಲ್ಲ ತೊಟ್ಟಿಲು!!
೨
ಏರುವುದೇ ಖುಷಿಯು, ಅಲ್ಲಿಹರಂತೆ ಋಷಿಯು
ಹರಸಾಹಸ ವಿಷಯ, ಗಟ್ಟಿಮಾಡಿ ಹೃದಯ
ಹತ್ತಿದಷ್ಟು ಹೊಸತು ಪರಿಸರದ ಸನಿಹ
ಆ ಸಮೀರ ಸ್ಪರ್ಶ ಆ ನಿಸರ್ಗ ದೃಶ್ಯ
ಆ ಬಾನ ವೈಶಾಲ್ಯ ಕಂಡ? ನಿತ್ಯಸತ್ಯ!
ಆ ಮುದದ ಮುಂದೆ ಮತ್ತೊಂದು ಮುದವಿಲ್ಲ
ಆ ದೇಗುಲಕ್ಕೆ ಯಾವುದೇ ಕದವಿಲ್ಲ
ನೋಡುವುದೇ ಒಂದು ಅನುಭವ
ಆಗಬಹುದು ದರ್ಶನ ಸಂಭವ
ಎತ್ತರೆತ್ತರ ಹತ್ತಿ ಸುತ್ತ ನೋಡಿದಾಗ ಈ ಜಗದ ಉದ್ದ
ಈ ಜಗದ ಅಗಲ
ಅನಂತಾನಂತ ಅಂಬರ ವಿಸ್ತಾರ ವಿಸ್ತಾರ ಅಂಬರ
ಹೀಗೆ ಆಗಬಹುದೇ ಹೃದಯ ಸುಂದರ?
ಹಿಗ್ಗಬಹುದೇ ಮನಸು ಹೀಗೆ ಎತ್ತರ?
ಶಿಖರ ಶಿಖರ ನೋಡುವಾಗ ಮಾನವ ಕುಬ್ಜ ವಿಜಿಗೀ?
ಸೂರ್ಯ ಋಷಿಯು
ಅಲ್ಲಿ ಸಾಧನೆ ಅಬ್ಜ ಗುರಿ ಮುಟ್ಟದಾಗ ಶರಣು
ಹಿರಿಗುರಿಗೆ ಕೋಟಿ ಶರಣು ಬಾಗಿದಷ್ಟು ಶರಣು ಶರಣು.