ಅನೇಕ ವರ್ಷಗಳಿಂದ ಪರಿಹಾರ ಬೇಡುತ್ತಿದ್ದ ಸಮಸ್ಯೆಯೊಂದಕ್ಕೆ ಕಳೆದ (೨೦೧೮) ಮಾರ್ಚ್ ೯ ರಂದು ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ಣಯ ಪರಿಹಾರವನ್ನು ನೀಡಿದೆ. ಮರಣವು ಶತಾಂಶ ನಿಶ್ಚಿತವೆಂಬ ಸ್ಥಿತಿಯಲ್ಲಿರುವ ತೀವ್ರರೋಗಗ್ರಸ್ತರಿಗೆ ನೆಮ್ಮದಿಯಿಂದ ಸಾಯುವ ಅವಕಾಶ ಇರಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ವ್ಯಕ್ತಿಗೆ ಘನತೆಯಿಂದ ಬದುಕುವ ಹಕ್ಕು ಇರುವಂತೆಯೆ ಚಿಕಿತ್ಸೆಯ ಸಾಧ್ಯತೆ ಸುತರಾಂ ಇಲ್ಲದ ಸಂದರ್ಭಗಳಲ್ಲಿ ಘನತೆಯಿಂದ ಸಾಯುವ ಹಕ್ಕೂ ಇರಬೇಡವೆ? -ಎಂಬುದು ಪ್ರಶ್ನೆಯಾಗಿತ್ತು. ಸಾಯಲು ಕಾನೂನಿನ ಪ್ರಾಕಾರದಲ್ಲಿಯೆ ಅವಕಾಶ ಕಲ್ಪಿಸಿದರೆ ಇದರ ದುರ್ವಿನಿಯೋಗವಾಗುವ ಸಾಧ್ಯತೆ ಇರುತ್ತದೆ ಎಂಬುದು ಇದರ ಬಗೆಗೆ ಅನಿಶ್ಚಿತತೆಗೆ ಕಾರಣವಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಸೇರಿದಂತೆ ಐವರು ನ್ಯಾಯಮೂರ್ತಿಗಳ ಪೀಠವು ಘೋಷಿಸಿರುವ ಆದೇಶದ ಮುಖ್ಯಾಂಶಗಳು: (೧) ಯಾವುದೇ ವ್ಯಕ್ತಿಗೆ ಘನತೆಯಿಂದ ಸಾಯುವ ಹಕ್ಕನ್ನು ನಿರಾಕರಿಸಲಾಗದು. ಆದರೆ ಮರಣವನ್ನು ತೀವ್ರಗೊಳಿಸುವಂತಹ ಔ?ಧಗಳನ್ನು ನೀಡಲು ಆಸ್ಪದವಿಲ್ಲ. (೨) ವ್ಯಕ್ತಿಯ ಕಾಯಿಲೆಗೆ ವೈದ್ಯಕೀಯ ಪರಿಹಾರ ಅಲಭ್ಯವೆಂಬುದನ್ನು ವೈದ್ಯಕೀಯ ಮಂಡಳಿ ಸ್ಥಿರೀಕರಿಸಿರಬೇಕು, ಮತ್ತು ಇದಕ್ಕೆ ಉಚ್ಚ ನ್ಯಾಯಾಲಯ ಅನುಮೋದನೆ ನೀಡಿರಬೇಕು. (೩) ಈ ಪ್ರಕ್ರಿಯೆಯ ತರುವಾಯ ಆಯುರ್ವರ್ಧಕ-ಜೀವರಕ್ಷಕ ವೈದ್ಯಕೀಯ ವ್ಯವಸ್ಥೆಗಳನ್ನು ನಿಲ್ಲಿಸಬಹುದು.
‘ದಯಾಮರಣ’(ಯುಥೆನೇಶಿಯಾ)ದಲ್ಲಿ ಎರಡು ವಿಧಾನಗಳಿವೆ: ಮೊದಲನೆಯದು ಮರಣವನ್ನು ಸಮೀಪಗೊಳಿಸುವ ಔ?ಧಗಳ ಪ್ರಯೋಗ; ಎರಡನೆಯದು ವೈದ್ಯಕೀಯ ನೆರವನ್ನು ನಿಲ್ಲಿಸುವುದು. ನ್ಯಾಯಾಲಯವು ಈ ಎರಡನೇ (ಎಂದರೆ ಪ್ಯಾಸ್ಸೀವ್ ಯುಥೆನೇಶಿಯಾ) ಪ್ರಕ್ರಿಯೆಗೆ ಮಾತ್ರ ಅವಕಾಶ ಕಲ್ಪಿಸಿದೆ.
ಹಲವಾರು ವರ್ಷಗಳಿಂದಲೇ ದಯಾಮರಣಕ್ಕೆ ಅವಕಾಶ ಕೋರಿ ಸಲ್ಲಿಸಿದ್ದ ಮನವಿಗಳು ನ್ಯಾಯಾಂಗದ ಮುಂದೆ ಇದ್ದವು. ಆದರೆ ಈ ವಿಷಯದಲ್ಲಿ ವೈದ್ಯಕೀಯ ಚೌಕಟ್ಟಿನೊಡನೆ ನೈತಿಕ ಆಯಾಮವೂ ಸೇರಿರುವುದರಿಂದ ನಿರ್ಣಯ ಸುಲಭವಾಗಿರಲಿಲ್ಲ. ಸಮಸ್ಯೆಗೆ ಕಾನೂನಿನ ಪರಿಹಾರವನ್ನು ನೀಡದಿರುವುದು ಕ್ರೌರ್ಯವೂ ಅಮಾನವೀಯವೂ ಆಗುತ್ತದೆಂದು ಹಲವು ಪ್ರಕರಣಗಳು ಇಡೀ ದೇಶಕ್ಕೇ ಮನವರಿಕೆ ಮಾಡಿಕೊಟ್ಟಿದ್ದವು. ಇವುಗಳಲ್ಲಿ ಅತ್ಯಂತ ಪ್ರಸಿದ್ಧವೂ ದಯನೀಯವೂ ಆದದ್ದು ಮುಂಬಯಿಯ ಅರುಣಾ ಶಾನಭಾಗ ಪ್ರಕರಣ. ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಆಕೆ ಸಹೋದ್ಯೋಗಿಯೊಬ್ಬನಿಂದಲೇ ಅತ್ಯಾಚಾರಕ್ಕೊಳಗಾಗಿ ಪ್ರಜ್ಞಾಹೀನಳಾದಳು. ಆಕೆಯ ಮಿದುಳು ನಿಷ್ಕ್ರಿಯವಾಗಿ ಆಕೆ ಜೀವನ್ಮೃತ ಸ್ಥಿತಿಗೆ ತಲಪಿದಳು. ಅತ್ಯಲ್ಪ ಸಂವೇದನೆಯೂ ಇಲ್ಲದ ಆ ಸ್ಥಿತಿಯಲ್ಲಿ – ದಯಾಮರಣಕ್ಕೆ ಕಾನೂನಿನಲ್ಲಿ ಅವಕಾಶ ಇರದಿದ್ದ ಕಾರಣ – ನಾಲ್ಕು ದಶಕಗಳೇ ಕಳೆದಿದ್ದವು. ಆಕೆಗೆ ದಯಾಮರಣ ಕರುಣಿಸಬೇಕೆಂಬ ಸ್ವಯಂಸೇವಾಸಂಸ್ಥೆಗಳ ಮನವಿಗೆ ನ್ಯಾಯಾಲಯ ಸ್ಪಂದಿಸುವುದಕ್ಕೆ ಮೊದಲೇ ನ್ಯುಮೋನಿಯಾದಿಂದ ಆಕೆ ತೀರಿಕೊಂಡಳು (೧೫ ಮೇ ೨೦೧೫).
ಒಬ್ಬ ರೋಗಿ ಗುಣಮುಖವಾಗುವ ಅತ್ಯಲ್ಪ ಸಾಧ್ಯತೆಯೂ ಇಲ್ಲದ ಪ್ರಕರಣಗಳಲ್ಲಿಯೂ ಚಿಕಿತ್ಸೆಯನ್ನು ತಡೆಹಿಡಿದಲ್ಲಿ ದಂಡನೆಗೆ ಗುರಿಯಾಗಬೇಕಾದೀತೆಂಬ ಭೀತಿ ವೈದ್ಯರನ್ನು ಕಾಡಿತ್ತು. ಸ್ಪಂದನವನ್ನು ಪೂರ್ತಿ ಕಳೆದುಕೊಂಡ ಪ್ರಜ್ಞಾಹೀನ ಸ್ಥಿತಿಯಲ್ಲಿ ರೋಗಿಯನ್ನು ನಿರರ್ಥಕವಾಗಿ ಮುಂದುವರಿಸುವುದು ಕ್ರೌರ್ಯವಷ್ಟೆ ಆಗುತ್ತದೆ – ಎಂಬ ದಯಾಮರಣವಾದಿಗಳ ಮಂಡನೆಯನ್ನು ನಿಕಷಕ್ಕೊಡ್ಡಿ ನಿರ್ಣಯ ಕೈಗೊಳ್ಳಲು ನ್ಯಾಯಾಲಯಕ್ಕೆ ಹಲವು ವ?ಗಳೇ ಹಿಡಿಯಿತು. ಹಣಗಳಿಸುವ ದೃಷ್ಟಿಯಿಂದ ವೈದ್ಯರು ಚಿಕಿತ್ಸೆಯನ್ನು ಅನಾವಶ್ಯಕ ಮುಂದುವರಿಸುತ್ತಾರೆ – ಎಂದು ಆಪಾದಿಸುವವರಿಗೂ ಕಡಮೆಯಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ಆಸ್ಪತ್ರೆಗಳು ಅಸಹಾಯತೆಯನ್ನು ವ್ಯಕ್ತಪಡಿಸಿ ಬಂಧುಗಳ ಇಚ್ಛೆಗೆ ವಿರುದ್ಧವಾಗಿ ರೋಗಿಯನ್ನು ಹೊರಕ್ಕೆ ಕಳಿಸುವುದೂ ಒಮ್ಮೊಮ್ಮೆ ನಡೆದಿತ್ತು. ಹೀಗೆ ಇದು ವೈದ್ಯಕೀಯ ಕ್ಷೇತ್ರಕ್ಕಿಂತ ಮಿಗಿಲಾಗಿ ಸಾಮಾಜಿಕ ಕ್ಷೇತ್ರದ ವಿಷಯವಾಗಿತ್ತು. ಈ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ ನ್ಯಾಯಾಂಗದ ನಿರ್ದೇಶನವಷ್ಟೇ ಪರಿಹಾರ ನೀಡಬಹುದಾಗಿತ್ತು.
ಚಿಕಿತ್ಸಾತೀತ ಸ್ಥಿತಿ ತಲಪಿದ್ದರೂ ಆಲೋಚನಾಶಕ್ತಿಯನ್ನೂ ಪ್ರಜ್ಞೆಯನ್ನೂ ಹೊಂದಿರುವ ರೋಗಿಯು ತಾನಾಗಿ ಸ್ವ-ಇಚ್ಛೆಯಿಂದ ಮರಣವನ್ನು ಬಯಸುತ್ತಿದ್ದೇನೆಂದು ಉಯಿಲು ಬರೆದಿಟ್ಟಿದ್ದಲ್ಲಿ ಅದನ್ನು ಮಾನ್ಯ ಮಾಡಬಹುದೆಂಬ ಅನುಮತಿ ಈಗ ಲಬ್ಧವಾಗಿದೆ. (ಹಿಂದೆ ಇದನ್ನು ತಿರಸ್ಕರಿಸಲಾಗಿತ್ತು.)
’ಪ್ಯಾಸ್ಸೀವ್ ಯುಥೆನೇಶಿಯಾ’ವನ್ನು (ಎಂದರೆ ಅಂತಿಮ ಅನಿವಾರ್ಯ ದಶೆಯಲ್ಲಿ ಚಿಕಿತ್ಸಾಪ್ರಕ್ರಿಯೆಯನ್ನು ತಡೆಹಿಡಿಯುವುದು) ಈಗಾಗಲೆ ಸ್ವಿಟ್ಸರ್ಲೆಂಡ್, ಇಟಲಿ, ಬೆಲ್ಜಿಯಂ, ನೆದರ್ಲೆಂಡ್ಸ್, ಅಮೆರಿಕದ ಹೆಚ್ಚಿನ ಪ್ರಾಂತಗಳು – ಇವು ಶಾಸನಬದ್ಧಗೊಳಿಸಿವೆ. ಇದೀಗ ಭಾರತವೂ ಆ ಸುಧಾರಣಪರ ದೇಶಗಳ ಸಾಲಿಗೆ ಸೇರಿದಂತಾಗಿದೆ.
ಮೂಲಭೂತ ಹಕ್ಕುಗಳ ಪ್ರಗತಿಯ ದೃಷ್ಟಿಯಿಂದಲೂ ಸರ್ವೋಚ್ಚ ನ್ಯಾಯಾಲಯದ ಈಗಿನ ತೀರ್ಪು ದೂರಗಾಮಿಯಾಗಿದೆ. ತೀರ್ಪಿನ ಈ ಮಾತುಗಳು ಮಹತ್ತ್ವದವಾಗಿವೆ: “ಸಂವಿಧಾನದ ೨೧ನೇ ವಿಧಿಯಂತೆ ಲಬ್ಧವಿರುವ ಘನತೆಯಿಂದ ಬದುಕುವ ಹಕ್ಕಿನಲ್ಲಿ ಮರಣಾಸನ್ನ ವ್ಯಕ್ತಿಯ ಅಂತ್ಯವನ್ನು ಸುಗಮಗೊಳಿಸಬೇಕಾದ ಹಕ್ಕೂ ಅಂತರ್ಗತವಾಗಿದೆ… ರೋಗಿಯು ಪ್ರಜ್ಞಾವಂತ ಸ್ಥಿತಿಯಲ್ಲಿದ್ದಾಗ ಮರಣೇಚ್ಛೆಯನ್ನು ಸ್ಫುಟಪಡಿಸಿರುವ ಸಂದರ್ಭಗಳಲ್ಲಂತೂ ಮರಣವನ್ನು ಸುಗಮಗೊಳಿಸಿರೆಂಬ ರೋಗಿಯ ಇಚ್ಛೆಯನ್ನು ತಿರಸ್ಕರಿಸುವುದು ಘನತೆಯಿಂದ ಬದುಕುವ ಹಕ್ಕನ್ನು ನಿರಾಕರಿಸಿದ? ಅಕ್ಷಮ್ಯವಾಗುತ್ತದೆ.”
ಸಂವಿಧಾನದ ತಾತ್ತ್ವಿಕ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯವೇನೊ ಸ್ಪ? ನಿರ್ಣಯವನ್ನು ನೀಡಿದ್ದಾಗಿದೆ. ಆದರೂ ಅದರ ಅನುಸರಣೆಗೆ ಸಂಬಂಧಿಸಿದಂತೆ ಕೆಲವು ಪೂರಕ ನಿಯಮಗಳನ್ನು ಒಳಗೊಂಡ ಶಾಸನವನ್ನು ಕೇಂದ್ರಸರ್ಕಾರವು ರೂಪಿಸಬೇಕಾಗಬಹುದು. ಏನೇ ಆದರೂ ತೀರಾ ವಿ?ಮ ಸನ್ನಿವೇಶಗಳಲ್ಲಿ ಸಾಯುವ ಹಕ್ಕೂ ಬದುಕುವ ಹಕ್ಕಿನ ಭಾಗವೆಂಬ ವಾದಕ್ಕೆ ಸ್ವೀಕಾರ ದೊರೆತಿರುವುದು ಐತಿಹಾಸಿಕವೆನ್ನಬೇಕು.