ಒಮ್ಮೆ ಓರ್ವ ಅಭಿಮಾನಿ ಅವರ ಬಳಿ ಬಂದು ಇಂಥವರು ಎರಡು ಲಕ್ಷ ರೂ. ದೇಣಿಗೆ ಕೊಡುತ್ತಾರೆ; ಅವರ ಮನೆಗೆ ಉಪಾಹಾರಕ್ಕೆ ಬಂದು ಅದನ್ನು ಸ್ವೀಕರಿಸಬಹುದೇ – ಎಂದು ಕೇಳುತ್ತಾರೆ. ಪಟೇಲರು ತಕ್ಷಣ ಸಿಡಿಯುತ್ತಾರೆ: “ನಾನೇನು ಭಿಕ್ಷಾಟನೆಗೆ ಹೊರಟಿದ್ದೇನೆ ಎಂದು ತಿಳಿದಿದ್ದೀರಾ ಹೇಗೆ?” ಎಂಬುದಾಗಿ. ಅದು ಅವರ ವ್ಯಕ್ತಿತ್ವ.
ಭಾರತದ ಸ್ವಾತಂತ್ರ್ಯ ಹೋರಾಟದ ಕಡೆಗೆ ನಾವು ಒಮ್ಮೆ ಕಣ್ಣು ಹಾಯಿಸಿದರೆ ಶ್ರೇ?ಮಟ್ಟದ ಅನೇಕ ನಾಯಕರು ಆಗಿಹೋಗಿರುವುದನ್ನು ಗಮನಿಸಬಹುದು. ಗಾಂಧಿ, ನೆಹರು ಅವರ? ಅಲ್ಲ. ಬಾಲಗಂಗಾಧರ ತಿಲಕ್, ಗೋಪಾಲಕೃ? ಗೋಖಲೆ, ಚಿತ್ತರಂಜನ್ ದಾಸ್, ಲಾಲಾ ಲಜಪತ್ರಾಯ್, ಬಿಪಿನ್ ಚಂದ್ರ ಪಾಲ್, ಚಕ್ರವರ್ತಿ ರಾಜಗೋಪಾಲಾಚಾರಿ, ವಲ್ಲಭಭಾಯ್ ಪಟೇಲ್, ರಾಜೇಂದ್ರ ಪ್ರಸಾದ್, ಸುಭಾ? ಚಂದ್ರ ಬೋಸ್, ಜೆ.ಬಿ. ಕೃಪಲಾನಿ, ಶ್ಯಾಮಪ್ರಸಾದ್ ಮುಖರ್ಜಿ, ಮುಂತಾಗಿ ಅತ್ಯುನ್ನತ ಮಟ್ಟದ ಬಹಳ? ನಾಯಕರು ಆಗಿಹೋಗಿದ್ದಾರೆ. ಆದರೆ ಸ್ವಾತಂತ್ರ್ಯಾನಂತರ ಬಂದ ಪ್ರಚಾರಯುಗದಲ್ಲಿ ಏನಾಗಿದೆ ಎಂದರೆ ಗಾಂಧಿ ಮತ್ತು ನೆಹರು ಅವರಿಗೆ ದೊರೆತ ಪ್ರಚಾರ, ಪ್ರಭೆ ಯಾರಿಗೂ ಸಿಕ್ಕಿಲ್ಲ.
ಇದೇಕೆ ಹೀಗೆ – ಎನ್ನುವ ಪ್ರಶ್ನೆ ಯಾರಿಗಾದರೂ ಬರಬಹುದು. ಮಹಾನ್ ಸಾಹಿತಿ ಡಾ| ಎಸ್.ಎಲ್. ಭೈರಪ್ಪ ಅವರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಅದಕ್ಕೊಂದು ವಿವರಣೆಯನ್ನು ನೀಡುತ್ತಾರೆ – “ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ ೧೬ ವ?. ಹೈಸ್ಕೂಲು ಮೊದಲ ವ?ದಲ್ಲಿ ಓದುವಾಗ ಕನ್ನಡದಲ್ಲಿ ಬರೆದ ಜವಾಹರಲಾಲರ ಜೀವನಚರಿತ್ರೆಯನ್ನು ಪಠ್ಯವಾಗಿಸಿದ್ದರು. ಮುಂದಿನ ವ? ಕಮಲಾ ನೆಹರು ಅವರ ಜೀವನಚರಿತ್ರೆ, ಅದರ ಮುಂದಿನ ವ? ಮೋತಿಲಾಲರದು. ಇಂಟರ್ಮೀಡಿಯಟ್ ಮತ್ತು ಬಿ.ಎ. (ಆನರ್ಸ್) ಓದುವಾಗ ಇಂಗ್ಲಿಷಿನಲ್ಲಿ ’ಡಿಸ್ಕವರಿ ಆಫ್ ಇಂಡಿಯ’ದ ಆಯ್ದ ಭಾಗಗಳು, ಕನ್ನಡದಲ್ಲಿ ’ತಂದೆಯು ಮಗಳಿಗೆ ಬರೆದ ಪತ್ರಗಳು’ – ಹೀಗೆ ಸ್ವಾತಂತ್ರ್ಯ ಬಂದ ತಕ್ಷಣವೇ ಈ ವ್ಯಕ್ತಿಯ ಅಥವಾ ಅವರ ಕುಟುಂಬದ ಹೊಗಳಿಕೆಯ ಕಥೆಗಳನ್ನು ವಿದ್ಯಾರ್ಥಿಗಳ ತಲೆಗೆ ತುಂಬತೊಡಗಿದರು” ಎನ್ನುವ ಭೈರಪ್ಪ, “ನೆಹರು ಪ್ರಧಾನಿಯಾದ ಕೆಲವೇ ತಿಂಗಳಲ್ಲಿ ಇನ್ನೊಂದು ಪದ್ಧತಿ ಕಡ್ಡಾಯವಾಯಿತು. ಕೇಂದ್ರಸರ್ಕಾರದ ವಾರ್ತಾ ಇಲಾಖೆಯು ’ನ್ಯೂಸ್ ರೀಲ್’ ಎಂಬ ಸುಮಾರು ಹದಿನೈದು ನಿಮಿ?ಗಳ ಒಂದು ವಾರ್ತಾ ಚಲನಚಿತ್ರವನ್ನು ತಯಾರಿಸುವುದು, ಅದರಲ್ಲಿ ಉದ್ದಕ್ಕೂ ಪ್ರಧಾನಿ ನೆಹರು ವಿಮಾನದಿಂದ ಇಳಿಯುವ, ಹತ್ತುವ, ಹಾರ ಹಾಕಿಸಿಕೊಳ್ಳುವ, ಭಾ?ಣ ಮಾಡುವ – ಹೀಗೆ ನೆಹರುಗೆ ಸೀಮಿತವಾದ ಚಟುವಟಿಕೆಗಳನ್ನು ಪ್ರತಿವಾರವೂ ಹೊಸದಾಗಿ ನಿರ್ಮಿಸಿ, ದೇಶದ ಪ್ರತಿಯೊಂದು ಸಿನೆಮಾ ಟಾಕೀಸಿಗೂ ಸರಬರಾಜು ಮಾಡುವುದು, ಅದನ್ನು ಪ್ರತಿ ಪ್ರದರ್ಶನ ಆರಂಭಿಸುವ ಮೊದಲು ಕಡ್ಡಾಯವಾಗಿ ತೋರಿಸುವುದು” ಎಂದು ಕೂಡ ತಿಳಿಸುತ್ತಾರೆ. ವರ್ತಮಾನದ ಪತ್ರಿಕೆಗಳಲ್ಲಿಯೂ ಅ?; ಪ್ರಥಮ ಪ್ರಧಾನಿ ಎಂಬ ಉಮೇದು; ನೆಹರು ಏನು ಮಾಡಿದರೂ ಸುದ್ದಿಯೇ.
ಪ್ರಚಾರದಿಂದ ಬೆಳೆದವರು
ಇನ್ನು ಇತಿಹಾಸದ ವಿಷಯದಲ್ಲೂ ಅಷ್ಟೇ. “ಸ್ವಾತಂತ್ರ್ಯಬಂದ ತರುವಾಯದಲ್ಲೇ ನೆಹರು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಬರೆಯಲು ನಿಶ್ಚಯಿಸಿ ಪ್ರಸಿದ್ಧ ಇತಿಹಾಸಕಾರ ಆರ್.ಸಿ. ಮಜುಂದಾರರನ್ನು ನೇಮಿಸಿದರು. ಸರ್ಕಾರದ ಕೆಲಸವಾದುದರಿಂದ ತಾವು ಬರೆಯುವ ಗ್ರಂಥದ ಪರಿಜನ್ನು ಒಪ್ಪಿಸುವಂತೆ ಆರ್.ಸಿ. ಅವರಿಗೆ ನೆಹರು ಸರ್ಕಾರ ಸೂಚಿಸಿತು. ಆರ್.ಸಿ. ಅವರು ಒಪ್ಪಿಸಿದ ಪರಿಜು ನೆಹರು ಬಯಕೆಗೆ ಅನುಗುಣವಾಗಿರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ತಂದದ್ದು ಕಾಂಗ್ರೆಸ್ ಮಾತ್ರ; ಕಾಂಗ್ರೆಸಿನ ಪ್ರಧಾನ ಹಾಗೂ ಕೇಂದ್ರಶಕ್ತಿ ಮತ್ತು ತ್ಯಾಗ ನೆಹರು ಕುಟುಂಬದ್ದು ಎಂದು ಬಿಂಬಿಸಬೇಕೆಂಬುದು ನೆಹರು ಬಯಕೆಯಾಗಿತ್ತು. ಮುಜುಂದಾರರ ಪರಿಜು ಹಾಗಿರಲಿಲ್ಲ… ನೆಹರುಗೆ ತನ್ನ ಮತ್ತು ಕುಟುಂಬದ ವಿಜೃಂಭಣೆಯ ಉದ್ದೇಶವಿತ್ತು. ಮುಜುಂದಾರರಿಗೆ ವಹಿಸಿದ್ದ ಕಾರ್ಯವನ್ನು ಅಲ್ಲಿಗೇ ನಿಲ್ಲಿಸಿ ತಮಗೆ ಬೇಕಾದಂತೆ ಬರೆಯಲು ಸಿದ್ಧರಿದ್ದ ತಾರಾಚಂದ್ ಎಂಬವರು ಬರೆದು ಒಪ್ಪಿಸಿದ ಪುಸ್ತಕವೇ ’ಅಧಿಕೃತ’ ಸ್ವಾತಂತ್ರ್ಯ ಚಳುವಳಿಯ ಇತಿಹಾಸವೆನ್ನಿಸಿ ದೇಶದ ಎಲ್ಲೆಲ್ಲಿಯೂ ಗ್ರಂಥಾಲಯಗಳಲ್ಲಿಯೂ ವಿಶ್ವವಿದ್ಯಾಲಯಗಳ ಪಠ್ಯವಾಗಿಯೂ ಹಬ್ಬಿಕೊಂಡಿತು.”
ಭಾರತ ಒಕ್ಕೂಟ ನಿರ್ಮಾಪಕ, ಉಕ್ಕಿನ ಮನುಷ್ಯ
ಸರ್ದಾರ್ ವಲ್ಲಭಭಾಯ್ ಪಟೇಲ್
ಲೇಖಕರು: ಮ.ಸು. ಮನ್ನಾರ್ ಕೃಷ್ಣರಾವ್
ಪ್ರಕಾಶಕರು: ಶ್ರೀವಿದ್ಯಾ ಪ್ರಕಾಶನ
೯೮೪/೧, ’ಮಾತೃಶ್ರೀ’, ೧೧ನೇ ’ಎ’ ಮುಖ್ಯ ರಸ್ತೆ
೩ನೇ ವಿಭಾಗ, ರಾಜಾಜಿನಗರ
ಬೆಂಗಳೂರು – ೫೬೦ ೦೧೦
ಮೊಬೈಲ್: ೯೮೮೦೦೨೦೮೮೮
ಪುಟಗಳು: ೪೦+೭೯೬
ಆಕಾರ: ಡಿಮೈ ೧/೮
ಬೆಲೆ: ರೂ. ೭೦೦/-೧೦೦
ದೇಶದ ಸ್ವಾತಂತ್ರ್ಯ ಹೋರಾಟವಿರಲಿ, ಹರಿದುಹಂಚಿಹೋಗಬಹುದಾಗಿದ್ದ ದೇಶವನ್ನು ಒಗ್ಗೂಡಿಸಿ ಅಖಂಡ ಭಾರತವನ್ನು ನಿರ್ಮಿಸಿದ್ದಿರಲಿ – ನೆಹರುಗೆ ಯಾವ ರೀತಿಯಲ್ಲೂ ಕಡಮೆ ಇಲ್ಲದ ಕೊಡುಗೆ ಸರ್ದಾರ್ ವಲ್ಲಭಭಾಯ್ ಪಟೇಲರದ್ದು. ಆದರೆ ಅವರಿಗೆ ನಿರಂತರ ಅನ್ಯಾಯವೇ ಆಯಿತೆಂದರೆ ತಪ್ಪಲ್ಲ. ಈ ಸಂಬಂಧವಾಗಿ ಭೈರಪ್ಪ ಹೀಗೆ ಹೇಳುತ್ತಾರೆ: “೧೯೫೪ರಲ್ಲಿ ಆರಂಭವಾದ ’ಭಾರತರತ್ನ’ ಪ್ರಶಸ್ತಿಯನ್ನು ಮರುವ? ನೆಹರು ತಮಗೆ ತಾವೇ ಕೊಟ್ಟುಕೊಂಡರು. ಆನಂತರ ಪ್ರಧಾನಮಂತ್ರಿಯಾದ ಇಂದಿರಾಗಾಂಧಿಯೂ ೧೯೭೧ರಲ್ಲಿ ತಮಗೆ ತಾವೇ ಕೊಟ್ಟುಕೊಂಡರು. ಯಾರಿಗೂ ಪಟೇಲರ ನೆನಪು ಬರಲಿಲ್ಲ. ಒಂಬತ್ತನೆಯ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾಯರು ಪಟೇಲರು ಗತಿಸಿದ ೪೧ ವ?ಗಳ ಬಳಿಕ, ಪ್ರಶಸ್ತಿ ಆರಂಭಿಸಿದ ೩೭ ವ?ಗಳ ಆನಂತರ ಪಟೇಲರಿಗೆ ಅದನ್ನು ಕೊಟ್ಟರು. ಆದರೆ ಅವರಿಗೆ ರಾಜಕೀಯ ಒತ್ತಡ ಎಷ್ಟಿತ್ತೆಂದರೆ ಪಟೇಲರ ಜೊತೆಯಲ್ಲಿ ರಾಜೀವಗಾಂಧಿಗೂ (ಮರಣೋತ್ತರ) ಕೊಡಬೇಕಾಯಿತು. ಜೊತೆಗೆ ಮೊರಾರ್ಜಿ ದೇಸಾಯರ ಹೆಸರನ್ನೂ ಸೇರಿಸಿದರು.” ಪಟೇಲರಿಗೆ ಮುನ್ನ ಯಾರಿಗೆಲ್ಲ ಸಿಕ್ಕಿತ್ತು ಎಂಬುದನ್ನು ಗಮನಿಸಿದರೆ ಈ ನಿಟ್ಟಿನಲ್ಲಿ ಅವರಿಗಾದ ಅನ್ಯಾಯ ಇನ್ನಷ್ಟು ಸ್ಪಷ್ಟವಾಗಬಹುದು.
ಇತಿಹಾಸದ ಕಡೆಗೊಂದು ಹಿನ್ನೋಟವನ್ನು ಬೀರಿದರೆ ಈ ನಿಟ್ಟಿನಲ್ಲಿ ನೆಹರು ಅವರು ಮಾಡಿದ್ದು ವ್ಯರ್ಥವಾಗಲಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಏನಿಲ್ಲವಾದರೂ ದೇಶದ ಒಂದು ದೊಡ್ಡ ರಾಜಕೀಯ ಪಕ್ಷ ಈಗಲೂ ಅವರ ವಂಶವೃಕ್ಷವನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ. ಆ ವಂಶದ ಪುಟ್ಟ ಕುಡಿಯಾದರೂ ಸರಿ; ಅದಿಲ್ಲದೆ ತಮಗೆ ರಾಜಕೀಯ ಭವಿ?ವಿಲ್ಲವೆಂದವರು ಗಟ್ಟಿಯಾಗಿ ನಂಬಿಕೊಂಡು ನೆಹರು ಗತಿಸಿ ೫೪ ವ?ದ ಆನಂತರವೂ ಮುಂದುವರಿಯುತ್ತಿದ್ದಾರೆ.
ಆದರೆ ಒಂದಂತೂ ನಿಜ. ಸತ್ಯ ಎಂದಿದ್ದರೂ ಹೊರಗೆ ಬರಲೇಬೇಕು. ಅದರಂತೆ ನೆಹರು ನಿಜರೂಪ ಮತ್ತು ಪಟೇಲರು ಈ ಮಹಾನ್ ದೇಶಕ್ಕೆ ಸಲ್ಲಿಸಿದ ಸೇವೆ, ಮಾಡಿದ ತ್ಯಾಗಗಳು ಹೆಚ್ಚುಹೆಚ್ಚಾಗಿ ಬೆಳಕಿಗೆ ಬರುತ್ತಲೇ ಇವೆ. ಗುಜರಾತಿನ ಸಮುದ್ರ ತೀರದಲ್ಲಿ ಸರ್ದಾರ್ ಪಟೇಲರ ಗಗನಚುಂಬಿ ಪ್ರತಿಮೆಯ ಅನಾವರಣಕ್ಕೆ ಸಜ್ಜಾಗುತ್ತಿದೆ. ಪ್ರತಿಮೆಯ ಅನುಕೂಲ, ಪ್ರತಿಕೂಲತೆಗಳೇನು? ಪಟೇಲರು ಒಂದು ವೇಳೆ ಬದುಕಿದ್ದರೆ ಅದಕ್ಕೆ ಒಪ್ಪುತ್ತಿದ್ದರೆ – ಎನ್ನುವ ಪ್ರಶ್ನೆಗಳೆಲ್ಲ ಇದ್ದೇ ಇವೆ. ಏನಿದ್ದರೂ ಅದರ ಹಿಂದಿರುವ ಅಭಿಮಾನ ಗಮನಿಸಬೇಕಾದ್ದು. ಕನ್ನಡದ ಮಟ್ಟಿಗಂತೂ ಸರ್ದಾರ್ ವಲ್ಲಭಭಾಯ್ ಪಟೇಲರನ್ನು ಕುರಿತು ಆ ಪ್ರತಿಮೆಯಂಥದೇ ಬೃಹತ್ತಾದ ಒಂದು ಗ್ರಂಥ ಈಚೆಗೆ ಪ್ರಕಟಗೊಂಡಿದೆ. ಗ್ರಂಥಕರ್ತರು ಮ.ಸು. ಮನ್ನಾರ್ ಕೃ?ರಾವ್. (ಭಾರತ ಒಕ್ಕೂಟ ನಿರ್ಮಾಪಕ, ಉಕ್ಕಿನ ಮನು? – ಸರ್ದಾರ್ ವಲ್ಲಭಭಾಯ್ ಪಟೇಲ್. ಶ್ರೀವಿದ್ಯಾ ಪ್ರಕಾಶನ, ಬೆಂಗಳೂರು – ೧೦) ಸುಮಾರು ೮೩೦ ಪುಟಗಳ ಈ ಗ್ರಂಥಕ್ಕೆ ಡಾ| ಎಸ್. ಎಲ್. ಭೈರಪ್ಪ ಮುನ್ನುಡಿ ಬರೆದಿದ್ದಾರೆ. ಪಟೇಲರ ಬಗೆಗಿನ ಎಲ್ಲವನ್ನೂ ಒಂದೆಡೆ ಕೊಡಬೇಕು ಮತ್ತು “ಕೃತಿಯ ನಾಯಕನ ಉದಾತ್ತ ಮತ್ತು ಅನುಕರಣೀಯ ವ್ಯಕ್ತಿತ್ವದ ಪ್ರಭಾವ ಓದುಗನ ಮೇಲೆ ಆಗಬೇಕು” ಎನ್ನುವುದು ಲೇಖಕರ ಆಶಯವಾಗಿದೆ. ಸರ್ದಾರ್ ಪಟೇಲರ ಜೀವನವನ್ನು ಆರಂಭದಿಂದ ಮುಕ್ತಾಯದವರೆಗೆ ಪೂರ್ತಿಯಾಗಿ ವಿವರಿಸಿ ಎಳೆಎಳೆಯಾಗಿ ವಿಶ್ಲೇಷಿಸುವ ಕಾರ್ಯ ಇಲ್ಲಿ ನಡೆದಿದೆ.
ಅಸಾಮಾನ್ಯ ಸಾಮಾನ್ಯ
ಪ್ರಚಾರದ ಬೆಳಕಿಗೆ ದೊಡ್ಡ ಪ್ರಮಾಣದಲ್ಲಿ ವಿಶಿಷ್ಟವಾದುದಾಗಿತ್ತು. ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ಅವರು ಸಾಮಾನ್ಯವೆನ್ನಬಹುದಾದ ಒಂದು ಕುಟುಂಬದಿಂದ ಬಂದರೂ ಹಂತಹಂತವಾಗಿ ಮೇಲಕ್ಕೇರಿ ತನ್ನದೇ ಆದ ಒಂದು ವಿಶಿ? ಸ್ಥಾನವನ್ನು ನಿರ್ಮಿಸಿಕೊಂಡಿದ್ದರು. ಆದರೆ ಅದರ ಭಾರ ಅವರ ಮೇಲೆ ಎಲ್ಲೂ ಕಾಣಿಸದೆ ಸಹಜವಾಗಿ ಇರಬಲ್ಲವರಾಗಿದ್ದರು. ಹೊರಗೆ ಕಠಿಣವೆಂಬಂತೆ ಕಾಣಿಸಿದರೂ ಒಳಗೆ ಮೃದುವಾಗಿದ್ದರು. ಅವರ ವ್ಯಕ್ತಿತ್ವವನ್ನು ಎತ್ತಿತೋರಿಸುವ ಎರಡು ಸಂದರ್ಭಗಳನ್ನಿಲ್ಲಿ ಗಮನಿಸಬಹುದು.
ಸುದೀರ್ಘಕಾಲ ಕಾಂಗ್ರೆಸ್ಸಿನ ಪಾರ್ಲಿಮೆಂಟರಿ ಬೋರ್ಡಿನ ಅಧ್ಯಕ್ಷರಾಗಿದ್ದ ಪಟೇಲರು ಸಂಘಟನೆಗೆ ಬೇಕಾದ ಹಣವನ್ನು ಸಂಗ್ರಹಿಸುವ ಕೆಲಸವನ್ನು ತಾವೇ ಮಾಡುತ್ತಿದ್ದರು. ಆದರೆ ತಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ರಾಜಿ ಇಲ್ಲ. ಒಮ್ಮೆ ಓರ್ವ ಅಭಿಮಾನಿ ಅವರ ಬಳಿ ಬಂದು ಇಂಥವರು ಎರಡು ಲಕ್ಷ ರೂ. ದೇಣಿಗೆ ಕೊಡುತ್ತಾರೆ; ಅವರ ಮನೆಗೆ ಉಪಾಹಾರಕ್ಕೆ ಬಂದು ಅದನ್ನು ಸ್ವೀಕರಿಸಬಹುದೇ – ಎಂದು ಕೇಳುತ್ತಾರೆ. ಪಟೇಲರು ತಕ್ಷಣ ಸಿಡಿಯುತ್ತಾರೆ: “ನಾನೇನು ಭಿಕ್ಷಾಟನೆಗೆ ಹೊರಟಿದ್ದೇನೆ ಎಂದು ತಿಳಿದಿದ್ದೀರಾ ಹೇಗೆ?” ಎಂಬುದಾಗಿ. ಅದು ಅವರ ವ್ಯಕ್ತಿತ್ವ. ಹಣ ಅವರು ಇರುವಲ್ಲಿಗೆ ಬರಬೇಕು; ಬರುತ್ತಿತ್ತು ಕೂಡ.
ಗಾಂಭೀರ್ಯದ ನಡೆ
ಪಟೇಲರು ಶ್ರೇಷ್ಠಮಟ್ಟದ ಆಡಳಿತಗಾರರಾಗಿದ್ದರು ಎನ್ನುವುದನ್ನು ಸೂಚಿಸುವ ಒಂದು ಸಂದರ್ಭ ಹೀಗಿದೆ. ಸ್ವತಂತ್ರ ಭಾರತದ ಕಾನೂನು ಕಾರ್ಯದರ್ಶಿ ಒಮ್ಮೆ ಅವರಲ್ಲಿ ಮಾತನಾಡುವಾಗ “ನಿಮಗೆ ನನ್ನ ಪ್ರಾಮಾಣಿಕ ಅಭಿಪ್ರಾಯ ಬೇಕೆ?” ಎಂದು ಕೇಳುತ್ತಾರೆ. ಕೂಡಲೆ ಸಿಟ್ಟಾದ ಪಟೇಲರು “ಸರ್ಕಾರ ನಿಮಗೆ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿಗಳನ್ನು ನಿಮ್ಮ ಅಪ್ರಾಮಾಣಿಕ ಅಭಿಪ್ರಾಯಗಳಿಗೆ ನೀಡುತ್ತದೆಯೆ? ಪ್ರಾಮಾಣಿಕ ಅಭಿಪ್ರಾಯ ಕೊಡುವುದು ನಿಮ್ಮ ಕರ್ತವ್ಯ. ಅದನ್ನು ಒಪ್ಪುವುದು ಬಿಡುವುದು ನನಗೆ ಸೇರಿದ್ದು” ಎಂದು ಗುಡುಗಿದರು. ಆದರೆ ಅಭಿಪ್ರಾಯವನ್ನು ಹಂಚಿಕೊಳ್ಳುವಲ್ಲಿ ಮತ್ತು ವಿಚಾರವಿನಿಮಯದಲ್ಲಿ ಅವರಿಗೆ ಮೇಲು-ಕೀಳು ಎಂಬುದಿರಲಿಲ್ಲ. ಉತ್ತಮ ಅಧಿಕಾರಿಗಳನ್ನು ಬಹಳವಾಗಿ ಇ?ಪಡುತ್ತಿದ್ದರು; ಪ್ರೋತ್ಸಾಹಿಸುತ್ತಿದ್ದರು. ಯೋಗ್ಯ ಜವಾಬ್ದಾರಿಗಳನ್ನು ನೀಡುತ್ತಿದ್ದರು.
ಗುಜರಾತಿನ ಖೇಡಾ ಜಿಲ್ಲೆಯ ಕರಂಸದ್ ಎನ್ನುವ ಹಳ್ಳಿ ವಲ್ಲಭಭಾಯ್ ಅವರ ಹುಟ್ಟೂರು. ತಂದೆ ಜವೇರ್ ಭಾಯ್, ತಾಯಿ ಲಾಡ್ ಬಾಯಿ. ದಾಖಲೆಗಳ ಪ್ರಕಾರ ಅವರ ಜನ್ಮದಿನ ಅಕ್ಟೋಬರ್ ೩೧, ೧೮೭೫. ಆದರೆ ಅದು ನಿಜವಲ್ಲ. ನಿಜವಾದ ದಿನ ಏಪ್ರಿಲ್ ೩೦, ೧೮೭೬ ಅಥವಾ ಮೇ ೭, ೧೮೭೬. ಅವರದ್ದು ಪಾಟೀದಾರರ ಕುಟುಂಬ. ಪಟ್ಟಿ ಅಂದರೆ ಭೂಮಿ, ಅಂದರೆ ಭೂಮಾಲೀಕರು. ದಕ್ಷಿಣ ಪಂಜಾಬಿನ ಗುಜಾರರೆಂಬ ಸಮರೋತ್ಸಾಹಿ ಜನಾಂಗದವರು ೧೧ನೇ ಶತಮಾನದ ಹೊತ್ತಿಗೆ ಗುಜರಾತಿಗೆ ವಲಸೆ ಬಂದು ನೆಲೆಸಿದ್ದರು. ಕೃಷಿ ಮತ್ತು ವ್ಯಾಪಾರವನ್ನು ಅವಲಂಬಿಸಿದ್ದರಿಂದ ಅವರಲ್ಲಿ ಎರಡು ವಿಭಾಗಗಳಾಗಿದ್ದವು. ಇವರು ಕೃಷಿಅವಲಂಬಿತ ವಿಭಾಗದವರು. ಒಟ್ಟಿನಲ್ಲಿ ಸಾಹಸ, ದುಡಿಮೆ, ಬುದ್ಧಿವಂತಿಕೆಗೆ ಹೆಸರಾದವರು. ಜವೇರ್ ಭಾಯ್ ಅವರಿಗೆ ಹತ್ತು ಎಕ್ರೆ ಜಮೀನಿತ್ತು.
ಝಾನ್ಸಿರಾಣಿ ಸೈನ್ಯದಲ್ಲಿ
೧೮೫೭ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಮರ(ಸಿಪಾಯಿದಂಗೆ)ದಲ್ಲಿ ೩೦ ವ? ವಯಸ್ಸಿನ ಜವೇರ್ ಭಾಯ್ ಝಾನ್ಸಿ ರಾಣಿಯ ಸೈನ್ಯದಲ್ಲಿ ಯೋಧನಾಗಿ ಭಾಗವಹಿಸಿದ್ದರಂತೆ. ಇಂದೋರ್ನ ರಾಜ ಮಲ್ಹಾರರಾವ್ ಹೋಳ್ಕರ್ಗೆ ಅವರು ಸೆರೆಯಾದರು. ಮಲ್ಹಾರರಾವ್ಗೆ ಚದುರಂಗದ ಹುಚ್ಚು. ಈತ ಅದರಲ್ಲಿ ಚತುರರು. ಆ ಮೂಲಕ ಗೆಳೆತನವಾಗಿ ಜವೇರ್ ಭಾಯ್ ಬಿಡುಗಡೆಯಾಯಿತು; ಊರಿಗೆ ಬಂದರು. ಆದರೂ ಅವರಲ್ಲಿ ಸೋತ ಬೇಸರವಿತ್ತು. ಸ್ವಾಮಿನಾರಾಯಣ ಪಂಥದ ಅನುಯಾಯಿಯಾದರು; ಹೆಚ್ಚು ಸಮಯ ದೇವಾಲಯದಲ್ಲೇ ಇರುತ್ತಿದ್ದರು. ಈ ದಂಪತಿಗೆ ಆರು ಮಂದಿ ಮಕ್ಕಳು. ವಲ್ಲಭನಿಗೆ ಮೂವರು ಅಣ್ಣಂದಿರು; ಒಬ್ಬ ತಮ್ಮ. ಕೊನೆಯವಳು ತಂಗಿ. ಮೂರನೆಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ವಿಠಲ ಭಾಯ್. ಬಾಲಕ ವಲ್ಲಭ್ ಕೃಷಿ, ದನ ಸಾಕುವುದರಲ್ಲಿ ತಂದೆಗೆ ಸಹಕರಿಸುತ್ತಿದ್ದರು. ತಂದೆ-ತಾಯಿ ಪ್ರಭಾವದಿಂದ ಅವರಲ್ಲಿ ದೇಶಭಕ್ತಿ, ಧೈರ್ಯ, ಮುಂದಾಳತ್ವ, ಸೇವಾಮನೋಭಾವ, ಶಿಸ್ತು, ಅನ್ಯಾಯದ ವಿರುದ್ಧ ಹೋರಾಡುವ ಗುಣಗಳು ಬಂದಿದ್ದವು.
ಅವರ ಈ ಕೆಲವು ಗುಣಗಳು ಶಾಲಾದಿನಗಳಲ್ಲೇ ಪ್ರಕಟಗೊಂಡಿದ್ದು ವಿಶೇ?ವೆನ್ನಬಹುದು. ಒಮ್ಮೆ ತರಗತಿಯಲ್ಲಿ ಪ್ರಶ್ನೆ ಕೇಳಿದಾಗ ಅಧ್ಯಾಪಕರು “ನೀನೇ ಓದಿ ಕಲಿತುಕೋ” ಎಂದು ಹೇಳಿದ್ದರಂತೆ. ವಲ್ಲಭಭಾಯ್ ಮುಂದೆ ಅದನ್ನೇ ಅಭ್ಯಾಸ ಮಾಡಿಕೊಂಡರು. ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದಾಗ ಒಮ್ಮೆ ಓರ್ವ ಅಧ್ಯಾಪಕರು ತರಗತಿಗೆ ಬರುವುದರಲ್ಲಿ ತಡ ಮಾಡಿದರು; ಕೂಡಲೆ ವಿದ್ಯಾರ್ಥಿಗಳೆಲ್ಲ ಸೇರಿ ಜೋರಾಗಿ ಹಾಡೊಂದನ್ನು ಹಾಡಿದರು. ಮುಖ್ಯೋಪಾಧ್ಯಾಯರಿಂದ ವಿಚಾರಣೆ ನಡೆದು, ಕ್ಷಮೆ ಕೇಳಬೇಕೆಂದು ವಲ್ಲಭ್ಗೆ ಹೇಳಿದರು. ಗಲಭೆ ಮಾಡಿಲ್ಲ, ಹಾಡಿದ್ದು ತಪ್ಪಲ್ಲ ಎಂದು ಈತ ಕ್ಷಮೆ ಕೇಳಲು ನಿರಾಕರಿಸಿಬಿಟ್ಟರು.
ಬೆಳೆಯ ಸಿರಿ ಕಂಡದ್ದು
ನಡಿಯಾದ್ ಪಟ್ಟಣದ ಪುರಸಭಾ ಚುನಾವಣೆಯಲ್ಲಿ ಇವರ ಗುರುಗಳೊಬ್ಬರು ಸ್ಪರ್ಧಿಸಿದ್ದರು. ಎದುರಾಳಿ ಅಭ್ಯರ್ಥಿ ತಾನು ಸೋತರೆ ಮೀಸೆ ಬೋಳಿಸುವುದಾಗಿ ಪ್ರತಿಜ್ಞೆ ಮಾಡಿದ್ದ. ಆದರೆ ಸೋತು ಇವರ ಗುರುಗಳು ಗೆದ್ದರು. ಆತ ಮೀಸೆ ಬೋಳಿಸುವಂತೆ ಆಗ್ರಹಿಸಲು ವಲ್ಲಭಭಾಯ್ ಆತನ ಮನೆಗೆ ವಿದ್ಯಾರ್ಥಿಗಳ ಮೆರವಣಿಗೆಯನ್ನೇ ನಡೆಸಿದರು. ಇವರು ಗುಜರಾತಿ ಭಾ?ಯನ್ನು ತೆಗೆದುಕೊಂಡಾಗ ಅದರ ಶಿಕ್ಷಕರು ಸಂಸ್ಕೃತವನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಅದಕ್ಕೆ ಈತ ನಿಮಗೂ ಕೆಲಸ ಬೇಕಲ್ಲವೆ ಎಂದು ಕೇಳಿದರು. ಸಿಟ್ಟಾದ ಶಿಕ್ಷಕ ಬೆಂಚಿನ ಮೇಲೆ ಹತ್ತಿಸಿ, ಮಗ್ಗಿ ಬರೆಯುವ ಶಿಕ್ಷೆ ವಿಧಿಸಿದರು. ಬೆಂಚಿನ ಮೇಲೆ ನಿಂತರು. ಆದರೆ ಮಗ್ಗಿ ಬರೆಯುವುದು ತನ್ನ ಘನತೆಗೆ ತಕ್ಕುದಲ್ಲವೆಂದು ಬರೆಯಲೇ ಇಲ್ಲ; ಮಗ್ಗಿಯ ಆವರ್ತನೆ ಬೆಳೆಯುತ್ತಾ ಹೋದರೂ ಬಗ್ಗಲಿಲ್ಲ.
ಇನ್ನೊಂದು ಘಟನೆಯಿಂದಾಗಿ ಶಾಲೆಯನ್ನೇ ಬಿಡುವಂತಾಯಿತು. ಬೀಜಗಣಿತದ ಅಧ್ಯಾಪಕರು ಲೆಕ್ಕ ಮಾಡುವಾಗ ದಾರಿ ತಪ್ಪಿದ್ದನ್ನು ಗಮನಿಸಿದ ಈತ ’ಅದು ನಿಮ್ಮಿಂದಾಗುವುದಿಲ್ಲ’ ಎಂದರು. ’ನೀನೇ ಮಾಡು, ನೀನೇ ಅಧ್ಯಾಪಕನಾಗು’ ಎಂದು ಶಿಕ್ಷಕರು ಹೇಳಿದಾಗ ಈತ ಲೆಕ್ಕ ಬಿಡಿಸಿ, ಸೀದಾ ಹೋಗಿ ಅಧ್ಯಾಪಕರ ಕುರ್ಚಿಯಲ್ಲಿ ಕುಳಿತರು. ಮುಖ್ಯ ಶಿಕ್ಷಕರಿಗೆ ದೂರು ಹೋಯಿತು. ಈತನ ವಿವರಣೆಯನ್ನು ಒಪ್ಪದೆ ಆತ ಶಾಲೆಯಿಂದ ಹೊರಹಾಕುತ್ತೇನೆ ಎಂದರು. ಆಗ ವಲ್ಲಭಭಾಯ್ ತಾನೇ ಆ ಶಾಲೆಯನ್ನು ಬಿಟ್ಟರು. ಈ ಘಟನೆಗಳಲ್ಲಿ ಎದ್ದುಕಾಣುವ ಅಂಶವೆಂದರೆ, ಅವರ ವ್ಯಕ್ತಿತ್ವ ಆ ಹಂತದಲ್ಲೇ ಒಂದು ಆಕಾರವನ್ನು ಪಡೆದಿತ್ತು; ನಿರ್ದಿ? ಸಂದರ್ಭದಲ್ಲಿ ತನ್ನ ದಾರಿ ಯಾವುದೆಂದು ಖಚಿತವಾಗಿ ತಿಳಿದಿರುತ್ತಿತ್ತು ಮತ್ತು ಅವರಮಟ್ಟಿಗೆ ಮಾತೇ ಮುತ್ತು ಎಂಬುದು.
೧೬ನೇ ವ?ದಲ್ಲಿ ಮದುವೆಯಾಗಿತ್ತು. ಪತ್ನಿ ಜವೇರ್ಬಾಯಿ. ೨೨ನೇ ವ?ದಲ್ಲಿ ಮೆಟ್ರಿಕ್ ಮುಗಿಯಿತು. ಇಂಗ್ಲಿ?ರು ಹೇಗೆ ವಿಶ್ವನಾಯಕರಾದರು ಎನ್ನುವ ಆಲೋಚನೆ ಆಗಲೇ ಅವರ ತಲೆಯನ್ನು ಕೊರೆಯುತ್ತಿತ್ತು. ಜೊತೆಗೆ ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಪದವಿ ಪಡೆದು ಬಂದರೆ ಕೀರ್ತಿ, ಹಣ ಎರಡೂ ಬರುತ್ತದೆ ಎನಿಸಿತು. ಎಲ್ಎಲ್ಬಿಗೆ ಆರು ವ?; ಪ್ಲೀಡರ್ ಪರೀಕ್ಷೆ ಮೂರು ವ?ದಲ್ಲಿ ಆಗುತ್ತದೆಂದು ಸ್ವಂತ ಕಲಿತು ಅದನ್ನು ಮಾಡಿದರು. ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಆಗಲು ಏಳರಿಂದ ಹತ್ತು ಸಾವಿರ ರೂ. ಬೇಕೆಂದು ಧನಾರ್ಜನೆಗೆ ತೊಡಗಿದರು. ೧೯೦೦ರಲ್ಲಿ ಗೋಧ್ರಾದಲ್ಲಿ ವಕೀಲವೃತ್ತಿ ಆರಂಭಿಸಿದರು; ಅಲ್ಲೇ ಮನೆಯನ್ನೂ ಮಾಡಿದರು. ಗೋಧ್ರಾ ಅವರ ವೃತ್ತಿನೈಪುಣ್ಯಕ್ಕೆ ಚಿಕ್ಕದಾಯಿತು. ಅಣ್ಣ ವಿಠಲಭಾಯ್ ಬೋರ್ಸದ್ಗೆ ಕರೆದರು. ಅಲ್ಲಿ ಕ್ರಿಮಿನಲ್ ವಕೀಲನಾಗಿ ವಲ್ಲಭಭಾಯ್ ಹೆಸರು, ಹಣ ಎರಡನ್ನೂ ಗಳಿಸಿದರು. ೧೯೦೪ರಲ್ಲಿ ಮಗಳು ಮಣಿ (ಮಣಿಬೆನ್) ಜನಿಸಿದಳು. ಮರುವ? ಮಗ ದಹ್ಯಾಭಾಯ್ ಜನನವಾಯಿತು.
ಅಣ್ಣನಿಗಾಗಿ ತ್ಯಾಗ
ಮೂರು ವರ್ಷದಲ್ಲಿ ಹತ್ತು ಸಾವಿರ ರೂ. ಉಳಿತಾಯ ಮಾಡಿ ಹಣ ಪಾವತಿಸಿ ಇಂಗ್ಲೆಂಡಿಗೆ ಹೋಗುವ ಬಗ್ಗೆ ಟಿಕೆಟ್ ತರಿಸಲು ವ್ಯವಸ್ಥೆ ಮಾಡಿದರು. ವಿ.ಜೆ. ಪಟೇಲ್ ಎಂದು ವಿಳಾಸ ನೀಡಿದ್ದರು. ’ಟಿಕೇಟನ್ನು ನಾನೇ ತೆಗೆದುಕೊಳ್ಳುತ್ತೇನೆ; ನಾನೇ ಬ್ಯಾರಿಸ್ಟರ್ ಮಾಡುತ್ತೇನೆ’ ಎಂದು ವಿಠಲ್ ಭಾಯ್ ಹೇಳಿದಾಗ ಇವರ ಪ್ರತಿಕ್ರಿಯೆ ಹೇಗೆ ಇರಬಹುದಿತ್ತು? ವಲ್ಲಭಭಾಯ್ ಎ? ದೊಡ್ಡ ವ್ಯಕ್ತಿ ಎನ್ನುವುದು ಅಲ್ಲೇ ತಿಳಿಯುತ್ತದೆ. ಮರುಮಾತನಾಡದೆ ಆ ಟಿಕೆಟನ್ನು ಅಣ್ಣನಿಗೆ ಕೊಟ್ಟುಬಿಟ್ಟರು. ಅತ್ಯಂತ ಆಸ್ಥೆ ಮತ್ತು ಶ್ರಮದಿಂದ ಹಣ ಗಳಿಸಿ ಉಳಿಸಿ ಸಂಪಾದಿಸಿದ್ದ ಅವಕಾಶವನ್ನು ಅಣ್ಣನಿಗೆ ಬಿಟ್ಟುಕೊಟ್ಟರು. ಅ? ಅಲ್ಲ, ತಮ್ಮ ಉತ್ಕಟ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಹೇಳಿದರು: “ಈ ಹಣ ಮತ್ತು ಟಿಕೆಟನ್ನು ನಿನಗೆ ನೀಡುತ್ತಿದ್ದೇನೆ. ಇಂಗ್ಲೆಂಡಿನಲ್ಲಿ ಇನ್ನೂ ಹೆಚ್ಚು ಹಣ ಬೇಕಾದರೆ ತಿಳಿಸು; ಕಳುಹಿಸಿಕೊಡುತ್ತೇನೆ.” ಇದೆಂತಹ ಹೃದಯವೈಶಾಲ್ಯ ಮತ್ತು ಭ್ರಾತೃಪ್ರೇಮ! “ಹಣವನ್ನೆಲ್ಲ ಅಣ್ಣನಿಗೆ ಒಪ್ಪಿಸಿ ಮತ್ತೆ ದುಡಿಯತೊಡಗಿದರು.
ಬಡತನದಲ್ಲೇ ಉಳಿಸಿ ಮೂರು ವ?ಗಳ ನಂತರ ತಾವು ಹೋಗಿ ಬಾರ್-ಎಟ್-ಲಾ ಓದಿದರು. ಆ ಕರ್ಮನಿರತ ದೈತ್ಯನಿಗೆ ಕರ್ಮಫಲವನ್ನು ತ್ಯಾಗ ಮಾಡುವುದು ರಕ್ತಗುಣವೇ ಆಗಿತ್ತು. ಇಂಥ ಎ? ಸನ್ನಿವೇಶಗಳು, ಎ? ತ್ಯಾಗಗಳನ್ನು ಅವರು ಮಾಡಿದ್ದರು” ಎನ್ನುವ ಡಾ| ಭೈರಪ್ಪ ಪ್ರಧಾನಮಂತ್ರಿಯಾಗಲು ತನಗೆ ಆಸಕ್ತಿ ಇಲ್ಲ ಎಂಬ ಗಾಂಧಿಯವರ ಕಾಗದಕ್ಕೆ ಮರುಮಾತಿಲ್ಲದೆ ರುಜು ಮಾಡಿದ್ದನ್ನು ಅದೇ ಸಾಲಿಗೆ ಸೇರಿಸುತ್ತಾರೆ.
ಪತ್ನಿಯ ಅಗಲಿಕೆ
ಈ ನಡುವೆ ಪತ್ನಿ ಅಗಲಿಕೆ ಒಂದು ದಾರುಣಪ್ರಸಂಗವಾಗಿ ಅವರ ಜೀವನದಲ್ಲಿ ಸೇರಿಹೋಯಿತು. ಪತ್ನಿ ಜವೇರ್ ಭಾಯಿ ಅವರಿಗೆ ಕರುಳಿನಲ್ಲಿ ಸಮಸ್ಯೆಯಾಗಿ ಮುಂಬಯಿಯಲ್ಲಿ ಆಸ್ಪತ್ರೆಗೆ ಸೇರಿಸಿದ್ದರು. ಒಂದು ಪ್ರಮುಖ ಕೊಲೆಕೇಸಿನ ಪಾಟೀಸವಾಲು ನಡೆಸುತ್ತಿದ್ದಾಗ ಪತ್ನಿ ಅಗಲಿದ ಸುದ್ದಿ ಅವರ ಕೈಸೇರಿತು. ಕೊನೆಗಾಲದಲ್ಲಿ ಹತ್ತಿರ ಯಾರೂ ಇಲ್ಲದೆ ಪತ್ನಿ ಸತ್ತರೆನ್ನುವ ಶಾಶ್ವತ ದುಃಖ ಅವರದಾಯಿತು (೧೯೦೨).
ತನ್ನ ಅಗಾಧ ಕೆಲಸಗಳ ನಡುವೆ ಇಬ್ಬರು ಮಕ್ಕಳನ್ನು ಬೆಳೆಸುವ ಹೊಣೆಯೂ ಅವರ ಹೆಗಲೇರಿತು. ಆ ಮಕ್ಕಳಾದರೋ ಎಂಥವರು! ಮಣಿಬೆನ್ ರಾ?ಜೀವನಕ್ಕೆ ತನ್ನನ್ನು ಅರ್ಪಿಸಿಕೊಂಡರು. ಆಕೆ ತಂದೆಗಿಂತ ಮೊದಲೇ ಖಾದಿಧಾರಿಯಾಗಿದ್ದರು. ತಂದೆ ಖಾದಿ ಧರಿಸುತ್ತೇನೆ ಎನ್ನುವಾಗ ಆಕೆ ಚರಖಾದಿಂದ ತೆಗೆದ ನೂಲು ಸಿದ್ಧವಿತ್ತು. ಚಿನ್ನವೆಲ್ಲ ಗಾಂಧಿಗೆ ಅರ್ಪಿಸಿದರು.ಮಣಿಬೆನ್ ಅವಿವಾಹಿತರಾಗಿ ಉಳಿದರು. ಗಾಂಧಿ ಆಶ್ರಮ ಸೇರಿದಂತೆ ಸ್ವಾತಂತ್ರ್ಯ ಹೋರಾಟದ ಓರ್ವ ಪ್ರಮುಖ ವ್ಯಕ್ತಿಯಾಗಿ ಬೆಳೆಯುತ್ತಾ ಹೋದರು. ಮಗ ದಹ್ಯಾ ಭಾಯ್ ಮುಂಬಯಿಯಲ್ಲಿ ಮನೆ ಮಾಡಿದ. ತಂದೆಯ ನಿರಂತರ ಸಂಪರ್ಕದಲ್ಲಿದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸೆರೆವಾಸವನ್ನು ಅನುಭವಿಸಿದ. ತಂದೆಯ ಸ್ವಂತ ಖರ್ಚಿಗೆ ಆತನೇ ಹಣ ಕೊಡುತ್ತಿದ್ದ. ಯಾವುದೇ ಸದ್ದು-ಆಡಂಬರಗಳಿಲ್ಲದೆ ಕುಟುಂಬದಿಂದ ಸಿಗಬಹುದಾದ ಸಂತೋ?ವನ್ನು ಈ ಮಕ್ಕಳು ಪಟೇಲರಿಗೆ ಕೊಡುತ್ತಿದ್ದರು. ಭೇಟಿ ಆಗುವುದರ ಕೊರತೆಯನ್ನು ಪತ್ರವ್ಯವಹಾರ ತುಂಬುತ್ತಿತ್ತು.
ಯಶಸ್ವಿ ವಕೀಲ
೧೯೧೦ರಲ್ಲಿ ವಲ್ಲಭಭಾಯ್ ಪಟೇಲ್ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು. ಮೂರು ವ?ದಲ್ಲಿ ಬ್ಯಾರಿಸ್ಟರ್ ಪರೀಕ್ಷೆ ಮುಗಿಯಿತು. ಅಲ್ಲೂ ಮಿತವ್ಯಯ: ಫಸ್ಟ್ ರ್ಯಾಂಕ್. ಫಸ್ಟ್ ಕ್ಲಾಸ್! ಎರಡು ಟರ್ಮುಗಳ ವಿನಾಯತಿ ಕೂಡ ಸಿಕ್ಕಿತು. ಭಾರತಕ್ಕೆ ಮರಳಿದವರು ಅಹಮದಾಬಾದಿನಲ್ಲಿ ವಕೀಲಿ ಆರಂಭಿಸಿದರು. ವಕೀಲರಾಗಿ ಇವರ ಧೈರ್ಯ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾಯಿತು. ನ್ಯಾಯಾಧೀಶರು ಬಹುತೇಕ ಇಂಗ್ಲಿ?ರಿದ್ದು, ಅವರಿಂದ ಅನುಕೂಲಕರ ತೀರ್ಪು ಪಡೆಯುವುದಕ್ಕಾಗಿ ಆಗಿನ ವಕೀಲರು ನ್ಯಾಯಾಧೀಶರ ಬಗೆಗೆ ಗುಲಾಮೀ ಭಾವನೆಯನ್ನು ತೋರುತ್ತಿದ್ದರು. ಉದಾಹರಣೆಗೆ ಆಂಗ್ಲ ನ್ಯಾಯಾಧೀಶರ ಮುಂದೆ ಹಾಜರಾಗುವಾಗ ವಕೀಲರು ಪಾದರಕ್ಷೆಗಳನ್ನು ಕಳಚಬೇಕಿತ್ತು. ವಲ್ಲಭಭಾಯ್ ಅದರ ವಿರುದ್ಧ ಸಿಡಿದೆದ್ದು ಅದನ್ನು ನಿಲ್ಲಿಸಿದರು. ಆರೋಪಿಗಳು ಕನ್ನಡಿಯಲ್ಲಿ ನೋಡುತ್ತಾ ಹೇಳಿಕೆ ನೀಡುವ ಅನಿ? ಪದ್ಧತಿಯನ್ನು ಕೂಡ ನಿಲ್ಲಿಸಿದರು. ತನಗೆ ಮುಖಭಂಗ ಮಾಡಲು ಯಾರಾದರೂ ಯತ್ನಿಸಿದರೆ ಆಗಲೇ ಬಿಸಿ ಮುಟ್ಟಿಸುತ್ತಿದ್ದರು. ಹೆದರಿಕೆ, ಹಿಂಜರಿಕೆಗಳು ಅವರಲ್ಲಿ ಇಲ್ಲವೇ ಇಲ್ಲ. ಇಂತಹ ನಿರ್ಭೀತ ವರ್ತನೆಯಿಂದಾಗಿ ಎಲ್ಲರಿಗೂ ಅವರಲ್ಲಿ ಗೌರವ ಉಂಟಾಯಿತು.
೧೯೧೪ರಲ್ಲಿ ತಂದೆ ನಿಧನ ಹೊಂದಿದರು; ತಂಗಿ ಅಕಾಲ ಮರಣಕ್ಕೀಡಾದರು. ವಿಠಲ್ ಭಾಯ್ ಮತ್ತು ಇವರ ಮಧ್ಯೆ ಒಂದು ಒಪ್ಪಂದವಾಯಿತು. ಅದರಂತೆ ಅಣ್ಣ ದೇಶಸೇವೆಯಲ್ಲಿ ತೊಡಗಬೇಕು, ಇವರು ಅವಿಭಕ್ತ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಬೇಕು. ಅದರ ಬಗ್ಗೆ ಹೇಳುತ್ತಾ ಕ್ರಿಮಿನಲ್ ವಕೀಲರಾದ ವಲ್ಲಭ್ ಭಾಯ್ ಒಮ್ಮೆ “ಪಾಪಕಾರ್ಯಗಳನ್ನು ನಾನು ಮಾಡಿದೆ. ಪುಣ್ಯಕಾರ್ಯಗಳನ್ನು ಅವನು ಮಾಡಿದ” ಎಂದಿದ್ದರು. ಆದರೆ ಮುಂದೆ ನಡೆದದ್ದೇ ಬೇರೆ. ಇವರು ಬಹುದೊಡ್ಡ ರೀತಿಯಲ್ಲಿ ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವಂತಾಯಿತು.
ವಕೀಲರಾದ ವಲ್ಲಭಭಾಯ್ ಸಂಜೆ ಗುಜರಾತ್ ಕ್ಲಬ್ನಲ್ಲಿ ಬ್ರಿಜ್ (ಇಸ್ಪೀಟ್) ಆಡುತ್ತಿದ್ದರು. ಹಾಗೆ ಆಡುತ್ತಿದ್ದಾಗ ಒಂದು ದಿನ ಅಲ್ಲಿಗೆ ಗಾಂಧಿ ಬಂದರು. ಕ್ಲಬ್ನಲ್ಲಿ ಅವರ ಭಾ?ಣವಿತ್ತು. ಪಟೇಲ್ ಆಗ ಭಾ?, ಉಡುಪಿನಲ್ಲಿ ವಿದೇಶೀ ಅನುಕರಣೆ ಮಾಡುತ್ತಿದ್ದರು. ಇಂಗ್ಲಿ? ಬಗ್ಗೆ ಅವರಿಗೆ ಮೆಚ್ಚುಗೆ ಇತ್ತು. ತಾವು ಇರುವಲ್ಲಿಗೇ ಗಾಂಧಿ ಬಂದರೂ ಪಟೇಲ್ ತಮ್ಮ ಆಟ ಬಿಟ್ಟು ಆಕಡೆಗೆ ಹೋಗಲಿಲ್ಲ; ಮಾತ್ರವಲ್ಲ, “ಅವರು (ಗಾಂಧಿ) ಗೋಧಿಯಿಂದ ಕಲ್ಲು ಆರಿಸುವುದು ಹೇಗೆಂದು ನಿಮಗೆ ಗೊತ್ತೇ? ಎಂದು ಕೇಳುವರು. ಅದು ಸ್ವಾತಂತ್ರ್ಯವನ್ನು ತರುತ್ತದಂತೆ!” ಎಂದು ತಮಾ? ಮಾಡಿದ್ದರು.
ಗಾಂಧಿಯ ಆಕರ್ಷಣೆ
ಚಂಪಾರಣ್ಯದ ಘಟನೆಯಲ್ಲಿ ಗಾಂಧಿ ಇಡೀ ದೇಶದ ಗಮನವನ್ನು ಸೆಳೆದರು. ಚಂಪಾರಣ್ಯದಲ್ಲಿ (ಬಿಹಾರ) ರೈತರು ಶೋ?ಣೆ, ಅವಮಾನಗಳಿಗೆ ಗುರಿಯಾಗಿದ್ದರು. ಪ್ಲಾಂಟರನ ಮುಂದೆ ಭಾರತೀಯರು ಕುದುರೆ ಮೇಲೆ ಹೋಗುವಂತಿರಲಿಲ್ಲ; ಕೊಡೆ ಬಿಡಿಸಲೂ ಬಾರದು. ಗಾಂಧಿ ಆ ವಿಷಯವನ್ನು ಎತ್ತಿಕೊಂಡರು; ಇಂಡಿಗೋ ಪ್ಲಾಂಟೇಶನ್ನಲ್ಲಿ ಆಂಗ್ಲ ಮಾಲೀಕರು ನಡೆಸುವ ದಬ್ಬಾಳಿಕೆ ವಿರುದ್ಧ ಅವರು ಹೋರಾಟಕ್ಕಿಳಿದಾಗ ಪ್ಲಾಂಟರುಗಳ ಸಂಘದ ಕಾರ್ಯದರ್ಶಿ “ನೀವು ಇಲ್ಲಿನವರಲ್ಲ; ಹೊರಗಿನವರು. ಹೊರಗೆ ಹೋಗಿ” ಎಂದ. ಅದಕ್ಕೆ ಗಾಂಧಿ “ನಾನು ಅವರ ಮಧ್ಯೆ ಇರುವುದರಿಂದ ಮಾತ್ರ ಅವರ ಸೇವೆ ಮಾಡಬಲ್ಲೆ” ಎಂದು ಹೊರಗೆ ಹೋಗಲು ನಿರಾಕರಿಸಿದರು.
ಆ ಹೇಳಿಕೆ ಇಡೀ ದೇಶದಲ್ಲಿ ಸುದ್ದಿಯಾಯಿತು. ಅಹಮದಾಬಾದಿನ ’ಗುಜರಾತ್ ಸಭಾ’ ಚುರುಕಾಯಿತು. ಗಾಂಧಿ ಬಗ್ಗೆ ಪಟೇಲರ ಅಭಿಪ್ರಾಯವೂ ಬದಲಾಯಿತು. ಗಾಂಧಿ ಗುಜರಾತ್ ಸಭಾದ ಅಧ್ಯಕ್ಷರಾದರೆ ಪಟೇಲ್ ಕಾರ್ಯದರ್ಶಿಯಾದರು. ಅಹಮದಾಬಾದಿನ ನಗರಸಭಾ ಸದಸ್ಯರಾದ ಪಟೇಲ್ ಅಲ್ಲಿಗೆ ಕಮಿಷನರ್ಗಳಾಗಿ ಬಂದ ಬ್ರಿಟಿ? ಅಧಿಕಾರಿಗಳ ಅನ್ಯಾಯ, ದಬ್ಬಾಳಿಕೆ, ದುರಹಂಕಾರಗಳ ವಿರುದ್ಧ ಹೋರಾಟ ಆರಂಭಿಸಿದರು; ಯಶಸ್ವಿ ಕೂಡ ಆದರು.
ವಲ್ಲಭಭಾಯ್ ಅವರು ಮೊದಲಿಗೆ ಓರ್ವ ರೈತನಾಯಕ. ಹೋರಾಟಗಾರನಾಗಿ ರೂಪುಗೊಳ್ಳುವ ಸಂದರ್ಭ ಒದಗಿ ಬಂದದ್ದು ವಿಶೇಷವೆನ್ನಬೇಕು. ೧೯೧೭ರ ಭಾರೀ ಮಳೆಯಿಂದಾಗಿ ರೈತರಿಗೆ ಕಂದಾಯ ಪಾವತಿಸುವುದು ಕ?ವಾಗಿತ್ತು. ಖೇಡಾ ಜಿಲ್ಲೆಯ ರೈತನಾಯಕರು ಮನವಿ ತಯಾರಿಸಿ ೨೨ ಸಾವಿರ ರೈತರ ಸಹಿ ಹಾಕಿ ಮುಂಬಯಿ ಸರ್ಕಾರಕ್ಕೆ ಕಳುಹಿಸಿದಾಗ ಕಲೆಕ್ಟರ್ ರಿಯಾಯತಿ ಆದೇಶ ಹೊರಡಿಸಿದರು. ಆದರೆ ಮಾಮಲೇದಾರರು ವಸೂಲಿಗೆ ಕ್ರಮ ಕೈಗೊಂಡರು; ರೈತರ ಆಸ್ತಿಯ ಮುಟ್ಟುಗೋಲುಹಾಕಿದರು. ರೈತರು ಜಮೀನು ಮಾರಿ ಕಂದಾಯ ಕಟ್ಟಬೇಕಾಯಿತು. ಆ ಹೊತ್ತಿಗೆ ಸಬರ್ಮತಿ ಆಶ್ರಮಕ್ಕೆ ಬಂದ ಗಾಂಧಿಯವರ ಸಲಹೆಯ ಮೇರೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಉತ್ತರ ಬರುವವರೆಗೆ ಕಂದಾಯ ಪಾವತಿ ಇಲ್ಲ ಎಂದು ತೀರ್ಮಾನಿಸಲಾಯಿತು.
ನೇರ ಚಳವಳಿ
ತಾನು ನಾಯಕತ್ವ ವಹಿಸಬೇಕಿದ್ದರೆ ತಾನಿಲ್ಲದಾಗ ಒಬ್ಬಾತ ಪೂರ್ಣಾವಧಿ ಆ ಕೆಲಸ ಮಾಡಬೇಕು ಎಂದು ಗಾಂಧಿ ಸೂಚಿಸಿದರು. ಅದಕ್ಕೆ ಒಪ್ಪಿದ ಹೋರಾಟ ಸಮಿತಿ ಆ ಹೊಣೆಯನ್ನು ಪಟೇಲರಿಗೆ ವಹಿಸಿತು. “ರೈತರು ಕಂದಾಯ ಪಾವತಿಗೆ ಸಿದ್ಧರಿದ್ದಾರೆ. ಆದರೆ ಗಾಂಧಿ ಪಟೇಲರಂತಹ ಖೈಡಾ ಹೊರಗಿನವರು ಪಾವತಿಸದಂತೆ ಪ್ರಚೋದಿಸುತ್ತಿದ್ದಾರೆ” ಎಂದು ಸರ್ಕಾರ ಆರೋಪಿಸಿತು. ಮಾರ್ಚ್ ೨೨, ೧೯೧೮ರಂದು ಸತ್ಯಾಗ್ರಹವನ್ನು ಆರಂಭಿಸುವಾಗ ಗಾಂಧಿ ಹೇಳಿದರು: “ಇದು ವಲ್ಲಭ್ಭಾಯ್ ಅವರ ನೆಲ. ಅವನು ಕೆಲವು ಅಗ್ನಿಪರೀಕ್ಷೆಗಳನ್ನು ಹಾದು ಬಂದಿದ್ದಾನೆ. ಆದರೆ ಅವನಿಗೆ ಇನ್ನ? ಪರೀಕ್ಷೆಗಳು ಕಾದಿವೆ. ಕೊನೆಯಲ್ಲಿ ನಾವು (ಪರೀಕ್ಷೆಯಲ್ಲಿ) ಪರಿಶುದ್ಧ ಬಂಗಾರವನ್ನು ಕಾಣುತ್ತೇವೆ ಎನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.” ಖೈಡಾ ಚಳವಳಿ ದೇಶದ ಗಮನ ಸೆಳೆಯಿತು. ಪಟೇಲರು ಗಾಂಧಿಯವರ ಸತ್ಯಾಗ್ರಹ ರೀತಿಯ ಗಾಂಧೀವಿಧಾನವನ್ನು ಸಂಪೂರ್ಣ ಒಪ್ಪಲಿಲ್ಲ. ಅವರದು ಕುರುಡು ಪಾಲನೆ ಅಲ್ಲ. ಸರ್ಕಾರ ರೈತರ ದನಗಳನ್ನು ಹರಾಜುಹಾಕಲು ಮುಂದಾದರೆ ರೈತರು ತಾವಾಗಿ ದನಗಳನ್ನು ಅಧಿಕಾರಿಗಳಿಗೆ ಒಪ್ಪಿಸಬೇಕೆಂಬುದು ಗಾಂಧಿ ವಿಧಾನ. ಆದರೆ ಪಟೇಲ್ ದನಗಳನ್ನು ಮನೆಸಮೀಪ ಇಡಬಾರದು; ವಶಪಡಿಸಿಕೊಳುವುದನ್ನು ತಪ್ಪಿಸಬೇಕು ಎಂದು ಸೂಚಿಸುತ್ತಿದ್ದರು.
ಚಳವಳಿಯ ಬಿಸಿ ಮುಟ್ಟಿತು. ಸರ್ಕಾರ ಕಂದಾಯ ವಸೂಲಿಯನ್ನು ಮುಂದೂಡಿತು. ಅಲ್ಲಿಗೆ ರೈತರಿಗೆ ಜಯವಾಯಿತು. “ವಲ್ಲಭಭಾಯ್ ಸಹಾಯವಿಲ್ಲದೆ ಹೋಗಿದ್ದರೆ ನಾವು ಗೆಲ್ಲುತ್ತಿರಲಿಲ್ಲ” ಎಂದು ಗಾಂಧಿ ಹೇಳಿದರು. “ಖೇಡಾ ಜಿಲ್ಲೆಯನ್ನು ಭಾರತದ ಸ್ವಾತಂತ್ರ್ಯ ಸಮರದ ಮುಂಚೂಣಿಗೆ ತಂದದ್ದಕ್ಕಾಗಿ ಮಹಾತ್ಮಾಜೀಯವರನ್ನು ನಾನು ಅಭಿನಂದಿಸುತ್ತೇನೆ” ಎಂದು ಪಟೇಲ್ ಹೇಳಿದರಲ್ಲದೆ, ಗಾಂಧಿಯವರಿಂದ ತುಂಬ ಪ್ರಭಾವಿತರಾಗಿ ಅವರ ಪಕ್ಕಾ ಅನುಯಾಯಿಯಾದರು. ಸತ್ಯಾಗ್ರಹ ಅವರಿಗೆ ಬಹಳ ಒಪ್ಪಿಗೆಯಾಯಿತು; ಅದರೊಂದಿಗೆ ಅವರ ಜೀವನದ ದಿಕ್ಕೇ ಬದಲಾಯಿತು. ಇನ್ನೊಂದೆಡೆ ಗಾಂಧಿ ರಾಜಾಜಿಗೆ ಒಮ್ಮೆ ಹೀಗೆ ಹೇಳಿದರಂತೆ: “ನೀವು ವಲ್ಲಭಭಾಯ್ ಅವರನ್ನು ನೋಡಿದ್ದೀರಾ? ಅವರಲ್ಲಿ ನನಗೊಬ್ಬ ಅತ್ಯಂತ ನಂಬಿಗಸ್ಥ, ನಿ?ವಂತ ಮತ್ತು ಧೈರ್ಯಶಾಲಿ ಸಿಕ್ಕಿದ್ದಾನೆ.”
ಬಾರ್ಡೋಲಿ ಸತ್ಯಾಗ್ರಹ
ಗುಜರಾತಿನ ರೈತರೊಡನೆ ಪಟೇಲರನ್ನು ಇನ್ನೊಮ್ಮೆ ಬೆಸೆದ ಸಂದರ್ಭವೇ ಬಾರ್ಡೋಲಿ ಸತ್ಯಾಗ್ರಹ. ಇದು ಕೂಡ ಕಂದಾಯವಸೂಲಿಗೆ ಸಂಬಂಧಿಸಿದಂಥದೇ. ಬಾರ್ಡೋಲಿ ಸೂರತ್ ಜಿಲ್ಲೆಯ ಒಂದು ತಾಲ್ಲೂಕು. ೧೯೨೬ರಲ್ಲಿ ಅಲ್ಲಿ ಕಂದಾಯ ನಿಗದಿ ಆಗಬೇಕಿತ್ತು. ಒಮ್ಮೆಗೇ ಶೇ. ೩೦ರಷ್ಟು ಏರಿಕೆಗೆ ಶಿಫಾರಸು ಮಾಡಲಾಯಿತು. ರೈತರು ಸಮ್ಮೇಳನ ನಡೆಸಿ ಕಂದಾಯ ನೀಡದಿರಲು ತೀರ್ಮಾನಿಸಿದರು. ಪಟೇಲರ ಬಳಿ ಹೋಗಿ ನಾಯಕತ್ವ ವಹಿಸುವಂತೆ ಕೇಳಿದರು. ಸಮೀಕ್ಷೆ ನಡೆಸಿದಾಗ ಹೋರಾಟದ ವಿ?ಯದಲ್ಲಿ ರೈತರು ಗಟ್ಟಿಯಾಗಿದ್ದಾರೆಂದು ತಿಳಿಯಿತು. ಗಾಂಧಿಯವರ ಒಪ್ಪಿಗೆ ಪಡೆಯುವಂತೆ ಪಟೇಲ್ ರೈತರಿಗೆ ಸೂಚಿಸಿದರು. ಗಾಂಧಿ ಒಪ್ಪಿಗೆ ನೀಡಿದರಾದರೂ ಅದಕ್ಕೆ ಸ್ವಾತಂತ್ರ್ಯ ಹೋರಾಟದ ಬಣ್ಣ ಬರಬಾರದೆಂದು ಸಾಕಷ್ಟು ದೂರವಿರಲು ನಿರ್ಧರಿಸಿದರು.
ಇದು ಬಹಳಷ್ಟು ತೀವ್ರ ಸ್ವರೂಪದ ಹೋರಾಟವಾಗಿತ್ತು. ಬ್ರಿಟಿಷ್ ಸರ್ಕಾರ ಇದನ್ನು ಸವಾಲಾಗಿಯೇ ಸ್ವೀಕರಿಸಿತು. ಆದರೆ ಪಟೇಲ್ ಇದನ್ನು ಸೈನ್ಯದ ಶಿಸ್ತಿನಲ್ಲಿ ರೂಪಿಸಿದರು. ಅವರೇ ಸೇನಾಪತಿ, ಅವರ ಕೆಳಗೆ ವಿಭಾಗಪತಿಗಳು, ಅವರ ಕೆಳಗೆ ಸೈನಿಕರು. ಸ್ವಯಂಸೇವಕರೇ ಸೈನಿಕರು. ತಾಲ್ಲೂಕಿನಲ್ಲಿ ೯೨ ಗ್ರಾಮಗಳಿದ್ದವು. ದೂರದ ಸಮಾಚಾರಗಳನ್ನು ವೇಗವಾಗಿ ತರಲು ಕುದುರೆ ಸವಾರರಿದ್ದರು. ಈ ಸಮರದಲ್ಲಿ ೮೭ ಸಾವಿರ ರೈತರು ಭಾಗಿಯಾದರು. ೧೮ ವಲಯಗಳಿದ್ದು ಅದರ ಕೇಂದ್ರ ಕಾರ್ಯಸ್ಥಾನ ಬಾರ್ಡೋಲಿ. ಪಟೇಲ್ ಅಲ್ಲೇ ಇದ್ದರು. ಈ ಹೋರಾಟದ ವೇಳೆ ಯಾರೋ ಒಬ್ಬರು ಪಟೇಲರನ್ನು ’ರೈತರ ಸರ್ದಾರ್’ ಎಂದು ಕರೆದರು. ಜನ ಅದೇ ರೀತಿ ಕರೆದರು. ಗಾಂಧಿ ಕೂಡ ಅದೇ ಹೆಸರನ್ನು ಗಟ್ಟಿ ಮಾಡಿದರು.
ರೈತರ ಹಿತಸಾಧಕ
ಸರ್ಕಾರ ದನಕರುಗಳಲ್ಲದೆ ಚಳವಳಿ ನಿರತರ ಜಮೀನನ್ನು ಕೂಡ ವಶಪಡಿಸಿಕೊಂಡಿತು; ಅದನ್ನು ಹರಾಜುಹಾಕಿ ಯಾರಿಗೋ ಮಾರುವ ಪ್ರಕ್ರಿಯೆ ಕೂಡ ನಡೆಯಿತು. ಆಗ ಪಟೇಲ್ ಜಮೀನು ಎಲ್ಲಿಗೂ ಹೋಗುವುದಿಲ್ಲ ಎಂದರಲ್ಲದೆ ಯಾರಾದರೂ ಅದನ್ನು ಖರೀದಿಸಿದ್ದರೂ ಕೂಡ ಮರಳಿ ನೀಡುವ ಭರವಸೆ ನೀಡಿದರು. ಗಂಡಸರಿಗಿಂತಲೂ ಹೆಚ್ಚಾಗಿ ರೈತ ಮಹಿಳೆಯರು ದಿಟ್ಟತನದಿಂದ ಬಾರ್ಡೋಲಿ ಕರನಿರಾಕರಣೆಯಲ್ಲಿ ಭಾಗಿಯಾದರು. ಹಳ್ಳಿಯ ಯಾವುದೋ ಮೂಲೆಯಲ್ಲಿ ಮರದ ಮೇಲೆ ಕುಳಿತವನು ನಗಾರಿ ಬಾರಿಸಿ ಅಧಿಕಾರಿಗಳು ಬರುವ ಸೂಚನೆ ಕೊಡುತ್ತಿದ್ದ. ಸಂಬಂಧಪಟ್ಟ ಮನೆಯವರು ಮನೆಗೆ ಬೀಗಹಾಕಿ ಎಲ್ಲಿಗೋ ಹೋಗುತ್ತಿದ್ದರು. ಇನ್ನೊಂದೆಡೆ ರೈತರ ಸ್ಥಿತಿ, ಕ?ಕಾರ್ಪಣ್ಯ ತೀವ್ರವಾಗಿದೆಯೆಂದು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾದವು. ಸರ್ಕಾರಕ್ಕೆ ಮುಖಭಂಗವಾಗುವ ಸಂದರ್ಭಗಳು ಎದುರಾದವು. ಸರ್ಕಾರದ ಕಪಿಮುಷ್ಟಿ ಸಡಿಲಾಯಿತು. ಗವರ್ನರ್ ಮಾತುಕತೆಗೆ ಬಂದ; ಅಂತಿಮವಾಗಿ ಕಂದಾಯ ಏರಿಕೆ ಶೇ. ೫.೭ಕ್ಕೆ ಸೀಮಿತವಾಯಿತು. ಗಾಂಧಿ, ರಾಜಾಜಿ, ಸರೋಜಿನಿನಾಯ್ಡು, ಸುಭಾ?ಚಂದ್ರ ಬೋಸ್ ಮುಂತಾಗಿ ಅನೇಕ ನಾಯಕರು ಸರ್ದಾರ್ ಪಟೇಲರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಪ್ರಸ್ತುತ ತೀರ್ಮಾನ ಬಾರ್ಡೋಲಿ ತಾಲ್ಲೂಕಿಗೆ ಸೀಮಿತವಾಗಬಾರದು; ಇಲ್ಲವಾದರೆ ಸತ್ಯಾಗ್ರಹದ ಜ್ವಾಲೆ ಇಡೀ ರಾಜ್ಯಕ್ಕೆ ವಿಸ್ತಾರಗೊಳ್ಳಬಹುದೆಂದು ಸರ್ಕಾರವನ್ನು ಎಚ್ಚರಿಸಿದ ಪಟೇಲ್ ಇಡೀ (ಅವಿಭಜಿತ) ಮುಂಬಯಿ ಪ್ರಾಂತದಲ್ಲಿ ಕಂದಾಯ ಶೇ. ೫.೭ರ? ಮಾತ್ರ ಏರಿಕೆಯಾಗುವಂತೆ ನೋಡಿಕೊಂಡರು. ಸರ್ಕಾರದ ಬಳಿಯೇ ಇದ್ದ ಜಮೀನುಗಳನ್ನು ರೈತರಿಗೆ ಕೂಡಲೆ ಕೊಡಿಸಿದರು. ಹರಾಜಾಗಿ ಬೇರೆಯವರ ವಶವಾದುದನ್ನು ಕೊಡಿಸಲು ಕ?ವಾದರೂ ಅದನ್ನು ಬೆಂಬತ್ತಿ ಪ್ರಾಂತಗಳಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ (೧೯೩೭) ಸರ್ಕಾರ ಜಮೀನನ್ನು ವಶಪಡಿಸಿಕೊಂಡು ಆಯಾ ರೈತರಿಗೆ ಮರಳಿಸುವಂತೆ ನೋಡಿಕೊಂಡರು. ಮನ್ನಾರ್ ಕೃ?ರಾವ್ ಈ ರೀತಿಯ ಎಲ್ಲ ವಿವರಗಳನ್ನು ಸಮಗ್ರವಾಗಿ ಸಂಗ್ರಹಿಸಿ ಓದುಗರಿಗೆ ನೀಡುವ ಮೂಲಕ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ.
ಕೈತಪ್ಪಿದ ನಾಯಕತ್ವ
ಕಾಂಗ್ರೆಸಿನಲ್ಲಿ ಗಾಂಧಿಯವರ ನಂತರ ಪಟೇಲರೇ ಉನ್ನತಮಟ್ಟದ ನಾಯಕ ಎನ್ನುವ ವಾತಾವರಣ ಆ ದಿನಗಳಲ್ಲಿತ್ತು. ರಾ?ವ್ಯಾಪಿ ವರ್ಚಸ್ಸಿರುವವರು, ಯಾವುದೇ ಸಮಸ್ಯೆಯನ್ನು ಪರಿಹರಿಸಬಲ್ಲ ಸಮರ್ಥರು, ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಬಲ್ಲ ದಕ್ಷನಾಯಕತ್ವ, ಗಾಂಧಿಯವರಿಗೆ ಅಪರಿಮಿತ ನಿ?ರೂ ಹೌದು. ಆದರೂ ಅವರೇಕೆ ದೇಶದ ಪ್ರಧಾನಿ ಆಗಲಿಲ್ಲ? ಅದನ್ನು ತಪ್ಪಿಸಿದ್ದು ಯಾರು? ತಪ್ಪಿಸಿದ್ದು ಗಾಂಧಿಯವರಾದರೆ ಅದಕ್ಕೆ ಕಾರಣವೇನು? – ಎಂಬಂತಹ ಪ್ರಶ್ನೆಗಳನ್ನು ಆಗಾಗ ಕೇಳಲಾಗುತ್ತದೆ. ತಪ್ಪಿಸಿದ್ದು ಬಹುತೇಕ ಗಾಂಧಿಯವರೇ ಎಂಬುದು ನಿಜವಾದರೂ ಅದರಲ್ಲಿ ಇತರರ ಪಾತ್ರವೂ ಇದೆ; ಮತ್ತು ಕ್ರಮೇಣ ಅಂತಹ ಒಂದು ಸನ್ನಿವೇಶವನ್ನು ನಿರ್ಮಿಸಲಾಯಿತು ಅನ್ನಿಸದಿರದು. ಪಟೇಲರು ರಾ?ರಂಗಕ್ಕೆ ಆಗಮಿಸಿದ ಆರಂಭದಲ್ಲೊಮ್ಮೆ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಬಗ್ಗೆ ಗಾಂಧಿಯವರು ಮೋತಿಲಾಲರ ಸಲಹೆಯನ್ನು ಕೇಳಿದಾಗ, ಪಟೇಲರನ್ನು ಆರಿಸಬಹುದು, ಅದಾಗದಿದ್ದರೆ ಜವಾಹರಲಾಲ್ ಆಯ್ಕೆ ಸರಿ ಎಂದು ಸೂಚಿಸಿದರು. ಗಾಂಧಿ ಅದರಿಂದ ಯಾವ ಸೂಚನೆಯನ್ನು ಪಡೆದರೋ ಗೊತ್ತಿಲ್ಲ. ಆದರೆ ಅವರು ಅಧ್ಯಕ್ಷತೆಗೆ ಆರಿಸಿದ್ದು ಮೋತಿಲಾಲರನ್ನೇ.
೧೯೨೯ರಲ್ಲಿ ಲಾಹೋರ್ ಕಾಂಗ್ರೆಸ್ ಅಧಿವೇಶನ ಎದುರಾದಾಗ ಪಟೇಲ್ ಅಧ್ಯಕ್ಷರಾಗಲಿ ಎಂದು ಸುಭಾ?ಚಂದ್ರ ಬೋಸ್ ಸೂಚಿಸಿದರು. ಬಹಳ? ಜನರ ಒಲವು ಗಾಂಧಿಯವರ ಕಡೆಗಿತ್ತು. ಅವರು ಒಪ್ಪಲಿಲ್ಲ. ಸಮಾಜವಾದಿಗಳಾದ ನರೇಂದ್ರದೇವ್ ಮತ್ತು ಬಾಲಕೃ?ಶರ್ಮ ಜವಾಹರಲಾಲ್ ನೆಹರು ಪರ ಬ್ಯಾಟಿಂಗ್ ಮಾಡಿದರು. ಅದರಿಂದ ಅಸಮಾಧಾನಗೊಂಡ ಪಟೇಲ್ ಹಿಂದೆ ಸರಿದರು; ಜವಾಹರಲಾಲ್ ಹಾದಿ ಸುಗಮವಾಯಿತು. ಅವರು ಪೂರ್ಣ ಸ್ವರಾಜ್ಯದ ಠರಾವು ಮಂಡಿಸಿ (ಜನವರಿ ೨೬) ಹೀರೋ ಆದರು. ಗಾಂಧಿ ಆ ರೀತಿ ಮಾಡುವುದಕ್ಕೆ ಕಾರಣ –
- ಮೋತಿಲಾಲರ ಅಪೇಕ್ಷೆ.
- ಆಗತಾನೆ ರ?ಕ್ಕೆ ಹೋಗಿಬಂದ ಜವಾಹರಲಾಲ್ ಎಡಕ್ಕೆ ವಾಲುವುದನ್ನು ತಡೆಯುವುದು.
- ದೇಶದಲ್ಲಿ ಯುವಕರ ಮೇಲೆ ಎಡಪಂಥದ ಪ್ರಭಾವ ಹೆಚ್ಚುತ್ತಿದ್ದ ಕಾರಣ ಅವರನ್ನು ಸೆಳೆಯಲು ಈ ತಂತ್ರ.
- ಡೊಮಿನಿಯನ್ ಸ್ಟೇಟಸ್ ವಿ?ಯದಲ್ಲಿ ಸುಭಾ? ಮತ್ತು ಜವಾಹರಲಾಲ್ ಒಟ್ಟಾಗಿ ಪ್ರತಿಭಟಿಸಿದ್ದರು; ಸುಭಾ?ರಿಂದ ಇವರನ್ನು ಪ್ರತ್ಯೇಕಿಸುವ ಉದ್ದೇಶ.
- ಅದೇ ಹೊತ್ತಿಗೆ ಜಿನ್ನಾ ಕಾಂಗ್ರೆಸ್ ಬಿಡುವ ಮಾತನಾಡಿದ್ದರು. ಆಗ ಮುಸ್ಲಿಮರನ್ನು ಉಳಿಸಿಕೊಳ್ಳಲು ಪಟೇಲರಿಗಿಂತ ನೆಹರು ಉತ್ತಮ ಎಂಬ ಅಭಿಪ್ರಾಯ.
- ಪಟೇಲ್ ತಮ್ಮಿಂದ ದೂರಸರಿಯುವುದಿಲ್ಲ ಎಂಬ ವಿಶ್ವಾಸ.
ಜೊತೆಗೆ ಇನ್ನೊಂದು ಅಂಶವನ್ನು ಕೂಡ ಹೇಳಲಾಗುತ್ತದೆ. ಅದೆಂದರೆ ಗಾಂಧಿ ಮತ್ತು ಪಟೇಲರದು ಅಣ್ಣ-ತಮ್ಮನ ಸಂಬಂಧವಾದರೆ ಗಾಂಧಿ ಮತ್ತು ನೆಹರು ಅವರದ್ದು ತಂದೆ-ಮಗನ ಸಂಬಂಧ. ಉತ್ತರಾಧಿಕಾರಿಯಾಗುವುದು ಮಗನೇ ಅಲ್ಲವೆ? ಇದನ್ನು ಮುಂದಿನ ತಲೆಮಾರಿನ ಬಗೆಗೆ ಇರಬಹುದಾದ ಆಕ?ಣೆ ಎನ್ನಬಹುದೆ? (ಕವಿ ಗೋಪಾಲಕೃ? ಅಡಿಗರ ’ವರ್ಧಮಾನ’ ಕವನದ ಹಿನ್ನೆಲೆಯಲ್ಲಿ ಇದನ್ನು ನೋಡಬಹುದೆ?) ಸಾಹಿತಿ ಡಾ| ಭೈರಪ್ಪ ಅವರು ನೇರವಾಗಿಯೇ ಹೇಳುತ್ತಾರೆ. ಮುಂದೆ ಅನೇಕ ಸಂದರ್ಭಗಳಲ್ಲಿ ಪಟೇಲರಿಗೆ ಇಂಥದ್ದೇ ಅಂಶಗಳು ತಡೆಯೊಡ್ಡುತ್ತಾ ಬಂದವು.
ಕಾಂಗ್ರೆಸಿನಲ್ಲಿ ಸ್ಥಿತಿ ಹೇಗಿತ್ತೆಂದರೆ, ಪಟೇಲರ ಅಧ್ಯಕ್ಷತೆ ಅವಧಿ ಮುಗಿದರೂ ಅವರ ಜವಾಬ್ದಾರಿ ಮುಗಿಯಲಿಲ್ಲ; ಕಡಮೆಯಾಗಲೂ ಇಲ್ಲ. ಅವರು ಕಾಂಗ್ರೆಸ್ ಪಾರ್ಲಿಮೆಂಟರಿ ಬೋರ್ಡಿನ ಅಧ್ಯಕ್ಷರಾದರು. ೧೯೩೫ರ ’ಭಾರತ ಸರ್ಕಾರ ಕಾನೂನಿನ’ ಪ್ರಕಾರ ದೇಶವು ಪಾರ್ಲಿಮೆಂಟರಿ ವಿಧಾನಕ್ಕೆ ಹೋಗುತ್ತಿತ್ತು. ಅದಕ್ಕಾಗಿ ಬೋರ್ಡ್ನ ರಚನೆಯಾಯಿತು. ಚುನಾವಣೆಗೆ ಹಣಸಂಗ್ರಹ, ವಿತರಣೆ, ಅಭ್ಯರ್ಥಿಗಳ ಆಯ್ಕೆ, ಇತರ ಪಕ್ಷಗಳ ಬಗ್ಗೆ ಧೋರಣೆ ನಿರ್ಧಾರ, ಫಲಿತಾಂಶದ ಬಳಿಕ ನಾಯಕನ ಆಯ್ಕೆ, ಮಂತ್ರಿಗಳ ಉಸ್ತುವಾರಿ ಮುಂತಾದವು ಅವರ ಕೆಲಸ. ನಿಧನದವರೆಗೂ (ಡಿಸೆಂಬರ್, ೧೯೫೦) ಅವರು ಆ ಹುದ್ದೆಯಲ್ಲಿದ್ದರು. ಅತ್ಯಂತ ವಿವೇಚನೆಯಿಂದ, ಪ್ರಜಾಸತ್ತಾತ್ಮಕವಾಗಿ, ಸ್ವಲ್ಪವೂ ವಿಳಂಬವಿಲ್ಲದೆ ತನ್ನ ಕೆಸಲಗಳನ್ನು ನಿರ್ವಹಿಸುತ್ತಿದ್ದ ಕಾರಣ ಸರ್ದಾರ್ ಪಟೇಲ್ ಅತ್ಯಂತ ಬಲಿ? ಮತ್ತು ಪ್ರಭಾವಿ ನಾಯಕನಾಗಿ ಬೆಳೆದರು. ಗುಜರಾತ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷತೆ ಕೂಡ ಶಾಶ್ವತವಾಗಿ ಅವರ ಬಳಿಯೇ ಇತ್ತು.
ಪಕ್ಷದೊಳಗೆ ನೆಹರುಗೆ ಗಾಂಧಿ ಬ್ರೇಕ್ ಹಾಕುವ ಸಂದರ್ಭಗಳೂ ಬರುತ್ತಿದ್ದವು. ೧೯೩೬ರ ಲಖ್ನೋ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಗೆ ಪಟೇಲ್ ರಾಜಾಜಿ ಅವರನ್ನು ಸೂಚಿಸಿದರು; ಅವರು ನಿರಾಕರಿಸಿದಾಗ ಗಾಂಧಿ ಮತ್ತೆ ಜವಾಹರಲಾಲ್ಗೆ ಪಟ್ಟ ಕಟ್ಟಿದರು. ಸಮಾಜವಾದಿಗಳಿಗೆ ಖುಷಿಯಾಯಿತು. ಅವರ ಮೂಲಕ ಕಾಂಗ್ರೆಸನ್ನು ವಶಪಡಿಸಿಕೊಳ್ಳುವುದು ಅವರ ಕನಸಾಗಿತ್ತು. ಸಮಾಜವಾದಿ ಒಲವಿನ ನೆಹರು ಅವರಿಗೆ ಪಟೇಲ್, ರಾಜಾಜಿ, ರಾಜೇಂದ್ರ ಪ್ರಸಾದ್, ಜಮ್ನಾಲಾಲ್ ಬಜಾಜ್ ಮುಂತಾದವರ ಬಗ್ಗೆ ಅತೃಪ್ತಿಯಿತ್ತು. ಗಾಂಧಿಯವರ ಚರಖಾ, ಖಾದಿ ಮುಂತಾದ ರಚನಾತ್ಮಕ ಕೆಲಸಗಳನ್ನು ನೆಹರು ಒಪ್ಪಿರಲಿಲ್ಲ. ಚರಖವನ್ನು ಅವರು ಹಳೆಮುದುಕಿಯ ಕೆಲಸ ಎಂದು ನಿಂದಿಸಿದ್ದರು. ನೆಹರು ಎರಡೂ ಕಡೆಯವರನ್ನು ಸೇರಿಸಿ ಕಾರ್ಯಕಾರಿ ಸಮಿತಿಯನ್ನು ರಚಿಸಿದರು. ಭಾ?ಣಗಳಲ್ಲಿ ಅವರು ಸಮಾಜವಾದವನ್ನು ಬೆಂಬಲಿಸುತ್ತಿದ್ದರು. ಅದು ಪಕ್ಷ ಒಪ್ಪದಿರುವ ವಿಚಾರ ಎಂದು ಪಟೇಲ್ ಆಕ್ಷೇಪಿಸಿದರು. ಆಗ ನೆಹರು ಕಾರ್ಯಕಾರಿ ಸಮಿತಿಯನ್ನು ತನ್ನ ವಿವೇಚನೆಗೆ ವಿರುದ್ಧವಾಗಿ ಮಾಡಿದ್ದೇನೆ ಎಂದರು. ಪಟೇಲ್, ರಾಜೇಂದ್ರ ಪ್ರಸಾದ್, ರಾಜಾಜಿ ಹಾಗೂ ಬಜಾಜ್ ಕೂಡಲೇ ರಾಜೀನಾಮೆ ನೀಡಿದರು. ನೆಹರು ತಾನೇ ರಾಜೀನಾಮೆ ಕೊಡುವೆ ಎಂದರು. ಮತ್ತು ಗಾಂಧಿ ಎರಡೂ ಕಡೆಯವರನ್ನು ತಡೆದರು.
ನೆಹರು ನಡೆಗೆ ಬ್ರೇಕ್
ಗಾಂಧಿಯವರು ನೆಹರುಗೆ ಒಂದು ಪತ್ರ ಬರೆದು, “ನಿಮ್ಮ ನಿಂದನೆಗಳು ಮತ್ತು ಠೀವಿಯಿಂದ, ಅದಕ್ಕಿಂತ ಮುಖ್ಯವಾಗಿ ನೀವು ತಪ್ಪು ಮಾಡುವುದೇ ಇಲ್ಲ ಹಾಗೂ ನಿಮಗೆ ಹೆಚ್ಚಿನ ಜ್ಞಾನ ಇದೆಯೆಂಬ ನಿಮ್ಮ ಧೋರಣೆಯಿಂದ ಅವರು ಆಘಾತಗೊಂಡಿದ್ದಾರೆ. ನೀವು ಅವರಿಗೆ ಅಸೌಜನ್ಯವನ್ನು ತೋರುತ್ತಿದ್ದೀರಿ. ಸಮಾಜವಾದಿಗಳು ಅವರನ್ನು ಅವಹೇಳನ ಮಾಡಿದಾಗ ನೀವು ಎಂದೂ ಅವರನ್ನು (ಹಳೆಯ ನಾಯಕರು) ಸಮರ್ಥಸಿಲ್ಲ ಎಂದವರು ಭಾವಿಸಿದ್ದಾರೆ. ಅವರ ಅವಿರೋಧದಿಂದ ನೀವು ಅಧಿಕಾರದಲ್ಲಿದ್ದೀರಿ ಎಂಬುದು ನೆನಪಿರಲಿ” ಎಂದು ಎಚ್ಚರಿಸಿದರು. ನೆಹರು ನೇಮಿಸಿದ ಮೂವರು ಸಮಾಜವಾದಿಗಳು ಕಮ್ಯೂನಿಸ್ಟರ ನೆರಳಾಗುವ ಸಂಭವವಿತ್ತು. ಪಟೇಲ್ ಸಮಾಜವಾದಿಗಳ ನಡೆಯನ್ನು ಎಚ್ಚರದಿಂದ ಗಮನಿಸುತ್ತಿದ್ದರು ಮತ್ತು ಕಮ್ಯೂನಿಸ್ಟರು ಸಮಾಜವಾದಿಗಳ ಮೂಲಕ ಕಾಂಗ್ರೆಸ್ ಸೇರಲು ಹವಣಿಸುತ್ತಿದ್ದರು. ಸರ್ಕಾರ ಕಮ್ಯೂನಿಸ್ಟ್ ಪಕ್ಷವನ್ನು ನಿ?ಧಿಸಿದರೆ ಕಮ್ಯೂನಿಸ್ಟರು ಮತ್ತು ಸಮಾಜವಾದಿಗಳು ಸೇರಿ ಯುನೈಟೆಡ್ ಫ್ರಂಟ್ ರಚಿಸಿಕೊಂಡಿದ್ದರು.
೧೯೩೬ರ ಡಿಸೆಂಬರ್ನಲ್ಲಿ ಮಹಾರಾ?ದ ಕಾಂಗ್ರೆಸ್ ಅಧಿವೇಶನ ನಡೆಯುವಾಗ ನೆಹರು ಮತ್ತೆ ಅಧ್ಯಕ್ಷರಾಗಬಯಸಿದರು. ಪಟೇಲ್ ರಾಜಾಜಿ ಅವರ ಹೆಸರನ್ನು ಸೂಚಿಸಿದರೆ ಅವರು ಈ ಸಲ ಕೂಡ ಬೇಡವೆಂದರು. ಕೆಲವರು ಪಟೇಲ್ ಆಗಲಿ ಎನ್ನುವ?ರಲ್ಲಿ ನೆಹರು ಗಾಂಧಿಯವರ ಬಳಿ ತನಗೆ ಕೆಲಸಕ್ಕೆ ಎಂಟು ತಿಂಗಳು ಸಾಕಾಗಲಿಲ್ಲ; ಇನ್ನೊಂದು ಅವಧಿ ಕೊಡಿ ಎಂದು ನೇರವಾಗಿಯೇ ಕೇಳಿದರು. ಕೊಡದಿದ್ದರೆ ಪಕ್ಷ ಒಡೆಯಬಹುದು ಎನಿಸಿತು. ಸ್ಪರ್ಧೆಯಿಂದ ಹಿಂದೆ ಸರಿಯಲು ಪಟೇಲರಿಗೆ ಗಾಂಧಿ ಸೂಚಿಸಿದರು; ನೆಹರು ಅಧ್ಯಕ್ಷರಾದರು.
ಆ ಹೊತ್ತಿಗೆ ವಿವಿಧ ಪ್ರಾಂತಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿತು. ಸರ್ಕಾರ ರಚಿಸಿದರೆ ಸ್ವಾತಂತ್ರ್ಯ ಗಳಿಕೆಗೆ ಅಡ್ಡಿಯಾಗಬಹುದೆಂದು ಕೆಲವರು ಅಭಿಪ್ರಾಯಪಟ್ಟರಾದರೂ ಅಂತಿಮವಾಗಿ ಅದಕ್ಕೆ ಗಾಂಧಿ ಒಪ್ಪಿಗೆ ದೊರೆಯಿತು. ವಿವಿಧ ಪ್ರಾಂತಗಳಲ್ಲಿ ಸರ್ಕಾರ ರಚನೆಗೊಂಡು ಹಲವರು ಮುಖ್ಯಮಂತ್ರಿ(ಪ್ರಧಾನಮಂತ್ರಿ?)ಗಳಾದರು. ಸಂಪುಟಗಳು ರಚನೆಯಾದವು. ಆ ವ್ಯವಸ್ಥೆ ಮೇಲೆ ಕಣ್ಣಿಡುವ ದೊಡ್ಡ ಜವಾಬ್ದಾರಿ ಪಟೇಲರದಾಯಿತು. ಅದನ್ನವರು ಸಮರ್ಥವಾಗಿಯೇ ನಿಭಾಯಿಸಿದರು. ಒಂದೆಡೆ ಮಂತ್ರಿಮಂಡಲಕ್ಕೆ ಅಧೀನನಾದ (ಬ್ರಿಟಿ?) ಅಧಿಕಾರಿಯನ್ನು ಹಂಗಾಮಿ ಗವರ್ನರಾಗಿ ನೇಮಿಸಿದಾಗ ಪ್ರತಿಭಟನೆ ತಡೆದರು. ಸಂಯುಕ್ತ ಪ್ರಾಂತ(ಯು.ಪಿ.)ದಲ್ಲಿ ಕೆಲವು ಕೈದಿಗಳ ಬಿಡುಗಡೆಯ ಬಗ್ಗೆ ಸಂಪುಟ ಕೈಗೊಂಡ ನಿರ್ಧಾರವನ್ನು ಗವರ್ನರ್ ಬದಿಗೆ ತಳ್ಳಿದಾಗ ಪಟೇಲ್, “ನಮ್ಮ ಮಂತ್ರಿಗಳ ವಿವೇಚನಾ ಅಧಿಕಾರದ ವಿ?ಯದಲ್ಲಿ ಹಸ್ತಕ್ಷೇಪ ಮಾಡಲು ಗವರ್ನರ್ಗೆ ಎ? ಧೈರ್ಯ? ಇದು ಆತ್ಮಗೌರವದ ಪ್ರಶ್ನೆ” ಎಂದು ಗುಡುಗಿದರು. ಸಂಪುಟ ರಾಜೀನಾಮೆಗೆ ಮುಂದಾದಾಗ ಗವರ್ನರ್ ಹಿಂದೆ ಸರಿದ. ಈ ರೀತಿ ಪಟೇಲರು ಆತ್ಮಗೌರವವನ್ನು ಎತ್ತಿಹಿಡಿದ ಹಲವು ಉದಾಹರಣೆಗಳನ್ನು ಪುಸ್ತಕದಲ್ಲಿ ಕೃ?ರಾವ್ ಉದ್ಧರಿಸಿದ್ದಾರೆ.
ಮೊದಲು ಜನಸೇವಕ
ಒಮ್ಮೆ ಸರ್ದಾರ್ “ನಾನು ಖಂಡಿತವಾಗಿಯೂ ಕಠಿಣ; ಅದು ಅನ್ಯಾಯದ ವಿರುದ್ಧ ಹೋರಾಡುವಾಗ. ಆದರೆ ಒಬ್ಬ ಜನಸೇವಕ. ಜನರ ಮಾತನ್ನು ಆಲಿಸುವುದನ್ನು ನಿಲ್ಲಿಸಿದವನು ಶೀಘ್ರದಲ್ಲಿ ಸರ್ವಾಧಿಕಾರಿಯಾಗುತ್ತಾನೆ. ನಮ್ಮ ದೇಶದ ಅದೃ?ಕ್ಕೆ ನಮ್ಮ ಮಹಾದಂಡನಾಯಕ ಗಾಂಧಿ ಮೊದಲು ಜನಸೇವಕ, ಆನಂತರ ಮಾತ್ರ ಜನನಾಯಕ. ನಾವು ಸ್ವರಾಜ್ಯವನ್ನು ರಾಮರಾಜ್ಯ ಎಂದು ಕರೆಯುವಾಗ ಅದೊಂದು ಕೇವಲ ಅಲಂಕಾರದ ಪದವಲ್ಲ” ಎಂದು ಹೇಳಿದ್ದರು.
೧೯೪೦ರ ಹೊತ್ತಿಗೆ ಮುಸ್ಲಿಂ ಲೀಗ್ ಪ್ರಬಲವಾಗಿ ಬೆಳೆಯುತ್ತಿತ್ತು. ಎರಡನೇ ಮಹಾಯುದ್ಧ ಆರಂಭವಾಗಿತ್ತು. ಬ್ರಿಟಿ? ಸರ್ಕಾರ ದೇಶದ ನಾಯಕರನ್ನು ಕೇಳದೆ ಭಾರತವನ್ನು ತನ್ನೊಂದಿಗೆ ಸೇರಿಸಿಕೊಂಡಿತ್ತು. ಅದನ್ನು ಭಾರತ ಪ್ರತಿಭಟಿಸಿತ್ತು. ಆದರೆ ನೆಹರು ಕಾಂಗ್ರೆಸ್ ಮಂತ್ರಿಮಂಡಲಗಳು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು. ಅದರಂತೆ ರಾಜೀನಾಮೆ ನೀಡಿದಾಗ ಜಿನ್ನಾಗೆ ಭಾರೀ ಖುಷಿಯಾಯಿತು. “ನಿಮಗೀಗ ಬಿಡುಗಡೆ ದೊರೆಯಿತು” ಎಂದು ಮುಸ್ಲಿಮರಿಗೆ ಹೇಳಿದ ಆತ ಅದನ್ನು ವಿಮೋಚನಾ ದಿನವಾಗಿ ಆಚರಿಸಿದ. ೧೯೩೭ರ ಚುನಾವಣೆಯಲ್ಲಿ ಮುಸ್ಲಿಂಲೀಗಿಗೆ ಚಲಾವಣೆಯಾದ ಮತದಲ್ಲಿ ಶೇ. ೫ರ? ಮಾತ್ರ ಬಂದಿತ್ತು. ಈಗ ಆತನಿಗೆ ಲೀಗ್ ಕಾಂಗ್ರೆಸಿಗೆ ಸಮಾನ ಎಂದು ವಾದಿಸಲು ಅನುಕೂಲವಾಯಿತು. ಕಾಂಗ್ರೆಸ್ ಒಂದು ಹಿಂದೂ ಸಂಸ್ಥೆ. ಅದು ಲೀಗ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕೆನ್ನುವ ಮಾತು ಬ್ರಿಟಿ?ರಿಂದ ಬಂತು. “ಕಾಂಗ್ರೆಸ್ ನಮಗೆ (ಯುದ್ಧಕ್ಕೆ) ಬೆಂಬಲ ನೀಡದೆಹೋದರೆ ನಾವು ಮುಸ್ಲಿಮರ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಸರ್ಕಾರ ಒಡೆದು ಆಳುವ ನೀತಿಯನ್ನು ಆರಂಭಿಸಿತು. ಇದರ ಪರಿಣಾಮವೆಂದರೆ ೧೯೪೦ರ ಮಾರ್ಚ್ನಲ್ಲಿ ಬಿಹಾರದ ರಾಂಪುರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಮಹಾದೇವ ದೇಸಾಯಿ ಮತ್ತಿತರರು ಪಟೇಲ್ ಅಧ್ಯಕ್ಷರಾಗಲಿ ಎಂದು ಬಯಸಿದರೆ, ಕಾಂಗ್ರೆಸ್ ಹಿಂದುಗಳ ಪಕ್ಷ ಎಂದು ಲೀಗ್ ಭಾವಿಸಿದ ಕಾರಣ ಅದನ್ನು ಅಲ್ಲಗಳೆಯಲು ಎಂಬಂತೆ ಗಾಂಧಿ ಮೌಲಾನಾ ಆಜಾದ್ರನ್ನು ಅಧ್ಯಕ್ಷರನ್ನಾಗಿ ಆರಿಸಿದರು. ಪ್ರಸ್ತುತ ಕಾಂಗ್ರೆಸ್ ಅಧಿವೇಶನದ ವೇಳೆ ಲೀಗ್ ಲಾಹೋರ್ನಲ್ಲಿ ಸಭೆ ನಡೆಸಿ ದೇಶವನ್ನು ಹಿಂದೂ ಇಂಡಿಯಾ ಮತ್ತು ಮುಸ್ಲಿಂ ಇಂಡಿಯಾ ಎಂದು ಒಡೆಯಬೇಕೆನ್ನುವ ನಿರ್ಣಯವನ್ನು ಅಂಗೀಕರಿಸಿತು.
ಕಾಡಿದ ಅನಾರೋಗ್ಯ
ಮುಂದೆ ಪಟೇಲರಿಗೆ ದೀರ್ಘಕಾಲದ ಸೆರೆಮನೆ ವಾಸ, ಅನಾರೋಗ್ಯಗಳು ಕಾಡಿದವು. ಒಮ್ಮೆ ಹೊರಗೆ ಬಂದಾಗ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಗಾಂಧಿ ಸಲಹೆ ನೀಡಿದರು. ಆಗ ಪಟೇಲ್ ಆಡಿದ ಮನದಾಳದ ಮಾತು ಹೀಗಿತ್ತು: “ಶರೀರವನ್ನು ಉಳಿಸಿಕೊಳ್ಳಲು ದೀರ್ಘಕಾಲ ವಿಶ್ರಾಂತಿ ಪಡೆಯುವುದರಲ್ಲಿ ಏನು ಅರ್ಥವಿದೆ? ಒಬ್ಬ ವ್ಯಕ್ತಿ ಕೆಲವು ಕಾಲ ಮುಂಚಿತವಾಗಿ ಗತಿಸಿದರೆ ತೊಂದರೆ ಏನು? ಬದುಕಿದ್ದಾಗ ಸದಾ ಕೆಲಸ ಮಾಡುತ್ತಿರುವುದು ಉತ್ತಮ ಅಲ್ಲವೇ?” ಇದಕ್ಕಿಂತ ಉತ್ತಮ ಕರ್ಮಯೋಗಿ ಎಲ್ಲಾದರೂ ಸಿಗಬಹುದೆ? ಸುಮಾರು ಅದೇ ಹೊತ್ತಿಗೆ ಅನಾರೋಗ್ಯದಲ್ಲಿ ಬಳಲುತ್ತಿದ್ದಾಗ ಮಗಳಿಗೆ ಬರೆದ ಒಂದು ಪತ್ರದಲ್ಲಿ “ನನ್ನನ್ನು ನೋಡುತ್ತೇನೋ ಇಲ್ಲವೋ ಎಂದು ಚಿಂತಿಸಬೇಡ. ಒಂದು ಎಲೆ ಹಣ್ಣಾದಾಗ ಬೀಳುತ್ತದೆ. ನಾನು ಅದೇ ರೀತಿ ಸರಳವಾಗಿ ಹೋಗುತ್ತೇನೆ. ನನ್ನ ನಿರ್ಗಮನದಿಂದ ನೀನು ಸ್ವಲ್ಪವೂ ಖೇದಗೊಳ್ಳಬಾರದು” ಎಂದು ತಿಳಿಸಿದ್ದರು.
೧೯೪೨ರ ಜನವರಿಯಲ್ಲಿ ಜರಗಿದ ಎಐಸಿಸಿ ಸಭೆಯಲ್ಲಿ ಗಾಂಧಿ ಜವಾಹರಲಾಲ್ ತನ್ನ ಉತ್ತರಾಧಿಕಾರಿ ಎಂದು ಘೋಷಿಸಿದರು. ಅದು ಹೀಗಿತ್ತು: “ನನ್ನ ಉತ್ತರಾಧಿಕಾರಿ ಸರ್ದಾರ್ ಅಲ್ಲ! ರಾಜಾಜಿ ಅಲ್ಲ. ಜವಾಹರಲಾಲ್. ನಾನು ಹೋದ ಮೇಲೆ ಜವಾಹರಲಾಲ್ ನನ್ನ ಭಾ?ಯನ್ನೇ ಮಾತನಾಡುತ್ತಾನೆ.” ಮುಂದೆ ಕ್ವಿಟ್ ಇಂಡಿಯಾ ಚಳವಳಿ, ನಾಯಕರ ಸುದೀರ್ಘ ಸೆರೆಮನೆವಾಸಗಳ ಕಾರಣದಿಂದ ಕಾಂಗ್ರೆಸ್ ಅಧಿವೇಶನಗಳು ನಡೆಯಲಿಲ್ಲ. ಮೌಲಾನಾ ಆಜಾದ್ ಐದಾರು ವ? ಅಧ್ಯಕ್ಷರಾಗಿ ಮುಂದುವರಿದರು.
ಯುದ್ಧದ ಆನಂತರ
ಯುದ್ಧ ಆನಂತರ ಭಾರತದ ಸ್ವಾತಂತ್ರ್ಯದ ಬಗೆಗಿನ ಮಾತುಗಳು ಬಂದವು. ಆಗ ವೈಸ್ರಾಯ್ ವೇವೆಲ್ ನಡೆಸಿದ ಸಿಮ್ಲಾ ಸಮ್ಮೇಳನಕ್ಕೆ ಗಾಂಧಿ ಮತ್ತು ಜಿನ್ನಾ ಮುಂತಾದವರನ್ನು ಕರೆದು ಪಟೇಲರನ್ನು ಕರೆಯಲಿಲ್ಲ. ಅದಕ್ಕೆ ಕಾರಣ ಆತನಿಗೆ “ಕಾಂಗ್ರೆಸ್ನಲ್ಲಿ ಪಟೇಲ್ ಬಹಳ ಪ್ರಭಾವಶಾಲಿ. ಕಾಂಗ್ರೆಸಿನ ಜೋರಿನ ನೀತಿಯ ಹಿಂದೆ ನಿಜವಾದ ಪ್ರೇರಕ ಶಕ್ತಿ; ಎಂದೂ ಜಗ್ಗದ ವ್ಯಕ್ತಿ” ಎಂದು ಹೇಳಲಾಗಿತ್ತಂತೆ.
ಬ್ರಿಟಿಷರು ಭಾರತ ಬಿಡುವುದು, ಮುಸಲ್ಮಾನರಿಗೆ ಪ್ರತ್ಯೇಕ ದೇಶವನ್ನು ಕೊಡುವುದು ಮತ್ತು ಭಾರತದ ರಾಜ್ಯಭಾರವನ್ನು ಕಾಂಗ್ರೆಸಿಗೆ ವಹಿಸಿಕೊಡುವುದು ಸ್ಪ?ವಾಗಿದ್ದ ಸಂದರ್ಭ. ಆಗ ಕಾಂಗ್ರೆಸ್ ಅಧ್ಯಕ್ಷರಾದವರು ಪ್ರಧಾನಮಂತ್ರಿ ಆಗುತ್ತಿದ್ದರು. ಅವಧಿ ಮುಗಿದಿದ್ದರೂ ಇನ್ನೊಂದು ವ?ದ ವಿಸ್ತರಣೆಯನ್ನು ಗಿಟ್ಟಿಸಿಕೊಂಡರೆ ತಾನೇ ಪ್ರಧಾನಿಯಾಗುತ್ತೇನೆಂಬ ಹಿಕಮತ್ತಿನಿಂದ ಆಜಾದರು ಹೊಂಚುಹಾಕತೊಡಗಿದರು. ಅದಕ್ಕೆ ಗಾಂಧಿ ಒಪ್ಪಲಿಲ್ಲ. ಹೊಸ ಅಧ್ಯಕ್ಷ ಪದವಿಗೆ ಪ್ರದೇಶ (ರಾಜ್ಯ) ಕಾಂಗ್ರೆಸ್ಗಳ ಅಭಿಪ್ರಾಯ ಕೇಳಿದಾಗ ಹದಿನೈದು ಸಮಿತಿಗಳಲ್ಲಿ ಹನ್ನೆರಡು ಪಟೇಲರ ಹೆಸರನ್ನು ಸೂಚಿಸಿದವು. ನೆಹರು ಹೆಸರನ್ನು ಒಂದು ಸಮಿತಿಯೂ ಹೇಳಲಿಲ್ಲ. ಅದರಂತೆ ಪಟೇಲ್ ಅಧ್ಯಕ್ಷರಾಗಿ ಮೊದಲ ಪ್ರಧಾನಿ ಆಗಬೇಕಿತ್ತು. ಆಗ ಗಾಂಧಿ “ಇಂಗ್ಲಿ?ರಿಂದ ಅಧಿಕಾರ ವಹಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಜವಾಹರ್ಲಾಲ್ ಬೇಕು. ಒಬ್ಬ ಹ್ಯಾರೋ ಹುಡುಗ, ಕೆಂಬ್ರಿಜ್ ಪದವೀಧರ, ಬ್ಯಾರಿಸ್ಟರ್ ಆದವನು ಇಂಗ್ಲಿ?ರೊಡನೆ ಸಂಧಾನ ನಡೆಸುವ ಕಾರ್ಯಕ್ಕೆ ಅಗತ್ಯ” ಎಂದರು. ನೆಹರುಗೆ ಮುಸ್ಲಿಮರ ಒಂದು ಭಾಗದೊಡನೆಯಾದರೂ ಉತ್ತಮ ಬಾಂಧವ್ಯ ಇದ್ದದ್ದು ಮತ್ತು ಅಂತಹ ಬಾಂಧವ್ಯ ಬೆಳೆಸಿಕೊಳ್ಳಲು ಪಟೇಲರು ಯತ್ನಿಸದೆ ಇದ್ದದ್ದು ಗಾಂಧಿ ಕಂಡ ಇನ್ನೊಂದು ಕಾರಣ. “ಜವಾಹರಲಾಲ್ ಎರಡನೇ ಸ್ಥಾನವನ್ನು ಒಪ್ಪಿಕೊಳ್ಳುವುದಿಲ್ಲ; ಆದ್ದರಿಂದ ನೀನು ಹಿಂತೆಗೆದುಕೋ” ಎಂದು ಕೂಡ ಗಾಂಧಿ ಪಟೇಲರಿಗೆ ಸೂಚಿಸಿದರು. ಅದಲ್ಲದೆ ಜವಾಹರಲಾಲರನ್ನು ಆರಿಸಿದರೆ ಭಾರತಕ್ಕೆ ಪಟೇಲರ ಸೇವೆ ತಪ್ಪುವುದಿಲ್ಲ; ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆನ್ನುವುದು ಗಾಂಧಿಯವರ ನಂಬಿಕೆಯಾಗಿತ್ತು; ಅದು ನಿಜವೂ ಆಯಿತಲ್ಲವೆ?
“ಗಾಂಧಿ ಓರ್ವ ಆಕ?ಣೀಯ ವ್ಯಕ್ತಿಗಾಗಿ ನೆಚ್ಚಿನ ಬಂಟನಿಗೆ ಕೈಕೊಟ್ಟರೆಂದು” ರಾಜೇಂದ್ರ ಪ್ರಸಾದ್ ಮತ್ತಿತರರು ಅಸಮಾಧಾನ ಹೊರಹಾಕಿದರು. ಸರ್ದಾರರು ತುಟಿಬಿಚ್ಚದೆ ಗಾಂಧಿನಿ?ರಾಗಿಯೇ ಉಳಿದರು. ನೆಹರು ಹೇಳಿಕೆಗಳಿಂದ ಮುಸ್ಲಿಂ ಲೀಗ್ ಉಗ್ರವಾಗಿ ನೇರ ಕಾರ್ಯಚರಣೆಗೆ ಇಳಿದದ್ದು ಮುಂದಿನ ಹಂತ.
ತನ್ನ ಬಗ್ಗೆ ಪಟೇಲ್
ತಮ್ಮ ಮತ್ತು ಗಾಂಧಿಯವರ ಸಂಬಂಧದ ಬಗ್ಗೆ ಪಟೇಲ್ ಒಮ್ಮೆ ಹೀಗೆ ಹೇಳಿದ್ದರು: “ಅನೇಕರು ನನ್ನನ್ನು ಗಾಂಧಿಯವರ ಕುರುಡು ಅನುಯಾಯಿ ಎಂದು ಕರೆಯುತ್ತಾರೆ. ಹಾಗೆ ಆಗುವ ಶಕ್ತಿ ನನಗೆ ಇರಬೇಕಿತ್ತೆಂದು ಆಶಿಸುತ್ತೇನೆ. ಹಾಗೆ ಆಗಿಲ್ಲ ಎಂದು ವಿ?ದಿಸುತ್ತೇನೆ. ನನಗೆ ಸಾಧಾರಣ ಬುದ್ಧಿವಂತಿಕೆ ಮತ್ತು ತಿಳಿವಳಿಕೆ ಇದೆ ಎಂದು ಭಾವಿಸಿದ್ದೇನೆ. ಸ್ವಲ್ಪ ಪ್ರಪಂಚವನ್ನೂ ನೋಡಿದ್ದೇನೆ. ಆದ್ದರಿಂದ ನಾನೊಬ್ಬ ಹುಚ್ಚನಂತೆ ಅಥವಾ ತಿಳಿವಳಿಕೆ ಇಲ್ಲದವನಂತೆ ಈ ಅರೆನಗ್ನರನ್ನು ಅನುಸರಿಸುವ ಸಾಧ್ಯತೆ ಇಲ್ಲ… ಹೆಚ್ಚುಕಡಮೆ ಭಾರತಕ್ಕೆ ಅವರು ಬಂದಾಗಿನಿಂದಲೂ ನಾನು ಅವರೊಡನೆ ಇದ್ದೇನೆ. ಎಲ್ಲಿಯವರೆಗೆ ನಾನು ಬದುಕಿರುತ್ತೇನೋ ಅಥವಾ ಅವರು ಬದುಕಿರುತ್ತಾರೋ ಅಲ್ಲಿಯವರೆಗೆ ಈ ಸಂಬಂಧ ಮುಂದುವರಿಯುತ್ತದೆ. ಆದಾಗ್ಯೂ ಅವರನ್ನು ನನ್ನ ಕೆಲಸದಿಂದ ದೂರವಿಡುತ್ತೇನೆ. ನಾವು ಬರೇ ಅವರ ನಾಯಕತ್ವಕ್ಕೆ ಜೋತುಬಿದ್ದರೆ ಮತ್ತು ಅವರ ಮಾರ್ಗದರ್ಶನಕ್ಕೆ ಕಾದರೆ ಸ್ವತಂತ್ರ ಕಾರ್ಯಚರಣೆಯ ಶಕ್ತಿಯನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾವು ಸದಾ ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದರೆ ಏನನ್ನಾದರೂ ಸಾಧಿಸುವುದು ಹೇಗೆ ಸಾಧ್ಯ?” ಬಹುಶಃ ಪಟೇಲರ ಇಡೀ ವ್ಯಕ್ತಿತ್ವ ಈ ಮಾತಿನಲ್ಲೇ ಇದೆ.
ಪ್ರಸ್ತುತ ಬೃಹದ್ಗ್ರಂಥ ಸುಂದರವಾಗಿ ಅಚ್ಚುಕಟ್ಟಾಗಿ ಮುದ್ರಣಗೊಂಡಿದೆ. ಭಾ? ಪ್ರಯೋಗದ ಕೆಲವು ಸಣ್ಣಪುಟ್ಟ ದೋ?ಗಳು (ವೈಫಲ್ಯತೆ, ಸೌಜನ್ಯತೆ ಇತ್ಯಾದಿ) ಮತ್ತು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿದ ಪದಗಳ ಕೆಲವು ಗೊಂದಲಗಳು ಕಾಣಿಸುತ್ತವೆ. ಅನುವಾದದ ವೇಳೆ ನಿರ್ದಿಷ್ಟ (standard) ಪದಗಳ ಬಳಕೆ ಅಗತ್ಯವಿರುತ್ತದೆ. ಏನಿದ್ದರೂ ಒಂದು ಮಹಾನ್ ವ್ಯಕ್ತಿತ್ವದ ಬಗೆಗೆ ಒಂದು ಮಹಾನ್ ಗ್ರಂಥವನ್ನು ಬರೆದು ಪ್ರಕಟಿಸಿದ್ದಕ್ಕಾಗಿ ಮ.ಸು. ಮನ್ನಾರ್ ಕೃಷ್ಣರಾವ್ ಅವರು ಸರ್ವಥಾ ಅಭಿನಂದನಾರ್ಹರಾಗಿದ್ದಾರೆ.