ರಾವಣನ ರಾಜ್ಯದಿ ವಿಭೀಷಣನು ಇದ್ದಂತೆ
ಇರಲು ಧೈರ್ಯವ ನೀಡು ದಾಶರಥಿ ರಾಮ |
ಶುಕಸಾರಣಾದಿಗಳ ಶೂರ್ಪಣಖೆಯರ ನಡುವೆ
ಋತಧರ್ಮ ತಪ್ಪದಂತಿರಿಸೆನ್ನ ಕ್ಷೇಮ ||೧||
ಧೃತರಾಷ್ಟ್ರನರಮನೆಯಲಿದ್ದ ವಿದುರನ ತೆರದಿ
ಬಾಳ್ವದಾರಿಯನೆನಗೆ ತೋರೆಯಾ ಮಾಧವ? |
ದು?ಸಹಚರರ ಪಡೆಕಟ್ಟಿದ ಸುಯೋಧನನ
ಆಟಗಳ ನೋಡುತಿಹೆನಿಲ್ಲಿ ನಾ ಕಾದವ! ||೨||
ಕಂಸನಾಡಳಿತದಲಿ ಸೆರೆಯಾದರಿಲ್ಲ ಭಯ
ನಿನ್ನ ಬರವನು ನಿರುಕಿಸುತ ಕಾಲ ಕಳೆವೆ |
ದೌಷ್ಟ್ಯವೆಲ್ಲವ ಮೆಟ್ಟಿ ಧರ್ಮರಾಜ್ಯವ ಕಟ್ಟಿ
ನಾದವ?ದಿ ಜಗದ ಕೊಳೆಯ ನೀ ತೊಳೆವೆ ||೩||
ರಾಮ-ಕೃಷ್ಣರ ನೆಲವು; ಋತಕಿಲ್ಲಿ ಬಲ_ಗೆಲವು
ಉದಕಬುದ್ಬುದವೆಲ್ಲರಾಟ ಮೆರೆದಾಟ |
ನಿನ್ನೆ ಕುಣಿದವರಾರು ಇಲ್ಲವೀ ಜಗದೊಳಗೆ
ನಾಳೆ ಇರಬಹುದೇನು ಇಂದಿನವರಾಟ? ||೪||
ಬದುಕಲೊಂದೇ ದಾರಿ; ಪಾಪಗಳ ಕಳೆವ ಹರಿ
ಪರರಿಗುಪಕೃತಿಯಲ್ಲೆ ಸವೆಸಲ್ಕೆ ಬಾಳು |
ಅವರಿವರಿಗನ್ಯಾಯವೆಸಗಲರಿವುದು ಪುಣ್ಯ-
ಶೇಷಗಳನೆಲ್ಲವನು ವಿಧಿಕರದ ಬಾಳು ||೫||