
ಪರಕಾಯಪ್ರವೇಶ ಬೆಳಗ್ಗೆ ಹತ್ತು ಗಂಟೆಗೆ ನಡೆಯುವುದೆಂದು ನಿಶ್ಚಯವಾಗಿತ್ತು. ದೀಕ್ಷಿತರು ಹಿಂದಿನ ದಿನ ರಾತ್ರಿಯೇ ಕೆಲ ವಿಧಿಗಳನ್ನು ನೇರವೇರಿಸಿದ್ದರು. ಹಿಂದಿನ ರಾತ್ರಿಯೇ ಅಮೆರಿಕೆಯ ಡಾ. ರಿಚರ್ಡ್ ಜೇಫರಸನ್ರ ಪ್ರತಿರೂಪ ಅಲ್ಲಿಗೆ ತಲಪಿತ್ತು. ಜೇಫರ್ಸನ್ ಅವರೇ ವಿದ್ಯುನ್ಮಾನಸಾಗಣೆಯ (ಟೆಲಿಪೋರ್ಟೇಶನ್) ನೇತಾರರು. ಡಾ. ಅಂಕಿತಪಟೇಲರ ಪ್ರತಿರೂಪವನ್ನು ಅಮೆರಿಕೆಯವರು ತಮ್ಮ ಪ್ರಯೋಗಸ್ಥಳದಲ್ಲಿ ರವಾನೆ ಮಾಡಿಕೊಂಡಿದ್ದರು. ಡಾ. ಅಂಕಿತರನ್ನು ದೀಕ್ಷಿತರ ಎದುರು ಮಲಗಿಸಲಾಗಿತ್ತು. ಡಾ. ಜೇಫರ್ಸನ್ರ ಪ್ರತಿರೂಪವನ್ನು ಹಿಮಪೆಟ್ಟಿಗೆಯಲ್ಲಿ ಕೆಡದಂತೆ ಇಡಲಾಗಿತ್ತು. ಅಮೆರಿಕೆಯ ದೂತಾವಾಸದ ಇಬ್ಬರು ಉನ್ನತಾಧಿಕಾರಿಗಳು ಅಲ್ಲಿ ಉಪಸ್ಥಿತರಿದ್ದರು. ಭಾರತೀಯ ವೈದ್ಯರ ತಂಡವೂ […]