
ಇಂದು ನಮ್ಮ ಸಮಾಜದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತದ ಅಶಿಸ್ತು, ಅವ್ಯವಸ್ಥೆಗಳಿಂದ ರೋಸಿಹೋದ ಜನ ಇದಕ್ಕಿಂತ ಬ್ರಿಟಿಷರ ಆಳ್ವಿಕೆಯೇ ಒಳ್ಳೆಯದಿತ್ತು ಎಂದು ಆಗಾಗ ಉದ್ಗರಿಸುವುದನ್ನು ನಾವು ಕಾಣುತ್ತೇವೆ. ಸ್ವಾತಂತ್ರ್ಯಕ್ಕೆ ಯಾವುದೂ ಪರ್ಯಾಯವಲ್ಲ ಎಂಬುದು ನಿಜವಾದರೂ ಜನರಾಡುವ ಮೇಲಿನ ಮಾತಿನಲ್ಲಿ ಸತ್ಯಾಂಶವಿರುವುದು ಪರಾಂಬರಿಸಿದಾಗ ಗೋಚರವಾಗುತ್ತದೆ. ದೈನಂದಿನ ಆಡಳಿತದ ಶಿಸ್ತು-ವ್ಯವಸ್ಥೆಗಳ? ಅಲ್ಲ; ನಮ್ಮ ನೈಜಸಂಪತ್ತಾದ ನೆಲ-ಜಲಗಳ ಸಂರಕ್ಷಣೆಯಲ್ಲಿ ಕೂಡ ನಾವು ಬ್ರಿಟಿಷರಿಂದ ಹಿಂದೆ ಬೀಳುತ್ತಿದ್ದೇವೇನೋ ಅನ್ನಿಸಿದರೆ ಆಶ್ಚರ್ಯವಿಲ್ಲ. ಬ್ರಿಟಿಷರು ನಮ್ಮ ಸಂಪತ್ತನ್ನು ಲೂಟಿಮಾಡಿ ಇಂಗ್ಲೆಂಡಿಗೆ ಸಾಗಿಸಿದರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅವರ ಆಡಳಿತಕ್ಕೆ ಅನುಕೂಲವಾಗಲೆಂದೋ ಅಥವಾ ಪ್ರಜಾಜನಕ್ಕೆ ಆನುಷಂಗಿಕವಾಗಿ ಏನಾದರೂ ಪ್ರಯೋಜನವಾದರೆ ಆಗಲಿ ಎಂದೋ ಅವರು ಕೈಗೊಂಡ […]