ಭಾರತೀಯ ಜನಸಂಘ ಹಾಗೂ ಅದರ ಉತ್ತರಾಧಿಕಾರಿ ಎನಿಸಿ ಹುಟ್ಟಿಕೊಂಡ ಪಕ್ಷ ಭಾರತೀಯ ಜನತಾ ಪಕ್ಷ – ಈ ಎರಡೂ ಪಕ್ಷಗಳು ತಾವು ಇತರ ಪಕ್ಷಗಳಿಗಿಂತ ಭಿನ್ನ ಮತ್ತು ಕಾರ್ಯಕರ್ತ-ಆಧಾರಿತ ಪಕ್ಷಗಳೆಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಆಂತರಿಕ ಶಿಸ್ತು ಇದ್ದ (ಇರುವ) ಪಕ್ಷಗಳು ಎಂಬ ಹೆಸರೂ ಇದೆ. ಮುಖ್ಯವಾಗಿ ಜನಸಂಘಕ್ಕೆ ಆ ಮೂಲಕ ಬಿಜೆಪಿಗೆ ಹರಿದುಬಂದ ಈ ಗುಣಗಳನ್ನು ಕೊಟ್ಟವರು ಯಾರು ಎನ್ನುವ ಪ್ರಶ್ನೆ ಕೇಳಿದರೆ ಬಹುತೇಕ ವಿವಾದಾತೀತವಾಗಿ ಬರುವ ಉತ್ತರವೆಂದರೆ – ‘ಪಂಡಿತ್ ದೀನದಯಾಳ್ ಉಪಾಧ್ಯಾಯ’ ಎಂದು.
ರಾಜಕೀಯದಲ್ಲಿ ಸಾಂಸ್ಕೃತಿಕ ರಾಯಭಾರಿ ಪಂ. ದೀನದಯಾಳ್ ಉಪಾಧ್ಯಾಯ
Month : September-2015 Episode : Author : ಎಂ.ಬಿ. ಹಾರ್ಯಾಡಿ