ನ ಕಿಂಚಿತ್ ಸಾಧವೋ ಧೀರಾ ಭಕ್ತಾ ಹ್ಯೇಕಾಂತಿನೋ ಮಮ | ವಾಂಛಂತ್ಯಪಿ ಮಯಾ ದತ್ತಂ ಕೈವಲ್ಯಮಪುನರ್ಭವಮ್ || – ಭಾಗವತ “ಧೀರರೂ (=ಧೀಮಂತರೂ) ಸಾಧುಗಳೂ ಏಕಾಂತಿಗಳೂ ಆದ ನನ್ನ ಭಕ್ತರು ನನ್ನಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಅಷ್ಟೇಕೆ, ನನ್ನಿಂದ ನೀಡಲ್ಪಟ್ಟ ಮುಕ್ತಿಯನ್ನಾಗಲಿ ಪುನರ್ಜನ್ಮರಾಹಿತ್ಯವನ್ನಾಗಲಿ ಕೂಡಾ ಅವರು ಆಶಿಸುವುದಿಲ್ಲ.” ಭಗವತ್ಸಾಕ್ಷಾತ್ಕಾರ, ಶಾಶ್ವತ ಮೋಕ್ಷ ಮೊದಲಾದವನ್ನು ಪರಮಲಕ್ಷ್ಯವಾಗಿರಿಸಿಕೊಂಡು ಅವನ್ನು ಸಾಧಿಸಲು ಶ್ರಮಿಸಬೇಕೆಂಬುದು ಸಾಮಾನ್ಯ ಆದೇಶ. ಅದಕ್ಕೆ ಸಾಧನವೆಂದರೆ ಆತ್ಯಂತಿಕ ಭಕ್ತಿ ಎಂಬುದೂ ವಿದಿತವೇ. ಆದರೆ ಭಕ್ತಿಯ ಪರಾಕಾಷ್ಠಸ್ಥಿತಿಯೆಂದರೆ ಭಗವಂತನಿಂದ ಏನನ್ನಾದರೂ ಬೇಡಬೇಕೆಂಬ […]
ದೀಪ್ತಿ
Month : January-2021 Episode : Author :