ಸರ್ವಸ್ವದಕ್ಷಿಣಯಜ್ಞವರ್ಣನೆ ಎಂಬ ಮೂರನೆಯ ಕಥೆ ಮತ್ತೆ ಭೋಜರಾಜನು ಸಿಂಹಾಸನದಲ್ಲಿ ಕುಳಿತುಕೊಳ್ಳಲು ಹೋದಾಗ ಇನ್ನೊಂದು ಗೊಂಬೆಯು ‘ಎಲೈ ರಾಜನೆ, ಯಾರಲ್ಲಿ ವಿಕ್ರಮಾದಿತ್ಯನಿಗೆ ಸರಿಸಮಾನವಾದ ಔದಾರ್ಯ ಇದೆಯೋ ಅವನು ಮಾತ್ರ ಈ ಸಿಂಹಾಸನದಲ್ಲಿ ಕುಳಿತುಕೊಳ್ಳಬಹುದು’ ಎಂದು ಹೇಳಿತು. ಆಗ ಭೋಜರಾಜನು, ‘ಎಲೈ ಗೊಂಬೆಯೆ, ಅವನ ಔದಾರ್ಯದ ಕಥೆಯನ್ನು ಹೇಳು’ ಎಂದನು. ಆಗ ಗೊಂಬೆಯು ಹೇಳಿತು – ‘ಎಲೈ ರಾಜನೆ, ಕೇಳು. ವಿಕ್ರಮನಿಗೆ ಸರಿಸಮನಾದ ರಾಜನು ಭೂಮಂಡಲದಲ್ಲಿ ಎಲ್ಲಿಯೂ ಇಲ್ಲ, ಅವನು ಒಮ್ಮೆ ‘ಸರ್ವಸ್ವದಕ್ಷಿಣೆ’ ಎಂಬ ಯಜ್ಞವನ್ನು ಮಾಡಲು ಬಯಸಿದನು. ಬಳಿಕ […]
‘ದ್ವಾತ್ರಿಂಶತ್ ಪುತ್ಥಲಿಕಾ ಸಿಂಹಾಸನಮ್’ ಕಥೆಗಳು
Month : April-2020 Episode : Author : ಡಾ. ಶಾಂತಲಾ ವಿಶ್ವಾಸ