ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2021

ಉತ್ಥಾನ ಎಪ್ರಿಲ್ 2021

“ಸಮಾಜ-ಆಡಳಿತಗಳ ನಡುವೆ ಸುಸಂಘಟನೆ ಏರ್ಪಟ್ಟರೆ ಮಾತ್ರ ರಾಷ್ಟ್ರವಿಕಾಸ ಸಾಧ್ಯ”: ಧರ್ಮಪಾಲ್

“ಸಮಾಜ-ಆಡಳಿತಗಳ ನಡುವೆ ಸುಸಂಘಟನೆ ಏರ್ಪಟ್ಟರೆ ಮಾತ್ರ ರಾಷ್ಟ್ರವಿಕಾಸ ಸಾಧ್ಯ”:  ಧರ್ಮಪಾಲ್

ಖ್ಯಾತ ಗಾಂಧಿವಾದಿ ಇತಿಹಾಸಸಂಶೋಧಕ ಧರ್ಮಪಾಲ್‍ರೊಡನೆ ‘ಉತ್ಥಾನ’ಕ್ಕಾಗಿ ಎಸ್.ಆರ್. ರಾಮಸ್ವಾಮಿಯವರು 1989ರ ಕೊನೆಯಲ್ಲಿ ನಡೆಸಿದ ವಿಶೇಷ ಸಂದರ್ಶನ. ಇದು ‘ಉತ್ಥಾನ’ದ 1990ರ ಜನವರಿ ವಿಶೇಷಾಂಕದಲ್ಲಿ ಪ್ರಕಟವಾಯಿತು. ಪ್ರಶ್ನೆ: ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬರುವುದಕ್ಕೆ ಮೊದಲು ಜನರಲ್ಲಿ ಹರಡಿದ್ದ ಧ್ಯೇಯವಾದ, ರಾಷ್ಟ್ರಕ ಭಾವನೆಗಳು ಆಮೇಲೆ ಮುಂದುವರಿಯಲಿಲ್ಲವೇಕೆ? ಉತ್ತರ: ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ಅದೊಂದು ಬಗೆಯ ಅಲೌಕಿಕ ಉತ್ಸಾಹ ಹರಡಿತ್ತೆಂಬುದು ನಿಜ. ಆದರೆ ಅದರ ಮೂಲವು ಭಾವನಾಸ್ತರದಲ್ಲಿ ಇದ್ದಿತೇ ಹೊರತು ಅದಕ್ಕೆ ವಾಸ್ತವವಾಗಿ ಗಟ್ಟಿ ನೆಲಗಟ್ಟು ಇರಲಿಲ್ಲ. ಗಟ್ಟಿಯಾದದ್ದೇನನ್ನೂ ಸಾಧಿಸುವುದು ಆಗ ಶಕ್ಯವೂ […]

ಭಾರತೀಯ ಮಾನಸಿಕತೆ ಮತ್ತು ಆಶೋತ್ತರಗಳು

ಭಾರತೀಯ ಮಾನಸಿಕತೆ ಮತ್ತು ಆಶೋತ್ತರಗಳು

ಈಗಿನ ಜಗತ್ತು ಇರುವುದು ತಮ್ಮದೇ ವಿಶಿಷ್ಟವಾದ ಏನನ್ನೋ ಸಾಧಿಸುತ್ತೇವೆ ಎಂಬವರಿಗಾಗಿ ಮಾತ್ರವೇ ಹೊರತು ‘ನಾವು ಯಾರನ್ನೋ ಅನುಕರಿಸುವವರು’ ಎನ್ನುವವರಿಗಾಗಿಯಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಹತ್ತರ ಸಾಧನೆ ಏನಾಗಿದೆ? ಹೇಳಿಕೊಳ್ಳುವಂಥದೇನೂ ಆಗಿಯೇ ಇಲ್ಲವೆಂದು ನನ್ನ ಭಾವನೆ. ಹಾಗೆಂದರೆ ಇಷ್ಟು ವರ್ಷಗಳು ವ್ಯರ್ಥವಾದವೆಂದು ನನ್ನ ಅಭಿಪ್ರಾಯವಲ್ಲ. ಜಗತ್ತಿನಲ್ಲಿ ಯಾವುದೂ ವ್ಯರ್ಥವಾಗದು. ಆದರೆ ಇಷ್ಟು ವರ್ಷಗಳ ಪ್ರಯಾಸದಿಂದ ಸಮಾಜಕ್ಕೆ ಲಾಭವೇನೂ ಆದಂತಿಲ್ಲ. ಇದುವರೆಗೆ ಆಗಿರುವುದೆಂದರೆ ನಾವು ಇಷ್ಟು ವರ್ಷಕಾಲ ಅಸ್ತಿತ್ವದಲ್ಲಿ ಇದ್ದೆವೆಂಬುದು ಮಾತ್ರ. ನಾನು ಈ ಧಾಟಿಯಲ್ಲಿ ಮಾತನಾಡಿದರೆ ಜನ ಕೇಳುತ್ತಾರೆ: “ಹಾಗಾದರೆ […]

ಜಗತ್ತಿನ ಕಳೆದೈದು ಶತಮಾನಗಳು ಒಂದು ಚಾರಿತ್ರಿಕ ಸಮೀಕ್ಷೆ

ಜಗತ್ತಿನ ಕಳೆದೈದು ಶತಮಾನಗಳು ಒಂದು ಚಾರಿತ್ರಿಕ ಸಮೀಕ್ಷೆ

ಕ್ರಿಸ್ಟೊಫರ್ ಕೊಲಂಬಸ್ ಅಮೆರಿಕವನ್ನು ‘ಕಂಡುಹಿಡಿದಿದ್ದರ’ 500ನೇ ವರ್ಷ ನಿಮಿತ್ತ ಲೇಖನ ಇಂದು ಪ್ರಚಲಿತವಾಗಿರುವ ಅಭ್ಯುದಯ ಧೋರಣೆಗಳ ಹಾಗೂ ಇಂದಿನ ಮೂಲಭೂತ ಸಂಘರ್ಷಗಳ ಮೂಲವನ್ನು ಅರಿತುಕೊಳ್ಳಲು ಕಳೆದ ಐದುನೂರು ವರ್ಷಗಳ ಪ್ರಮುಖ ಘಟನೆಗಳನ್ನು ಸಮೀಕ್ಷಿಸುವುದು ಉಪಯುಕ್ತವಾದೀತು. 1492ರ ಸುಮಾರಿನಿಂದೀಚಿನ ಘಟನೆಗಳು ಮನುಷ್ಯನ ಚಿಂತನೆಯ ಮೇಲೂ ಜೀವನಕ್ರಮದ ಮೇಲೂ ಯಾವ ರೀತಿಯಲ್ಲಿ ಪ್ರಭಾವ ಬೀರಿವೆಯೆಂಬುದನ್ನು ಅರ್ಥಮಾಡಿಕೊಂಡಲ್ಲಿ ಇಂದಿನ ಸಮಸ್ಯೆಗಳಿಗೆ ಪರಿಹಾರಮಾರ್ಗಗಳು ತೋರಿಯಾವು. ಯೂರೋಪಿನವರಿಗೆ ಹೊರಗಣ ಜಗತ್ತಿನ ಬಗೆಗೆ ಪರಿಜ್ಞಾನ ಮೂಡತೊಡಗಿದ್ದು 1492ರಲ್ಲೆನ್ನಬಹುದು – ಕ್ರಿಸ್ಟೊಫರ್ ಕೊಲಂಬಸನೂ ಅವನ ತಂಡದ ನಾವಿಕರೂ […]

ಮೋಡ ನೋಡುತ್ತ ಬಾವಿಯನ್ನು ಕೆಡಿಸಬಾರದು

ಮೋಡ ನೋಡುತ್ತ ಬಾವಿಯನ್ನು ಕೆಡಿಸಬಾರದು

ಪ್ರಚಲಿತ –ಎಸ್.ಆರ್.ಆರ್. ಒಂದು ದೇಶಕ್ಕೆ ಎರಗಬಹುದಾದ ಅತ್ಯಂತ ಘೋರ ವಿಪತ್ತೆಂದರೆ ಅರಾಜಕತೆ – ಎಂದಿವೆ ಸ್ಮೃತಿಗಳು. ಅರಾಜಕತೆ ಎಂದರೆ ರಾಜನಿಲ್ಲದ ಸ್ಥಿತಿ ಎಂದಷ್ಟೆ ಅರ್ಥವಲ್ಲ. ವ್ಯವಸ್ಥಾಹೀನತೆಯನ್ನು ಅರಾಜಕತೆ ಎಂದು ಕರೆದಿದ್ದಾರೆ. ವ್ಯವಸ್ಥಾಬದ್ಧತೆಯು ಸ್ಥಾವರಜಂಗಮಾದಿ ಇಡೀ ವಿಶ್ವಕ್ಕೇ ತಳಹದಿಯಾಗಿದೆ. ಗಾಳಿ ಬೆಳಕು ಬೆಂಕಿ ಮೊದಲಾದವೂ ಮೂಲವ್ಯವಸ್ಥೆಯೊಂದಕ್ಕೆ ಅಧೀನಗಳು – ಎಂದಿದೆ ಶ್ರುತಿ. ವ್ಯವಸ್ಥೆ ಇರದಿದ್ದಲ್ಲಿ ಹೇಗೆ ಲೋಕಜೀವನವೇ ದುಃಸಾಧ್ಯವಾಗುತ್ತದೆಂಬುದನ್ನು ರಾಮಾಯಣದ ಈ ಪ್ರಸಿದ್ಧ ಉಕ್ತಿಯೂ ಸೂಚಿಸಿದೆ: ನಾರಾಜಕೇ ಜನಪದೇ ಸ್ವಕಂ ಭವತಿ ಕಸ್ಯಚಿತ್ | ಮತ್ಸ್ಯಾ ಇವ ನರಾ […]

ಸ್ವಾಸ್ಥ್ಯಜಾಗೃತಿ

ದೇಶದ ಜನತೆಯ ಸ್ವಾಸ್ಥ್ಯದ ಬಗೆಗೆ ಎಲ್ಲರೂ ಚಿಂತಿತರಾಗಬೇಕಾದಂತಹ ಹಲವಾರು ಮಾಹಿತಿಗಳು ಈಚಿನ ವರ್ಷಗಳಲ್ಲಿ ಬರುತ್ತಿವೆ. ತುಂಬಾ ಕಿರಿಯ ಪ್ರಾಯದವರು ಹೃದಯಬೇನೆಗಳಿಗೊಳಗಾಗುತ್ತಿರುವ ಪ್ರಮಾಣ ಹೆಚ್ಚುತ್ತಿದೆಯೆಂದು ಹೃದಯರೋಗತಜ್ಞರು ಹೇಳುತ್ತಿದ್ದಾರೆ. ಭಾರತೀಯ ಹೃದಯರೋಗಗಳ ಅಧ್ಯಯನ ಸಂಸ್ಥೆ (ಇಂಡಿಯನ್ ಹಾರ್ಟ್ ಅಸೋಸಿಯೇಷನ್) ಇತ್ತೀಚೆಗೆ ಹೊರಹಾಕಿರುವ ಈ ಮಾಹಿತಿ ತಳಮಳ ತರಿಸಬೇಕಾದದ್ದು: ಇಡೀ ಜಗತ್ತಿನಲ್ಲಿ ಹೃದಯಬೇನೆಗಳಿಗೊಳಗಾಗಿರುವವರಲ್ಲಿ ಭಾರತೀಯರ ಪ್ರಮಾಣ ಶೇ. 60ರಷ್ಟಿದೆ. ಹೃದಯಾಘಾತಕ್ಕೆ ಒಳಗಾಗುತ್ತಿರುವವರಲ್ಲಿ ಅರ್ಧದಷ್ಟು ಜನರ ವಯಸ್ಸು 50ಕ್ಕಿಂತ ಕಡಮೆ; ಶೇ. 25ರಷ್ಟು ಜನ 40 ವರ್ಷಕ್ಕಿಂತ ಕಡಮೆಯವರು. ಈ ದುಃಸ್ಥಿತಿಗೆ ಪ್ರಮುಖ […]

ದೀಪ್ತಿ

ಅರ್ಕೇ ಚೇನ್ಮಧು ವಿಂದೇತ ಕಿಮರ್ಥಂ ಪರ್ವತಂ ವ್ರಜೇತ್| ಇಷ್ಟಸ್ಯಾರ್ಥಸ್ಯ ಸಂಸಿದ್ಧೌ ಕೋ ವಿದ್ವಾನ್ ಯತ್ನಮಾಚರೇತ್||   – ಶಾಬರಭಾಷ್ಯ “ದಾರಿಯಲ್ಲಿ ನಡೆದು ಹೋಗುವಾಗ ರಸ್ತೆಬದಿಯಲ್ಲಿರುವ ಎಕ್ಕದ ಗಿಡದಲ್ಲಿ ಜೇನು ಇರುವುದು ಕಂಡರೆ ಅದನ್ನು ಸವಿಯುವುದನ್ನು ಬಿಟ್ಟು ಬೇರೆಡೆ ತುಂಬಾ ಜೇನು ಸಿಗುತ್ತದೆಂದು ಯಾರೋ ಹೇಳಿದ್ದುದನ್ನು ನೆನೆದು ಕಡಿದಾದ ಬೆಟ್ಟವನ್ನು ಏಕಾದರೂ ಹತ್ತಬೇಕು? ಇಚ್ಛಿತ ವಸ್ತು ಕಣ್ಣಿಗೆ ಕಾಣುತ್ತಿರುವಾಗ ಅದನ್ನು ಉದಾಸೀನ ಮಾಡಿ ಕಲ್ಪಿತವಾದ್ದಾವುದನ್ನೋ ಅರಸುತ್ತ ಹೋಗುವವನು ವಿವೇಕಿ ಎನಿಸುವುದಿಲ್ಲ.” ಈ ಉಕ್ತಿಯಲ್ಲಿ ಹಲವು ಅರ್ಥಸೂಕ್ಷ್ಮಗಳು ಅಡಗಿವೆ. ಸದಾ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ