
* ಗುರುದೇವ ರಾ. ದ. ರಾನಡೆ ಪ್ರತ್ಯೇಕ ಸಂಗತಿಗಳಲ್ಲಿ ಸಾರ್ವಕಾಲಿಕ-ಸಾರ್ವತ್ರಿಕ ತಿರುಳನ್ನು ಗ್ರಹಿಸಬೇಕೆಂಬ ತತ್ತ್ವವನ್ನು ಅನಾದಿಕಾಲದಿಂದ ತಾತ್ತ್ವಿಕರೂ ಅಧಿಪತಿಗಳೂ ಮನಗಂಡಿದ್ದಾರೆ. ದೈನಂದಿನ ವ್ಯವಹಾರಗಳಲ್ಲಿಯೂ ಸಾರ್ವತ್ರಿಕ ಅಂಶಗಳನ್ನು ಕಾಣುವ ದೃಷ್ಟಿವೈಶಾಲ್ಯದಿಂದಾಗಿಯೆ ಪ್ಲೇಟೋ ಮಹಾಶಯನ ಹೆಸರು ಸ್ಥಾಯಿಯಾಗಿ ಉಳಿದಿರುವುದು. ಯಾವುದನ್ನು ಅರಿತುಕೊಂಡಲ್ಲಿ ಉಳಿದೆಲ್ಲದರ ಪರಿಜ್ಞಾನ ಉಂಟಾಗುತ್ತದೋ ಅದರ ಅನ್ವೇಷಣೆಯಲ್ಲಿಯೆ ಶಂಕರಾಚಾರ್ಯರ ಜೀವನವಷ್ಟೂ ಸಾಗಿದುದು. ಆ ನೆಲೆಯಿಂದ ಮನುಷ್ಯನ ಬಾಳು ಈಗ ಬಹಳ ದೂರ ಕ್ರಮಿಸಿದೆ. ಜ್ಞಾನದ ಪರಿಧಿ ವಿಸ್ತರಿಸಿದೆ; ವಿಜ್ಞಾನಪ್ರಗತಿ ಜೀವನವನ್ನು ಸಮೃದ್ಧಗೊಳಿಸಿದೆ, ಜಗತ್‌ಸ್ಥಿತಿ ಬದಲಾಗಿದೆ. ಆದರೂ ಮಾನವಜೀವನದ ಲಕ್ಷ್ಯವಾಗಲಿ […]