* ಸಂತ ಜ್ಞಾನೇಶ್ವರ ಮಹಾರಾಜರು ಬ್ರಹ್ಮಜ್ಞಾನಪ್ರಾಪ್ತಿಗೆ ಪೂರ್ವದಲ್ಲಿ ಪ್ರಪಂಚಜ್ಞಾನದ ಆವಶ್ಯಕತೆಯೂ ಇರುತ್ತದೆ. ಇಲ್ಲವಾದರೆ ಸ್ವರೂಪಜ್ಞಾನದ ಕಾಲಕ್ಕೆ ಬುದ್ಧಿಯು ಕುಂಠಿತವಾಗುವುದು. ದಂಡೆಗೆ ಮುಟ್ಟಿದ ನಾವು ಅಲ್ಲಾಡುವುದೆ? ಅದರಂತೆ ಸ್ವರೂಪದಲ್ಲಿ ಬುದ್ಧಿಯು ಪ್ರವೇಶಿಸಲಾರದು. ವಿಚಾರವು ಹಿಂದಿನ ಹೆಜ್ಜೆಯಿಂದಲೇ ಹಿಂತಿರುಗುವುದು ಮತ್ತು ಅದರ ಬಗೆಗೆ ತರ್ಕದ ಚಾತುರ್ಯವು ನಡೆಯದು. ಅರ್ಜುನಾ! ಜ್ಞಾನವೆಂಬುದು ಅದೇ. ಅದರಿಂದ ಹೊರತಾದ ಪ್ರಪಂಚವು ವಿಜ್ಞಾನವು ಮತ್ತು ಆ ಪ್ರಪಂಚದಲ್ಲಿರುವ ಸತ್ಯತ್ವ ಬುದ್ಧಿಯೇ ಅಜ್ಞಾನವೆಂದು ತಿಳಿ. ಈಗ ಅಜ್ಞಾನವೆಲ್ಲ ಇಲ್ಲದಾಗುವುದು, ಪ್ರಪಂಚವೆಲ್ಲ ಹುರುಪಳಿಸುವುದು-ಬಾಧಿತವಾಗುವುದು. ಮತ್ತು ನಾವು ಜ್ಞಾನಸ್ವರೂಪರಾಗುವೆವು. ಸಾವಿರಾರು […]
ಮೃಗಜಲದಿಂದ ಧ್ರುವಜಲದೆಡೆಗೆ
Month : December-2021 Episode : Author :