ಉತ್ಥಾನ ಮಾರ್ಚ್ 2023
Month : April-2023 Episode : Author :
Month : April-2023 Episode : Author :
Month : March-2023 Episode : ಕ್ಷೀರಕ್ರಾಂತಿಯ ಯಶೋಗಾಥೆ-1 Author :
Month : March-2023 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಸತ್ಸಂಗತಿಯು ಅತ್ಯಂತ ಮಹತ್ತ್ವದ ಪರಿಣಾಮವನ್ನುಂಟು ಮಾಡುವುದಾಗಿರುತ್ತದೆ. ಸತ್ಪುರುಷರ ಸಹವಾಸವು ಎರಡು ಪ್ರಕಾರದಿಂದ ಆಗಲು ಶಕ್ಯವಿರುತ್ತದೆ. ಒಂದು – ಸತ್ಪುರುಷರ ದೇಹದ ಸಹವಾಸ. ಎರಡು – ಸತ್ಪುರುಷರು ಹೇಳಿದ ಸಾಧನೆ ಮಾಡುತ್ತಿರುವುದರ ಮೂಲಕ ಆಗುವ ಸಹವಾಸ. ಇವುಗಳಲ್ಲಿ ಮೊದಲನೆಯದು ಅಂದರೆ ಸತ್ಪುರುಷರ ದೇಹದ ಸಹವಾಸ ಪ್ರಾಪ್ತವಾಗುವುದು ಬಹಳ ಕಠಿಣ ಹಾಗೂ ದುರ್ಲಭವಾಗಿರುತ್ತದೆ. ಏಕೆಂದರೆ ನಿಜವಾದ ಸತ್ಪುರುಷರನ್ನು ತಿಳಿದುಕೊಳ್ಳುವುದು ಬಹಳ ಕಠಿಣವಿರುತ್ತದೆ. ಅಲ್ಲದೆ ಎಷ್ಟೋ ವೇಳೆ ಅವರ ಹೊರಗಿನ ವ್ಯವಹಾರವನ್ನು ನೋಡಿ ಮನಸ್ಸಿನಲ್ಲಿ ವಿಕಲ್ಪ ಬರುವ ಸಂಭವವಿರುತ್ತದೆ. ಒಂದು ವೇಳೆ […]
Month : March-2023 Episode : ಯೋಧರ ವೀರಗಾಥೆಗಳು Author : ಎಸ್. ಎಸ್. ನರೇಂದ್ರಕುಮಾರ್
ಅದು ೨೦೧೩, ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ. ದಕ್ಷಿಣ ಮುಂಬೈನ ತುದಿಯಲ್ಲಿ ಸಮುದ್ರಕ್ಕೆ ಚಾಚಿಕೊಂಡಿರುವ ಕೊಲಾಬಾ ಪ್ರದೇಶದಲ್ಲಿ ಭಯಂಕರ ಆಸ್ಫೋಟ ಕೇಳಿಸಿತು ಮತ್ತು ಭೂಮ್ಯಾಕಾಶಗಳನ್ನು ಒಂದಾಗಿಸುವಂತಹ ಅಗ್ನಿಜ್ವಾಲೆ ಎದ್ದಿತು. ಅನೇಕ ಗಂಟೆಗಳ ಕಾಲ ಉರಿಯುತ್ತಿದ್ದ ಈ ಅಗ್ನಿಜ್ವಾಲೆ, ಹಲವು ಕಿ.ಮೀ.ಗಳಷ್ಟು ದೂರದಿಂದಲೂ ಕಾಣುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾಗಿದ್ದರಿಂದ, ಅದು ಭಯೋತ್ಪಾದಕರ ಕೃತ್ಯವಿರಬೇಕೆಂದು ಅನೇಕರು ಶಂಕಿಸುವ ಸಾಧ್ಯತೆಯೂ ಇದ್ದಿತು. ಘಟನೆ ಸಂಭವಿಸಿದ ಕೆಲ ನಿಮಿಷಗಳಲ್ಲೇ ಸುದ್ದಿವಾಹಿನಿಗಳಲ್ಲಿ ಈ ಸುದ್ದಿಯ ಪ್ರಸಾರವಾಗಿ ಜನರ ಮನಸ್ಸಿನಲ್ಲಿದ್ದ ಅನುಮಾನಗಳಿಗೆ ಅಂತ್ಯ ಹಾಡಿತು. […]
Month : March-2023 Episode : Author : ಎಂ.ಬಿ. ಹಾರ್ಯಾಡಿ
‘ಒಬ್ಬ ಕವಿ ಗೌರವಿಸಬಹುದಾದ ಸಂಗೀತದ ಬಗೆ ಇದ್ದರೆ ಅದು ಸುಗಮ ಸಂಗೀತ’ ಎಂದು ಶ್ಲಾಘಿಸುವ ಭಟ್ಟರು ಸಂಗೀತ ಹುಟ್ಟುವುದೇ ಕವಿತೆಯ ದರ್ಶನದಿಂದ ಎಂದಿದ್ದಾರೆ. ಯಾರೋ ಒಬ್ಬರು ಪಂಡಿತರು ಒಮ್ಮೆ ಇದನ್ನು ಲೈಟ್ ಮ್ಯೂಸಿಕ್ ಎಂದಾಗ ಅಲ್ಲಿದ್ದ ಬಾಲಮುರಳಿಕೃಷ್ಣ ಅವರು, ‘Light music is the music that gives you light’ ಎಂದು ತಿದ್ದಿದ್ದರಂತೆ. ಕವಿ ಪುತಿನ ಅವರು ಒಂದು ವಿಚಾರಸಂಕಿರಣದಲ್ಲಿ “ಸುಗಮಸಂಗೀತ ಲಘುನೆಲೆಯದು ಎಂಬ ಭಾವನೆ ಅನೇಕ ಸಂಗೀತ ವಿದ್ವಾಂಸರಲ್ಲಿದೆ; ಶಾಸ್ತ್ರೀಯ ಸಂಗೀತ ಡಿಗ್ರಿಯಾದರೆ ಸುಗಮಸಂಗೀತ […]
Month : March-2023 Episode : Author : ದರ್ಶನ್ ಎಸ್.ಎನ್.
ನಾವು ಕಲಿಯುವ ಶಿಕ್ಷಣವು ನಮಗೆ ಸ್ವಯಂಉದ್ಯೋಗ ಹೊಂದುವುದರೆಡೆಗೆ ಸಿದ್ಧ ಮಾಡಬೇಕು. ಪ್ರಸ್ತುತ ಎಲ್ಲರೂ ಪದವಿಯನ್ನು ಪಡೆದರೆ ಕೆಲಸ ಸಿಗಬೇಕೆಂದರೆ ಸಾಧ್ಯವೇ? ಪದವಿಯೊಂದಿಗೆ ಕೌಶಲವು ಅಗತ್ಯವೇ ತಾನೇ! ಎಲ್ಲರೂ ಪದವಿ ಪಡೆಯುತ್ತಾರೆ, ಆದರೆ ಕೆಲವರು ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಅಂದರೆ ನಾವು ಗಳಿಸಿರುವ ಪದವಿಯ ಪ್ರಯೋಜನವಾದರೂ ಏನು? ನಾವು ಕಲಿತದ್ದು ಕೇವಲ ಉದ್ಯೋಗಕ್ಕೆ ಸೀಮಿತವಾಯಿತೆ, ಅದರ ಜ್ಞಾನವನ್ನು ಬಳಸಿಕೊಂಡು ನಾನೇನಾದರೂ ಮಾಡಬಲ್ಲೆನೆ ಮತ್ತು ಅದರಿಂದ ಹತ್ತಾರು ಜನಕ್ಕೆ ಉಪಯೋಗವಿದೆಯೆ? – ಎಂಬುದರ ಕುರಿತು ನಾವೆಲ್ಲರೂ ಆಲೋಚಿಸಿದ್ದೇವೆಯೆ? ಆಲೋಚಿಸುವುದು ಕೂಡ ಒಳಿತು. […]
Month : March-2023 Episode : Author : ಹರ್ಷ ಪೆರ್ಲ
ಬೆವರಿನಲ್ಲಿ ಜೈವಿಕ ಇಂಧನದ ಇರುವಿಕೆಯ ಬಗ್ಗೆ ಈಗಾಗಲೇ ಹಲವು ಸಂಶೋಧನೆಗಳು ತಿಳಿಸಿವೆ. ಬೆವರಿನ ಕಣಗಳಲ್ಲಿ ಲ್ಯಾಕ್ಟೇಟ್ ಎಂಬ ರಾಸಾಯನಿಕವಿದೆ. ಚರ್ಮಕ್ಕೆ ಲಗತ್ತಿಸುವ ಬ್ಯಾಂಡ್–ಏಯ್ಡ್ ತರಹದ ಒಂದು ಸ್ಟಿಕ್ಕರ್ ಇದರ ಜೊತೆ ಒಂದು ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ಶಕ್ತಿಯಾಗಿ ಪರಿವರ್ತಿಸುತ್ತದೆ. ಹಿಂದಿನ ಕಾಲದಲ್ಲಿ ಮನುಷ್ಯನ ಬೆವರು ಶಕ್ತಿ, ಶ್ರಮಗಳ ಸಂಕೇತವಾಗಿತ್ತು. ಬೆವರಿನಿಂದ ಶಕ್ತಿಯ ಉತ್ಪತ್ತಿಯಾಗುತ್ತದೆ ಎಂದಲ್ಲ, ಆದರೆ ಎಲ್ಲ ಶಕ್ತಿಗಳೂ ಬೆವರು ಸುರಿಸುವುದರಿಂದ – ಅಂದರೆ ಮನುಷ್ಯ ಪ್ರಯತ್ನದಿಂದ ಉತ್ಪತ್ತಿಯಾಗುತ್ತಿತ್ತು. ಕಾಲ ಬದಲಾಗಿದೆ. ಈಗ ಯಂತ್ರಗಳು ಮನುಷ್ಯನ ಬಹುತೇಕ […]
Month : March-2023 Episode : Author : ಅಣಕು ರಾಮನಾಥ್
ಪದವೇ ಆಗಲಿ, ಅಣುವೇ ಆಗಲಿ, ಅದನ್ನು ಒಡೆದಾಗ ಕಂಡುಬರುವ ವಿಸ್ತಾರ ಅನನ್ಯ. ಸೃಜನ ಮತ್ತು ಶೀಲಗಳನ್ನು ಪ್ರತ್ಯೇಕವಾಗಿಯೇ ಪರಿಶೀಲಿಸೋಣ. ‘ಶೀಲ’ ಪದವನ್ನೊಳಗೊಂಡ ಹಿಂದಿ ಹಾಡು ನನಗೆ ಬಹಳ ಗೊಂದಲವುಂಟಾಗಿಸಿದೆ. ‘ಮೈ ನೇಮ್ ಈಸ್ ಶೀಲಾ; ಶೀಲಾ ಕೀ ಜವಾನಿ’ ಎಂದು ಅವಳು ಹಾಡಿದಾಗ ಶೀಲಾಳ ಜವಾನಿಯ ಹೆಸರೂ ಶೀಲಾ ಎಂದೇನು? ಜವಾನಿ, ಮಾಲಿಕಳು ಇಬ್ಬರದೂ ಒಂದೇ ಹೆಸರೆ? ಅಥವಾ ಶೀಲಾ key ಜವಾನಿ ಎಂದರೆ ಯಾವುದಾದರೂ ಬೀಗದ ಕೈಗೆ ಅಡಿಯಾಳಾಗಿ ಶೀಲಾ ಇದ್ದಾಳೆಯೆ… ಎಂದೆಲ್ಲ ಗೊಂದಲಗಳೆದ್ದವು. ಹಿಂದಿಯೊಂದೇ […]
Month : March-2023 Episode : Author : ಗೀತಾ ಕುಂದಾಪುರ
ಪರ್ಕಳದ ಕೃಷಿ ಕುಟುಂಬದ ಶೇಷಗಿರಿರಾವ್ ಮತ್ತು ಲಕ್ಷ್ಮಿ ದಂಪತಿಗಳಿಗೆ ಇಬ್ಬರು ಮಕ್ಕಳು, ದೊಡ್ಡ ಮಗ ಗಿರಿಧರ, ಅವನಿಗಿಂತ ಎರಡು ವರ್ಷ ಸಣ್ಣವ ಗಿರೀಶ. ಒಂದೇ ತಾಯಿಯ ಮಕ್ಕಳಾದರೂ ಸ್ವಭಾವಗಳಲ್ಲಿ ಭಿನ್ನತೆ… ಅಲ್ಲಾ… ಅದೇ ನಿಮ್ಮ ತಮ್ಮ, ದುಬೈ ಪಾರ್ಟಿ, ಮದ್ವೆಗೆ ಕರಿಮಣಿನ ನಮ್ಮ ಹತ್ರ ತರಿಸುವುದೇಕೆ? ದುಬೈಯಲ್ಲಿ ಚಿನ್ನ ಚೀಪ್ ಅಂತೆ. ಅಲ್ಲದೆ ದುಬೈಯ ಚಿನ್ನ ಪಳಪಳ ಹೊಳೆಯುತ್ತದೆ. ಅಂತವರಿಗೆ ನಮ್ಮ ಪರ್ಕಳದ ಚಿನ್ನವೇ ಏಕೆ ಬೇಕು?’’ ಹೆಂಡತಿ ಶಾಂಭವಿ ಮಳೆಗಾಲದ ಕಪ್ಪೆಯಂತೆ ನಾನ್ಸ್ಟಾಪ್ ವಟಗುಟ್ಟಿದಾಗ ಕಾರು […]
Month : March-2023 Episode : Author : ಆರತಿ ಪಟ್ರಮೆ
ಸಾಮಾನ್ಯವಾಗಿ ಪತ್ನಿಯಾದವಳು ಏನಾದರೂ ಸಲಹೆ ಕೊಡುವ ಪ್ರಯತ್ನ ಮಾಡಿದರೆ ‘ನಿನಗೇನು ಗೊತ್ತಾಗುತ್ತದೆ, ಬಾಯಿ ಮುಚ್ಚು’ ಎಂಬ ಭಂಡ ಉತ್ತರ ಕೊಡುವವರು ಇದ್ದೇ ಇರುತ್ತಾರೆ. ಅಮ್ಮಂದಿರು ಮಕ್ಕಳಿಗೇನಾದರೂ ತಿಳಿಯ ಹೇಳುವ ಪ್ರಯತ್ನ ಮಾಡಿದರೂ ‘ಅವಳಿಗೇನು ಗೊತ್ತಾದೀತು’ ಎಂದು ಅಮ್ಮನನ್ನು ಕೇವಲ ಮಾಡುವ ಅಪ್ಪಂದಿರೂ ಇಲ್ಲದಿಲ್ಲ. ಪರಸ್ಪರರನ್ನು ಗೌರವಿಸಿಕೊಂಡು ಬಾಳುವ ಮನೆಯ ಮಕ್ಕಳೂ ಅದನ್ನೇ ಕಲಿಯುತ್ತಾರೆ. ಅನಾದರವನ್ನೇ ಕಂಡು ಬೆಳೆದವರು ಮುಂದೆ ಸಂಗಾತಿಯಾದವರನ್ನು ಅವಗಣನೆ ಮಾಡುವುದನ್ನು ಕಲಿಯುತ್ತಾರೆ. ಕಟುಕ ಸಾಕಿದ ಗಿಣಿಗೂ ಋಷಿ ಸಾಕಿದ ಗಿಣಿಗೂ ವ್ಯತ್ಯಾಸವೇನೆಂದು ನಮಗೆ ತಿಳಿದೇ […]