
ಧೌಮ್ಯಮಹರ್ಷಿಯು ಭೀಮನ ಮಾತುಗಳನ್ನು ಕೇಳಿ ಮುಗುಳ್ನಕ್ಕು, ಶಾಸ್ತçಗಳನ್ನೆಲ್ಲ ಪರಿಶೀಲಿಸಿ – “ಭೀಮ! ಒಂದು ಉಪಾಯವಿದೆ. ಮಾಘಮಾಸದ ಶುಕ್ಷಪಕ್ಷದಲ್ಲಿ ಬರುವ ಏಕಾದಶಿ ತಿಥಿಯು ಅತ್ಯಂತ ಪುಣ್ಯದಾಯಕವಾಗಿರುತ್ತದೆ. ಅಂದು ನೀನು ಉಪವಾಸವ್ರತ ಮಾಡಿದೆಯೆಂದಾದರೆ ವರ್ಷದ ಅಷ್ಟೂ ಏಕಾದಶಿಗಳಂದು ಉಪವಾಸವ್ರತ ಮಾಡಿದುದರ ಫಲ ನಿನಗೆ ದೊರೆಯುತ್ತದೆ” ಎಂದು ಹೇಳಿದರು. ಪಾಂಡವರು ಮಹಾ ಕೃಷ್ಣಭಕ್ತರು. ಕೃಷ್ಣನು ಶ್ರೀಹರಿಯ ಅವತಾರವೆಂದು ಅವರು ದೃಢವಾಗಿ ನಂಬಿದ್ದರು. ಪ್ರತಿ ತಿಂಗಳೂ ಹರಿಯ ದಿನವಾದ ಏಕಾದಶಿಯಂದು ಅವರೆಲ್ಲರೂ ಶ್ರದ್ಧೆಯಿಂದ ಉಪವಾಸವ್ರತವನ್ನು ಮಾಡುತ್ತಿದ್ದರು. ಅಂದು ಅವರು ಯಾವುದೇ ರೀತಿಯ ಆಹಾರವನ್ನೂ […]