ನಮ್ಮದಾದ ಒತ್ತಡದಲ್ಲಿ ಮಕ್ಕಳೊಂದಿಗೆ ಜಾಸ್ತಿ ಹೊತ್ತು ಸಮಯ ಕಳೆಯಲಾಗದ ಅಸಹಾಯಕತೆಯ ಪರಿಣಾಮವಾಗಿ ಮೊಬೈಲಿಗೆ ಅಂಟಿಕೊಂಡುಬಿಡುವ ಪರಿ ಎಲ್ಲವೂ ಸೇರಿ ಮಕ್ಕಳಲ್ಲಿಯೂ ತಮ್ಮ ಕುರಿತಾಗಿ ಬದುಕಿನ ಕುರಿತಾಗಿ ರೂಪಗೊಳ್ಳುವ ಕಲ್ಪನೆಗಳು ಕೈಗೆಟಕುವುದಕ್ಕಿಂತ ಭಿನ್ನವೇ ಆಗಿರುತ್ತವೆಯೇನೋ ಅನಿಸುತ್ತದೆ. ನಮ್ಮ ಬಾಲ್ಯದಲ್ಲಿ ನಮಗೆ ದೊರೆಯದೆ ಹೋದುದೆಲ್ಲವನ್ನೂ ನಮ್ಮ ಮಕ್ಕಳಿಗೆ ಒದಗಿಸಬೇಕು ಎಂಬ ತರಾತುರಿಯೂ ಪರ್ಯಾಯವಾಗಿ ಸಣ್ಣಪುಟ್ಟ ಸಂತೋಷಗಳನ್ನು ಅನುಭವಿಸಲಾಗದಂತೆ ನಮ್ಮ ಮಕ್ಕಳನ್ನು ಬದಲಾಯಿಸುತ್ತಿದೆಯೆ? – ಯೋಚಿಸಬೇಕಿದೆ. ಕೆಲವು ವರ್ಷಗಳ ಹಿಂದೆ ನಾವಿದ್ದ ಮನೆಯ ಅರ್ಧ ಕಿಲೋಮೀಟರ್ ದೂರದಲ್ಲಿ ರೈಲುಮಾರ್ಗವಿತ್ತು. ಪುಟ್ಟ ಮಗನಿಗೆ […]
ಕುತೂಹಲದ ಹಕ್ಕಿ ಹಾರುತ್ತಲಿರಲಿ…
Month : October-2024 Episode : Author : ಆರತಿ ಪಟ್ರಮೆ