ಅರಳೀಕಟ್ಟೆಗೆ ಕುಳಿತ ಮಲ್ಲೇಶಜ್ಜ ಹಿಗ್ಗಾಮುಗ್ಗಾ ಬೈಯದಿದ್ದರೆ ಈವತ್ತಿಗೂ ಹಮಾಲಿ ಕೆಲಸವನ್ನೇ ತಾನು ಮಾಡಕೊಂತಿರ್ತಿದ್ನೇನೋ! ‘ನಾ ಎಷ್ಟೇ ಕಟುಕಿ ಮಾತಾಡಲಿ ಸಹಿಸ್ಕೊಂಡು ತ್ವಾಟಾ ಮಾಡಿದಾಕಿ ಈಕಿ’ ಎಂಬ ಹೆಮ್ಮೆಯಿಂದ ಹೆಂಡತಿಯನ್ನು ಮತ್ತೆ ಮತ್ತೆ ನೋಡಿದ ಮಾದಪ್ಪ. ಮಂಜೀಹಾಳದ ಹದಗೆಟ್ಟ ರಸ್ತೆಯ ಎರಡೂ ಕಡೆ ಇದ್ದ ಸಾಲು ಮನೆಗಳಿಂದ ಬುಸುಬುಸುನೆ ಉರಿಯೊಲೆಗಳ ಕಪ್ಪನೆಯ ಹೊಗೆ ಆಗಸಕ್ಕೇರುತ್ತಿತ್ತು. ತಟತಟನೇ ರೊಟ್ಟಿ ತಟ್ಟುವ ಸದ್ದು ಬೆಳಗಿನ ಮೌನ ಮುರಿದಂತಿತ್ತು. ಮುಂಜಾವಿನ ತಂಪನ್ನು ಕರಗಿಸಲೆಂಬಂತೆ ಬಂದ ಎಳೆಬಿಸಿಲಿಗೆ ಮೈಯೊಡ್ಡಿ ಕೂತ ಹಿರಿಯರು, ತಳಿ ಹೊಡೆದು […]













