
ಹುಟ್ಟುವ ಎಲ್ಲ ಜೀವಿಗೂ ಸಾವೆಂಬುದು ಬೆನ್ನಹಿಂದೆ ಕಟ್ಟಿಕೊಂಡು ಬಂದ ಆಸ್ತಿಯೇ ಹೌದಾದರೂ ತೀರಾ ಆಪ್ತರ ಅನಿರೀಕ್ಷಿತ, ಅಕಾಲಿಕ ಮರಣಕ್ಕೆ ಮನೆಯ ಮನಸ್ಸುಗಳು ಹೀಗೇ ಸ್ಪಂದಿಸಿಯಾವು ಎನ್ನಲಾಗುವುದಿಲ್ಲ. ಅಥವಾ ಯಾರು ಯಾರ ಸಾವಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಮೊದಲೇ ತಾಲೀಮು ನಡೆಯುವುದಕ್ಕೆ ಅದು ರಂಗಭೂಮಿಯಲ್ಲ… ಅಮಿತಾವ್ ಘೋಷ್ ಬರೆದಿರುವ ’ದ ಟೌನ್ ಬೈ ದ ಸೀ’ ಎಂಬ ಪ್ರಬಂಧವನ್ನು ಇತ್ತೀಚೆಗೆ ಓದಿದೆ. ೨೦೦೪ರ ಡಿಸೆಂಬರ್ ೨೬ರಂದು ಕರಾವಳಿಯನ್ನು ಕಾಡಿದ, ಕರಾಳ ನೆನಪು ಸುನಾಮಿಯನ್ನು ಸುತ್ತುವರಿದಿರುವ ಅನುಭವ ಕಥನ ಅದು. […]