
ಕ್ರಿಕೆಟ್‌ನ ಬಗ್ಗೆ ಅದು `ಗೌರವಾನ್ವಿತರ ಆಟ’ ಎನ್ನುವ ಒಂದು ಮೆಚ್ಚುಗೆಯ ಮಾತಿದೆ. ಹಿಂದೆ ಅದು ಗೌರವಾನ್ವಿತರ ಆಟ ಆಗಿತ್ತೊ ಏನೋ; ಈಗ ಅಂತೂ ಹಾಗೆ ಉಳಿದಿಲ್ಲ. ಭಾರತೀಯ ಕ್ರಿಕೆಟ್, ಮುಖ್ಯವಾಗಿ ಅದರ ಪರಮೋಚ್ಚ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಅದರ ಮುದ್ದಿನ ಕೂಸಾದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ ಈಚಿನ ವಿದ್ಯಮಾನಗಳನ್ನು ಗಮನಿಸಿದರೆ ಆರಂಭದಲ್ಲಿ ಉಲ್ಲೇಖಿಸಿದ ಮಾತು ಎಂದೋ ಇತಿಹಾಸಕ್ಕೆ ಸೇರಿಹೋಗಿದೆ ಎನಿಸಿದರೆ ಆಶ್ಚರ್ಯವಿಲ್ಲ. ಇದರಲ್ಲಿ ಪ್ರಧಾನವಾಗಿ ಕಂಡುಬರುವವರು ಬಿಸಿಸಿಐ ಅಧ್ಯಕ್ಷತೆಯಂತಹ ಉನ್ನತ ಸ್ಥಾನದಲ್ಲಿದ್ದ […]