ಅಧ್ಯಾತ್ಮಜ್ಞಾನಪ್ರಸಾರದ ಏಕೈಕ ಉದ್ದೇಶದಿಂದ ಅಮೂಲ್ಯ ಅನುವಾದಗ್ರಂಥಗಳ ಪ್ರಕಟನೆ, ಪಾಠಪ್ರವಚನಗಳು, ವೇದಾಂತ ಶಿಬಿರಗಳು, ವೇದಾಂತಶಾಸ್ತ್ರಸಂಬಂಧಿತ ಸಂಶೋಧನೆ, ಆಸ್ತಿಕ ಸಮುದಾಯದಲ್ಲಿ ವೇದಾಂತಾಸಕ್ತಿಯನ್ನು ಉದ್ದೀಪಿಸಿ ಜಾಗೃತವಾಗಿರಿಸುವ ದೃಷ್ಟಿಯಿಂದ ‘ಅಧ್ಯಾತ್ಮ ಪ್ರಕಾಶ’ ಹೆಸರಿನ ಮಾಸಪತ್ರಿಕೆಯ ಪ್ರಕಟನೆ – ಈ ಹಲವು ಮುಖಗಳಲ್ಲಿ ಕಳೆದ ನೂರು ವರ್ಷಗಳುದ್ದಕ್ಕೂ ನಿರಂತರ ನಡೆದಿರುವ ಒಂದು ಅನುಪಮ ವೇದಾಂತಾಭಿಯಾನ ಕರ್ನಾಟಕದ ‘ಅಧ್ಯಾತ್ಮ ಪ್ರಕಾಶ ಕಾರ್ಯಾಲಯ’ ಸಂಸ್ಥೆಯದು. ಇಡೀ ದೇಶದಲ್ಲಿಯೇ ಅನನ್ಯವೆನ್ನಬಹುದಾದ ಈ ಸಂಸ್ಥೆಯ ಸ್ಥಾಪನೆಯ ಶತಮಾನೋತ್ಸವದ ವರ್ಷ ಇದೀಗ ನಡೆದಿದೆ (ಸ್ಥಾಪನೆ: 1920). ಅಧ್ಯಾತ್ಮ ಪ್ರಕಾಶ ಕಾರ್ಯಾಲಯದ ಇತಿಹಾಸವೆಂದರೆ […]
ಒಂದು ಅನುಪಮ ಆಧ್ಯಾತ್ಮಿಕ ಅಭಿಯಾನ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ
Month : March-2020 Episode : Author : ಎಸ್.ಆರ್. ರಾಮಸ್ವಾಮಿ