ಚೀನಾದ ಶಕ್ತಿ ಬಹಳ ಹೆಚ್ಚಿನದು. ನಮ್ಮ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿ ನಮ್ಮನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಅದು ಈಗಾಗಲೆ ಸಾಕಷ್ಟು ಮುಂದುವರಿದಿದೆ. ಅದಕ್ಕೆ ಪ್ರತಿಯಾಗಿ ಭಾರತಕ್ಕೀಗ ಎಚ್ಚರದ ಸುದೀರ್ಘ ನಡೆಯೇ ಬೇಕು. ‘ಬಲವೇ ನ್ಯಾಯ’ (ಮೈಟ್ ಈಸ್ ರೈಟ್) ಎಂಬುದೊಂದು ನ್ಯಾಯ. ಅದನ್ನು `ಕಾಡಿನ ನ್ಯಾಯ’ (ಜಂಗಲ್ ಲಾ) ಎಂದೂ ಹೇಳುತ್ತಾರೆ. ಯಾರಿಗೆ ಬಲ ಅಥವಾ ಶಕ್ತಿ ಇದೆಯೋ ಅವನು ಮಾಡಿದ್ದೆಲ್ಲ ಸರಿ ಎಂಬಂತಹ ವಾತಾವರಣಕ್ಕೆ ಅಥವಾ ಬಲವುಳ್ಳವರು ಏನು ಬೇಕಾದರೂ ಮಾಡಿ ದಕ್ಕಿಸಿಕೊಳ್ಳುವುದಕ್ಕೆ ಹಾಗೆ […]












