ಉತ್ಥಾನ ಜೂನ್ 2016
Month : June-2016 Episode : Author :
Month : June-2016 Episode : Author :
ಇಂಟರ್ನೆಟ್ ಮೂಲಕ ಮಾಹಿತಿ ಹುಡುಕಾಟ, ಈಮೈಲ್, ಚಾಟಿಂಗ್, ವಿಡಿಯೋ ವೀಕ್ಷಣೆ ಇತ್ಯಾದಿ ಮಾಡಬಹುದೆಂಬುದು ನಮಗೆ ತಿಳಿದಿದೆ. ಆದರೆ ಇಂಟರ್ನೆಟ್ ವ್ಯಾಪ್ತಿ ಬೆಳೆಯುತ್ತಲೇ ಹೋಗುತ್ತಿದೆ. ಇ-ಆಡಳಿತದಿಂದ ಹಿಡಿದು ವಧು- ವರಾನ್ವೇಷಣೆಯವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ರಂಗಕ್ಕೂ ನಾವು ಇಂಟರ್ನೆಟ್ ಬಳಸುತ್ತಲೇ ಬಂದಿದ್ದೇವೆ. ನಿಮ್ಮ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಬಳಸಿ, ಅದಕ್ಕಾಗಿಯೇ ಯಾವುದೇ ಆಪ್/ಸಾಫ್ಟ್ವೇರ್ ಬಳಸದೆ ಇಂಟರ್ನೆಟ್ಟಿನಲ್ಲಿ ಮಾಡಬಹುದಾದ ಕೆಲವು ಕೆಲಸಗಳು ಇಲ್ಲಿವೆ: ಆನ್-ಲೈನ್ ಶಾಪಿಂಗ್ ಫ್ಲಿಪ್ ಕಾರ್ಟ್, ಅಮಜಾನ್, ಸ್ನಾಪ್ಡೀಲ್ಗಳಂತಹ ತಾಣಗಳನ್ನು ಬಳಸಿ ಶಾಪಿಂಗ್ ಮಾಡುವುದು ಇದೀಗ […]
Month : May-2016 Episode : Author :
ಕಬ್ಬನದ ಲಾಂಚ್ಗೆ ಕಣ್ಣೀರು ಬರುತ್ತಾ…? – ಅಜ್ಜಿ ಹೇಳಿದ ಮಾತು ಪ್ರಶ್ನೆಯಾಗಿಯೇ ಉಳಿಯಿತು. ಆ ಹಾಳಾದ ಲಾಂಚ್ ನಮ್ಮನ್ನು ಈ ಗೋಳಿಗೆ ನೂಕಿದೆ, ಅದಕ್ಕೆ ನಮ್ಮ ಶಾಪ ತಟ್ಟದೆ ಹೋಗ. ನಮ್ಮ ಬದುಕು ಯಾರಿಗೆ ಹೇಳಾನ, ಬೆಳಗಿನಿಂದ ಕೂಳಿಲ್ಲ ನೀರಿಲ್ಲ ಸೂರ್ಯ ಹುಟ್ಟಿ ನಡು ನೇರಕ್ಕೆ ಬಂದಾತು. ನಾನಾದ್ರೂ ಹಳೇಜೀವ ಹೆಂಗಾರು ಆತದೆ, ನನ್ನ ಮಗಳು ಹಸಿಮೈ ಬಾಣಂತೀಗೂ ಏನೂ ಇಲ್ಲದೆ ಕಣ್ ಹೊಳ್ಸ್ತವಳೆ. ಅವಳಿಗೆ ಅದೋ-ಇದೋ ಏನಾದ್ರೂ ಕೊಡಂಗೈತಾ. ಈ ನಮ್ಮ ಊರಿಗೆ ಲಾಂಚ್ ಅಂತ […]
Month : May-2016 Episode : Author : ರೇಶ್ಮಾ ಭಟ್
ಏಪ್ರಿಲ್ ಮೇಗಳ ಕಾವಿನಲಿ ಕಳೆದು ಹೋಗಿದೆ ಚೈತ್ರ ಹೊಸತು ಉಲ್ಲಾಸಗಳಿಗಿಲ್ಲಿ ಬೇರೆಯಾಗಿದೆ ಅರ್ಥ. ಮಾಮರ ಕೋಗಿಲೆಗಳು ಕಂಪ್ಯೂ ಪರದೆಯಲಿ ಮೂಡಿ ಹ್ಯಾಪಿ ನ್ಯೂ ಇಯರ್ಗಳು ಈವ್ನಿಂದಲೆ ಹರಿದಾಡಿ ಯುಗದಾದಿಯವರೆಗೂ ಕಾಯುವವರಾರಿಲ್ಲಿ ? ಜೀನ್ಸಿನ ಲಲನೆಯರಲ್ಲಿ ದೀಪ ಹಚ್ಚುವವರಾರು ? ಪಬ್ಬು ಕ್ಲಬ್ಲುಗಳ ಪಾನಗೋಷ್ಠಿಗಳಲಿ ವಸಂತರಸವನು ತುಂಬುವವರಾರು? ಧೂಳಿನಲಿ ಮಿಂದ ಮರಗಳಲಿ ಕೆಂಜಿಗುರುಗಳ ಮೂಡಿಸುವವರಾರು? ಸಂವತ್ಸರದುದ್ದಕೂ ಮಾರುಕಟ್ಟೆಯಲಿ ಸೊನೆ ಮಾವಿನ ಗಂಧ ಮಾನಿನಿಯರ ಮುಡಿಯಲ್ಲಿ ನಿತ್ಯ ಜಾಸ್ಮೀನ್ ಕಂಪು ಮಾರನ ಬಿಲ್ಲಿನಂತೆ ಕಳೆಯೇರಿಸುವ ವಿದ್ಯುತ್ತಿನ ಬಣ್ಣಗಳಲಿ ಸದಾ ಸುಗ್ಗಿಯ […]
Month : May-2016 Episode : Author :
Month : May-2016 Episode : Author : ಕೃಷ್ಣ ಸುಬ್ಬರಾವ್
ಎಷ್ಟಾದರೂ ನಾವು ಮಣ್ಣಿಗೆ ಅಂಟಿಕೊಂಡ ಜನ. ಮೇಲೇರಬೇಕು ಎಂಬಾಸೆ ಇದ್ದರೂ, ಮಣ್ಣನ್ನು ಬಿಡಲೊಲ್ಲೆವು. ‘ಮಣ್ಣಿನಲ್ಲೇನಿದೆ’ ಎಂಬ ಪ್ರಶ್ನೆಗೆ ‘ಮಣ್ಣಿನಲ್ಲೇನಿಲ್ಲ ಎಂದು ಕೇಳಬೇಕಾಗುತ್ತದೆ. ಮಣ್ಣಿಗೆ ಮನುಷ್ಯ ಅತ್ಯಂತ ಉನ್ನತ ಸ್ಥಾನ ಹಾಗೂ ಅಷ್ಟು ಕನಿಷ್ಠ ಸ್ಥಾನವನ್ನು ಕೊಟ್ಟಿರುವುದು ವಿಪರ್ಯಾಸ. ಹೆಣ್ಣು ಮತ್ತು ಹೊನ್ನು ಎಂದಾದ ಮೇಲೆ ಮಣ್ಣು ಬರುತ್ತದೆ. ಆದರೆ ಅದು ಕಡೆಯ ಸ್ಥಾನವಲ್ಲ. ಸಮಾನಾಂತರವಾಗಿ ಮಣ್ಣಿಗೂ ಮಣೆಹಾಕುತ್ತೇವೆ. ಹೆಣ್ಣು ಹಾಗೂ ಹೊನ್ನು ಎಲ್ಲರಿಗೂ ಸಿಗದಿರಬಹುದು ಆದರೆ ಮಣ್ಣು ಪ್ರತಿಯೊಬ್ಬನ ಪಾಲಿಗೂ ಇದೆ. ತಲೆಗೆ ಹುಳ ಬಿಟ್ಟುಕೊಳ್ಳುವುದು […]
Month : May-2016 Episode : Author : ಎಚ್ ಮಂಜುನಾಥ ಭಟ್
ವಿಶಾಲವಾಗಿ ಹಬ್ಬಿ ಬೆಳೆಯುವ ಆಲದಮರದ ಕೆಳಗೆ ಬೇರೆ ಏನೂ ಬೆಳೆಯುವುದಿಲ್ಲ ಎಂಬುದೊಂದು ಪ್ರತೀತಿ. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ, ಮುಖ್ಯವಾಗಿ ಕೊಳಲುವಾದಕರಲ್ಲಿ ಅದಕ್ಕೊಂದು ಅಪವಾದವಿದೆ. ಅಪರೂಪಕ್ಕೊಮ್ಮೆ ಮಾತ್ರ ಹುಟ್ಟಿಬರುವ ಮಹಾನ್ ಪ್ರತಿಭೆ ಟಿ.ಆರ್. ಮಹಾಲಿಂಗಮ್ ಅವರು. ಅವರ ಪ್ರತಿಭೆ ಎಂತಹ ಉಜ್ಜ್ವಲವಾದುದೆಂದರೆ ಆ ಕಾಲದ ಕರ್ನಾಟಕ ಸಂಗೀತಕ್ಷೇತ್ರದ ಇತರ ವಿಭಾಗಗಳವರು ಕೂಡ ಮಂಕಾಗುವ?. ಅಂತಹ ಸ್ಥಿತಿಯಲ್ಲಿ ಮಹಾಲಿಂಗಮ್ ಅವರ ಶಿಷ್ಯ ಎನ್. ರಮಣಿ ಗುರುವಿಗೇನೂ ಕಡಮೆಯಿಲ್ಲ ಎನ್ನುವ ಮಟ್ಟಕ್ಕೆ ಬೆಳೆದರು (ನಿಧನ – ಅಕ್ಟೋಬರ್ 2015). ನುಡಿಸುವ ವಿಧಾನ […]
Month : May-2016 Episode : ರಾಜತರಂಗಿಣಿ ಕಥಾವಳಿ - 12 Author : ಎಸ್.ಆರ್. ರಾಮಸ್ವಾಮಿ
ಭಾರತೀಯ ಪರಂಪರೆಯಲ್ಲಿ ಆವಶ್ಯಕತೆ ಕಂಡಾಗ ಮಹಿಳೆಯೂ ಸಮರ್ಥವಾಗಿ ರಾಜ್ಯಭಾರವನ್ನು ನಡೆಸಬಲ್ಲಳೆಂಬುದನ್ನು ನಿರೂಪಿಸಿದಳು, ಧರ್ಮಸಂಸ್ಥಾಪನೆಗೂ ಆದ್ಯತೆ ನೀಡಿದಳು. ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ ಕನ್ನಡಕ್ಕೆ : ಎಸ್.ಆರ್.ಆರ್. ರಾಜಮಾತೆಯರೆ! ಮಹಾರಾಜ ಗೋಪಾಲವರ್ಮ ಅವರು ತಮ್ಮ ದರ್ಶನಕ್ಕಾಗಿ ಬಿಜಯಮಾಡುತ್ತಿದ್ದಾರೆ ಎಂದು ಪರಿಚಾರಿಕೆ ತಲೆತಗ್ಗಿಸಿಕೊಂಡು ಅರಿಕೆ ಮಾಡಿದಾಗ ಸುಗಂಧಾದೇವಿಗೆ ಹಾವು ಕುಟುಕಿದಂತಹ ಅನುಭವವಾಯಿತು. ಸಂಗಡ ಇದ್ದ ಪ್ರಭಾಕರದೇವನ ಅಪ್ಪುಗೆಯಿಂದ ಬಿಡಿಸಿಕೊಂಡು ಎದ್ದು ನಿಂತಳು. ಏನಾಯಿತು? – ಕೇಳಿದ ಪ್ರಭಾಕರದೇವ. ಮಹಾರಾಜನು ಬರುತ್ತಿದ್ದಾನಂತೆ ಎಂದಳು ಸುಗಂಧಾದೇವಿ. ಮಹಾರಾಜನೆ? ಇಲ್ಲಿಗೆ? ಇದು ನಿಜವೇ? ಎಂದ […]
Month : May-2016 Episode : Author : ಎಚ್ ಮಂಜುನಾಥ ಭಟ್
ಊಟಕ್ಕೂ ಗತಿಯಿಲ್ಲದ ತೃತೀಯ ಜಗತ್ತಿನ ಕಡುಬಡವರಾದರೂ ಸರಿ; ಔಷಧಿ ಕೊಟ್ಟು ಅವರ ರಕ್ತವನ್ನು ಹೀರಿ ನಮ್ಮ ಹಣದ ಥೈಲಿಯನ್ನು ತುಂಬಿಸಿಕೊಳ್ಳುತ್ತೇವೆ ಎನ್ನುವ ಮನೋಭಾವವನ್ನು ಬಹುರಾಷ್ಟ್ರೀಯ ಬೃಹತ್ ಔಷಧಿ ಕಂಪೆನಿಗಳಲ್ಲಿ ಕಾಣುತ್ತೇವೆ. ಅವುಗಳ ಈ ಮನೋಭಾವ ‘ಅಮಾನವೀಯತೆಯೊಂದಿಗೆ ಅಭಿವೃದ್ಧಿ’ ಎನಿಸುವಂಥದ್ದು. ‘ಮಾನವೀಯ ಮುಖದೊಂದಿಗೆ ಅಭಿವೃದಿ’ (development with human face) ಎನ್ನುವ ಒಂದು ಮಾತನ್ನು ಈಚಿನ ದಿನಗಳಲ್ಲಿ ನಾವು ಆಗಾಗ ಕೇಳುತ್ತಿರುತ್ತೇವೆ. ಈ ಮಾತಿಗೆ ವಿಶೇಷವಾದ ಒತ್ತು ಸಿಗುತ್ತಿರುವುದರಿಂದ ಮಾನವೀಯ ಮುಖವಿಲ್ಲದ ಒಂದು ಅಭಿವೃದ್ಧಿ ಇದೆ; ಮತ್ತು ಇಂದಿನ […]
Month : May-2016 Episode : Author : ಡಾ|| ಎಸ್.ಆರ್. ರಾಮಸ್ವಾಮಿ
ಸಾರ್ಧ ಶತಾಬ್ದ ಸ್ಮರಣೆ “ಗೋಖಲೆಯವರ ದೇಶಭಕ್ತಿಯ ಪ್ರಖರತೆಯೇ ಅವರು ಅಗ್ಗದ ಜನಪ್ರಿಯತೆಯನ್ನು ಅರಸುವುದಕ್ಕೆ ಅಡ್ಡಿ ಬಂದಿತ್ತು. ಬಡಾಯಿಮಾತಿನವರನ್ನೂ ಧೈರ್ಯಹೀನರನ್ನೂ ಅವರು ರವೆಯಷ್ಟೂ ಸಹಿಸುತ್ತಿರಲಿಲ್ಲ. ನೈತಿಕವಾಗಿಯೂ ಬೌದ್ಧಿಕವಾಗಿಯೂ ತಾವು ನಿರ್ಣಯಿಸಿಕೊಂಡಿದ್ದ ಸ್ಥಿತಿಯನ್ನು ಅವರು ಎಂದೂ ಸಡಿಲಗೊಳಿಸಲು ಒಪ್ಪುತ್ತಿದ್ದವರಲ್ಲ.” ಕೆಲಕಾಲ ದೇಶದ ಆಗಿನ ಅತ್ಯುನ್ನತ ಶಾಸನಮಂಡಳಿಯಾಗಿದ್ದ ಇಂಪೀರಿಯಲ್ (’ವೈಸರಾಯ್ಸ್) ಲೆಜಿಸ್ಲೆಟಿವ್ ಕೌನ್ಸಿಲಿನ ಸದಸ್ಯರಾಗಿದ್ದವರು, ಒಂದು ಅವಧಿಯಲ್ಲಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷರಾಗಿದ್ದವರು, ಪುಣೆಯಲ್ಲಿ ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿ ಸಂಸ್ಥೆಯನ್ನು ಸ್ಥಾಪಿಸಿದವರು- ಎಂದು ಇತಿಹಾಸಗ್ರಂಥಗಳು ಗೋಪಾಲ ಕೃಷ್ಣ […]