ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2018

ನ್ಯಾಯ ವಿಡಂಬನೆ

ಹಲವೊಮ್ಮೆ ಅಪರಾಧ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳಿಂದ ಆಪಾದಿತರು ನಿರಪರಾಧಿಗಳೆಂದು ಘೋಷಿತರಾಗುವುದು ವಿರಳವಲ್ಲವಾದರೂ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿಯೆ ಅತಿದೊಡ್ಡದೆಂಬ ಕುಖ್ಯಾತಿಗೆ ಪಾತ್ರವಾಗಿದ್ದ ಮತ್ತು ಯುಪಿಎ ಅಧಿಕಾರಾವಧಿಯ ಇದೇ ನಮೂನೆಯ ಅನ್ಯ ’ಸಾಧನೆ’ಗಳನ್ನೆಲ್ಲ ಹಿಂದಿಕ್ಕಿದ್ದ ೨-ಜಿ ಸ್ಪೆಕ್ಟ್ರಂ ಹಗರಣ ನಡೆಯಿತೆನ್ನಲು ಆಧಾರಗಳಿಲ್ಲವೆಂದು ಹೇಳಿ ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಎಂ. ಕರುಣಾನಿಧಿಯವರ ಪುತ್ರಿ ಕನಿಮೋಳಿ ಸೇರಿದಂತೆ ಎಲ್ಲ ಆಪಾದಿತರೂ ನಿರ್ದೋಷಿಗಳೆಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಕಳೆದ (೨೦೧೭) ಡಿಸೆಂಬರ್ ೨೧ರಂದು ತೀರ್ಪನ್ನಿತ್ತಿರುವುದು ಇಡೀ ದೇಶಕ್ಕೇ ಅಚ್ಚರಿಯನ್ನೂ […]

ದೀಪ್ತಿ

ಜಿತೇಂದ್ರಿಯತ್ವಂ ವಿನಯಸ್ಯ ಕಾರಣಂ ಗುಣಪ್ರಕರ್ಷೋ ವಿನಯಾದವಾಪ್ಯತೇ| ಗುಣಾಧಿಕೇ ಪುಂಸಿ ಜನೋನುರಜ್ಯತೇ ಜನಾನುರಾಗಪ್ರಭವಾ ಹಿ ಸಂಪದಃ|| – ಭಾರವಿ : ಕಿರಾತಾರ್ಜುನೀಯ “ಸ್ವನಿಯಂತ್ರಣವು ಅತ್ಯಾವಶ್ಯಕವೆಂಬ ಕಾರಣದಿಂದಲೇ ವಿನಯವು ಪ್ರಶಂಸೆಯನ್ನು ಪಡೆದುಕೊಂಡಿರುವುದು. ಎಲ್ಲ ಸದ್ಗುಣಗಳ ಮೂಲವು ವಿನಯಶೀಲತೆ. ಈ ಸದ್ಗುಣಗಳಿರುವ ವ್ಯಕ್ತಿಯನ್ನೇ ಇತರರು ಆದರಿಸುವುದು. ಇತರರ ಆದರಣೆಯಿಂದಲೇ ಎಲ್ಲ ಇಷ್ಟಸಿದ್ಧಿಗಳೂ ಸಾಧ್ಯವಾಗುವುದು.” ಒಳ್ಳೆಯ ವ್ಯಕ್ತಿಗುಣಗಳಲ್ಲಿ ಎರಡು ವರ್ಗಗಳು ಇವೆ. ಒಂದು ವರ್ಗದವು ವ್ಯವಹಾರಧರ್ಮಕಾರಣದಿಂದ ಅನಿವಾರ್ಯವೂ ಅನುಲ್ಲಂಘ್ಯವೂ ಆದವು. ಇನ್ನೊಂದು ವರ್ಗದವು ಅಪೇಕ್ಷಣೀಯ ಸ್ತರದವೇ ಆದರೂ ಪರಿಣಾಮದೃಷ್ಟಿಯಿಂದ ಮಹತ್ತ್ವದವು. ವಿನಯ ಅಥವಾ […]

ಪರಾವರ್ತನ

ಪರಾವರ್ತನ

ಎಷ್ಟು ಹೊತ್ತಿನ ಬಳಿಕ ತಟ್ಟನೆ ಎಚ್ಚರವಾಯಿತು. ಬೆಂಕಿಯತ್ತ ನೋಡಿದ. ಉರಿದ ಕೊಳ್ಳಿಗಳು ತೆಳುವಾಗಿ ಬೂದಿಯನ್ನು ತಮ್ಮ ಮೇಲೆ ಹೊದೆದುಕೊಂಡು ಮೃದು ಶಾಖ ಬೀರುತ್ತಿದ್ದವು. ಕೊಳ್ಳಿಗಳನ್ನು ನಿಧಾನವಾಗಿ ಕೊಡಹಿ ನುರಿದ. ಬೂದಿ ಮುಚ್ಚಿದ ಕೆಂಡ ಎಂದರೆ ಇದೇ ಎಂದುಕೊಳ್ಳುತ್ತ ಅರ್ಧ ಸುಟ್ಟ ಕಟ್ಟಿಗೆಗಳನ್ನು ಬೆಂಕಿಯತ್ತ ಸರಿಸಿ ಉರಿಸಿ ತಣ್ಣಗಾಗುತ್ತಿದ್ದ ಕೈಯನ್ನು ಕಾಯಿಸಿಕೊಂಡ. ಕಾಯಿಸಿಕೊಳ್ಳುತ್ತಲೆ ಸುತ್ತ ನೋಡಿದರೆ ಶ್ಯಾಮಭಟ್ಟನಿಲ್ಲ. `ಯಾರದು?’ ಪ್ರಶ್ನೆ ಎಲ್ಲಿಂದ ಬಂತೆಂದು ಭಾಸ್ಕರ ಸುತ್ತ ತಿರುಗಿ ನೋಡಿದ. ರೊಂಯ್ಯನೆ ಬೀಸುವ ಗಾಳಿಯಿಂದ ಅಲುಗುವ ಟೊಂಗೆ, ಎಲೆಗಳಿಂದಾಗಿ ಬರುವ […]

ಜನವರಿ 2018ರ ವಿಶೇಷಾಂಕದಲ್ಲಿ ಏನೇನಿದೆ?

ಪ್ರಾಸ್ತಾವಿಕ ಕೆರೆಗಳ ಅಳಿವು, ಉಳಿವು, ನೋವು ಇತ್ಯಾದಿ… – ಕಾಕುಂಜೆ ಕೇಶವ ಭಟ್ಟ       http://utthana.in/?p=4751 ಜಾಗೃತಿ ಕಳೆದುಕೊಳ್ಳುತ್ತಿರುವುದು ಏನನ್ನು? – ಕೆರೆಗಳನ್ನೋ, ಸಂಸ್ಕೃತಿಯನ್ನೋ? – ಎಂ.ಎಸ್. ಚೈತ್ರ         http://utthana.in/?p=4770 ಇತಿಹಾಸ ವಿಜಯನಗರದ ಕೆರೆಗಳ ಕಥನ – ಸಂತೋಷ್ ಜಿ.ಆರ್.  http://utthana.in/?p=4775 ಮೆಲುಕು ಕೆರೆಗಳು : ಭವ್ಯ ಇತಿಹಾಸ, ಚಿಂತಾಜನಕ ವಾಸ್ತವ, ಕರಾಳ ಭವಿಷ್ಯ – ಮಲ್ಲಿಕಾರ್ಜುನ ಹೊಸಪಾಳ್ಯ  http://utthana.in/?p=4809 ಸಮಸ್ಯೆ-ಪರಿಹಾರ ಬೆಳ್ಳಂದೂರುಕೆರೆ: ನೊರೆ ಮತ್ತು ಒತ್ತುವರಿ ಸಮಸ್ಯೆ ಹಾಗೂ ಪರಿಹಾರಗಳು – ರಮೇಶ್ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ