
ಶಿವೋ ಭೂತ್ವಾ ಶಿವಂ ಯಜೇತ್ ಎಂಬುದು ಪಾರಂಪರಿಕ ನಿರ್ದೇಶ.ಶಿವನನ್ನು ಆರಾಧಿಸಬೇಕಾದರೆ ತಾನೇ ಸ್ವಯಂ ಶಿವನಾಗಿರಬೇಕಾಗುತ್ತದೆ. ಅದರಂತೆ ಭಾರತಮಾತೆಯನ್ನು ಅರ್ಚಿಸಹೊರಟ ಭಗಿನಿ ನಿವೇದಿತಾ ಭಾರತಮಾತೆಯೊಡನೆ ಪೂರ್ಣ ತಾದಾತ್ಮ್ಯ ಹೊಂದಿದ್ದರು. ಭಾರತವನ್ನು ಕುರಿತ ಆಕೆಯ ಪರಿಜ್ಞಾನ ಅಷ್ಟು ಸಮಗ್ರವಾಗಿದ್ದಿತು. ಸ್ವಾಮಿ ವಿವೇಕಾನಂದರು ಅಮೆರಿಕಕ್ಕೆ ಕಾಲಿರಿಸಿದಾಗ ಅವರು ಅಲ್ಲಿ ಅಪರಿಚಿತರೇ ಆಗಿದ್ದರು. ಹಣ ಮೊದಲಾದ ಸೌಕರ್ಯಗಳ ವಿಷಯ ಹಾಗಿರಲಿ; ಅವರಿಗೆ ಪರಿಚಿತರೂ ಯಾರೂ ಇರಲಿಲ್ಲ. ಅವರಿಗೆ ಸಂಗಾತಿಯಾಗಿದ್ದುದು ಹಿಂದೂಧರ್ಮವನ್ನು ಕುರಿತ ಜ್ಞಾನ ಮಾತ್ರ. ಅದೊಂದೇ ಆಧಾರದ ಮೇಲೆ ಅವರು ತಮ್ಮನ್ನು ಪಾಶ್ಚಾತ್ಯಜಗತ್ತಿಗೆ ಪರಿಚಯಿಸಿಕೊಂಡರು. […]