
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೊ… ಪುರಂದರದಾಸರ ಈ ತತ್ತ್ವಪದ ತ್ಯಾಗಜೀವನದ ಪ್ರತೀಕವಾಗಿದೆ. ತನಗಾಗಿ ಬದುಕದೆ ಇತರರಿಗಾಗಿ ಬದುಕುವ ಪಾಠವನ್ನು ಹೇಳುತ್ತದೆ. ಹಸು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ. ಮರ ತನ್ನ ಹಣ್ಣು ತಾನೇ ತಿನ್ನುವುದಿಲ್ಲ. ಕೆರೆ ತನ್ನ ನೀರನ್ನು ತಾನೇ ಕುಡಿಯುವುದಿಲ್ಲ. ಇವೆಲ್ಲ ನಮಗೆ ನಿತ್ಯ ಬೋಧೆಗಳು. ಇವುಗಳಿಂದ ಕಲಿಯುವ ಪಾಠವೇ ಭೂತಾಯಿ ಕೊಟ್ಟ ಕಾಣಿಕೆಗಳನ್ನು ಭೂಮಿತಾಯಿಗೇ ವಾಪಸ್ ಕೊಡುವುದು. ಅಂದರೆ ನಾಳಿನ ಪೀಳಿಗೆ […]