ಉತ್ಥಾನ ಜುಲೈ 2019
Month : July-2019 Episode : Author :
Month : July-2019 Episode : Author :
Month : July-2019 Episode : Author : ಉಷಾ ನಾರಾಯಣ ಹೆಗಡೆ
ಆ ಪಕ್ಕದ ಮನೆಯವರನ್ನು ಕಂಡರೆ ಇತ್ತಿತ್ತಲಾಗಿ ನನಗೆ ಸಿಟ್ಟು ಬರ್ತಾ ಇದೆ. ಯಾಕೆಂದರೆ ಹೊತ್ತಲ್ಲದ ಹೊತ್ತಲ್ಲಿ ಬಂದು ‘ಅಕ್ಕ ಸ್ವಲ್ಪ ಚಹಾಪುಡಿ ಕೊಡ್ತೀರಾ? ಮುಗಿದೇ ಹೋಗಿದೆ, ನೋಡಲಿಲ್ಲ.’ ‘ಸ್ವಲ್ಪ ಕತ್ತರಿ ಕೊಡ್ತೀರಾ? ನನ್ನ ಕತ್ತರಿ ಹರಿತಾನೆ ಇಲ್ಲ. ಪೇಪರ್ ಓದಿ ಕೊಡ್ತೀನಿ, ನೀವೇನೂ ಈಗ ಓದಲ್ವಲ್ಲಾ. ಸುಧಾ ಪತ್ರಿಕೆ ತಂದಿದೀರಾ?’ ಒಟ್ಟಿನಲ್ಲಿ ಒಂದಲ್ಲ ಒಂದು ಬೇಡಿಕೆಗಳು. ಮೊದಮೊದಲು ಪಾಪ ಅಂತ ಕೊಟ್ಟುಬಿಡುತ್ತಿದ್ದೆ. ಇತ್ತಿತ್ತಲಾಗಿ ಯಾಕೋ ಸಿಟ್ಟು ಬರುತ್ತಿದೆ. ಯಾಕಾದರೂ ಬರುತ್ತಾಳೋ? – ಎಂದೆನಿಸುತ್ತದೆ. ಈವತ್ತು ಬೆಳಗಿನಿಂದ ಎರಡು […]
Month : July-2019 Episode : Author : ದು.ಗು.ಲಕ್ಷ್ಮಣ
ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗುವ ಬೆಂಗಳೂರಿನ ಕಂಠೀರವ ಕ್ರೀಡಾಂಗಣವೆಂದರೆ ಅದೊಂದು ಸುವ್ಯವಸ್ಥಿತ ಉತ್ತಮ ಗುಣಮಟ್ಟದ, ಸಕಲ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಕ್ರೀಡಾಂಗಣವೆಂದೇ ಕ್ರೀಡಾಭಿಮಾನಿಗಳ ನಂಬಿಕೆ. ಆದರೆ ವಾಸ್ತವ ಮಾತ್ರ ಬೇರೆಯೇ. ಗುಂಡಿ ಬಿದ್ದ ಅಥ್ಲೆಟಿಕ್ಸ್ ಟ್ರ್ಯಾಕ್, ಆ ಟ್ರ್ಯಾಕ್ನಲ್ಲಿ ಓಟದ ಅಭ್ಯಾಸ ನಡೆಸಿದರೆ ಬಿದ್ದು ಮುಗ್ಗರಿಸಿ ಗಾಯಾಳುಗಳಾಗುವುದು ಗ್ಯಾರಂಟಿ. ಗಾಯವಾದರೆ ಕ್ರೀಡಾಂಗಣದ್ದೇ ವೈದ್ಯರು ಇಲ್ಲ. ಗಾಯಾಳುಗಳನ್ನು ಸಾಗಿಸಲು ಟ್ರ್ಯಾಲಿಯು ಇಲ್ಲ. ನಾಲ್ಕುಮಂದಿ ಹೊತ್ತುಕೊಂಡೇ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಬೇಕು. ಸಿಂಥೆಟಿಕ್ ಟ್ರ್ಯಾಕ್ ನಿರ್ವಹಿಸಲು ಸಿಬ್ಬಂದಿಯೇ ಇಲ್ಲ. […]
Month : July-2019 Episode : Author : ವೇಮಗಲ್ ಸೋಮಶೇಖರ್
ಬೆಂಗಳೂರು ನಗರದ ಕೋಟೆಯಲ್ಲಿರುವ ಟಿಪ್ಪುಸುಲ್ತಾನ್ ಅರಮನೆಯಲ್ಲಿ 1921ರಲ್ಲಿ ಪ್ರಾರಂಭವಾದ, ಸ್ಕೌಟ್ ಸಂಸ್ಥೆಯವರು ಆರಂಭಿಸಿದ ಅನೇಕ ಸಾಹಸಕ್ರೀಡೆಗಳಲ್ಲಿ ಈಜುವುದೂ ಒಂದು. ಆ ಕ್ರೀಡೆಗಾಗಿ ‘ಡಾಲ್ಫಿನ್ ಸ್ವಿಮ್ಮಿಂಗ್ಕ್ಲಬ್’ ಎಂದು ಹೆಸರಿಟ್ಟು, ಈಜು ಕಲಿಸುವುದಕ್ಕೆ ಸನಿಹದಲ್ಲೇ ಇದ್ದ ಕೆಂಪಾಂಬುಧಿ ಕೆರೆಯನ್ನು ಆಯ್ಕೆ ಮಾಡಿಕೊಂಡರು. ಪ್ರಾರಂಭದಲ್ಲಿ ವಯಸ್ಸು, ಜಾತಿ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಂಜಾನೆ ಆರರಿಂದ ಎಂಟು ಗಂಟೆಯವರೆಗೆ ಮತ್ತು ಸಂಜೆ ನಾಲ್ಕರಿಂದ ಐದು ಗಂಟೆಯವರಿಗೆ ಈಜು ತರಬೇತಿ ನೀಡಲಾಗುತ್ತಿತ್ತು. ಟಿ. ಶಾಮರಾಯರು, ಆನಂತರ ಬಿ.ಆರ್. ಶ್ರೀನಿವಾಸರಾವ್ ಮುಂತಾದವರು ಈಜುಶಿಕ್ಷಕರಾಗಿದ್ದರು. 1925-26ರ ವೇಳೆಗೆ […]
Month : July-2019 Episode : Author :
ಇಸ್ರೋದ ಪ್ರತಿಯೊಂದು ಉಡಾವಣೆಯೂ ಆಶಾವಾದ ಮತ್ತು ಭರವಸೆಯ ಕಥೆಯಾಗಿದೆ. ನವೆಂಬರ್ 29, 2018ರಂದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ (ಇಸ್ರೋ) ಭಾರತದ ‘ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್’ (ಪಿಎಸ್ಎಲ್ವಿ-ಸಿ43) ಮೂಲಕ 30 ಉಪಗ್ರಹಗಳನ್ನು ಹಾರಿಸಿತು. ಇಸ್ರೋದ ಈ ಉಡಾವಣೆಯ ಪ್ರಮುಖ ಉಪಗ್ರಹವು ದೇಶದ ಸ್ವಂತ ಭೂ ಸಮೀಕ್ಷಾ ಉಪಗ್ರಹವಾದ ‘ಹೈಫಲ್ ಸ್ಪೆಕ್ಟ್ರಲ್ ಇಮೇಜಿಂಗ್ ಸೆಟಲೈಟ್’ (ಎಚ್ವೈಎಸ್ಐಎಸ್) ಆಗಿತ್ತು. ಪಿಎಸ್ಎಲ್ವಿ-ಸಿ 43ರ ಇತರ 29 ಉಪಗ್ರಹಗಳು ಬೇರೆÉ ಎಂಟು ದೇಶಗಳಿಂದ ಬಂದಿದ್ದವು; ಅದರಲ್ಲಿ 23 ಉಪಗ್ರಹಗಳನ್ನು ಹೊಂದಿದ್ದ ಅಮೆರಿಕದ್ದು […]
Month : July-2019 Episode : Author : ಕಾಕುಂಜೆ ಕೇಶವ ಭಟ್ಟ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2018ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯ ಮೇಲಿಂದ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ – “2022ರ ಒಳಗಾಗಿ ಭಾರತೀಯ ವಿಜ್ಞಾನಿಗಳು ಅಂತರಿಕ್ಷಕ್ಕೆ ‘ಗಗನಯಾನ’ವನ್ನು ಕಳುಹಿಸಲು ನಿಶ್ಚಯಿಸಿದ್ದಾರೆ; ಮಾತ್ರವಲ್ಲ, ಅಂತರಿಕ್ಷಕ್ಕೆ ಭಾರತೀಯ ಬಾಹ್ಯಾಕಾಶ ಯಾನಿಗಳನ್ನೂ ಕೂಡ ಕಳುಹಿಸುವ ಯೋಜನೆಯೂ ಇದೆ” ಎಂಬುದಾಗಿ ಘೋಷಣೆಯನ್ನು ಮಾಡಿದ್ದರು. ಆ ಸಂಕಲ್ಪಿತ ಮಾತುಗಳು ಈಗ ನಿಗದಿತ ಸಮಯಕ್ಕೂ ಮೊದಲೇ ಸಾಕಾರಗೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿವೆ. ಭಾರತದ ಹೆಮ್ಮೆಯ, ಬಹುನಿರೀಕ್ಷಿತ ಹಾಗೂ ಅತ್ಯಂತ ಮಹತ್ತ್ವಾಕಾಂಕ್ಷೆಯ ಪ್ರತಿಷ್ಠಿತ ಯೋಜನೆ ‘ಚಂದ್ರಯಾನ-2’ ಬಾಹ್ಯಾಕಾಶನೌಕೆಯ […]
Month : July-2019 Episode : Author : ಎಸ್.ಆರ್. ರಾಮಸ್ವಾಮಿ
ಪ್ರತಿಯೊಂದು ಚುನಾವಣೆಯಲ್ಲಿಯೂ ಹಲವು ಅನಿರೀಕ್ಷಿತಗಳು ಘಟಿಸುತ್ತವೆ. ಹಿಂದೆ ಸ್ವತಃಸಿದ್ಧಗಳೆನಿಸಿದ್ದ ಅಂದಾಜುಗಳು ಸದಾಕಾಲ ತಮ್ಮ ವಿಶ್ವಸನೀಯತೆಯನ್ನು ಉಳಿಸಿಕೊಂಡಿರುವುದಿಲ್ಲ. ಕೆಲವು ವಿಜ್ಞಾನಾಂಗಗಳ ಮೂಲ ಸಾಮಗ್ರಿಗಳೂ ಅಂತಃಪ್ರಕ್ರಿಯೆಗಳೂ ಒಂದಷ್ಟುಮಟ್ಟಿಗೆ ಸ್ಥಿರಸ್ವರೂಪದವಾಗಿರುತ್ತವಾದ್ದರಿಂದ ಸಾಧಾರಣೀಕರಣ ಶಕ್ಯವಾಗಬಹುದು. ಈ ಕಾರಣದಿಂದ ಇವನ್ನು ಖಚಿತ ಶಾಸ್ತ್ರಗಳೆಂದು ವರ್ಗೀಕರಿಸುವ ರೂಢಿ ಇದೆ. ಇನ್ನು ಕೆಲವು ಪರಾಮರ್ಶನ ಕ್ಷೇತ್ರಗಳ ಮೂಲಸಾಮಗ್ರಿಯೂ ಅಂತಃಪ್ರಕ್ರಿಯೆಗಳೂ ಅಸ್ಥಿರವೂ ಪರಿವರ್ತನಶೀಲವೂ ಆಗಿರುತ್ತವೆ. ಇಲ್ಲಿ ಸಾಧಾರಣೀಕರಣವು ಪೂರ್ಣ ವಿಶ್ವಸನೀಯವೆನಿಸಲಾರದು. ಈ ಪರಾಮರ್ಶನೆಗಳಲ್ಲಿ ಅಪೇಕ್ಷಿತಮಟ್ಟದಲ್ಲಿ ಖಚಿತತೆ ಸಿದ್ಧಿಸುವುದು ಸಂಭವನೀಯವಲ್ಲ. ಹೀಗಿದ್ದರೂ ಲಬ್ಧಮಾಹಿತಿಯ ಆಧಾರದ ಮೇಲೆ ರಾಜಕೀಯ ವಿಶ್ಲೇಷಕರು ತೇರೀಜುಬೇರೀಜುಗಳಲ್ಲಿ […]
Month : July-2019 Episode : Author : ಎಸ್.ಆರ್. ರಾಮಸ್ವಾಮಿ
ಖೊಟ್ಟಿನಾಣ್ಯಗಳ ಪ್ರಸಾರ ಹೆಚ್ಚಿದಂತೆ ಸಾಚಾ ನಾಣ್ಯಗಳು ಹಿಂದಕ್ಕೆ ಸರಿದುಬಿಡುತ್ತವೆ – ಎಂಬ ವಿದ್ಯಮಾನವನ್ನು ‘ಗ್ರೆಶಾಮ್ ನಿಯಮ’ ಎಂದು ಕರೆಯುತ್ತಾರೆ. ಆದರೆ ಹಲವೊಮ್ಮೆ ಸಾಚಾ ನಾಣ್ಯಗಳು ತಮ್ಮ ಔಜ್ಜ್ವಲ್ಯದಿಂದಾಗಿ ಖೊಟ್ಟಿ ನಾಣ್ಯಗಳನ್ನು ಹಿಮ್ಮೆಟ್ಟಿಸುವುದೂ ಉಂಟು. ಇದೀಗ ದೇಶದಲ್ಲಿ ನಡೆದಿರುವುದು ಇದೇ ಎನಿಸುತ್ತದೆ. ಅರ್ಥವನ್ನು ಕಳೆದುಕೊಂಡಿದ್ದ ಘೋಷಣೆಗಳಿಗೆ ಅರ್ಥವನ್ನೂ ಋಜುತೆಯನ್ನೂ ತುಂಬಲು ನರೇಂದ್ರ ಮೋದಿ ಶಕ್ತರಾದರೆಂಬುದರಲ್ಲಿ ಅಡಗಿದೆ ಈಗಿನ ಯಶಸ್ಸಿನ ಬೀಜ. ಇದರಲ್ಲಿ ಯಾವ ‘ರಹಸ್ಯ’ವೂ ಇಲ್ಲ, ಯಾವ ಕೃತಕ ‘ತಂತ್ರಗಾರಿಕೆ’ಯೂ ಇಲ್ಲ. ಪಾತ್ರೆಯ ಥಾಳಥಳ್ಯವನ್ನು ಹೊಮ್ಮಿಸಲು ಗಲೀಜುಗಳನ್ನು ಉಚ್ಚಾಟಿಸಿದರೆ […]
Month : July-2019 Episode : Author : ಎಸ್.ಆರ್. ರಾಮಸ್ವಾಮಿ
ಅಕಾಂಡಪಾತಜಾತಾನಾಂ ಆರ್ದ್ರಾಣಾಂ ಮರ್ಮಭೇದಿನಾಮ್| ಗಾಢಶೋಕಪ್ರಹಾರಾಣಾಂ ಅಚಿಂತೈವ ಮಹೌ?ಧಿಃ|| – ಪ್ರಬೋಧಚಂದ್ರೋದಯ “ನಿರೀಕ್ಷೆ ಮಾಡದಿದ್ದಾಗ ಎಲ್ಲೆಲ್ಲಿಂದಲೋ ಹಸಿಹಸಿಯಾದವೂ ಮರ್ಮಭೇದಕಗಳೂ ಆದ, ತೀವ್ರ ಬಾಧೆಯನ್ನುಂಟುಮಾಡುವ ಕ್ಲೇಶಗಳು ಬಂದು ಪ್ರಹಾರ ಮಾಡುತ್ತವೆ. ಅವುಗಳ ಬಗೆಗೆ ಹೆಚ್ಚು ಚಿಂತೆ ಮಾಡದಿರುವುದನ್ನು ಅಭ್ಯಾಸ ಮಾಡಿಕೊಳ್ಳುವುದೇ ಅವಕ್ಕೆ ಶಮನಕಾರಿ ಪರಿಹಾರ.” ಕ್ಲೇಶಗಳಿಂದ ಯಾರಿಗೂ ಮುಕ್ತಿಯಿಲ್ಲ. ಜಗತ್ತಿನಲ್ಲಿ ತ್ರಿಗುಣಗಳ ಕ್ರೀಡನ ಇರುವವರೆಗೆ ಒಂದಲ್ಲ ಒಂದು ಕ್ಲೇಶ ಎರಗುತ್ತಲೇ ಇರುತ್ತದೆ. ಅದು ನಮ್ಮ ನಿಯಂತ್ರಣಕ್ಕೆ ಒಳಪಡುವುದಲ್ಲ. ಆದರೆ ನಮ್ಮ ಅಂತರಂಗದ ಮೇಲೆ ಅದರ ಆಘಾತವನ್ನು ಕಡಮೆ ಮಾಡಿಕೊಳ್ಳುವುದು ವಿರಕ್ತಿಯಿಂದಲೂ […]
Month : July-2019 Episode : Author : ನಳಿನಿ ಟಿ. ಭೀಮಪ್ಪ
ಮೊಬೈಲ್ ರಿಂಗ್ ಆಯಿತು. ನೊಡಿದರೆ ಯಾವುದೋ ಹೊಸ ನಂಬರ್. ಕಾಲ್ ರಿಸೀವ್ ಮಾಡಿದೆ. ‘ನೀವು ಸುಮಾ ತಾನೆ?’ ಎಂದು ಉಲಿಯಿತು ಅತ್ತ ಕಡೆಯಿಂದ ಒಂದು ಹೆಣ್ಣು ಧ್ವನಿ. ‘ಹೌದು, ತಾವು ಯಾರೆಂದು ತಿಳಿಯಲಿಲ್ಲ?’ ಎಂದು ಪ್ರಶ್ನಿಸಿದೆ. ‘ಮೇಡಂ, ಮೊನ್ನೆ ನೀವು ದಾವಣಗೆರೆಯ ಮಾಲ್ಗೆ ಭೇಟಿ ನೀಡಿದ್ದಿರಲ್ಲ, ಅಲ್ಲಿ ನಿಮ್ಮ ಮೊಬೈಲ್ ನಂಬರ್ ಕೂಪನ್ನಲ್ಲಿ ಬರೆಸಿಕೊಂಡಿದ್ದು ನೆನಪಿದೆ ತಾನೆ? ತಿಂಗಳಿಗೊಮ್ಮೆ ನಾವು ಖರೀದಿ ಮಾಡಿದ ಕಸ್ಟಮರ್ಸ್ಗಳಲ್ಲಿ ಐದು ಜನ ಅದೃಷ್ಟಶಾಲಿಗಳನ್ನು ಲಕ್ಕಿಡಿಪ್ ಮೂಲಕ ಆಯ್ಕೆ ಮಾಡುತ್ತೇವೆ, ಈ ತಿಂಗಳು […]