ನಮ್ಮಮ್ಮನಿಗೆ ಅತ್ಯಂತ ಅಕ್ಕರೆಯ ವಸ್ತುವೆಂದರೆ ಅವರ ಹೊಲಿಗೆ ಮಷೀನು. ಬಹುಶಃ ಈಗ ಅದಕ್ಕೆ 45 ವರ್ಷ ದಾಟಿರಬಹುದು. 75ನೇ ಇಸವಿಯಲ್ಲಿ ಅದನ್ನು ಕೊಂಡುದಾಗಿ ಅಮ್ಮ ಹೇಳಿದ ನೆನಪು. ಛಲದಿಂದಲೇ ಏಕಲವ್ಯನಂತೆ ಹಲವು ಬಗೆಯ ಡಿಸೈನು ಫ್ರಾಕುಗಳನ್ನು, ಇನ್ನಿತರ ಲಂಗ, ರವಕೆ, ಶರ್ಟು, ಚೂಡಿದಾರಗಳನ್ನು ಹೊಲಿಯಲು ಕಲಿತವರು ಅಮ್ಮ. ಯಾವ ಹೊಸಬಗೆಯ ಡಿಸೈನು ಕಣ್ಣಿಗೆಬಿದ್ದರೂ ಅದನ್ನು ಹಾಗೆಯೆ ಮನಸ್ಸಿಗೆ ತುಂಬಿಕೊಂಡು ಪ್ರಯೋಗ ಮಾಡಬಲ್ಲ ಅಪ್ಪಟ ಕ್ರಿಯಾಶೀಲ ಪ್ರತಿಭೆ. ಅಮ್ಮನ ಎಲ್ಲ ಪ್ರಯೋಗಗಳನ್ನೂ ನಮಗಿಂತ ಮೊದಲೇ ಅರ್ಥಮಾಡಿಕೊಳ್ಳುವುದು ಅದೇ ಮಷೀನು. […]
ಅಮ್ಮನ ಹೊಲಿಗೆಮಷೀನು
Month : September-2020 Episode : Author : ಆರತಿ ಪಟ್ರಮೆ