ಪ್ರಣವೋ ಧನುಃ ಶರೋ ಹ್ಯಾತ್ಮಾ ಬ್ರಹ್ಮ ತಲ್ಲಕ್ಷ್ಯಮುಚ್ಯತೇ | ಅಪ್ರಮತ್ತೇನ ವೇದ್ಧವ್ಯಂ ಶರವತ್ತನ್ಮಯೋ ಭವೇತ್ || – ಮುಂಡಕೋಪನಿಷತ್ “ಓಂಕಾರವೇ ಧನುಸ್ಸು. ಆತ್ಮನೇ ಬಾಣ. ಬ್ರಹ್ಮವೇ ಅದರ ಗುರಿ – ಎಂದು ಹೇಳಲ್ಪಟ್ಪಿದೆ. ಪ್ರಮತ್ತನಾಗದೆ (ಏಕಾಗ್ರತೆಯಿಂದ) ಗುರಿಯೆಡೆಗೆ ಹೊಡೆಯಬೇಕು. ಬಿಲ್ಲುಗಾರನು ಬಾಣದಂತೆ ತನ್ಮಯನಾಗಬೇಕು.” ಇಲ್ಲಿ ಜೀವಾತ್ಮನೇ ಬಾಣ; ದೃಶ್ಯಪ್ರಪಂಚದೊಡನೆ ಮೈಮರೆಯದೆ ಅಂತರ್ಮುಖನಾಗಿ ಲಕ್ಷ್ಯವಾದ ಬ್ರಹ್ಮದ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು – ಎಂಬುದು ಸಂಕ್ಷೇಪದಲ್ಲಿ ಮೇಲಣ ವಾಕ್ಯದ ಸೂಚನೆ. ದುಗ್ರ್ರಾಹ್ಯ ತತ್ತ್ವಗಳನ್ನು ಸುಬೋಧಗೊಳಿಸುವುದಕ್ಕಾಗಿ ಉಪನಿಷತ್ತುಗಳಲ್ಲಿ ಆಖ್ಯಾನಗಳ ಮತ್ತು ಉಪಮೆಗಳ […]
ದೀಪ್ತಿ
Month : March-2021 Episode : Author :