‘ಅಮೆರಿಕ ಇಂಗ್ಲೆಂಡುಗಳಂತಹ ದೇಶಗಳು ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿದಿರುವತ್ತ ಲಕ್ಷ್ಯ ಹರಿಸಬೇಕು’ – ಎಂದು ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ಸಿನ ನಾಯಕ ರಾಹುಲ್ಗಾಂಧಿ ವಿದೇಶೀ ನೆಲದಲ್ಲಿ ಬಡಬಡಿಸಿದುದಕ್ಕೆ ಏನೆನ್ನಬೇಕು? ಈ ವಿಕೃತ ಮಂಡನೆಯನ್ನು ಸಾಂವಿಧಾನಿಕವೆನ್ನಲಾದೀತೆ? ಅದು ಸಂವಿಧಾನವನ್ನೇ ಅವಗಣನೆ ಮಾಡಿದಂತಾಗದೆ? ಇನ್ನೊಂದು ವಿಪರ್ಯಾಸವೂ ಇದೆ. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಗಳೇ ಇವೆಯಲ್ಲ. ಅವೆಲ್ಲ ಅಸಿಂಧುವಾದವೆಂದು ರಾಹುಲ್ಗಾಂಧಿಯವರೇ ಹೇಳಿದಂತಾಗಲಿಲ್ಲವೆ? ಸಂಸದೀಯ ರಾಜ್ಯಪದ್ಧತಿಯಲ್ಲಿ ನಡವಳಿಗಳ ಗುಣಮಟ್ಟವನ್ನು ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ. ವಿರೋಧಪಕ್ಷಗಳೂ ಈ ಹೊಣೆಗಾರಿಕೆಯಿಂದ ಮುಕ್ತವಲ್ಲ. ಟೀಕೆಗಳಿಗೂ ಅವಕಾಶ […]









