ವೃತ್ತಿ ಜೀವನದ ಆರಂಭದಲ್ಲಿ ಶಂಕರನಾರಾಯಣನ್ ಅವರಿಗೆ ಎದುರಾದ ಒಂದು ಸವಾಲೆಂದರೆ ಮಧುರೆ ಮಣಿ ಅವರ ಶೈಲಿಗೆ ಹೊರತಾದ ಸ್ವಂತ ಶೈಲಿಯನ್ನು ರೂಪಿಸಿಕೊಳ್ಳುವುದು. ಮಣಿ ಅವರ ಕಛೇರಿಗಳಲ್ಲಿ ಹಿಂದೆ ಕುಳಿತ ಹುಡುಗ ಚೆನ್ನಾಗಿ ಹಾಡುತ್ತಿದ್ದುದನ್ನು ಶ್ರೋತೃಗಳು ಗಮನಿಸಿದ್ದರು; ವಿಮರ್ಶಕರು ಕೂಡ ಗುರುತಿಸಿದ್ದರು. ಅದರ ಫಲವಾಗಿ ಮಣಿ ಅವರ ಅನಂತರ ಶ್ರೋತೃಗಳು ಇವರ ಕಛೇರಿಗಳಿಗೆ ತುಂಬ ನಿರೀಕ್ಷೆಯಿಂದಲೇ ಬಂದರು. ಆದರೆ ಟಿವಿಎಸ್ ಅವರ ಒಂದೇ ಬಗೆಯ (version) ಸಂಗೀತ ಜನರಿಗೆ ಹೆಚ್ಚು ಕಾಲ ಇಷ್ಟವಾಗಲಿಲ್ಲ; ಇದು ‘ಅನುಕರಣೆ’ ‘ಮಿಮಿಕ್ರಿ’ ಎಂದು […]













