ಎಲ್ಲರೂ ವಿಪತ್ತಿನ ನಿವಾರಣೆಗೆ ಉಪಾಯ ತಿಳಿಯಲು ವ್ಯಗ್ರರಾದರು. ಆದರೆ ದೇವರಾಜ ಇಂದ್ರ ಮೌನದಿಂದಿದ್ದ. ಬೆರಳಿನಿಂದ ಕೇವಲ ತನ್ನತ್ತ ಸಂಕೇತ ಮಾಡಿಕೊಂಡ. ಋಷಿ ಗಣಂಗಳಿಗೆ ಅವನ ಭಾವವನ್ನು ತಿಳಿಯಲು ತಡವಾಗಲಿಲ್ಲ. ಈ ಮೂಲಕ ದೇವರಾಜ ಇಂದ್ರ ತಿಳಿಸುವುದೇನೆಂದು ಗ್ರಹಿಸಿದರು: ‘ನೋಡಿ, ನಾನೂ ಕೂಡ ಸಾಮಾನ್ಯ ವ್ಯಕ್ತಿಯಾಗಿದ್ದು ಇಂದ್ರನಾಗಿದ್ದೇನೆ, ಅದು ತಪಸ್ಸಿನ ಕಾರಣದಿಂದಲೇ. ಹಾಗಾಗಿ ನೀವು ನಿಮಗೊದಗಿರುವ ಆಪತ್ತಿನ ಬಿಡುಗಡೆ ಬಯಸುವಿರಾದರೆ ತಪಸ್ಸನ್ನು ಆಶ್ರಯಿಸಿ. ಅದರ ಹೊರತು ಬೇರೆ ಮಾರ್ಗವಿಲ್ಲ.’ ಇದರಿಂದಾಗಿ ಋಷಿಗಳು ಸಾಮೂಹಿಕ ತಪಃಸಾಧನೆಗೆ ಆರಂಭಿಸಿದರು.
ಶ್ರೇಯೋಲಿಪ್ಸುಸ್ತಪಃ ಕುರ್ಯಾತ್ ತಪಸಾ ಕಿಂ ನ ಸಿಧ್ಯತಿ |
ಲೇಖಿರೇ ತಪಸಾ ಭಕ್ತಾಃ ಸ್ವರ್ಗಂ ಚಾಪನ್ನಿಕೃತಿಮ್ ||
ಶುಭವನ್ನು ಬಯಸುವ ವ್ಯಕ್ತಿ ತಪಸ್ಸಿನ ಸಾಧನೆ ಮಾಡಬೇಕು. ತಪಸ್ಸಿನಿಂದ ಸಿದ್ಧಿಸದಿರುವುದೇನು? ಋಷಿಗಳು, ದೇವತೆಗಳು ಮುಂತಾದ ಶ್ರದ್ಧಾವಂತ ಸಾಧಕಭಕ್ತರು ತಪಸ್ಸಿನ ಬಲದಿಂದಲೇ ಸ್ವರ್ಗ ಮತ್ತು ಪವಿತ್ರವಾದ ಋಚ(ಋಕ್)ಗಳ ಮೂಲಕ ತಮ್ಮ ವಿಪತ್ತುಗಳಿಂದ ಪಾರಾದರು. ಪ್ರಸ್ತುತ ವೈದಿಕ ಆಖ್ಯಾನದಲ್ಲಿ ಮಹಿಮಾನ್ವಿತವಾದ ತಪಸ್ಸಿನ ಪ್ರಭಾವ ಅವಲೋಕನೀಯವಾದುದು. ಅದರಲ್ಲಡಗಿರುವ ಶಿಕ್ಷಣ ಗ್ರಹಣೀಯವೂ ಮನನೀಯವೂ ಹೌದು.
ಒಮ್ಮೆ ಋಷಿಗಳ ವಾಸಸ್ಥಳ ಪ್ರದೇಶದಲ್ಲಿ ಅತ್ಯಂತ ಭೀಕರ ಬರಗಾಲ ಬಂತು. ಅನಾವೃಷ್ಟಿಯ ಪ್ರಕೋಪದಿಂದ ಸರ್ವನಾಶದ ದೃಶ್ಯ ಕಾಣಲಾರಂಭಿಸಿತು. ಋಷಿಗಳು ಅತಿ ದುಃಖಿತರಾದರು. ಎಲ್ಲೆಡೆ ಹಾಹಾಕಾರ ತಲೆದೋರಿತು. ಋಷಿಗಳು ಇದರಿಂದ ತ್ರಾಣ(ಚೇತರಿಕೆ) ಹೊಂದಲು ದೇವರಾಜ ಇಂದ್ರನನ್ನು ಸ್ತುತಿಸಿದರು. ಹಾಗಾಗಿ ಅಲ್ಲಿ ಇಂದ್ರ ಪ್ರತ್ಯಕ್ಷನಾದ. ಅವರ ವಿಪತ್ತಿಗಾಗಿ ಹಾರ್ದಿಕ ಸಂವೇದನೆಯನ್ನು ವ್ಯಕ್ತಪಡಿಸುತ್ತಾ – “ಋಷಿಗಳೇ! ಈ ಮಹಾನ್ ಸಂಕಟದ ಸಮಯದಲ್ಲಿ ಇದುವರೆಗೆ ತಾವು ಹೇಗೆ ಜೀವನ ನಿರ್ವಹಿಸಿದಿರಿ?” ಪ್ರಶ್ನಿಸಿದರು.
“ದೇವೇಂದ್ರ! ನಾವು ಬಂಡಿ, ಕೃಷಿ, ಪ್ರಾಣಿಗಳು, ಹರಿಯದಿರುವ ನೀರು, (ಝರಿ, ಸರೋವರ) ಕಾಡು, ಸಮುದ್ರ, ಪರ್ವತ ಮತ್ತು ರಾಜ ಇವುಗಳೆಲ್ಲದರ ಮೂಲಕ ಹೇಗೋ ಇದುವರೆಗೆ ಜೀವನ ಸಾಗಿಸಿದೆವು.” ಇಂದ್ರನನ್ನು ಸ್ತುತಿಸುತ್ತಾ ಅಂಗೀರಸ ಶಿಶುಋಷಿಯು ಉಳಿದ ಋಷಿಗಳ ಮುಂದೆ – ನಾನಾನಂ ಹಾಗೂ ಕಾರುರಹಂ ಮುಂತಾದ ಋಕ್ಕುಗಳಿಂದ ಈ ರಹಸ್ಯವನ್ನು ತಿಳಿಸಿದರು.
ಎಲ್ಲರೂ ವಿಪತ್ತಿನ ನಿವಾರಣೆಗೆ ಉಪಾಯ ತಿಳಿಯಲು ವ್ಯಗ್ರರಾದರು. ಆದರೆ ದೇವರಾಜ ಇಂದ್ರ ಮೌನದಿಂದಿದ್ದ. ಬೆರಳಿನಿಂದ ಕೇವಲ ತನ್ನತ್ತ ಸಂಕೇತ ಮಾಡಿಕೊಂಡ. ಋಷಿ ಗಣಂಗಳಿಗೆ ಅವನ ಭಾವವನ್ನು ತಿಳಿಯಲು ತಡವಾಗಲಿಲ್ಲ. ಈ ಮೂಲಕ ದೇವರಾಜ ಇಂದ್ರ ತಿಳಿಸುವುದೇನೆಂದು ಗ್ರಹಿಸಿದರು: ‘ನೋಡಿ, ನಾನೂ ಕೂಡ ಸಾಮಾನ್ಯ ವ್ಯಕ್ತಿಯಾಗಿದ್ದು ಇಂದ್ರನಾಗಿದ್ದೇನೆ, ಅದು ತಪಸ್ಸಿನ ಕಾರಣದಿಂದಲೇ. ಹಾಗಾಗಿ ತಾವು ನಿಮಗೊದಗಿರುವ ಆಪತ್ತಿನ ಬಿಡುಗಡೆ ಬಯಸುವಿರಾದರೆ ತಪಸ್ಸನ್ನು ಆಶ್ರಯಿಸಿ. ಅದರ ಹೊರತು ಬೇರೆ ಮಾರ್ಗವಿಲ್ಲ.’ ಇದರಿಂದಾಗಿ ಋಷಿಗಳು ಸಾಮೂಹಿಕ ತಪಃಸಾಧನೆಗೆ ಆರಂಭಿಸಿದರು. ಉಗ್ರತಪಸ್ಸಿನ ಫಲವಾಗಿ ಋಷಿಗಳಿಗೆ ಸೋಮ ಸಂಬಂಧಿ (ಪವಮಾನ) ಋಕ್ಕುಗಳು ಪ್ರತ್ಯಕ್ಷ ದರ್ಶನವಾದುವು.
ಮತ್ತೆ ಇಂದ್ರ ಬಂದು ಅವರಿಗೆ: “ಋಷಿಗಳೇ! ತಮ್ಮ ಉಗ್ರ ತಪಸ್ಸಿನ ಫಲವಾಗಿ ಈ ಋಕ್ಕುಗಳು ದರ್ಶನವಾದದ್ದು ಬಹಳ ಅದೃಷ್ಟವೇ ಸರಿ (ಸೌಭಾಗ್ಯ). ನಿಜಕ್ಕೂ ಈ ಋಕ್ಕುಗಳು ಅತ್ಯಂತ ಮಹತ್ತ್ವಪೂರ್ಣವಾದವು. ಇವುಗಳಿಂದ ನಿಮ್ಮೆಲ್ಲ ಆಪತ್ತುಗಳು ಕಳೆದು ಹೋಗುತ್ತವೆ. ಅಲ್ಲದೆ ತಾವು ಸ್ವರ್ಗಕ್ಕೆ ಅರ್ಹರಾಗುತ್ತೀರಿ” ಎಂದರು.
ಪಾವಮಾನಿ ಋಕ್ಕುಗಳ ಸರ್ವಫಲದಾತೃತ್ವ ಶಕ್ತಿಯ ಬಗ್ಗೆ ಬೆಳಕು ಚೆಲ್ಲುತ್ತಾ ಇಂದ್ರ – “ಯಾರು ದ್ವೇಷಾಸೂಯಿಗಳಲ್ಲವೋ, ಯಾರು ಅಧ್ಯವಸಾಯಿ, ಅಧ್ಯೇತಾ, ಸೇವಕ ಮತ್ತು ತಪಸ್ವಿಯೋ ಅಂತವರು ಇದನ್ನು ಪ್ರತಿನಿತ್ಯ ಪಠಿಸುವುದರಿಂದ ತಮ್ಮ ಹತ್ತು ತಲೆಮಾರು ಪೂರ್ವಿಕರು ಮತ್ತು ಪೂರ್ವದವರು ಹಾಗೂ ಹತ್ತು ಉತ್ತರದ ವಂಶಜರೊಂದಿಗೆ ಸ್ವತಃ ಪವಿತ್ರರಾಗುತ್ತಾರೆ. ಮನಸ್ಸು, ಮಾತು, ಶರೀರದಿಂದುಂಟಾಗುವ ಎಲ್ಲ ಪಾಪಗಳು ಕೇವಲ ಈ ಪಾವಮಾನೀ ಋಕ್ಕುಗಳ ಪಠನ ಮಾತ್ರದಿಂದಲೇ ನಾಶಹೊಂದುತ್ತವೆ” ಎಂದ.
ದೇವರಾಜ ಮುಂದುವರಿಸುತ್ತಾ – “ಋಷಿಗಳೇ! ಈ ಪಾವಮಾನೀ ಗಾಯತ್ರಿಗಳು ಉಜ್ವಲ ಹಾಗೂ ಸನಾತನ ಜ್ಯೋತಿರೂಪ ಪರಬ್ರಹ್ಮವು. ಯಾರು ಕೊನೆಗಾಲಕ್ಕೆ ಪ್ರಾಣಾಯಾಮ ಮಾಡುತ್ತಾ ಇವುಗಳನ್ನು ಧ್ಯಾನಿಸುತ್ತಾರೋ, ಜತೆಗೆ ಪಾವಮಾನ ಪಿತೃಗಳು, ದೇವತೆಗಳು ಮತ್ತು ಸರಸ್ವತಿಯ ಧ್ಯಾನಮಾಡುತ್ತಾರೋ ಅವರ ಪಿತೃಗಳ ಬಳಿ ಹಾಲು, ತುಪ್ಪ, ಜೇನು ಮತ್ತು ಜಲದ ಪ್ರವಾಹ ಹರಿಯತೊಡಗುತ್ತದೆ. ಹಾಗಾಗಿ ಈಗ ತಾವು ಕಾಮಧೇನುವಿನಂತಹ ಈ ಋಕ್ಕುಗಳ ಬಲದ ಮೇಲೆ ತಮ್ಮೆಲ್ಲ ಆಪತ್ತುಗಳಿಂದ ಯಾವ ಕಾಲಕ್ಕೂ ಬಿಡುಗಡೆ ಹೊಂದಿ ಅಂತ್ಯದಲ್ಲಿ ಸ್ವರ್ಗವನ್ನು ಪಡೆದು ಕೃತಕೃತ್ಯರಾಗುತ್ತೀರಿ” ಎಂದು ಹೇಳಿದರು.
ಕೆಳಗಿನ ಋಕ್ಕುಗಳಲ್ಲಿ ಈ ಹೇಳಿಕೆಯ ಸ್ಪಷ್ಟ ಸಂಕೇತ ಮಾಡಲ್ಪಟ್ಟಿದೆ:
ನಾನಾನಂ ವಾ ಉ ನೋ ಧಿಯೋ ವ್ರತಾನಿ ಜನಾನಾಮ್ |
ತಕ್ಷಾ ರಿಷ್ಟಂ ರುತಂ ಭಿಷಗ್ ಬ್ರಹ್ಮಾ
ಸುವಂತಮಿಚ್ಛತೀಂದ್ರಾಯೇಂದೋ ಪರಿಸ್ರವ ||
ಅಂದರೆ, ನಮ್ಮಗಳ ಕರ್ಮ ಅಥವಾ ಜೀವನ ವೃತ್ತಿಗಳು ಅನೇಕ ರೀತಿಯಲ್ಲಿ ನಡೆಯುತ್ತವೆ. ಬೇರೆಯವರೂ ಸಹ ಅನೇಕ ರೀತಿಯಲ್ಲಿ ಜೀವನಯಾಪನೆ ಮಾಡುತ್ತಾರೆ. ಬಡಗಿ ಇಲ್ಲವೇ ಶಿಲ್ಪಿ ಮರದ ಕೆತ್ತನೆ ಕೆಲಸದಿಂದ ಬದುಕು ನಡೆಸುತ್ತಾನೆ. ವೈದ್ಯ ರೋಗಿಗೆ ಚಿಕಿತ್ಸೆ ನೀಡುವುದರ ಮೂಲಕ ಜೀವನ ನಿರ್ವಹಿಸುತ್ತಾನೆ. ಬ್ರಾಹ್ಮಣನಾದವನು ಸೋಮಾಭಿಷವ ಮಾಡುವ ಯಜಮಾನನ್ನು ಬಯಸುತ್ತಾನೆ. ಆದ್ದರಿಂದ ಎಲೈ ಸೋಮನೇ! ನೀನು ಇಂದ್ರನಿಗಾಗಿ ಪರಿತಃಕ್ಷಿರಿತನಾಗು.
ಕಾರುರಹಂ ತತೋ ಭಿಷಗುಪಲಪ್ರಕ್ಷಿಣೇ ನನಾ |
ನಾನಾಧಿಯೋ ವಿಸೂಯವ್ಯೋನುಗಾ ಇವ
ತಸ್ಥಿಮೇಂದ್ರಾಯೇಂದೋ ಪರಿಸ್ರವ ||
ನಾನಾದರೋ ಕಾರು ಅರ್ಥಾತ್ ಸ್ತುತಿಕರ್ತೃ.
ಮಗ ಭಿಷಕ್ ಅಂದರೆ ಭೇಷಜಕರ್ತಾ, ಯಜ್ಞದ ಬ್ರಹ್ಮ. ತಾಯಿ ಇಲ್ಲವೇ ದುಹಿತಾ ಕಾಳು ಶುಚಿಗೊಳಿಸಿ ಹಿಟ್ಟಾಗಿ ಬೀಸುತ್ತಾಳೆ.
ನಾನಾ ಕರ್ಮಗಳನ್ನು ಮಾಡುತ್ತಾ ಸಂಪತ್ತಿನ ಕಾಮನೆಯಿಂದ ನಾವು ಅದೇ ರೀತಿಯಲ್ಲಿ ಇಲ್ಲಿದ್ದೇವೆ, ಹಸುಗಳು ಕೊಟ್ಟಿಗೆಯಲ್ಲಿದ್ದಂತೆ. ಆದ್ದರಿಂದ ಹೇ ಸೋಮ! ಇಂದ್ರನಿಗಾಗಿ ನೀನು ಪರಿತಃಕ್ಷರಿತನಾಗು.
ಈ ಎರಡೂ ಋಕ್ಕುಗಳಲ್ಲಿ ಬೃಹದ್ದೇವತೋಕ್ತ ಉಪರ್ಮುಕ್ತ ಕತೆಯಲ್ಲಿ ಬರಗಾಲದಲ್ಲಿ ಋಷಿಗಳ ಮೂಲಕ ನಡೆಯುವ ಜೀವನ ವೃತ್ತಿಗಳ ಸಂಕೇತ ದೊರಕುತ್ತದೆ. ಇವುಗಳಲ್ಲದೆ ಋಗ್ವೇದ ಹಾಗೂ ಬೃಹದ್ದೇವತಾಗಳಲ್ಲಿ ಇನ್ನೂ ಹಲವು ಕತೆಗಳ ಉಲ್ಲೇಖಗಳಿರುವುದು ಕಂಡುಬರುತ್ತದೆ.