
‘ಇಷ್ಟು ದಿನ ನೀನು ಯಾಕೆ ಬರೆಯಲಿಲ್ಲ, ಇಂಥಾ ಟ್ಯಾಲೆಂಟನ್ನ ಅದು ಹೇಗೆ ತಾನೆ ನೀನು ಅಡಗಿಸಿಟ್ಟಿದ್ದೆ, ಅದೆಲ್ಲಿ ಬಚ್ಚಿಟ್ಟುಕೊಂಡಿದ್ದೆ. ಹಾಗೆ ಮಾಡಲು ನಿನಗೆ ಮನಸ್ಸಾದರೂ ಹೇಗೆ ಬಂತು’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಳು. ಅವನೆದೆಯ ಮೇಲಿನ ಜೇಬಿನಿಂದ ಇಣುಕುತ್ತಿದ್ದ ದಪ್ಪನೆಯ ಪೆನ್ನಿನ ಮೇಲೆ ಕಣ್ಣಿಟ್ಟು, ‘ಈಗ ಬರೆ, ನಿಲ್ಲಿಸಬೇಡ, ನಿಲ್ಲಿಸಕೂಡದು’ ಎಂದು ಒತ್ತಾಯಿಸಿದ್ದಳು. ಏನು ಹೇಳಬೇಕೆಂದು ಹೊಳೆಯುತ್ತಲೇ ಇಲ್ಲ ಎನ್ನುವಂತೆ ಅವನ ವರ್ತನೆ. ‘ಏನೋ ಬರೆದೆ’ ಎಂದು ಸಂಕೋಚದಲ್ಲಿ ಹೇಳಿದ. ಮೂರನೆಯ ಭೇಟಿಯಲ್ಲಿ ಅವನ ನಂಬಿಕೆ ಗಳಿಸುವ ಪ್ರಯತ್ನವಾಗಿ, […]