ದ್ರವ್ಯವಿಲ್ಲದ ಬಡವನಾದರೂ ಚಿತ್ರಕನಿಗೆ ಕಲೆಯ ಬಡತನವಿರಲಿಲ್ಲ. ನೋಡಿದವರು, ‘ಆಹಾ, ಎಷ್ಟು ಸೊಗಸಾಗಿದೆ’ ಎಂದು ಮೆಚ್ಚಿಕೊಳ್ಳುವಂತೆ ಚಿತ್ರಗಳನ್ನು ಬರೆಯುತ್ತಿದ್ದ. ಅವರು ಕೊಟ್ಟ ಧಾನ್ಯವೋ, ಬಟ್ಟೆಯೋ, ಒಂದೆರಡು ನಾಣ್ಯಗಳೋ ಸಂಸಾರದ ಹೊಟ್ಟೆಗೆ ಸಾಕಾಗುತ್ತಿತ್ತು. ಅವನಿಗೆ ಚಿತ್ರ ಬರೆಯುವುದು ಬಿಟ್ಟು ಬೇರೆ ಏನೂ ಗೊತ್ತಿರಲಿಲ್ಲ. ಚಿತ್ರಗಾರನಾಗಿ ತನ್ನ ಯೋಗ್ಯತೆಯ ಕಲ್ಪನೆಯೂ ಅವನಿಗಿರಲಿಲ್ಲ. ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯ ತಿಳಿವು ಇಲ್ಲದಿದ್ದರೆ ಅಹಂಕಾರ ಇರುವುದಿಲ್ಲ. ಅಂತೆಯೇ ಅದಕ್ಕೆ ಬೆಲೆಯೂ ಬರುವುದಿಲ್ಲ. ತಾನು ಪ್ರತಿಭಾಶಾಲಿ ಎಂದು ತಿಳಿದುಕೊಂಡವನು ಅದಕ್ಕೆ ಲೋಕದ ಜನರಿಂದ ಮನ್ನಣೆಯನ್ನು ಅಪೇಕ್ಷಿಸುತ್ತಾನೆ. ತನ್ನ […]













