ಉತ್ಥಾನ ಕಥಾ ಸ್ಪರ್ಧೆ 2024
Month : July-2024 Episode : Author :
Month : July-2024 Episode : Author :
Month : July-2024 Episode : Author :
ಬೆಂಗಳೂರು, ಜುಲೈ 30, 2024: ಉತ್ಥಾನ ಮಾಸಪತ್ರಿಕೆಯು ಕಳೆದ 5 ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ 2024ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಕಥೆಯು 3,000 ಪದಮಿತಿಯಲ್ಲಿ ಇರಬೇಕು. ಮತ್ತು ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು. ಕಥೆ ತಲುಪಲು ಕೊನೆಯ ದಿನಾಂಕ: ಅಕ್ಟೋಬರ್ 10, 2024 ಬಹುಮಾನಗಳು: ಕಥಾ ಸ್ಪರ್ಧೆಯ ನಿಯಮಗಳು: ಕಥೆಗಳು ತಲುಪಲು ಕೊನೆಯ ದಿನಾಂಕ: ಅಕ್ಟೋಬರ್ 10, 2024 […]
Month : July-2024 Episode : Author : ಅನಿಲ್ಕುಮಾರ್ ಮೊಳಹಳ್ಳಿ
ಭಾರತದ ಚೆಸ್ ಅಂಗಳದಲ್ಲಿ ಕಳೆದ ಒಂದು ದಶಕದಿಂದ ಅದ್ಭುತವಾದ ಪ್ರತಿಭೆಗಳು ಹೊರಹೊಮ್ಮಿವೆ. ಜೊತೆಜೊತೆಗೆ ದೇಶದಾದ್ಯಂತ ಹಿಂದೆಂದೂ ಕಾಣದ ಅತ್ಯುನ್ನತ ಚೆಸ್ ಪರಿಸರ ನಿರ್ಮಾಣಗೊಂಡಿದೆ. ಇದರ ಕಾರಣಗಳ ಕುರಿತು ಮಾತನಾಡಿದ ವಿಶ್ವನಾಥನ್ ಆನಂದ್ ಅವರು ಬೊಟ್ಟು ಮಾಡುವುದು ಹಿರಿಯ ಆಟಗಾರರನ್ನು. “ನನ್ನ ನಂತರದ ಮೊದಲ ತಲೆಮಾರಿನ ಆಟಗಾರರು ತಮ್ಮದೇ ಆದ ಯಶಸ್ವಿ ವೃತ್ತಿಜೀವನವನ್ನು ಮುಂದುವರಿಸಿದರು – ಅವರು ಸಾರ್ವಜನಿಕ ವಲಯದ ಉದ್ಯೋಗಗಳನ್ನು ಪಡೆದರು ಮತ್ತು ತಮ್ಮವೇ ಆದ ತರಬೇತಿ ಕೇಂದ್ರಗಳನ್ನೂ, ಅಕಾಡೆಮಿಗಳನ್ನೂ ಪ್ರಾರಂಭಿಸಿದರು. ಇದರಿಂದಾಗಿ ಮುಂದೆ ಬರುವ ಪೀಳಿಗೆಯವರಿಗೆ […]
Month : July-2024 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಸತ್ಪುರುಷರುಗಳು ಎಂದಿಗೂ ದೈನ್ಯತೆಯಿಂದ ವರ್ತಿಸುವುದಿಲ್ಲ ಹಾಗೂ ಅವರಿಗೆ ಭಯದ ಲವಲೇಶವೂ ಇರುವುದಿಲ್ಲ. ಅವರಿಗೆ ತಮ್ಮ ಶಿಷ್ಯನು ಯಾವ ಆಧ್ಯಾತ್ಮಿಕ ಭೂಮಿಕೆಯಲ್ಲಿರುತ್ತಾನೆ ಎಂಬುದು ತಿಳಿದಿರುತ್ತದೆ. ಸತ್ಪುರುಷರ ಹತ್ತಿರ ಯಾವ ಸಮಾಧಾನವಿರುತ್ತದೆಯೊ ಅದು ನಮಗೆ ಪ್ರಾಪ್ತವಾದದ್ದಾದರೆ ಅಥವಾ ಅದರ ಅಭಿರುಚಿ ನಿರ್ಮಾಣವಾದದ್ದಾದರೆ ನಮಗೆ ಸತ್ಪುರುಷರ ನಿಜವಾದ ಅನುಭವ ಬಂದಂತೆ ಎಂದು ತಿಳಿಯಬೇಕು. ಔಷಧದಲ್ಲಿ ಏನು ಇರುತ್ತದೆ ಎಂಬುದು ತಿಳಿಯದಿದ್ದರೂ ರೋಗಿಯು ಅದನ್ನು ಶ್ರದ್ಧೆಯಿಂದ ತೆಗೆದುಕೊಂಡದ್ದಾದರೆ ಗುಣವು ಬಂದೇಬರುತ್ತದೆ. ಅಥವಾ ಅಡುಗೆ ಮಾಡಲು ಬರದೇ ಇರುವ ಮನುಷ್ಯನಿಗೂ ಕೂಡ ಅನ್ನದ ರುಚಿಯು […]
Month : July-2024 Episode : Author : ಆರತಿ ಪಟ್ರಮೆ
ಮನೆಯಲ್ಲಿ ಅಮ್ಮನೆಂದರೆ ಎಲ್ಲರಿಗೂ ಇಷ್ಟವೇ ಇರುತ್ತದೆ, ಎಲ್ಲಿಯವರೆಗೆಂದರೆ ಅವಳು ಖುಷಿಖುಷಿಯಾಗಿ ತಮ್ಮಿಷ್ಟಗಳನ್ನು ಪೂರೈಸಿಕೊಡುವವರೆಗೆ. ಒಂದೊಮ್ಮೆ ಅವಳು ದಣಿದಳೋ, ಇಲ್ಲಿಯವರೆಗೆ ಅವಳು ತಮಗಾಗಿ ಮಾಡಿದ್ದೇನೆಂಬುದು ಬಹಳ ಸುಲಭವಾಗಿ ಮರೆತು ಹೋಗುತ್ತದೆ. ಸ್ಪಾನಿಷ್ ಬರಹಗಾರ ಲೂಯಿಸ್ ಬರ್ಹಸ್ ಹೇಳಿದ ಹಾಗೆ ಸೂರ್ಯಚಂದ್ರರನ್ನೋ ಋತುಗಳನ್ನೋ ನಾವು ಹೇಗೆ ಕಾಣುತ್ತೇವೆಯೇ ಅಂತೆಯೇ ಅಮ್ಮನನ್ನೂ ಸುಲಭವಾಗಿ, ಹಗುರವಾಗಿ ಕಾಣುತ್ತೇವೆ. ನಮ್ಮ ಬದುಕಿನಲ್ಲಿ ಅವಳ ಮೌಲ್ಯ ಏನಿತ್ತೆಂಬುದು ನಮಗೆ ಅರಿವಾಗುವುದು ಅವಳನ್ನು ಶಾಶ್ವತವಾಗಿ ಕಳೆದುಕೊಂಡಾಗಲೇ. ಅವಳಿದ್ದಾಗ ಅವಳ ನೋವಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡರೆ ಅವಳು ಇನ್ನಿಲ್ಲವಾದ […]
Month : July-2024 Episode : Author : ವಿಘ್ನೇಶ್ವರ ಉಡುಪ
ಮೊದಲಿನಿಂದಲೂ ದಿನಚರಿಯನ್ನು ಬರೆಯುವ ಅಭ್ಯಾಸವಿರುವ ನನಗೆ ಇನ್ನೊಬ್ಬರ ದಿನಚರಿಯನ್ನು ಓದಬಾರದೆನ್ನುವ ಒಂದು ಮನೋಭಾವ ಈಗಲೂ ಇದೆ. ಇದೇ ಕಾರಣಕ್ಕಾಗಿ ನನಗೆ ಯಾರದೋ ಖಾಸಗಿ ವಿಷಯಗಳನ್ನು ಆಡಿಕೊಳ್ಳುವುದು, ಮೂಗುತೂರಿಸುವುದು ಹಿಡಿಸದ ಸಂಗತಿ. ಹೀಗಿರುವಾಗ ಒಬ್ಬ ಶಿಕ್ಷಕಿಯ ದಿನಚರಿಗಳನ್ನು ಓದುವುದು ಎಂದರೆ? ಅಪರಾಧವೋ ಅಥವಾ ಕಾತುರವೋ ತಿಳಿಯಲಿಲ್ಲ! ಆದರೂ ಅವರೇ ಓದು ಪರವಾಗಿಲ್ಲ ಎಂದು ತಾವಾಗಿಯೇ ಲೋಕಕ್ಕೆ ತೆರೆದಿಟ್ಟಾಗ, ಹಲವು ದೃಷ್ಟಿಕೋನಗಳಿಂದ ಓದುವುದು ಉಚಿತವೆನಿಸಿತು. ಹಾಗಾಗಿಯೇ ಲೇಖಕಿ, ಶಿಕ್ಷಕಿ, ಕವಯಿತ್ರಿ, ಗೃಹಿಣಿ ಇತ್ಯಾದಿ ಅಭಿಧಾನಯುಕ್ತ ಮೇದಿನಿಯವರ ‘ಮಿಸ್ಸಿನ ಡೈರಿ’ಯ ಪ್ರತಿಯನ್ನು […]
Month : July-2024 Episode : ಬೇತಾಳ ಕಥೆಗಳು -12 Author : ಡಾ. ಎಚ್.ಆರ್. ವಿಶ್ವಾಸ
“ಮಹಾರಾಜ! ನನಗೊಂದು ಶಾಪವಿತ್ತು. ನನ್ನ ತಂದೆಯಾದ ವಿದ್ಯಾಧರ ರಾಜನಿಗೆ ನಾನೆಂದರೆ ತುಂಬ ಪ್ರೀತಿ. ನನ್ನನ್ನು ಬಿಟ್ಟು ಅವನು ಊಟ ಮಾಡುತ್ತಿರಲಿಲ್ಲ. ಒಂದು ಚತುರ್ದಶಿಯಂದು ನಾನು ಇಲ್ಲಿಗೆ ಬಂದವಳು ಗೌರೀಪೂಜೆ ಮಾಡುತ್ತಾ ತುಂಬ ಹೊತ್ತಿನವರೆಗೂ ಇಲ್ಲಿಯೇ ಉಳಿದುಬಿಟ್ಟೆನು. ತಂದೆ ನನ್ನನ್ನು ಕಾದು ಕಾದು, ಊಟ ಮಾಡದೆ ಉಪವಾಸವಿದ್ದನು. ನಾನು ಹೋದಾಗ ಸಿಟ್ಟು ಮಾಡಿಕೊಂಡು – “ಹಸಿವೆ ನನ್ನನ್ನು ತಿಂದುಹಾಕಿತು. ಹಾಗೆಯೇ ರಾಕ್ಷಸನೊಬ್ಬನು ಪ್ರತಿ ಚತುರ್ದಶಿ ಮತ್ತು ಅಷ್ಟಮಿ ತಿಥಿಗಳಂದು ಶಿವಪೂಜೆಗೆ ಹೊರಟ ನಿನ್ನನ್ನು ತಿನ್ನುವನು. ನೀನು ಅವನ ಹೃದಯವನ್ನು […]
Month : July-2024 Episode : Author : ನಾರಾಯಣ ಶೇವಿರೆ
ಮಗುವಿನ ಚೇಷ್ಟೆ, ನಗು, ಮಾತು.. ಇವೆಲ್ಲವುಗಳ ಹಿಂದೆ ಇದ್ದುದು ಮುಗ್ಧತೆ. ಇನ್ನಿಲ್ಲದ ಮುಗ್ಧತೆ. ಇನ್ನಾರಲ್ಲೂ ಕಾಣದ ಮುಗ್ಧತೆ. ಇವೆಲ್ಲವೂ ಆಕೆಯ ಅಕ್ಕನಲ್ಲಿಯೂ ಇತ್ತು. ಅವೆಲ್ಲಕ್ಕಿಂತ ಹೆಚ್ಚಾಗಿ ಆಕೆ ಒಡಹುಟ್ಟಿದವಳು, ಪ್ರೀತಿಸುವವಳು, ಕಳಕಳಿಯಿರುವವಳು, ಎಲ್ಲವನ್ನೂ ಹೇಳಿಕೊಳ್ಳುವವಳು, ಹೇಳಿದ್ದನ್ನು ಕೇಳಿಸಿಕೊಳ್ಳುವವಳು.. ಇವ್ಯಾವ ಗುಣವೂ ಆ ಮಗುವಿನಲ್ಲಿಲ್ಲ. ಆದರೆ ಅದರಲ್ಲಿರುವ ಮುಗ್ಧತೆಯೊಂದೇ ಸಾಕು; ಇವೆಲ್ಲವನ್ನೂ ಸರಿದೂಗಿಸಲು, ಇವೆಲ್ಲಕ್ಕಿಂತ ಹೆಚ್ಚೆನಿಸಲು! ಒಮ್ಮೆ ಒಂದು ರೈಲು ಪ್ರಯಾಣದಲ್ಲಿ ಸಂಚರಿಸುವಾಗ ಎದುರಿನ ಆಸನಗಳಲ್ಲಿ ಮೂರು ಮಂದಿ ಮಹಿಳೆಯರು ಬಂದು ಕುಳಿತುಕೊಂಡರು. ಎಲ್ಲ ನಿಲ್ದಾಣಗಳಲ್ಲಿ ನಿಲ್ಲುವ ಪ್ರಯಾಣಿಕ […]
Month : July-2024 Episode : ಅಗ್ನಿಜಾಲ ಭಾಗ-4 Author : ರಾಧಾಕೃಷ್ಣ ಕಲ್ಚಾರ್
ಚಿತ್ರ ಬರೆಯುವ ಕೆಲಸ ಮುಗಿಸಿ, ಬಿಡದಿಗೆ ಬಂದಾಗ ಆ ಓಟೆಯ ನೆನಪು ಬಂತು. ಅದನ್ನು ತೆಗೆದು ಪರಿಶೀಲಿಸಿದ. ಅದು ಬರೇ ಓಟೆಯಾಗಿರಲಿಲ್ಲ. ಅದರ ಒಳಗೊಂದು ಓಲೆಯೂ ಇತ್ತು. ಅದರಲ್ಲಿ ಗೂಢವಾದ ಅಕ್ಷರಗಳಲ್ಲಿ ಏನೋ ಬರೆದಿತ್ತು. ಅದಾದರೂ ಚಿತ್ರಕನ ಕುತೂಹಲಕ್ಕೆ ಕಾರಣವಾಗುತ್ತಿರಲಿಲ್ಲ. ಅದರಲ್ಲಿ ಸುಂದರವಾದ ನಕ್ಷೆಗಳಿದ್ದವು. ಒಂದು ಭವ್ಯ ಸೌಧದ ಚಿತ್ರವನ್ನೂ ಬರೆದಿತ್ತು. ಮತ್ತೆಮತ್ತೆ ನೋಡಿದಾಗ ಅದು ವಾರಣಾವತದ ಅರಮನೆಯ ಚಿತ್ರವೆಂದು ಸ್ಫುಟವಾಯಿತು. ಭಟನಾಯಕ ಇನ್ನೇನು ಹೊರಡಬೇಕು, ಅಷ್ಟರಲ್ಲಿ ಕುಳ್ಳ ಅವನನ್ನು ಒಳಗೆ ಕರೆದ. “ಏನು ಪ್ರಭೋ” “ಭಟನಾಯಕ, […]
Month : July-2024 Episode : ಬಹುಮಾನಿತ ಕಥೆ Author : ಶ್ರೀಲೋಲ ಸೋಮಯಾಜಿ
ಬಿಟ್ಟುಬಂದ ದೇಶಕ್ಕಿಂತ ಇಲ್ಲಿಯ ಬದುಕೇ ತನಗೆ ಉತ್ತಮವಾಗಿದೆಯೆಂದುಕೊಂಡ ರಂಗನಾಥ ಅಲ್ಲಿನ ಪೌರತ್ವವನ್ನು ಸ್ವೀಕರಿಸಿದ. ಪ್ರಾಮಾಣಿಕತೆ, ತನ್ನ ಕಾರ್ಯದಲ್ಲಿ ತೋರಿದ ನಾಯಕತ್ವಗುಣ ಹಾಗೂ ತನ್ನ ಸಂವಹನ ಶೈಲಿಗಳಿಂದಾಗಿ ಧನ್ಯಾಡಿಯ ರಂಗನಾಥ ಇಂಗ್ಲೆಂಡಿನಲ್ಲಿ ಮಿಸ್ಟರ್ ರಂಗನಾದ. ಅಷ್ಟಲ್ಲದೆ ಮುಂದೆ ನಡೆದ ಲ್ಯಾಂಕಶೈರ್ ಕೌಂಟಿಯ ಚುನಾವಣೆಯಲ್ಲಿ ಕೌನ್ಸಿಲರ್ ಆಗಿ ಚುನಾಯಿಸಲ್ಪಟ್ಟ. ಈ ವಿಷಯ ಇಂಗ್ಲೆಂಡಿನ ಪತ್ರಿಕೆಗಳಲ್ಲದೆ, ರಂಗನಾಥನ ಹುಟ್ಟೂರು ಧನ್ಯಾಡಿಯ ಸಂಜೆ ಪತ್ರಿಕೆಯಲ್ಲೂ ಸಹ ಅವನ ಭಾವಚಿತ್ರದ ಸಹಿತ ಪ್ರಕಟವಾಗಿ ಊರಿನ ಸಮಸ್ತ ಜನತೆ ಈ ವಿಷಯವನ್ನು ಕೇಳಿ ಹೊಂಪುಳಿಹೋದರು. ಮುಂದಿನ […]