
ಅಬಿಗೇಲಳ ಎಡಗೈ ಕೋಟಿನ ಬೆಚ್ಚನೆಯ ಜೇಬಿನಿಂದ ಹೊರಬಂದಿತು. ಕುಳಿರ್ಗಾಳಿಗೆ ಒಡ್ಡಿದ ಕೈಯಲ್ಲಿ ಟೆಸ್ಲಾದ ಕೀ ಇತ್ತು. ಅದನ್ನು ಸಮುದ್ರಕ್ಕೆ ಎಸೆದುಬಿಟ್ಟರೆ ರಾಬರ್ಟನ ಕಡೆಯ ವಸ್ತುವೂ ತನ್ನಿಂದ ದೂರವಾದಂತೆ. ಅಂಗೈ ಸಡಿಲಿಸಿ ಇನ್ನೇನು ಕೀಯನ್ನು ಸದ್ದಾಗದಂತೆ ನೀರಿಗಿಳಿಬಿಡಬೇಕು, ಅಷ್ಟರಲ್ಲಿ ಗುಡ್ ಈವನಿಂಗ್ ಮೇಡಂ ಎಂಬ ಧ್ವನಿ ಕೇಳಿಸಿತು. ಎಡಗೈ ಮತ್ತೆ ಬೆಚ್ಚನೆಯ ಜೇಬನ್ನು ಸೇರಿತು. ನಾನಿನ್ನು ಹೊರಡಲೆ ಅಬಿಗೇಲ್? ಇನ್ನೇನಾದರೂ ಕೆಲಸವಿದೆಯೆ? ಕೇಳಿದಳು ಆಪ್ತಸಹಾಯಕಿ ಅಮಂದಾ. ಒಂದು ಸಣ್ಣ ಕೆಲಸ – ನಾಳೆ ಸಂಜೆ ರಾಬರ್ಟನಿಗೆ ಬರಹೇಳು. ನಿನ್ನ […]