ಗಾಂಧಿಯವರು ತಮ್ಮ ಆರ್ಥಿಕ ನಿಲವುಗಳನ್ನು ಶೈಕ್ಷಣಿಕತಜ್ಞರ ಭಾಷೆಯಲ್ಲಿ ತಿಳಿಸದೆ, ಸಾಮಾನ್ಯಜನರ ಭಾಷೆಯಲ್ಲಿ ಹೇಳಿದರು. ಆದ್ದರಿಂದ ಇತರ ಆರ್ಥಿಕತಜ್ಞರು ಗಾಂಧಿಯವರನ್ನು ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ಎಂದು ಪರಿಗಣಿಸಲು ಸಾಧ್ಯವಾಗದೆ ಹೋಯಿತು.
– .ಎಫ್. ಶುಮಾಕರ್, ಖ್ಯಾತ ಜರ್ಮನ್ ಅರ್ಥಶಾಸ್ತ್ರಜ್ಞ
ಗಾಂಧಿ ದೃಷ್ಟಿಯಲ್ಲಿ ವಿವೇಕಯುಕ್ತತೆ
ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರ ವಿವೇಕಯುಕ್ತತೆ(Rationality)ಯ ಪರಿಕಲ್ಪನೆ ಅವರ ಅರ್ಥಶಾಸ್ತ್ರದ ಮೂಲಚಿಂತನೆಗೆ ಅನುಗುಣವಾಗಿದೆ. ಅದರಂತೆ ಅನುಭೋಗದ ಸಿದ್ಧಾಂತ (Theory of Consumption) ಮತ್ತು ಉತ್ಪಾದನ ಸಿದ್ಧಾಂತ (Theory of Production)ಗಳಲ್ಲಿ ವಿವೇಕಯುತ ನಡವಳಿಕೆಯುಳ್ಳ ಅನುಭೋಗಿ (Consumer) ಮತ್ತು ಉತ್ಪಾದಕ (Producer)ನ ವಿವರವಾದ ಅಭ್ಯಾಸವನ್ನು ಮಾಡುತ್ತೇವೆ. ಒಬ್ಬ ಅನುಭೋಗಿ ತನ್ನ ಮಿತವಾದ ಆದಾಯದಿಂದ ಯಾವ ರೀತಿಯಲ್ಲಿ ಅತಿಹೆಚ್ಚಿನ ಸಂತೃಪ್ತಿಯನ್ನು ಪಡೆಯುತ್ತಾನೆ ಹಾಗೂ ಒಬ್ಬ ಉತ್ಪಾದಕ ಮಿತವಾದ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿ ಹೇಗೆ ಅತಿಹೆಚ್ಚಿನ ಉತ್ಪಾದನೆಯನ್ನು ಅತಿಕಡಮೆ ವೆಚ್ಚದಲ್ಲಿ ಮಾಡಿ ಅತಿಹೆಚ್ಚಿನ ಲಾಭವನ್ನು ಗಳಿಸುತ್ತಾನೆ ಎಂಬುದನ್ನು ಅಧ್ಯಯನ ಮಾಡುತ್ತೇವೆ.
ವಿವೇಕಯುತ ನಡವಳಿಕೆಗೆ ಪಾಶ್ಚಾತ್ಯ ಪಂಡಿತರು ಈ ರೀತಿಯ ವ್ಯಾಖ್ಯಾನಗಳನ್ನು ನೀಡಿದ್ದಾರೆ: ಒಬ್ಬ ಮನುಷ್ಯ ವಿವಿಧರೀತಿಯ ಪರಿಸ್ಥಿತಿಗಳಲ್ಲಿ ಹೇಗೆ ಸಮಂಜಸವಾದ ನಡವಳಿಕೆಯನ್ನು ಪ್ರದರ್ಶಿಸುತ್ತಾನೆ (Latis); ಹೇಗೆ ಲೆಕ್ಕಾಚಾರದ ಪ್ರಕಾರ ನಡೆದುಕೊಳ್ಳುತ್ತಾನೆ Harvey Leibenstein); ತನ್ನ ಆರ್ಥಿಕ ಆಸಕ್ತಿಗಳನ್ನು ಕಾಪಾಡಲು ಹೇಗೆ ಸರಿಯಾದ ಮಾರ್ಗದಲ್ಲಿ ನಡೆಯುತ್ತಾನೆ (Joan Robbins); ತನ್ನ ಚಿಂತನಶಕ್ತಿಯ ಆಧಾರದ ಮೇಲೆ ತಾರ್ಕಿಕವಾಗಿ ಯೋಚಿಸಿ ಹೇಗೆ ಸಮಂಜಸವಾಗಿ ನಡೆದುಕೊಳ್ಳುತ್ತಾನೆ (Chapman); ಅಪರಿಮಿತ ಬಯಕೆಗಳ ಮಧ್ಯೆ ಮಿತವಾದ ಸಂಪನ್ಮೂಲಗಳ ಜೊತೆಗೆ ಆಯ್ಕೆಯ ಸಮಸ್ಯೆ ಬಂದಾಗ ಮನು? ಹೇಗೆ ನಡೆದುಕೊಳ್ಳುತ್ತಾನೆ (Popper) – ಎಂದು. ಈ ಪ್ರವೃತ್ತಿಗೆ ’ಶೂನ್ಯವಿಧಾನ’ (Zero Method); ಎಂದು Popper ಕರೆದಿದ್ದಾನೆ.
ಮಿತವಾದ ಸಂಪನ್ಮೂಲಗಳನ್ನು ಉಪಯೋಗಿಸಿ ಅತ್ಯಂತ ಹೆಚ್ಚಿನ ಪ್ರತಿಫಲವನ್ನು ಪಡೆಯಲು ಸ್ಥಿರತೆಯಿಂದ ಕೂಡಿದ ನಡವಳಿಕೆಗೆ ವಿವೇಕಯುತ ನಡವಳಿಕೆ ಎಂದು ಕರೆಯುತ್ತಾರೆ (Harvey Leibenstein). ಮುಂದೆ ಈ ರೀತಿ ಆಗಬಹುದೆಂದು ಭವಿಷ್ಯ ನುಡಿಯುವ ಮಾದರಿ ಎಂದೂ (Hollis and Nell) ಹೇಳುತ್ತಾರೆ. ಅಂತಿಮ ಗುರಿ ಅಥವಾ ಉದ್ದೇಶಗಳ ಮಹತ್ತ್ವ, ಅವು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರಿಗಣಿಸದೆ ಹಾಗೂ ಅವುಗಳನ್ನು ಹೇಗೆ ಕಾರ್ಯಗತ ಮಾಡಲಾಗುತ್ತದೆ ಎಂಬುದರ ಕಡೆಗೆ ಮಹತ್ತ್ವ ಕೊಡದೆ ಅವುಗಳನ್ನು ಸಾಧಿಸಲು ಯಾವ ರೀತಿಯ ಸಾಧನಪರಿಕರಗಳನ್ನು ಬಳಸುತ್ತಿದ್ದೇವೆ ಎಂಬುದರ ಬಗ್ಗೆ ಮಾತ್ರ ಹೆಚ್ಚಿನ ಪ್ರಾಧಾನ್ಯ ನೀಡುತ್ತದೆ (Weber).
ಮಿತವ್ಯಯವನ್ನು ಸಾಧಿಸಲು ವಿವೇಕಯುತವಾದ ನಡವಳಿಕೆಯ ಅಗತ್ಯವಿದೆ. ಸಂಪನ್ಮೂಲಗಳು ಮಿತವಾದ ಕಾರಣ ಸಹಜವಾಗಿ ’ವಿವೇಕಯುಕ್ತ ಮಾನವ’ Rational man) ತನ್ನ ಪ್ರತಿಯೊಂದು ಆರ್ಥಿಕ ಚಟುವಟಿಕೆಯಲ್ಲಿ ವೆಚ್ಚಕ್ಕಿಂತ ಲಾಭ ಹೆಚ್ಚಾಗಿರುವಂತೆ ನೋಡಿಕೊಳ್ಳುತ್ತಾನೆ. ಈ ರೀತಿಯ ನಡವಳಿಕೆಯಿಂದ ಅವನು ಇನ್ನೂ ಹೆಚ್ಚು ’ವೆಚ್ಚ ಕಡಿತದಲ್ಲಿ ದಕ್ಷತೆ’ಯನ್ನು ಸಾಧಿಸುತ್ತಾನೆ.
’ವಿವೇಕಯುತ ಆಯ್ಕೆ’ ಎಂದರೆ (Rational Choice) ಸೂಕ್ತವಾದ ಆಯ್ಕೆ ಮಾಡುವುದು. ಇಲ್ಲಿ ಮನುಷ್ಯನ ಕಾರ್ಯದ ರೀತಿ ಮುಖ್ಯವಲ್ಲ; ಅದರ ಪರಿಣಾಮ ಮುಖ್ಯ. ಅವನ ಪ್ರಯತ್ನದ ಪರಿಣಾಮ ಮತ್ತು ಅದರ ಫಲವನ್ನು ನೋಡಿ ಉಳಿದದ್ದನ್ನು ನಿರ್ಧಾರ ಮಾಡಬೇಕಾಗುತ್ತದೆ (A.P.
Lerner).
ಹೀಗೆ ಕೆಲವು ಆರ್ಥಿಕತಜ್ಞರು ಅಂತಿಮ ಉದ್ದೇಶದ ಕಡೆಗೆ, ಇನ್ನು ಕೆಲವರು ಅದನ್ನು ತಲಪಲು ಉಪಯೋಗಿಸುವ ಸಾಧನಗಳ ಬಗ್ಗೆ ಪ್ರಾಮುಖ್ಯ ನೀಡುತ್ತಾರೆ. ವಿವೇಕಯುತ ನಡವಳಿಕೆಯ ಪರಿಕಲ್ಪನೆಯು ಅಪರಿಮಿತ ಆಸೆಗಳು, ಮಿತವಾದ ಸಂಪನ್ಮೂಲಗಳು, ಅವುಗಳನ್ನು ಪರ್ಯಾಯ ಉಪಯೋಗಗಳಿಗೆ ಬಳಕೆಮಾಡುವುದು ಮತ್ತು ಅತಿ ಹೆಚ್ಚಿನ ಆರ್ಥಿಕ ಲಾಭವನ್ನು ಗಳಿಸುವುದರ ಕಡೆಗೆ ತನ್ನ ಗಮನವನ್ನು ಹರಿಸಿದೆ.
ವಿವೇಕಯುಕ್ತತೆಯ ಪರಿಕಲ್ಪನೆ ಗಾಂಧಿಯವರ ಆರ್ಥಿಕವಿಚಾರಧಾರೆಯಲ್ಲಿ ಸಂಪೂರ್ಣವಾಗಿ ಭಿನ್ನವಾಗಿದೆ. ಸಾಧನಪರಿಕರಗಳಿಗೆ ಹೆಚ್ಚಿನ ಪ್ರಮುಖ್ಯ ನೀಡದೆ, ಅವರು ಮನುಷ್ಯನ ಶರೀರ, ಮನಸ್ಸು ಮತ್ತು ಹೃದಯದ ಭಾವನೆಗಳ ಸಮರಸದ ಚಟುವಟಿಕೆಗಳಿಗೆ ಮಹತ್ತ್ವ ನೀಡಿದ್ದಾರೆ. ಅವರ ದೃಷ್ಟಿಯಲ್ಲಿ ವಿವೇಕಯುತ ನಡವಳಿಕೆ ಮನುಷ್ಯನ ಆತ್ಮಸಾಕ್ಷಿಯ ಮೇಲೆ ನಿಂತಿದೆ. ಆತ್ಮಸಾಕ್ಷಿಯನ್ನು ’ಅಂತರಂಗದ ಧ್ವನಿ’ ಅಥವಾ ’ಒಳಗಿನ ಧ್ವನಿ’ (Inner Voice) ಎಂದು ಅವರು ಕರೆದಿದ್ದಾರೆ. ಈ ಒಂದು ಕಲ್ಪನೆ ನಿಜವಾಗಿಯೂ ದೋಷದರ್ಶಿಯಾಗಿದೆ. ಮನು? ತನ್ನ ಇಂದಿನ ಯಾವುದೇ ಕಾರ್ಯದ ಪರಿಣಾಮವನ್ನು ಅವಲೋಕನ ಮಾಡದಿದ್ದರೂ ವಿಮರ್ಶಾತ್ಮಕ ದೃಷ್ಟಿಯಿಂದ ಮುಂದಿನ ಪರಿಣಾಮವನ್ನು ಗಮನಿಸಿ ಅದಕ್ಕೆ ತಕ್ಕಂತೆ ಅವನು ಅಂತಃಸಾಕ್ಷಿಯ ಮೂಲಕ ಮೌಲ್ಯಗಳನ್ನು ಪರಿವರ್ತನೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಗುರಿ ಮುಟ್ಟಲು ಸತ್ಯದ ಮಾರ್ಗದಲ್ಲಿ ನಡೆಯುವಾಗ ಆಗುವಂತಹ ತಪ್ಪುಗಳನ್ನು ಸರಿಪಡಿಸಲು ಒಂದು ಹೆಜ್ಜೆ ಮುಂದೆ ಹೋಗುವ ಅವಕಾಶ ಸಿಗುತ್ತದೆ – (Gandhi 1958, 11-4 -1928, p. 22).
ವಿವೇಕಯುಕ್ತ ನಡವಳಿಕೆಯನ್ನು ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ತುಷ್ಟಿಗುಣ ಚಟುವಟಿಕೆಯ ಕಾರ್ಯದಲ್ಲಿ ಪ್ರತಿಯೊಬ್ಬರೂ ಪ್ರತಿಯೊಂದು ವಸ್ತುವೂ ಮನುಷ್ಯನ ಕಲ್ಯಾಣವನ್ನು ಸಾಧಿಸುವಲ್ಲಿ ಸಾಧನವಾಗುತ್ತದೆ ಎನ್ನುವ ಕಲ್ಪನೆಗೆ ಗಾಂಧಿಯವರ ವಿಚಾರಧಾರೆಯಲ್ಲಿ ಜಾಗವಿಲ್ಲ. ಸಾಂಪ್ರದಾಯಿಕ ಚಿಂತನೆಯ ಪ್ರಕಾರ ಸಾಧನ ಮತ್ತು ಗುರಿಗಳ ಅರ್ಥಶಾಸ್ತ್ರದಲ್ಲಿ ’ಮನುಷ್ಯ’ನಿಗೆ ಪ್ರಮುಖಸ್ಥಾನ ಎನ್ನುವ ಮಾತಿಗೆ ವಿರೋಧಾಭಾಸವಾಗುತ್ತದೆ ಮತ್ತು ಸತ್ಯಕ್ಕೆ ದೂರವಾಗುತ್ತದೆ. ಇದು ನಿಜವಾದ ವಿವೇಕಯುಕ್ತತೆ ಆಗುವ ಬದಲಿಗೆ ವಿವೇಕಹೀನವಾಗುತ್ತದೆ. ಇಂತಹ ಒಂದು ಕಲ್ಪನೆ ಯಾಂತ್ರೀಕರಣಕ್ಕೆ, ಸಾಮಾಜಿಕ ಧ್ರುವೀಕರಣಕ್ಕೆ ಮತ್ತು ಹಿಂಸೆಗೆ ದಾರಿಮಾಡಿಕೊಡುತ್ತದೆ. ಹೀಗಾಗಿ ವಿವೇಕಯುಕ್ತತೆ ಮಾಯವಾಗಿ ತನಗೆತಾನೆ ನಾಶವಾಗುತ್ತದೆ ಎಂದು ಗಾಂಧಿಯವರು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುರಿ ಮತ್ತು ಸಾಧನಗಳು
ಗುರಿ ಮತ್ತು ಸಾಧನಗಳ ಬಗ್ಗೆ ಅನೇಕರಿಗೆ ಭಿನ್ನ ಅಭಿಪ್ರಾಯಗಳಿವೆ. ಕೆಲವರಿಗೆ ಗುರಿ ಮುಖ್ಯವಾದರೆ ಇನ್ನು ಕೆಲವರಿಗೆ ಅದನ್ನು ಸಾಧಿಸುವ ಸಾಧನಗಳ ಬಗ್ಗೆ ಹೆಚ್ಚಿನ ಕಾಳಜಿ. ಇವು ಮನು?ನ ಜೀವನದ ದೃಷ್ಟಿಕೋನದ ಬಗ್ಗೆ ಬೆಳಕನ್ನು ಚೆಲ್ಲುತ್ತವೆ. ಅನೇಕ ಪಾಶ್ಚಾತ್ಯ ಆರ್ಥಿಕತಜ್ಞರು ಜೀವನದ ಗುರಿ, ಉದ್ದೇಶಗಳು ಪ್ರಮುಖ ಎಂದರೆ ಇನ್ನು ಕೆಲವರು ಸಾಧನ, ಸಲಕರಣೆಗಳೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ. ಗಾಂಧಿಯವರು ಶ್ರೇಷ್ಠ ಉದ್ದೇಶ ಮುಟ್ಟಲು ಶ್ರೇಷ್ಠವಾದ ಸಾಧನಗಳ ಆವಶ್ಯಕತೆ ಇದೆ ಎಂದು ಸಾರಿ ಹೇಳಿದ್ದಾರೆ. ಈ ವಿಷಯದ ಬಗ್ಗೆ ಅವರು ತಮ್ಮ ಅನೇಕ ಉಪನ್ಯಾಸಗಳಲ್ಲಿ ಅತ್ಯಂತ ಸ್ಪ?ವಾದ ಅಭಿಪ್ರಾಯವನ್ನು ಮಂಡಿಸಿದ್ದಾರೆ. “ಗುರಿಗಳಷ್ಟು ಸಾಧನಗಳೂ ಸಹ ಮುಖ್ಯ. ನನ್ನ ಜೀವನದ ತತ್ತ್ವದ ಪ್ರಕಾರ ಈ ಎರಡು ಪದಗಳೂ ಪರಿವರ್ತನೀಯವಾಗಿವೆ. ಅವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ” (Young India, 26-12-1924, p. 424).
“ಅನೇಕರು ’ಸಾಧನಗಳು ಕೇವಲ ಸಾಧನಗಳು ಮಾತ್ರ’ ಎಂದು ಹೇಳುತ್ತಾರೆ. ಆದರೆ ನನ್ನ ಪ್ರಕಾರ ಸಾಧನಗಳೇ ಎಲ್ಲವೂ ಆಗಿವೆ. ಸಾಧನ ಇದ್ದ ಹಾಗೆ ಗುರಿ ಇರುತ್ತದೆ. ಇವೆರಡರ ನಡುವೆ ಯಾವ ಅಡ್ಡಗೋಡೆಯೂ ಇಲ್ಲ. ಪರಮಾತ್ಮ ನಮಗೆ ಗುರಿಗಳಿಗಿಂತ ಸಾಧನಗಳ ಮೇಲೆ ಹೆಚ್ಚಿನ ಹಿಡಿತವನ್ನು ನೀಡಿದ್ದಾನೆ. ಯಾವುದೇ ಉದ್ದೇಶ ಪೂರ್ಣವಾಗುವುದು ನಾವು ಆರಿಸಿಕೊಂಡಿರುವ ಸಾಧನಗಳಿಗೆ ಪ್ರಮಾಣಪೂರ್ವಕವಾಗಿರುತ್ತದೆ. ಈ ಪ್ರಸ್ತಾವನೆಗೆ ಯಾವ ರೀತಿಯ ಅಪವಾದಗಳೂ ಕಾಣಸಿಗುವುದಿಲ್ಲ” (Young India, 17-7-1924, p. 236) ಅವರ ಪ್ರಕಾರ ಸಾಧನಗಳನ್ನು ನಾವು ಬೀಜಕ್ಕೂ, ಗುರಿಯನ್ನು ಮರಕ್ಕೂ ಹೋಲಿಸಬಹುದು. “ಬೀಜ ಮತ್ತು ಮರಕ್ಕೆ ಇರುವ ಸಂಬಂಧ ಗುರಿ ಮತ್ತು ಸಾಧನಗಳಿಗಿರುವ ಅವಿನಾಭಾವ ಸಂಬಂಧದಂತೆ” ಎಂದು ಗಾಂಧಿಯವರು ನುಡಿದಿದ್ದಾರೆ (Hind Swaraj, 1962, p. 71)
ಗಾಂಧಿಯವರ ದೃಷ್ಟಿಯಲ್ಲಿ “ಕಲ್ಮಷಯುಕ್ತ ಸಾಧನವು ಕಲ್ಮಷಯುಕ್ತ ಗುರಿಯನ್ನು ತಲಪುತ್ತದೆ. ಅಸತ್ಯದ ಮೂಲಕ ಸತ್ಯವನ್ನು ಮುಟ್ಟಲು ಸಾಧ್ಯವಿಲ್ಲ. ಸತ್ಯದ ಮಾರ್ಗದಲ್ಲಿ ನಡೆದಾಗ ಮಾತ್ರ ಸತ್ಯವು ಗೋಚರವಾಗುತ್ತದೆ” ಎಂಬ ಸತ್ಯವನ್ನು ಪ್ರತಿಪಾದಿಸಿದರು (Harijan, 13-7-1947, p. 232).
“ನಾವು ಉಪಯೋಗಿಸುವ ಸಾಧನ ಮತ್ತು ಪರಿಕರಗಳ ಬಗ್ಗೆ ಸ್ಪ?ವಾದ ಜ್ಞಾನವೂ, ಅವುಗಳನ್ನು ಯಾವ ರೀತಿ ಉಪಯೋಗಿಸಬೇಕೆಂಬುದರ ಬಗ್ಗೆ ಸರಿಯಾದ ಅರಿವೂ ಇಲ್ಲದಿದ್ದರೆ ಉದ್ದೇಶ ಎಷ್ಟು ಘನವಾಗಿದ್ದರೂ ಅದನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಆದ ಕಾರಣ ನಾನು ಸಾಧನಗಳ ರಕ್ಷಣೆ ಮಾಡಿ ಅವುಗಳ ಪ್ರಗತಿಪರ ಉಪಯೋಗದ ಕಡೆಗೆ ಗಮನ ಹರಿಸುತ್ತೇನೆ. ಅವುಗಳ ಕಡೆಗೆ ನಮ್ಮ ಸಂಪೂರ್ಣ ಗಮನ ಹರಿಸಿದರೆ ನಾವು ಗುರಿಯನ್ನು ಮುಟ್ಟುವುದು ಶತಃಸಿದ್ಧ. ಗುರಿ ಮುಟ್ಟಲು ನಮ್ಮ ಪರಿಶ್ರಮ ಅದಕ್ಕೆ ಸರಿಸಮವಾಗಿರಬೇಕು. ಹಲವರಿಗೆ ಈ ದಾರಿ ಬಹುದೀರ್ಘ ಎಂದು ಕಂಡರೂ ಕೊನೆಯಲ್ಲಿ ಅದು ಅಲ್ಪಕಾಲಿಕವಾಗಿ ಕಾಣುತ್ತದೆ” (Selections from Gandhi, 1957, p. 36-37).
ಗಾಂಧಿಯವರ ಪ್ರಕಾರ ನಾವು ಏನಿದ್ದರೂ ಪರಮಾತ್ಮನ ಚಿತ್ತದ ಗೊಂಬೆಗಳು. ನಮ್ಮ ಮುಂದಿನ ಜೀವನದಲ್ಲಿ ಯಾವ ರೀತಿಯ ಪ್ರಗತಿಯನ್ನು ಸಾಧಿಸುತ್ತೇವೆ ಅಥವಾ ಏನು ತೊಂದರೆಗಳನ್ನು ಎದುರಿಸುತ್ತೇವೆ ಎಂಬುದರ ಅರಿವು ನಮಗಿರುವುದಿಲ್ಲ. ಸಾಧನಗಳು ಎಲ್ಲ ರೀತಿಯಿಂದ ಅಪ್ಪಟವಾಗಿದ್ದು ಅವುಗಳ ಉಪಯುಕ್ತತೆಯನ್ನು ಅರಿತಾಗ ಗುರಿಯನ್ನು ಮುಟ್ಟಲು ಯಾವ ರೀತಿಯ ಯೋಚನೆಯ ಅಗತ್ಯವೂ ಕಂಡುಬರುವುದಿಲ್ಲ. ಧೈರ್ಯವಾಗಿ ನಮ್ಮ ಗುರಿಯನ್ನು ತಲಪಬಹುದು (Satyagraha in South Africa, 1950, p. 318).
ಅವರ ನಂಬಿಕೆಯ ಪ್ರಕಾರ “ಯಶಸ್ಸು ಅಥವಾ ಅಪಯಶಸ್ಸು ಎರಡೂ ನಮ್ಮ ಕೈಯಲ್ಲಿ ಇರುವುದಿಲ್ಲ. ನಾವು ನಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಸಾಕು, ಕೊನೆಗೆ ಎಲ್ಲ ಅವನ ಇಚ್ಛೆಯ ಪ್ರಕಾರವೇ ನಡೆಯುವುದು” (Harijan, 12-1-1947, p. 490). “ಎಲ್ಲಿಯವರೆಗೆ ನಮ್ಮ ಉದ್ದೇಶವು ಶುದ್ಧವಾಗಿದೆಯೋ, ಸಾಧನಗಳ ಉಪಯೋಗ ಸರಿಯಾಗಿದೆಯೋ ಅಲ್ಲಿಯವರೆಗೆ ನಾವು ಕೈಗೊಂಡ ಕಾರ್ಯಕ್ಕೆ ಯಶಸ್ಸು ಸಿಗುವುದೋ ಇಲ್ಲವೋ ಎಂದು ಯೋಚಿಸುವ ಅನಿವಾರ್ಯತೆ ಬರುವುದಿಲ್ಲ” (Harijan, 7-4-1946, p. 72).. ಈ ವಿಚಾರವನ್ನು ಸ್ಪಷ್ಟಪಡಿಸಲು ಅವರು ಕೊಡುವ ಉದಾಹರಣೆ ಎಂದರೆ ಕತ್ತಿಯ ಮೂಲಕ ನಾವು ಏನನ್ನು ಪಡೆಯುತ್ತೇವೆಯೋ ಅದನ್ನು ಕತ್ತಿಯ ಮೂಲಕವೇ ಕಳೆದುಕೊಳ್ಳಬೇಕಾಗುತ್ತದೆ (Harijan, 2-9-1937, p. 260). “ಸರಿಯಾದ ಸಾಧನಗಳನ್ನು ನಾವು ಆಯ್ಕೆಮಾಡಿಕೊಂಡರೆ ಗುರಿಯನ್ನು ತನ್ನಷ್ಟಕ್ಕೆ ತಾನೆ ತಲಪಲು ಸಾಧ್ಯವಾಗುತ್ತದೆ” (Harijan, 11- 2-1939, p. 38). ಈ ಮೇಲಿನ ಎಲ್ಲ ವಿವರಣೆಯಿಂದ ನಮಗೆ ತಿಳಿಯುವುದೇನೆಂದರೆ ಗಾಂಧಿಯವರಿಗೆ ಗುರಿಯಷ್ಟೇ ಸಾಧನಗಳು ಮುಖ್ಯವಾಗಿದ್ದವು. ಅವರ ಪ್ರಕಾರ ಸಾಧನಗಳು ನೈತಿಕವಾಗಿ ಅಹಿಂಸೆಯಿಂದ ಕೂಡಿ ನ್ಯಾಯಯುತವಾಗಿರಬೇಕು. ಆಗ ಮಾತ್ರ ಉದ್ದೇಶವು ಸಂಪೂರ್ಣ ಯಶಸ್ಸನ್ನು ಕಾಣಲು ಸಾಧ್ಯ. ಹೀಗೆ ಗಾಂಧಿಯವರು ಪಾಶ್ಚಾತ್ಯ ಕಲ್ಪನೆಯಿಂದ ವಿಭಿನ್ನವಾಗಿ ’ಗುರಿ ಮತ್ತು ಸಾಧನಗಳು’ ಎರಡೂ ಪ್ರಮುಖ ಎಂದು ಪ್ರತಿಪಾದಿಸಿದರು. ಅವೆರಡರ ಸಮರ್ಪಕ ಸಮನ್ವಯವನ್ನು ಮಾಡಿದರು.
ಸಮಗ್ರ ಅರ್ಥಶಾಸ್ತ್ರ ವಿಶ್ಲೇ?ಣೆಗಿಂತ ಸೂಕ್ಷ್ಮ ಅರ್ಥಶಾಸ್ತ್ರ ವಿಶ್ಲೇಷಣೆಗೆ ಹೆಚ್ಚಿನ ಮಹತ್ತ್ವ
ಅರ್ಥಶಾಸ್ತ್ರವು ಒಂದು ವಿಶಾಲವಾದ ಜ್ಞಾನಾಂಗವಾಗಿದೆ. ಈ ವಿಸ್ತಾರವಾದ ಶಾಸ್ತ್ರವನ್ನು ಸುಲಭವಾಗಿ ಅಧ್ಯಯನ ಮಾಡಲು ನಮ್ಮ ಅನುಕೂಲಕ್ಕಾಗಿ ಅರ್ಥಶಾಸ್ತ್ರಜ್ಞರು ಅದನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ – ಸೂಕ್ಷ್ಮ ಹಾಗೂ ವಿಶಾಲಾತ್ಮಕ ಅರ್ಥಶಾಸ್ತ್ರ. ಸೂಕ್ಷ್ಮ ಅರ್ಥಶಾಸ್ತ್ರವು ಅತ್ಯಂತ ಚಿಕ್ಕ ಆರ್ಥಿಕ ಘಟಕಗಳ ನಡವಳಿಕೆ ಮತ್ತು ಕಾರ್ಯಗಳನ್ನು ಮಾತ್ರ ವಿವರವಾಗಿ ಅಧ್ಯಯನ ಮಾಡುತ್ತದೆ. ಇಲ್ಲಿ ಒಬ್ಬ ವ್ಯಕ್ತಿ ಗಳಿಸಿದ ಆದಾಯ, ಒಬ್ಬ ಗ್ರಾಹಕ ಮಾಡಿದ ವೆಚ್ಚ, ಒಂದು ವಸ್ತು ಅಥವಾ ಸೇವೆಯ ಉತ್ಪಾದನೆ ಬೇಡಿಕೆ ನೀಡಿಕೆ, ಒಂದು ಸಂಸ್ಥೆ ಗಳಿಸಿದ ಲಾಭ ಇತ್ಯಾದಿ ವಿವರವಾಗಿ ಅಧ್ಯಯನ ಮಾಡುತ್ತೇವೆ.
ಸಮಗ್ರ ಅರ್ಥಶಾಸ್ತ್ರವು ಸೂಕ್ಷ್ಮ ಅರ್ಥಶಾಸ್ತ್ರಕ್ಕೆ ವಿರುದ್ಧ ಭಾಗ. ಇದು ಇಡೀ ಆರ್ಥಿಕ ವ್ಯವಸ್ಥೆಯ ಒಟ್ಟು ಅಥವಾ ಸಾಮಾನ್ಯ ನಡವಳಿಕೆಯ ಅಧ್ಯಯನಕ್ಕೆ ಸಂಬಂಧಿಸಿದ ಒಂದು ಶಾಖೆ. ಇದರಲ್ಲಿ ನಾವು ಇಡೀ ಅರ್ಥವ್ಯವಸ್ಥೆಯ ವಿಸ್ತಾರವಾದ ಹಾಗೂ ಸಾಮೂಹಿಕ ಕಾರ್ಯಾಚರಣೆಯ ಬಗ್ಗೆ ಅಧ್ಯಯನ ಮಾಡುತ್ತೇವೆ. ಉದಾಹರಣೆಗೆ ಇಲ್ಲಿ ನಾವು ಕೃಷಿ, ಕೈಗಾರಿಕೆ, ಆಮದು, ರಫ್ತು, ರಾಷ್ಟ್ರೀಯ ಆದಾಯ, ಉದ್ಯೋಗ, ಅತಿಪ್ರಸರಣ, ಹಣದುಬ್ಬರ, ವ್ಯಾಪಾರ ವರ್ತುಲಗಳು ಇತ್ಯಾದಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತೇವೆ.
ಗಾಂಧಿಯವರು ಈ ಎರಡು ವಿಭಾಗಗಳ ವಿಂಗಡಣೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಮಗ್ರ ಅರ್ಥಶಾಸ್ತ್ರದ ಒಂದು ಪ್ರಮುಖ ಅಂಶವಾದ ಒಟ್ಟು ರಾಷ್ಟ್ರೀಯ ಉತ್ಪನ್ನದ (Gross National Product) ಪ್ರಮಾಣವನ್ನು ಹೆಚ್ಚುಮಾಡುವ ಪ್ರಕ್ರಿಯೆಯನ್ನು ದೇಶದ ಮುಖ್ಯಗುರಿ ಎಂದು ಅವರು ಪರಿಗಣಿಸುವುದಿಲ್ಲ. ಅದರ ಹೆಚ್ಚಳದ ವೇಗದರವನ್ನು ಒಂದು ದೇಶದ ಆರ್ಥಿಕಪ್ರಗತಿಯ ಮಾಪನ ಎಂದು ಅವರು ಭಾವಿಸುವುದಿಲ್ಲ. ಕೇವಲ ಒಟ್ಟು ರಾಷ್ಟ್ರೀಯ ಉತ್ಪನ್ನದ ಏರಿಕೆಗೆ ಮಾತ್ರ ಆದ್ಯತೆ ಕೊಡದೆ, ಬದಲಿಗೆ ಬಹು ಮುಖ್ಯವಾಗಿ ಅದನ್ನು ಹೇಗೆ, ಯಾವ ರೀತಿಯಲ್ಲಿ ಯಾರು ಹೆಚ್ಚುಮಾಡಲು ಕಾರಣಕರ್ತರಾಗುತ್ತಾರೆ, ಅದನ್ನು ಹೆಚ್ಚುಮಾಡುವ ವಿಧಾನ, ಉತ್ಪನ್ನದ ಸಂಯೋಜನೆಯ ಸ್ವಭಾವ, ಅದನ್ನು ಉತ್ಪಾದನೆ ಮಾಡುವ ರೀತಿ ಮತ್ತು ಅದಕ್ಕೆ ಉಪಯೋಗ ಮಾಡುವ ವಿವಿಧ ಸಾಧನ-ಪರಿಕರಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣವೂ ಅರ್ಥಪೂರ್ಣ.
ಅರ್ಥಶಾಸ್ತ್ರದಲ್ಲಿ ಸಾಮಾನ್ಯವಾಗಿ ನಾವೆಲ್ಲ ತಿಳಿದ ಹಾಗೆ ದೇಶವಾಸಿಗಳ ಎಲ್ಲರ ಆದಾಯ ಹೆಚ್ಚಿದಾಗ ಒಟ್ಟು ರಾಷ್ಟ್ರೀಯ ಆದಾಯವೂ (Gross National Income) ಹೆಚ್ಚಾಗುವುದು ಸಹಜ. ಕಾರಣ ಎಲ್ಲ ವ್ಯಕ್ತಿಗಳ ಆದಾಯವನ್ನು ಒಟ್ಟುಗೂಡಿಸಿದಾಗ ಬರುವುದೇ ಒಟ್ಟು ರಾಷ್ಟ್ರೀಯ ಆದಾಯ. ಒಂದು ರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಒಂದು ವ?ದ ಸರಾಸರಿ ಆದಾಯವನ್ನು ತಲಾ ಆದಾಯ ಎಂದು ಕರೆಯುತ್ತೇವೆ (per capita income). ರಾಷ್ಟ್ರೀಯ ಆದಾಯವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ತಲಾ ಆದಾಯವು ಲಭ್ಯವಾಗುತ್ತದೆ. ಆದ್ದರಿಂದ ತಲಾ ಆದಾಯವು ಒಂದು ರಾ?ದ ಜನರ ಸರಾಸರಿ ಆದಾಯ ಮಾತ್ರ ಆಗುತ್ತದೆ.
ಗಾಂಧಿಯವರು ಹೇಳುವ ಹಾಗೆ ಸಾಮಾನ್ಯವಾಗಿ ರಾಷ್ಟ್ರೀಯ ಆದಾಯ ಹೆಚ್ಚಿದಾಗ ಸರಾಸರಿ ತಲಾ ಆದಾಯ (per capita income) ಹೆಚ್ಚಾಗುತ್ತದೆಯೇ ಹೊರತು ಪ್ರತಿಯೊಬ್ಬ ವ್ಯಕ್ತಿಯು ಸಂಪಾದಿಸಿದ (personal income) ಆದಾಯ ಹೆಚ್ಚಾಗುವುದಿಲ್ಲ. ಉದಾಹರಣೆಗೆ ಒಂದು ವ?ದ ಅವಧಿಯಲ್ಲಿ ಒಂದು ದೇಶದ ಕೇವಲ ೧೦% ಶ್ರೀಮಂತರ ಹಾಗೂ ಶ್ರೀಮಂತ ಕಂಪೆನಿಗಳ ಆದಾಯ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿ ಸಾಮಾನ್ಯ ವ್ಯಕ್ತಿಯ (common man) ಅದರಲ್ಲೂ ಬಡವರ, ಹಿಂದುಳಿದವರ, ತುಳಿತಕ್ಕೆ ಒಳಗಾದವರ ಆದಾಯ ಹೆಚ್ಚಾಗದಿದ್ದರೂ ಸರಾಸರಿ ಆದಾಯ ಹೆಚ್ಚಾಗಿದೆ ಎಂದು ಹೇಳುತ್ತೇವೆ. ಸರಾಸರಿ ಆದಾಯದ ಪ್ರಮಾಣ ಹೆಚ್ಚಾಗಿದ್ದರೂ ಪ್ರತಿವ್ಯಕ್ತಿ ದುಡಿದು ಸಂಪಾದಿಸಿದ ಆದಾಯ ಹೆಚ್ಚಾಗಿರುವುದಿಲ್ಲ. ಆದ್ದರಿಂದ ಅವರ ದೃಷ್ಟಿಯಲ್ಲಿ ಸರಾಸರಿ ಮಾನದಂಡವನ್ನು ತೆಗೆದುಕೊಳ್ಳುವುದರಿಂದ ಪ್ರತಿಯೊಬ್ಬ ವ್ಯಕ್ತಿಯ ಸ್ವಂತ ದುಡಿಮೆಯ ಆದಾಯ ಹೆಚ್ಚಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ವಾಸ್ತವ. ಗಾಂಧಿಯವರು ತಮ್ಮ ಆರ್ಥಿಕ ಚಿಂತನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಆದಾಯವನ್ನು ಹೇಗೆ ಹೆಚ್ಚುಮಾಡಬಹುದು ಎಂಬ ಅಂಶದ ಕಡೆಗೆ ಹೆಚ್ಚಿನ ಮಹತ್ತ್ವ ನೀಡಿದ್ದಾರೆ.
ಮುಂದುವರಿದು ಅವರು ಈ ರೀತಿ ಹೇಳುತ್ತಾರೆ – “ಆರ್ಥಿಕ ಅಭಿವೃದ್ಧಿಯ ಪಾಲು ಒಬ್ಬ ವ್ಯಕ್ತಿಗೆ ದೊರಕುವುದು ಆತ ಆ ದೇಶದ, ಗ್ರಾಮ ಸಮುದಾಯದ ಮತ್ತು ಕುಟುಂಬದ ಸದಸ್ಯ ಎನ್ನುವ ಕಾರಣದಿಂದ. ಪ್ರತಿ ವ್ಯಕ್ತಿಯ ಆದಾಯ ಹೆಚ್ಚಿ ಆತ ಸುಖ-ಸಂತೋಷದಿಂದ ತನ್ನ ಜೀವನನಿರ್ವಹಣೆ ಮಾಡುತ್ತಿದ್ದಾನೆ ಎನ್ನುವ ವಾತಾವರಣವನ್ನು ನಿರ್ಮಾಣ ಮಾಡುವುದು ಆ ದೇಶದ ಆರ್ಥಿಕ ವ್ಯವಸ್ಥೆಯನ್ನು ನಡೆಸುವ ಜವಾಬ್ದಾರಿ ತೆಗೆದುಕೊಂಡವರ ಮೇಲಿದೆ.” ಆದಕಾರಣ ಸರಾಸರಿ ಆದಾಯವನ್ನು ಹೆಚ್ಚಿಸುವುದರ ಬದಲು ನಮ್ಮ ಗಮನ ಪ್ರತಿವ್ಯಕ್ತಿ ಗೌರವಯುತವಾಗಿ ದುಡಿದು ಸಂಪಾದಿಸುವ ಆದಾಯವನ್ನು ಹೆಚ್ಚಿಸುವ ಆರ್ಥಿಕವ್ಯವಸ್ಥೆಯನ್ನು ಬಲಪಡಿಸಬೇಕೆಂಬುದು ಗಾಂಧಿಯವರ ಸ್ಪ? ಅಭಿಪ್ರಾಯ. ಪ್ರತಿವ್ಯಕ್ತಿ ತನ್ನ ದಿನನಿತ್ಯದ ಬದುಕಿಗೆ ಇತರರನ್ನು ಅವಲಂಬಿಸದೆ, ಸ್ವಾಭಿಮಾನಯುಕ್ತ ಜೀವನ ನಡೆಸುವಂತೆ ಪ್ರೇರೇಪಿಸುವುದು ಅವರ ಉದ್ದೇಶವಾಗಿತ್ತು.
ಪರ್ಯಾಯ ಪರಿಕಲ್ಪನೆ
ಗಾಂಧಿಯವರು ಜೀವನದಲ್ಲಿ ಸರಳತೆಗೆ ಹೆಚ್ಚಿನ ಮಹತ್ತ್ವವನ್ನು ಕೊಟ್ಟಿದ್ದರು. ಮನು?ನು ತನ್ನ ಆಸೆ ಆಕಾಂಕ್ಷೆಗಳನ್ನು ಸ್ವ-ಇಚ್ಚೆಯಿಂದ ಕಡಿತಗೊಳಿಸಿಕೊಂಡು ಸರಳ ಸುಂದರ, ಮಾದರಿ ಜೀವನ ನಡೆಸಬೇಕೆಂದು ಅವರು ಹೇಳುತ್ತಿದ್ದರು. ’ಸರಳ ಜೀವನ ಮತ್ತು ಉಚ್ಚ ವಿಚಾರ’ simple living and high thinking) ಅವರು ನಂಬಿ ಅನುಸರಿಸುತ್ತಿದ್ದ ಜೀವನಸೂತ್ರ ಅಥವಾ ಜೀವನದ ಮಂತ್ರ. ಪ್ರತಿಯೊಬ್ಬರೂ ಈ ದೃಷ್ಟಿಯಿಂದ ಪ್ರಯತ್ನ ಮಾಡಬೇಕೆಂದು ಅವರು ಹೇಳುತ್ತಿದ್ದರು. ಮನು?ನಿಗೆ ತನ್ನ ಭೌತಿಕ ಸಂತೋ?ವನ್ನು ಗಳಿಸಲು ಸ್ವಲ್ಪ ಮಟ್ಟಿನ ಸುಖಸಾಧನಗಳ ಆವಶ್ಯಕತೆ ಇರುತ್ತದೆ. ಆದರೆ ಒಂದು ಹಂತದ ನಂತರ ಈ ಸುಖಸಾಧನಗಳು ಅವನ ಪ್ರಗತಿಗೆ ಅಡಚಣೆ ಉಂಟುಮಾಡುತ್ತವೆ. ಆದಕಾರಣ ಅಪರಿಮಿತ ಬಯಕೆಗಳನ್ನು ಸಂಪೂರ್ಣವಾಗಿ ತೃಪ್ತಿಗೊಳಿಸುತ್ತೇನೆ ಎನ್ನುವುದು ಕೇವಲ ಭ್ರಾಂತಿಯಾಗಿ ಕೊನೆಯಲ್ಲಿ ಅವನ ವಿನಾಶದ ಕುಣಿಕೆಯಾಗುತ್ತದೆ. ಮನು? ತನ್ನ ದೈಹಿಕ ಮತ್ತು ಬೌದ್ಧಿಕ ಆವಶ್ಯಕತೆಗಳು ವಿ?ಯಲಂಪಟತೆಯ ಮಟ್ಟವನ್ನು ತಲಪುವ ಮೊದಲೇ ಒಂದು ಹಂತದಲ್ಲಿ ಅದಕ್ಕೆ ಪೂರ್ಣವಿರಾಮವನ್ನು ಹಾಕುವ ಆವಶ್ಯಕತೆ ಇದೆ. ಅವನು ’ಮಾನವಸೇವೆ’ಗೆ ತನ್ನ ಎಲ್ಲ ಶಕ್ತಿ ಸಾಮರ್ಥ್ಯಗಳನ್ನು ಉಪಯೋಗ ಮಾಡಲು ಯಾವ ರೀತಿಯ ಅಡಚಣೆಯೂ ಉಂಟಾಗದ ರೀತಿ ತನ್ನ ದೈಹಿಕ ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಗಾಂಧಿಯವರು ಒತ್ತಿಹೇಳಿದ್ದಾರೆ (Harijan, 29-8-1936, p. 226).
ಗಾಂಧಿಯವರು ’ಜೀವನಮಟ್ಟ’ (Standard of Living) ಮತ್ತು ’ಬದುಕಿನಮಟ್ಟ’ (Standard of Life) ಈ ಎರಡು ಪರಿಕಲ್ಪನೆಗಳ ನಡುವಿನ ವ್ಯತ್ಯಾಸವನ್ನು ಸ್ಪ?ವಾಗಿ ವಿವರಿಸಿದ್ದಾರೆ. ಪಾಶ್ಚಾತ್ಯ ಆರ್ಥಿಕ ತಜ್ಞರ ಪ್ರಕಾರ ಮನುಷ್ಯನ ಜೀವನಮಟ್ಟ ಸಾಮಾನ್ಯವಾಗಿ ಅವನು ಉಪಯೋಗಿಸುವ ಭೌತಿಕ ಸರಕು ಮತ್ತು ಸೇವೆಗಳ ಪ್ರಮಾಣ, ಅವುಗಳ ಗುಣಮಟ್ಟ ಹಾಗೂ ಮಾರುಕಟ್ಟೆಯ ಬೆಲೆ ಇತ್ಯಾದಿಗಳನ್ನು ಅವಲಂಬಿಸಿದೆ. ಅವರ ಚಿಂತನೆಯ ಪ್ರಕಾರ ದೇಶದ ಆರ್ಥಿಕ ಅಭ್ಯುದಯ, ಪ್ರಗತಿ ಹಾಗೂ ಸಮೃದ್ಧಿಯ ಕಾರಣ ಮನು? ಯಾವಾಗ ಹೆಚ್ಚಿನ ಪ್ರಮಾಣದಲ್ಲಿ ಉನ್ನತ ಗುಣಮಟ್ಟದ ಬೆಲೆಬಾಳುವ ಸರಕು ಮತ್ತು ಸೇವೆಗಳನ್ನು ಅನುಭೋಗ ಮಾಡಲು ಪ್ರಾರಂಭಿಸುತ್ತಾನೋ, ಆಗ ಸ್ವಯಂಚಾಲಿತವಾಗಿ ಅವನ ’ಜೀವನಮಟ್ಟ’ ಹೆಚ್ಚಾಗುತ್ತದೆ ಎನ್ನುವ ನಿರ್ಣಯಕ್ಕೆ ಅವರು ಬಂದಿದ್ದಾರೆ.
ಗಾಂಧಿಯವರ ’ಬದುಕಿನಮಟ್ಟ’ (Standard of Life) ಕೇವಲ ಭೌತಿಕ ಮತ್ತು ಐಹಿಕ ಸುಖಸಂತೋ?ಗಳ ಮೇಲೆ ನಿರ್ಭರವಾಗಿರುವುದಿಲ್ಲ. ಅವುಗಳಿಗೆ ಹೆಚ್ಚಿನ ಸ್ಥಾನ ಮತ್ತು ಮಹತ್ತ್ವ ಕೊಡುವ ಆವಶ್ಯಕತೆ ಇಲ್ಲ. ಭಾರತೀಯ ಕಲ್ಪನೆಯಲ್ಲಿ ಬದುಕಿನಮಟ್ಟ ಐಹಿಕ ಸುಖಸಂತೋಷಗಳ ಜೊತೆಗೆ ಸಾಂಸ್ಕೃತಿಕ, ನೈತಿಕ, ಆಧ್ಯಾತ್ಮಿಕ ಹಾಗೂ ಒಟ್ಟಾರೆ ಜೀವನಮೌಲ್ಯಗಳನ್ನು ಆಧರಿಸಿದೆ. ಅವುಗಳನ್ನು ಅಳತೆಮಾಡಲು ಸುಲಭಸಾಧ್ಯ ಮಾನದಂಡಗಳಿಲ್ಲ. ಕಾರಣ ’ಜನಸೇವೆಯೇ ಜನಾರ್ದನಸೇವೆ’ ಎಂದು ನಂಬಿದ್ದ ಗಾಂಧಿಯವರು ಒಬ್ಬ ವ್ಯಕ್ತಿ ತನ್ನ ಪರಿಶ್ರಮದ ಮೂಲಕ ಸಮಾಜದ ಇತರ ವ್ಯಕ್ತಿಗಳ ಸಂತೋ?ವನ್ನು ವೃದ್ಧಿಮಾಡುವ ಕೆಲಸ ಮಾಡಿದಾಗ ಅವನಿಗೆ ಸಿಗುವ ’ಮಾನಸಿಕ ಆನಂದ’ವನ್ನು ಹಣದ ಮೂಲಕ ಅಳತೆಮಾಡಲು ಸಾಧ್ಯವಿಲ್ಲ; ಅಂತಹ ಕಾರ್ಯಗಳಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು. ಗಾಂಧಿ ಮನು?ನ ಗುಣವರ್ಧನೆಗೆ ಮತ್ತು ಜೀವನಮೌಲ್ಯಗಳಿಗೆ ಹೆಚ್ಚಿನ ಮಹತ್ತ್ವ ಕೊಟ್ಟಿದ್ದಾರೆ. ಆದಕಾರಣ ಬದುಕಿನ ಮಟ್ಟವನ್ನು ಕೇವಲ ಭೌತಿಕರೂಪದ ಸರಕು ಮತ್ತು ಸೇವೆಗಳ ಅನುಭೋಗದಿಂದ ಅಳೆಯಲು ಸಾಧ್ಯವಿಲ್ಲ ಎಂದು ಅವರು ಸ್ಪ?ವಾಗಿ ತಿಳಿಸಿದ್ದಾರೆ.
ಸಾಂಪ್ರದಾಯಿಕ ’ಆರ್ಥಿಕತೆ’ಗೆ ಹೊಸ ಅರ್ಥ
ಪಾಶ್ಚಾತ್ಯ ಆರ್ಥಿಕತಜ್ಞರ ಪ್ರಕಾರ ಒಂದು ಸಮಾಜದಲ್ಲಿ ನಡೆಯುವ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳ ಒಟ್ಟು ಮೊತ್ತಕ್ಕೆ ’ಆರ್ಥಿಕತೆ’ (Economy) ಎನ್ನುತ್ತಾರೆ. ಮನು?ರು ಬದುಕಲು ಅನವಶ್ಯವಾದ ವಿವಿಧ ರೀತಿಯ ವಸ್ತು ಹಾಗೂ ಸೇವೆಗಳನ್ನು ಮತ್ತು ಆದಾಯವನ್ನು ಯಾವ ರೀತಿಯಲ್ಲಿ ಹೇಗೆ ಉತ್ಪಾದಿಸಿ, ವಿನಿಮಯ ಮಾಡಿಕೊಂಡು ಅವುಗಳನ್ನು ಸೂಕ್ತ ರೀತಿಯಲ್ಲಿ ವಿತರಣೆ ಮಾಡುತ್ತಾರೆ ಎಂಬುದನ್ನು ಅದು ತಿಳಿಸುತ್ತದೆ. ಒಂದು ಸಮಾಜ ಹೇಗೆ ಅಲ್ಲಿ ದೊರೆಯುವ ಮಿತವಾದ ಸಂಪನ್ಮೂಲಗಳನ್ನು ಅತ್ಯಂತ ದಕ್ಷತೆಯಿಂದ ಅತಿಹೆಚ್ಚಿನ ಉತ್ಪಾದನೆಯನ್ನು ಅತಿಕಡಮೆ ವೆಚ್ಚದಲ್ಲಿ ಮಾಡಿ ನಾಗರಿಕರು ಹೆಚ್ಚು ತೃಪ್ತರಾಗುವಂತೆ ಮಾಡುತ್ತದೆ ಎಂಬುದನ್ನು ಆರ್ಥಿಕತೆ ನಮಗೆ ತಿಳಿಸುತ್ತದೆ. “ಆರ್ಥಿಕತೆ ಎಂದರೆ ಮಾನವರು ಹೇಗೆ ತಮ್ಮ ಜೀವನನಿರ್ವಹಣೆ ಮಾಡುತ್ತಾರೆ ಎಂದು ತಿಳಿಸುವ ವ್ಯವಸ್ಥೆ” (ಂ.ಎ. ಃಡಿoತಿಟಿ) – ಎಂಬುದು ಆರ್ಥಶಾಸ್ತ್ರದಲ್ಲಿ ಸಾಮಾನ್ಯವಾಗಿ ಆರ್ಥಿಕತೆ ಎಂಬ ಪದಕ್ಕೆ ಕೊಡುವ ವ್ಯಾಖ್ಯೆ.
“ನಾವು ಉಪಯೋಗಿಸುವ ಸಾಧನ ಮತ್ತು ಪರಿಕರಗಳ ಬಗ್ಗೆ ಸ್ಪ?ವಾದ ಜ್ಞಾನವೂ, ಅವುಗಳನ್ನು ಯಾವ ರೀತಿ ಉಪಯೋಗಿಸಬೇಕೆಂಬುದರ ಬಗ್ಗೆ ಸರಿಯಾದ ಅರಿವೂ ಇಲ್ಲದಿದ್ದರೆ ಉದ್ದೇಶ ಎಷ್ಟು ಘನವಾಗಿದ್ದರೂ ಅದನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಆದ ಕಾರಣ ನಾನು ಸಾಧನಗಳ ರಕ್ಷಣೆ ಮಾಡಿ ಅವುಗಳ ಪ್ರಗತಿಪರ ಉಪಯೋಗದ ಕಡೆಗೆ ಗಮನ ಹರಿಸುತ್ತೇನೆ. ಅವುಗಳ ಕಡೆಗೆ ನಮ್ಮ ಸಂಪೂರ್ಣ ಗಮನ ಹರಿಸಿದರೆ ನಾವು ಗುರಿಯನ್ನು ಮುಟ್ಟುವುದು ಶತಃಸಿದ್ಧ. ಗುರಿ ಮುಟ್ಟಲು ನಮ್ಮ ಪರಿಶ್ರಮ ಅದಕ್ಕೆ ಸರಿಸಮವಾಗಿರಬೇಕು. ಹಲವರಿಗೆ ಈ ದಾರಿ ಬಹುದೀರ್ಘ ಎಂದು ಕಂಡರೂ ಕೊನೆಯಲ್ಲಿ ಅದು ಅಲ್ಪಕಾಲಿಕವಾಗಿ ಕಾಣುತ್ತದೆ”
ಗಾಂಧಿಯವರ ಕಲ್ಪನೆಯಲ್ಲಿ ’ಆರ್ಥಿಕತೆ’ ಎಂದರೆ ಆ ಸಮಾಜದಲ್ಲಿ ದೊರಕುವ ಎಲ್ಲ ರೀತಿಯ ಸಜೀವ ಮತ್ತು ನಿರ್ಜೀವ ಸಂಪನ್ಮೂಲಗಳನ್ನು ಅಪರಿಮಿತವಾದ ರೀತಿಯಲ್ಲಿ ಬಳಸಿಕೊಂಡು ಜೀವನನಿರ್ವಹಣೆ ಮಾಡುವಂತಹದ್ದಲ್ಲ. ಬದಲಾಗಿ ಪ್ರಕೃತಿಯಿಂದ ಸಿಗುವಂತಹ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಮನು? ಹೇಗೆ ತನ್ನ ಒಟ್ಟು ಅಸ್ತಿತ್ವವನ್ನು ಉಳಿಸಿಕೊಂಡು ಸಹಬಾಳ್ವೆಯಿಂದ ಬದುಕುವುದು ಎಂದರು. ಅವರು ಬಹಳ ಮೊದಲೇ ಮನುಷ್ಯನು ಪ್ರಕೃತಿಯ ಜೊತೆಯಲ್ಲಿ ಸಮರಸದಿಂದ ಬದುಕುವುದನ್ನು ಕಲಿಯಬೇಕೆಂದು ಪ್ರತಿಪಾದಿಸಿದ್ದರು. ಮಾನವರು ಇನ್ನೊಬ್ಬರೊಡನೆ ಸಾಮರಸ್ಯದಿಂದ ಬದುಕುವುದರ ಜೊತೆಗೆ ಪ್ರಕೃತಿಯ ಜೊತೆಯೂ ಅದರ ಇತರ ಅಂಗಗಳ ಜೊತೆಗೂ ಸಮರಸದಿಂದ ಬದುಕುವುದನ್ನು ಕಲಿಯಬೇಕು. ಪಶು, ಪಕ್ಷಿ, ಪ್ರಾಣಿಗಳ ಜೊತೆಯಲ್ಲಿಯೂ ಸಹಕಾರಯುತ ಜೀವನ ನಡೆಸಬೇಕು. ಅವುಗಳ ಶೋಷಣೆಗೆ ಬದಲು ಪೋ?ಣೆ ಮಾಡುವುದನ್ನು ಕಲಿಯಬೇಕು. ನಾವು ಪ್ರಕೃತಿ ಹಾಗೂ ಪರಿಸರವನ್ನು ಕಲ್ಮಷಗೊಳಿಸದೆ ಅನೇಕ ಶತಮಾನಗಳ ಕಾಲ ಅದರ ಉಪಯೋಗ ಮಾಡುವುದನ್ನು ಕಲಿಯಬೇಕು. ಪುನಃ ಬಳಸಬಹುದಾದ ಪ್ರಕೃತಿದತ್ತ ಸಂಪನ್ಮೂಲಗಳ ಬಳಕೆಗೆ ಗಮನ ಕೊಡಬೇಕು. ಪ್ರಕೃತಿಯಿಂದ ಒಂದು ಕಡೆ ಪಡೆದರೆ ಮತ್ತೊಂದು ಕಡೆ ಅದರ ಅಭಿವೃದ್ಧಿಯ ಬಗ್ಗೆ ಗಮನ ಕೊಡಬೇಕು. ಹೀಗೆ ಕೊಟ್ಟು ತೆಗೆದುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಮನು?ನು ಪ್ರಕೃತಿನಿಯಮಗಳ ಜೊತೆಗೆ ಸಹಬಾಳ್ವೆ ನಡೆಸುತ್ತಿರುವುದು ಇಂದು ನಿನ್ನೆಯಿಂದಲ್ಲ. ಯುಗಯುಗಗಳಿಂದ ಪ್ರಕೃತಿಯು ಮನು?ನಿಗೆ ಪೋ?ಕನಂತೆ ನಡೆದುಕೊಳ್ಳುತ್ತಿದೆ. ನೀರು, ಗಾಳಿ, ಬೆಳಕುಗಳೊಂದಿಗೆ ಸಕಲ ಚರಾಚರ ಜೀವಿಗಳು ಉಸಿರಾಡುತ್ತಿರುವುದು ಸೋಜಿಗವಾಗಿ ಉಳಿದಿಲ್ಲ. ಮಾನವನ ವೈಜ್ಞಾನಿಕ ಪರಿಶೋಧನೆಗಳು ಕೂಡ ನೈಸರ್ಗಿಕ ಸೂತ್ರಗಳನ್ನು ಮೀರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಮಾನವನಿಗೆ ಪ್ರಕೃತಿ ಒಂದು ಮುಕ್ತ ವಿಶ್ವವಿದ್ಯಾಲಯದಂತೆ. ಬದುಕಿಗೆ ಒಂದು ಅರ್ಥವನ್ನು ಕಾಣಲು ಪ್ರಕೃತಿ ನಿರಂತರವಾಗಿ ಸಹಕರಿಸುತ್ತಿದೆ. ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಗಳಿಸಿದಲ್ಲಿ ಮನು?ನು ಅಧ್ಯಾತ್ಮಕ್ಕೆ ಒಲಿಯುತ್ತಾನೆ. ಅದರಿಂದ ಎಲ್ಲ ರೀತಿಯ ದ್ವಂದ್ವ ಮತ್ತು ಸಂಕ?ಗಳಿಂದ ಮುಕ್ತನಾಗುತ್ತಾನೆ. ಮನುಷನ ನಿತ್ಯಜೀವನದ ಎಲ್ಲ ಅಗತ್ಯಗಳಿಗೂ ಪ್ರಕೃತಿ ಪಾಠ ಹೇಳಿಕೊಡುತ್ತದೆ. ಅದು ಹೇಳುವುದನ್ನು, ತೋರಿಸುವುದನ್ನು, ಅದರಲ್ಲಿರುವುದನ್ನು ತಿಳಿಯುವ, ಅನುಸರಿಸುವ ಮನಸ್ಸು ಮುಖ್ಯ. ಪ್ರಕೃತಿಯಿಂದ ಫಲಿಸುವ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಮನು? ಅನುಕರಣೆ ಮಾಡಿದರೆ ಸಾಕು, ಅದು ನಡೆಸುವ ನಿರಾಳ, ನಿಯಮಬದ್ಧ ಬದುಕು ಇವನಿಗೂ ಸಿದ್ಧಿಸಿಬಿಡುತ್ತದೆ. ಹೀಗೆ ಗಾಂಧಿಯವರು ಪ್ರಕೃತಿಯನ್ನು ತನ್ನ ’ಗುರು’ವಾಗಿ ಸ್ವೀಕಾರ ಮಾಡಿ ಪ್ರಕೃತಿ ಹೇಳಿಕೊಟ್ಟ ಪಾಠವನ್ನು ಜನರಿಗೆ ತಿಳಿಸಿದರು.
ಪ್ರಕೃತಿ ಹಾಕಿಕೊಟ್ಟ ಆರ್ಥಿಕ ಸಿದ್ಧಾಂತವನ್ನು ಮಾನವ ಸಂಪೂರ್ಣವಾಗಿ ಅನಾದರ ಮಾಡಿದ್ದೇ ಅನೇಕ ಸಮಸ್ಯೆಗಳಿಗೆ ಕಾರಣ. ಪ್ರಕೃತಿ ತನ್ನ ಒಡಲಲ್ಲಿ ಜೀವತಳೆದ ಪ್ರತಿಯೊಂದು ಜೀವರಾಶಿಗೂ ಸುಲಭವಾದ ಆರ್ಥಿಕ ನೀತಿಯನ್ನು ಬೆರಗುಗೊಳಿಸುವ? ಅದ್ಭುತವಾಗಿ ಹೆಣೆದಿದೆ. ಮನು? ಅದನ್ನು ಶಿರಸಾವಹಿಸಿ ಪಾಲಿಸಿದ್ದರೆ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದಾಗಿತ್ತು. ಪ್ರಕೃತಿ ಹಾಕಿಕೊಟ್ಟ ದಾರಿಯಲ್ಲಿ ನಡೆಯದೆ ತನ್ನದೇ ಆರ್ಥಿಕ ನೀತಿಗಳಿಗೆ ಮಾರುಹೋಗಿ, ತನ್ನ ’ಅಗತ್ಯ’ಗಳಿಗೆ ಪ್ರಕೃತಿ ಎಂದೂ ’ಕೊರತೆ’ ಮಾಡಿಲ್ಲ ಎಂಬ ಸತ್ಯವನ್ನು ಮನಗಂಡ ನಂತರವೂ ಅತಿಯಾಗಿ ಬೇಡಿಕೆಗಳಿಗೆ ದಾಸನಾಗಿ ಅದಕ್ಕೆ ಪೂರಕವಾದ ಅರ್ಥವ್ಯವಸ್ಥೆಗಳನ್ನು ಮಾನವ ರೂಪಿಸುತ್ತಾ ಹೋಗಿದ್ದಾನೆ. ನಿಜ ಹೇಳಬೇಕೆಂದರೆ ಒಂದು ಬೇಡಿಕೆಯನ್ನು ಅಥವಾ ಬಯಕೆಯನ್ನು ಒಂದು ಅರ್ಥವ್ಯವಸ್ಥೆ ಪೂರೈಸಿದರೆ, ಇನ್ನೊಂದು ಬೇಡಿಕೆಯನ್ನು ಪೂರ್ಣಗೊಳಿಸಲು ಮತ್ತೊಂದು ಅರ್ಥವ್ಯವಸ್ಥೆಯನ್ನು ಮತ್ತು ಸಿದ್ಧಾಂತವನ್ನು ಹುಟ್ಟುಹಾಕಿದ್ದಾನೆ. ಯಾವ ಆರ್ಥಿಕ ಸಿದ್ಧಾಂತವೂ ಸ್ವಯಂಪೂರ್ಣವಾಗಿ ಮಾನವೇತಿಹಾಸದಲ್ಲಿ ನೆಲೆನಿಂತಿಲ್ಲ ಮತ್ತು ಮಾನವನ ಉದ್ದೇಶಗಳನ್ನು ಪೂರ್ಣಗೊಳಿಸಲು ನೆರವಾಗಿಲ್ಲ ಎಂಬುದನ್ನು ನಾವು ಅರಿಯಬೇಕು. ಮಾನವನ ಆಸೆಗಳಿಗೆ ಕೊನೆಯೇ ಇಲ್ಲ ಎನ್ನುವುದು ಸಾರ್ವತ್ರಿಕವಾಗಿ ಸಾಬೀತಾಗಿರುವುದರಿಂದ ಅದಕ್ಕೆ ಪೋ?ಕವಾಗಿ ನಿಂತಿರುವ ಆರ್ಥಿಕ ನೀತಿಗಳು ಮನು?ನ ಉದ್ಧಾರ ಮಾಡುವುದರ ಬದಲು ಸರ್ವನಾಶ ಮಾಡುತ್ತದೆ. ಈ ಸತ್ಯದ ಅರಿವು ಆಗಬೇಕಿದೆ.
ಪರ್ಯಾಯ ಆರ್ಥಿಕ ಬೆಳವಣಿಗೆಯ ಮಾದರಿ
ಭಾರತ ಅನೇಕ ಶತಮಾನಗಳಿಂದ ವಿವಿಧ ರೀತಿಯ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕಾದರೆ ’ಪಾಶ್ಚಾತ್ಯ ಬೆಳವಣಿಗೆಯ ಮಾದರಿ’ಗಳಿಂದ (Western Economic Models) ಮತ್ತು ಬೇರೆಬೇರೆ ’ಇಸಂ’ಗಳಿಂದ ಸಾಧ್ಯವಿಲ್ಲ ಎನ್ನುವ ಅಚಲ ನಂಬಿಕೆ ಗಾಂಧಿಯವರದಾಗಿತ್ತು. ಆ ಮಾದರಿಗಳು ಮತ್ತು ’ಇಸಂ’ಗಳು ಕೈಗಾರಿಕೀಕರಣ, ನಗರೀಕರಣ, ಯಾಂತ್ರೀಕರಣ ಮತ್ತು ಆರ್ಥಿಕ ಉತ್ಪಾದನೆಗಳಿಗೆ ಹೆಚ್ಚಿನ ಮಹತ್ತ್ವ ನೀಡಿದ ಕಾರಣ ಅವುಗಳು ನಮ್ಮ ದೇಶದ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದರು. ನಮ್ಮ ದೇಶದ ಸಮಸ್ಯೆಗಳನ್ನು ಪರಿಹರಿಸಲು ನಮ್ಮದೇ ಆದ ಒಂದು ಹೊಸ ಆರ್ಥಿಕ ಮಾದರಿಯ ಅಗತ್ಯವನ್ನು ಒತ್ತಿಹೇಳಿದರು. ಪ್ರತಿ ದೇಶಕ್ಕೂ ತನ್ನದೇ ಆದ ವೈಶಿ?ಗಳಿರುವುದರಿಂದ ಆಯಾಯಾ ದೇಶಗಳ ಅಗತ್ಯಕ್ಕೆ ಅನುಗುಣವಾಗಿ ಬೆಳವಣಿಗೆಯ ಮಾದರಿಯನ್ನು ರೂಪಿಸಿ ಅಳವಡಿಸಬೇಕಾಗುತ್ತದೆ ಎಂದು ಹೇಳಿದರು. ನಮ್ಮ ದೇಶದ ಮಾದರಿಯಲ್ಲಿ ನಮಗೆ ತಕ್ಕಂತೆ ನಮ್ಮ ಆರ್ಥಿಕ ಪುನರುತ್ಥಾನ ಮಾಡಬೇಕಾದ ಅನಿವಾರ್ಯತೆಯನ್ನು ಮನಗಾಣಿಸಿದರು. ಈ ಹಿನ್ನೆಲೆಯಲ್ಲಿ ಗಾಂಧಿಯವರ ಆರ್ಥಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂಬುದು ಈ ಲೇಖಕನ ಅನಿಸಿಕೆ.
ಗಾಂಧಿಯವರ ಚಿಂತನೆ, ಅನುಭವ ಮತ್ತು ಕಲ್ಪನೆಯಂತೆ ಪ್ರಪಂಚದಲ್ಲಿ ಇಲ್ಲಿಯವರೆಗೆ ಬೆಳೆದುಬಂದ ಯಾವುದೇ ಅರ್ಥವ್ಯವಸ್ಥೆ (Economic System) ಆರ್ಥಿಕ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾಗಿದೆ. ಪ್ರಪಂಚದಲ್ಲಿ ವಿವಿಧ ಕಾಲಖಂಡಗಳಲ್ಲಿ, ವಿವಿಧ ದೇಶಗಳಲ್ಲಿ ನಡೆದ ಎಲ್ಲ ರೀತಿಯ ಪ್ರಯೋಗಗಳು ತಮ್ಮ ಉದ್ದೇಶಗಳನ್ನು ಪೂರ್ಣಗೊಳಿಸುವ ದಿಕ್ಕಿನಲ್ಲಿ ಯಶಸ್ವಿಯಾಗಿಲ್ಲ. ವಿವಿಧ ವಾದಗಳ ಆರ್ಥಿಕ ವ್ಯವಸ್ಥೆ ಮತ್ತು ಪರ್ಯಾಯ ವ್ಯವಸ್ಥೆಗಳಾದ ಬಂಡವಾಳಶಾಹಿ ಪದ್ಧತಿ (Capitalism), ಸಮಾಜವಾದ (Socialism), ಸಮತಾವಾದ (Communism) ಮತ್ತು ಮಿಶ್ರ ಆರ್ಥಿಕ ಪದ್ಧತಿ (Mixed Economy)ಗಳು ಜಗತ್ತಿನ ಜನಸಾಮಾನ್ಯರ (Common Man) ಜೀವನವನ್ನು ಸುಧಾರಿಸಿ ಸುಖಕರವಾಗಿಸುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂಬ ದೃಢನಿರ್ಧಾರಕ್ಕೆ ಅವರು ಬಂದರು. ಆರ್ಥಿಕ ಪ್ರಗತಿ, ಸಮೃದ್ಧಿ ಮತ್ತು ಅಭ್ಯುದಯಗಳ ಮತ್ತು ಆಧುನಿಕ ನಾಗರಿಕತೆಯ ಹೆಸರಿನಲ್ಲಿ ಐಹಿಕ ಸಮೃದ್ಧಿ ಮತ್ತು ಸುಖಸಾಧನಗಳ ಹಾಗೂ ಭೋಗವಸ್ತುಗಳ ಉತ್ಪಾದನಾ ಪ್ರಮಾಣ ಹೆಚ್ಚುವಿಕೆ ಇತ್ಯಾದಿಗಳು ಮನು?ನ ಜೀವನವನ್ನು ತೃಪ್ತಿಪಡಿಸುವುದರ ಬದಲು ಉದ್ವೇಗ, ಅಶಾಂತಿ, ಆತಂಕ, ಕಳವಳ ಮತ್ತು ಅಸಂತೋ?ದ ಮಟ್ಟವನ್ನು ಹೆಚ್ಚುಮಾಡುತ್ತಿವೆ ಎಂಬ ಅರಿವನ್ನು ಅವರು ಮೂಡಿಸಿದರು. ಆದಕಾರಣ ಅವರು ನಮ್ಮ ದೇಶದ ಸಾಮಾನ್ಯಜನರ ಸಮಸ್ಯೆಗಳನ್ನು ಪರಿಹರಿಸಲು ಪಾಶ್ಚಾತ್ಯ ಮಾದರಿಗಳಿಂದ ದೂರವಾಗಿ ಪ್ರಾಚ್ಯ ಮಾದರಿಗಳ ಕಡೆಗೆ ತಮ್ಮ ಗಮನವನ್ನು ಹರಿಸಿದರು.
ಪ್ರಪಂಚದ ಇತಿಹಾಸದಲ್ಲಿ ಮೊಟ್ಟಮೊದಲಬಾರಿಗೆ ಗಾಂಧಿಯವರು ಈಗಿರುವ ಆರ್ಥಿಕ ವ್ಯವಸ್ಥೆಗಳಿಗೆ ಒಂದು ನವೀನ ಪರ್ಯಾಯ ವ್ಯವಸ್ಥೆಯನ್ನು ಕೊಡಲು ಸಮರ್ಥರಾದರು. ಪಾಶ್ಚಿಮಾತ್ಯ ಬೆಳವಣಿಗೆಯ ಮಾದರಿಗೆ ಸಮರ್ಪಕವಾದ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿದ ಕೀರ್ತಿ ಗಾಂಧಿಯವರಿಗೆ ಸಲ್ಲುತ್ತದೆ. ಈ ಹೊಸ ಆರ್ಥಿಕವ್ಯವಸ್ಥೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಮತ್ತೊಮ್ಮೆ ಪುನಶ್ಚೇತನಗೊಂಡು ಶಕ್ತಿಶಾಲಿ ಆರ್ಥಿಕಶಕ್ತಿಯಾಗಿ ಹೊರಬರಲು ದಾರಿತೋರುತ್ತದೆ. ಅವರ ವಿಚಾರಗಳು ಮತ್ತು ಆರ್ಥಿಕ ಮಾದರಿ ಬಹಳಷ್ಟು ಮಟ್ಟಿಗೆ ಬೆಳವಣಿಗೆ ಹೊಂದುತ್ತಿರುವ ದೇಶಗಳಿಗೆ ಅನ್ವಯವಾಗುತ್ತವೆ.
ಬಂಡವಾಳಶಾಹಿ ಆರ್ಥಿಕವ್ಯವಸ್ಥೆಯ ಸಮಸ್ಯೆಗಳಿಗೂ ಅಲ್ಲಿ ಉತ್ತರ ಸಿಗಲಿದೆ. ಗಾಂಧಿಯವರ ಪರ್ಯಾಯ ಆರ್ಥಿಕ ಬೆಳವಣಿಗೆಯ ಮಾದರಿ ಐಹಿಕ ಸುಖಭೋಗ ಆಧಾರಿತ ಜೀವನಮಟ್ಟವನ್ನು ಸುಧಾರಿಸುವ ಬದಲು ಮಾನವನ ಆಧ್ಯಾತ್ಮಿಕ ಜೀವನಮೌಲ್ಯಗಳ ಮತ್ತು ಆದರ್ಶಗಳ ವೃದ್ಧಿಯ ಕಡೆಗೆ ಹೆಚ್ಚಿನ ಗಮನಹರಿಸುತ್ತದೆ. ಅವರ ದೃಷ್ಟಿಯಲ್ಲಿ ಆರ್ಥಿಕ ಬೆಳವಣಿಗೆ ಮಾನವ ಸಮೂಹದ ಬಡತನ ನಿರ್ಮೂಲನ ಮಾಡುವ ಒಂದು ಪ್ರಬಲ ಸಾಧನವಾಗಬೇಕು. ಕಡುಬಡತನ ಮನುಷ್ಯನನ್ನು ನೈತಿಕವಾಗಿ ಅವನತಿ ಹೊಂದುವಂತೆ ಮಾಡುತ್ತದೆ. ಆದಕಾರಣ ತಮ್ಮ ಆರ್ಥಿಕ ಮಾದರಿಯಲ್ಲಿ ಪ್ರತಿಯೊಬ್ಬ ಸಾಮಾನ್ಯ ಮನು?ನ ಜೀವನದ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯ ಕಡೆಗೆ ಅವರು ಗಮನ ಹರಿಸಿದರು. ಜೊತೆಗೆ ಮನು?ನ ಘನತೆ, ಗೌರವವನ್ನು ಕಾಪಾಡುವ ಅನಿವಾರ್ಯತೆಯನ್ನು ಮನಗಾಣಿಸಿದರು. ಅದಕ್ಕೆ ಅಹಿಂಸೆಯ ದಾರಿ ಅಗತ್ಯ. ಏಕೆಂದರೆ ಹಿಂಸೆಯು ಮನುಷ್ಯನನ್ನು ಶೋಷಣೆ ಮಾಡುತ್ತದೆ. ಹಾಗಾಗಿ ಆರ್ಥಿಕ ವಿಮೋಚನೆ ಮನುಷ್ಯನ ಗೌರವವನ್ನು ಕಾಪಾಡಿ ಭದ್ರ ಬುನಾದಿಯನ್ನು ಹಾಕಲು ಅವಶ್ಯ ಎಂದರು. ರಾಜಕೀಯ ಮತ್ತು ಆರ್ಥಿಕ ಶಕ್ತಿಗಳು ಮಾನವ ಕೇವಲ ಐಹಿಕ ಸುಖಭೋಗಗಳನ್ನು ಅನುಭವಿಸುವವನು ಮಾತ್ರ ಎನ್ನುವುದರ ಬದಲು ಅವರನ್ನು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉದ್ದೇಶಗಳನ್ನು ಹೊಂದಿರುವ ವ್ಯಕ್ತಿಗಳನ್ನಾಗಿ ರೂಪಿಸುವ ವ್ಯವಸ್ಥೆಯಾಗಿ ಪರಿವರ್ತಿತವಾಗಬೇಕು ಎಂದು ಅವರು ಭಾವಿಸಿದರು. ರಾಜಕೀಯ ಸ್ವಾತಂತ್ರ್ಯ ಕೇವಲ ಕೊನೆಯ ಉದ್ದೇಶವಲ್ಲ. ಅದು ಮಾನವರ ಶೋ?ಣೆ ಮತ್ತು ಇನ್ನೊಬ್ಬರನ್ನು ತುಳಿಯುವ ಸಾಧನವಾಗದೆ ಅವರ ಅಭಿವೃದ್ಧಿಗೆ ಪೂರಕವಾಗಿರಬೇಕು ಎಂದರು.
ಗಾಂಧಿಯವರ ಪರ್ಯಾಯ ಆರ್ಥಿಕ ಬೆಳವಣಿಗೆಯ ಮಾದರಿಗೆ ’ಸರ್ವೋದಯ ಮಾದರಿ’ ಎಂದು ಕರೆಯುತ್ತೇವೆ. ಈ ಹೊಸ ಮಾದರಿ ಧರ್ಮದರ್ಶಿ ತತ್ತ್ವದ ಅಡಿಪಾಯದ ಮೇಲೆ ನಿಂತಿದೆ. ಈ ಮಾದರಿಯು ಭಾರತೀಯ ತತ್ತ್ವಶಾಸ್ತ್ರ, ಆದರ್ಶ, ನೈತಿಕ ಮೌಲ್ಯಗಳು ಹಾಗೂ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಆಧಾರದ ಮೇಲೆ ಬೆಳೆದುಬಂದುದಾಗಿದೆ. ಮಾನವರ ಆವರ್ಧಕ ಬಯಕೆಗಳನ್ನು ತೃಪ್ತಿಪಡಿಸುವ ಬದಲು ಅವರ ಮೂಲಭೂತ ಬಯಕೆಗಳ ಪೂರೈಕೆಗೆ ಆದ್ಯಗಮನ ಇಲ್ಲಿ ನೀಡಲಾಗಿದೆ. ಮೂಲ ಆವಶ್ಯಕತೆಗಳಾದ ಅನ್ನ, ವಸತಿ, ಬಟ್ಟೆ, ವಿದ್ಯಾಭ್ಯಾಸ ಮತ್ತು ಔಷಧಗಳು ದೊರೆಯದ ಹೊರತು ವ್ಯಕ್ತಿಯ ಯಾವುದೇ ವಿಕಾಸ ಸಾಧ್ಯವಿಲ್ಲ ಎನ್ನುವುದೇ ಸರ್ವೋದಯದ ಸಾರ. ಪ್ರತಿ ವ್ಯಕ್ತಿಯ ಸರ್ವಾಂಗೀಣ ವಿಕಾಸ, ಸಮಾಜದ ಕಟ್ಟಕಡೆಯವನಿಂದ ಮೊದಲುಗೊಂಡು ಸರ್ವರ ಸರ್ವತೋಮುಖ ವಿಕಾಸವೇ ಸರ್ವೋದಯದ ಮುಖ್ಯಗುರಿ. ಈ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿದಾಗ ಪಾಶ್ಚಾತ್ಯ ಆರ್ಥಿಕತಜ್ಞರಿಗೆ ಗಾಂಧಿಯವರ ಮಾದರಿಯನ್ನು ಅರ್ಥಮಾಡಿಕೊಂಡು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ದೌರ್ಭಾಗ್ಯದ ಸಂಗತಿಯೆಂದರೆ ನಮ್ಮ ದೇಶದ ಆರ್ಥಿಕ ತಜ್ಞರೂ ಸಹ ಗಾಂಧಿಯವರ ಈ ಹೊಸ ವಿಚಾರಧಾರೆಗೆ ಹೆಚ್ಚಿನ ಮಹತ್ತ್ವವನ್ನು ನೀಡಲಿಲ್ಲ. ಇದರ ಮಧ್ಯೆಯೂ ಇತ್ತೀಚಿನ ದಿನಗಳಲ್ಲಿ ಅವರ ವಿಚಾರಧಾರೆಗಳು ಅನೇಕ ತಜ್ಞರ ಗಮನಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.
’ಸರ್ವರ ಏಳಿಗೆ’ಯ ಹೊಸ ಪರಿಕಲ್ಪನೆ
ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞ ಜೆ.ಎಸ್. ಮಿಲ್ ಅವರ ಬೋಧನೆಯ ಪ್ರಕಾರ ಅರ್ಥಶಾಸ್ತ್ರದ ಕಟ್ಟಕಡೆಯ ಪ್ರಮಾಣಮಾಪನ ಎಂದರೆ – ’ಬಹುಸಂಖ್ಯೆಯವರಿಗೆ ಬಹುದೊಡ್ಡ ಒಳಿತನ್ನು ಸಾಧಿಸುವುದು; ದಕ್ಷ ಆರ್ಥಿಕ ಆಡಳಿತ ವ್ಯವಸ್ಥೆ ಬಹುಜನರ ಕಲ್ಯಾಣವನ್ನು ಮಾಡುವುದು.’ ಈ ಉದ್ದೇಶವನ್ನು ಬೆಂಬಲಿಸುವ ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರಾದ ಎ.ಸಿ. ಪಿಗೂ ಮತ್ತು ಎಚ್. ಡಾಲ್ಟನ್ ಅವರು ಪ್ರತಿಪಾದಿಸಿದ ’ಗರಿಷ್ಠ ಸಾಮಾಜಿಕ ಅನುಕೂಲತಾ ತತ್ತ್ವ’ (Maximum Social Advantage) ದ ಅನುಸಾರವಾಗಿ ಬಹುದೊಡ್ಡ ಸಂಖ್ಯೆಯವರಿಗೆ ಬಹುದೊಡ್ಡ ಒಳಿತನ್ನು ಮಾಡಲು ಅರ್ಥವ್ಯವಸ್ಥೆಯು ಕಾರ್ಯನಿರತವಾಗಿರಬೇಕು ಎಂದು ಹೇಳಿದ್ದಾರೆ. ಜನಸಮುದಾಯಕ್ಕೆ ಗರಿಷ್ಠ ಸಾಮಾಜಿಕ ಅನುಕೂಲಗಳನ್ನು ತಂದೀಯುವ ಸಾರ್ವಜನಿಕ ಹಣಕಾಸು ವ್ಯವಸ್ಥೆಯು ಅತ್ಯುತ್ತಮವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎ.ಸಿ. ಪಿಗೂ ಅವರು ಇದನ್ನು ’ಗರಿಷ್ಠ ಸಾಮಾಜಿಕ ಯೋಗಕ್ಷೇಮ’ (Maximum Social Welfare) ಎಂದು ಕರೆದಿದ್ದಾರೆ. ಅವರ ಅಭಿಪ್ರಾಯದಲ್ಲಿ ಸಾರ್ವಜನಿಕ ಹಣಕಾಸು ನಿರ್ವಹಣೆಯ ಮೂಲತತ್ತ್ವ ಎಂದರೆ ಅತಿ ಹೆಚ್ಚು ಜನರಿಗೆ ಅತಿ ಹೆಚ್ಚಿನ ಸಂತೋ?ವನ್ನು ಉಂಟುಮಾಡುವುದು. ಪ್ರಪಂಚದಾದ್ಯಂತ ಅರ್ಥಶಾಸ್ತ್ರವನ್ನು ಪಾಠಮಾಡುವ ಎಲ್ಲ ಅಧ್ಯಾಪಕರು ಸಾರ್ವಜನಿಕ ಹಣಕಾಸಿನ ಈ ಮೂಲತತ್ತ್ವವನ್ನು ಇಂದು ಕೂಡ ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತಿದ್ದಾರೆ.
ಗಾಂಧಿಯವರ ಪ್ರಕಾರ ’ಬಹುದೊಡ್ಡ ಸಂಖ್ಯೆಯ ಬಹುದೊಡ್ಡ ಒಳಿತು’ ಎಂಬ ಕಲ್ಪನೆ ವೈಜ್ಞಾನಿಕವಾಗಿ ಕಾರಣ ಅವರು ಈ ಪರಿಕಲ್ಪನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಅವರ ದೃಷ್ಟಿಯಲ್ಲಿ ಈ ಸಿದ್ಧಾಂತವನ್ನು ಅಳವಡಿಕೆಗೆ ತಂದರೆ ನಾವು ಜನರ ಕಲ್ಯಾಣ ಮತ್ತು ಹಿತವನ್ನು ಭಾಗಶಃ ಮಾತ್ರ ಸಾಧಿಸಲು ಸಾಧ್ಯ ಎಂದರಲ್ಲದೆ, ಮುಂದುವರಿದು – “ಈ ನಗ್ನ ಸತ್ಯವನ್ನು ಒಪ್ಪಿದಲ್ಲಿ ಶೇ. ೫೧ ಜನರ ಒಳಿತನ್ನು ಸಾಧಿಸಲು ಶೇ. ೪೯ ಜನರ ಹಿತವನ್ನು ಕಡೆಗಣಿಸಬೇಕಾಗುತ್ತದೆ. ಬದಲಾಗಿ, ಯಾವುದೇ ಆರ್ಥಿಕ ವ್ಯವಸ್ಥೆಯಲ್ಲಿ ’ಪ್ರತಿಯೊಬ್ಬ ವ್ಯಕ್ತಿಯ ಕಲ್ಯಾಣ’ವೇ (Welfare of all individuals) ಪ್ರಮುಖ ಉದ್ದೇಶವಾಗಿರಬೇಕು. ’ಸರ್ವರ ಅಭ್ಯುದಯ’ವೇ ಘೋಷವಾಕ್ಯವಾಗಿರಬೇಕು” ಎಂದರು. ಇದನ್ನು ಗಾಂಧಿಯವರು ’ಸರ್ವೋದಯ ತತ್ತ್ವ’ ಎಂದು ಕರೆಯುತ್ತಾರೆ.
ಗಾಂಧಿಯವರ ಪ್ರಕಾರ “ಅರ್ಥಶಾಸ್ತ್ರ ’ಮಾನವಕಲ್ಯಾಣ’ ಸಾಧಿಸುವ ವಿಜ್ಞಾನ. ಅದರ ಗುರಿ ಸರ್ವರ ಏಳಿಗೆಯದ್ದಾಗಿರಬೇಕು. ನಿಜವಾದ ಅರ್ಥಶಾಸ್ತ್ರವು ಸಾಮಾಜಿಕ ನ್ಯಾಯಕ್ಕೆ ಒತ್ತುನೀಡುತ್ತದೆ. ಎಲ್ಲ ಜನರ, ಅದರಲ್ಲೂ ಅತಿದುರ್ಬಲ ವರ್ಗದವರಿಗೆ ಸಮಾನತೆ ಕಲ್ಪಿಸಿದಾಗ ಅವರಿಗೆ ಸಭ್ಯಜೀವನ ನಡೆಸುವ ಅವಕಾಶ ಉಂಟಾಗುತ್ತದೆ” (Gandhi, Vol. VI, 1968, p. 322).
ಗಾಂಧಿಯವರ ಸರ್ವೋದಯತತ್ತ್ವ ನಮ್ಮ ಭಾರತೀಯ ತತ್ತ್ವಶಾಸ್ತ್ರದ ಉನ್ನತ ವಿಚಾರವಾದ ’ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವ ಹೇಳಿಕೆಯನ್ನು ಆಧರಿಸಿದೆ. ’ಎಲ್ಲರೂ ಸಂತೋ?ವಾಗಿರಲಿ’ ಎನ್ನುವುದು ಈ ಹೇಳಿಕೆಯ ಅರ್ಥ. ಗಾಂಧಿಯವರ ಪ್ರಕಾರ – ಸರ್ಕಾರ ತನ್ನ ಹಣಕಾಸಿನ ವ್ಯವಹಾರವನ್ನು ನಿರ್ವಹಿಸುವಾಗ ಕೇವಲ ಬಹುಸಂಖ್ಯಾತರ (Majority People) ಯೋಗಕ್ಷೇಮವನ್ನು ಉದ್ದೇಶಪೂರ್ವಕವಾಗಿ ಇಟ್ಟುಕೊಂಡಾಗ ಅಲ್ಪಸಂಖ್ಯಾತರ (Minority People) ಯೋಗಕ್ಷೇಮವನ್ನು ಕಡೆಗಣಿಸಿದಂತಾಗುತ್ತದೆ. ’ಪೂರ್ಣ ಒಳಿತು, ಸಂಪೂರ್ಣ ಒಳಿತು’ ಅಥವಾ ’ಎಲ್ಲರ ಸಂಪೂರ್ಣ ಒಳಿತು’ ಆಡಳಿತದ ಮುಖ್ಯ ಉದ್ದೇಶವಾಗಿರಬೇಕು. ಸರ್ಕಾರದ ಮೇಲೆ ಸಮಾಜದ ಎಲ್ಲ ವರ್ಗಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ. ಹೀಗಾಗಿ ಸರ್ಕಾರದ ’ಯೋಗಕ್ಷೇಮ ನೀತಿಗಳು’ ’ಸಮಾಜದ ಕಟ್ಟಕಡೆಯ ವ್ಯಕ್ತಿ’ಯನ್ನು ತಲಪಿ, ಅವರ ಕಲ್ಯಾಣವನ್ನು ಸಾಧಿಸಲು ಸಮರ್ಥವಾಗಿರಬೇಕು. ’ಅಂತ್ಯೋದಯ’ವನ್ನು ಸಾಧಿಸುವುದು ಗಾಂಧೀಯ ಅರ್ಥಶಾಸ್ತ್ರದ ತಿರುಳು.
ಎಲ್ಲರ ಅಂದರೆ – ಬಡವರಲ್ಲಿ ಬಡವರ ಕಲ್ಯಾಣ; ಎಂದರೆ – ಪ್ರತಿಯೊಬ್ಬರ ಮೂಲಭೂತ ಭೌತಿಕ, ಸಾಮಾಜಿಕ, ಆಧ್ಯಾತ್ಮಿಕ ಆವಶ್ಯಕತೆಗಳನ್ನು ಪೂರೈಸುವುದು. ಪ್ರತಿಯೊಬ್ಬ ಮನು?ನಿಗೂ ಗೌರವದಿಂದ ಬದುಕುವ ಹಕ್ಕು ಇದೆ ಎಂಬುದನ್ನು ಗುರುತಿಸಬೇಕು. ಗಾಂಧಿಯವರ ಸರ್ವೋದಯದ ಪರಿಕಲ್ಪನೆ ಪಾಶ್ಚಾತ್ಯರ ’ಬಹುದೊಡ್ಡ ಸಂಖ್ಯೆಯ ಬಹುದೊಡ್ಡ ಒಳಿತು’ ಪರಿಕಲ್ಪನೆಗೆ ತೀರಾ ವಿರುದ್ಧವಾದುದು. ಅವರು ಆ ಕಲ್ಪನೆಯನ್ನು ’ಹೃದಯಶೂನ್ಯ ಸಿದ್ಧಾಂತ’ ಎಂದು ಪರಿಗಣಿಸಿದ್ದರು. ಆ ಸಿದ್ಧಾಂತವು ಮಾನವಜನಾಂಗಕ್ಕೆ ಒಳಿತನ್ನು ಸಾಧಿಸುವ ಬದಲು ಹೆಚ್ಚಿನ ಹಾನಿಯನ್ನು ಉಂಟುಮಾಡಿದೆ ಎಂಬ ತಮ್ಮ ಸ್ಪಷ್ಟ ನಿಲವನ್ನು ವ್ಯಕ್ತಪಡಿಸಿದ್ದರು.(Gandhi, Vol. VI, 1968, p. 48)
ಅರ್ಥಶಾಸ್ತ್ರ ನಿಯಮಗಳ ಬಗೆಗಿನ ನಿಲವು
ಗಾಂಧಿಯವರ ಅಭಿಪ್ರಾಯದಲ್ಲಿ ಆರ್ಥಿಕ ನಿಯಮಗಳು (Economic Laws) ಪ್ರಕೃತಿಯ ನಿಯಮಕ್ಕೆ (Laws of Nature) ಅನುಗುಣವಾಗಿರಬೇಕು. ಪ್ರಕೃತಿಯಲ್ಲಿ ಸಹಜವಾಗಿರುವ ಮೇಲುಸ್ತರದ ಮತ್ತು ಕೆಳಸ್ತರದ ನಿಯಮಗಳಲ್ಲಿ (Upper and Lower Laws) ಸಮತೋಲ ಇರಬೇಕು. ಈ ಸಂತುಲದಲ್ಲಿ ವ್ಯತ್ಯಾಸವಾದಾಗ ಅವ್ಯವಸ್ಥೆ ಉಂಟಾಗಿ ಗೊಂದಲ ನಿರ್ಮಾಣವಾಗುತ್ತದೆ. ಅರ್ಥಶಾಸ್ತ್ರದ ತತ್ತ್ವಗಳು ಭೌತಿಕ ಪ್ರಗತಿ, ಸಾಮಾಜಿಕ ಸಾಮರಸ್ಯ ಹಾಗೂ ನೈತಿಕ ಮೌಲ್ಯಗಳ ಉನ್ನತೀಕರಣ ಮಾಡಬೇಕಾದರೆ ಪ್ರಕೃತಿನಿಯಮಗಳಿಗೆ ಅನುಗುಣವಾಗಿರಬೇಕು. ಮೂಲಭೂತವಾಗಿ ಅರ್ಥಶಾಸ್ತ್ರದ ನಿಯಮಗಳು ಮತ್ತು ಪ್ರಕೃತಿನಿಯಮಗಳ ನಡುವೆ ಯಾವುದೇ ರೀತಿಯ ತಿಕ್ಕಾಟ, ಘ?ಣೆ ಇಲ್ಲ. ಪ್ರಕೃತಿನಿಯಮಗಳು ಜಾಗತಿಕವಾಗಿದ್ದು ಪ್ರಪಂಚದ ಎಲ್ಲೆಡೆ ಅನ್ವಯವಾಗುವಂತಹವು. ಅವು ಪ್ರಕೃತಿಜನ್ಯವಾದವುಗಳು. ಪ್ರಕೃತಿಯಲ್ಲಿ ಸಾಮಾನ್ಯವಾಗಿ ನಡೆಯುವ ಚಟುವಟಿಕೆಗಳನ್ನು ಸೂಚಿಸುವ ನಿಯಮಗಳನ್ನು ಪ್ರಕೃತಿನಿಯಮಗಳೆನ್ನುತ್ತಾರೆ. ಆದರೆ ಆರ್ಥಿಕ ನಿಯಮಗಳು ಜಾಗತಿಕವಲ್ಲ; ಪ್ರಪಂಚದಲ್ಲಿ ಎಲ್ಲರೂ ಈ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ.
ಮಾನವರು ಆರ್ಥಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ ಅರ್ಥಶಾಸ್ತ್ರಜ್ಞರು ಕಂಡುಹಿಡಿದ ಅವರ ಏಕರೂಪ ನಡವಳಿಕೆಗಳನ್ನು ಅರ್ಥಶಾಸ್ತ್ರದ ನಿಯಮಗಳೆನ್ನುತ್ತಾರೆ. ಆರ್ಥಿಕ ನಿಯಮಗಳು ಮಾನವರು ವಿವಿಧ ರೀತಿಯ ಆರ್ಥಿಕ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾಗ ಅವರು ಯಾವ ರೀತಿಯಲ್ಲಿ ನಡೆದುಕೊಳ್ಳಬಹುದು ಎಂಬುದನ್ನು ಸೂಚಿಸುತ್ತವೆಯೇ ಹೊರತು ನಿರ್ದಿಷ್ಟವಾಗಿ ಹೀಗೇ ನಡೆದುಕೊಳ್ಳುತ್ತಾರೆಂದು ಹೇಳಲು ಬರುವುದಿಲ್ಲ. ಆದ್ದರಿಂದ ಅವುಗಳು ಮಾನವನ ಆರ್ಥಿಕ ನಡವಳಿಕೆಯ ಪ್ರವೃತ್ತಿಯನ್ನು ಸೂಚಿಸುವ ಸಾಮಾನ್ಯ ಹೇಳಿಕೆಗಳು ಮಾತ್ರ ಎಂದು ಆರ್ಥಿಕತಜ್ಞರ ಅಭಿಮತ. ಅವುಗಳನ್ನು ವಿಶ್ವವ್ಯಾಪಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪರಿಸ್ಥಿತಿಗೆ ತಕ್ಕಂತೆ ಆರ್ಥಿಕ ನಿಯಮಗಳನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಯೊಂದು ದೇಶವೂ ತನ್ನ ಅನುಕೂಲಕ್ಕೆ, ಆವಶ್ಯಕತೆಗೆ ತಕ್ಕಂತೆ ಆರ್ಥಿಕ ನಿಯಮಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ ಎಂದು ಗಾಂಧಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. (ಮುಂದುವರಿಯುವುದು)