– ೧ –
ಸಮುದ್ರದ ಮೇಲಿನಿಂದ ತಣ್ಣನೆ ಗಾಳಿ ಬೀಸುತ್ತಿದೆ. ಯಾವುದೇ ಅಲ್ಲೋಲಕಲ್ಲೋಲವಿಲ್ಲದೆ ಸಮುದ್ರವೂ ಪ್ರಶಾಂತ ಗಂಭೀರವಾಗಿದೆ. ದಡದಲ್ಲಿ ಜನರು ಚಿಕ್ಕಚಿಕ್ಕ ಗುಂಪುಗಳಲ್ಲಿ ನೆರೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ಒಬ್ಬಾಕೆ ’ಕಣ್ಣೀರು ಸುರಿಸುವವರು ಧನ್ಯರು; ಪರಲೋಕರಾಜ್ಯವು ಅವರಿಗೇ ಸೇರಿರುತ್ತದೆ’ ಎಂಬ ಅರ್ಥದ ಭಕ್ತಿಗೀತವನ್ನು ಹಾಡುತ್ತಿದ್ದಾಳೆ. ಅನತಿದೂರದಲ್ಲಿ ಹಲವರು ಎಳೆಯರು ಆಟವಾಡಿಕೊಳ್ಳುತ್ತಿದ್ದಾರೆ. ಒಂದು ಮಗು ತನ್ನ ಕಾಲುಗಳನ್ನು ಮರಳಿನೊಳಕ್ಕೆ ಚಾಚಿ ಆಟದ ಮನೆಯನ್ನು ಕಟ್ಟುತ್ತಿದೆ. ಇನ್ನೊಂದು ಮಗು ಬಣ್ಣಬಣ್ಣದ ಕವಡೆಗಳನ್ನು ಆಯುತ್ತಿದೆ. ಅಲ್ಲಿಯೆ ಪಕ್ಕದಲ್ಲಿ ಕೆಲವು ಸತ್ತ ಮೀನುಗಳ ಅವಶೇಷಗಳು ಬಿದ್ದಿವೆ. ಇತರ ಹಲವು ಬಗೆಯ ಚಿಪ್ಪುಗಳೂ ಸಮುದ್ರಮೂಲದ ವಸ್ತುಗಳೂ ಅಲ್ಲಲ್ಲಿ ಕಾಣುತ್ತಿವೆ. ಮತ್ತೊಂದು ಮಗು ಸ್ವಲ್ಪ ದೂರದಲ್ಲಿದ್ದ ಒಂದು ಮೂಳೆಯ ತುಂಡನ್ನು ತನ್ನ ಜೊತೆಗಾರ್ತಿಗೆ ತೋರಿಸುತ್ತಿದ್ದಾಳೆ. ಮೂಳೆಯನ್ನು ಹೆಕ್ಕಿ ತಂದವಳ ಹೆಸರು ಸ್ವೆಟ್ಲಾನಾ. ಅವಳು ಹೇಳಿದಳು:
“ಏಯ್ ಮುನ್ನಿ, ಇಲ್ಲಿ ನೋಡು – ನನಗೆ ಒಂದು ಮೂಳೆ ಸಿಕ್ಕಿದೆ. ಇದು ಯಾವುದೋ ಸಮುದ್ರಜೀವಿಯದಿರಬೇಕು.”
ವೇದಗಳು ಯಾವಾಗ ಆವಿಷ್ಕಾರಗೊಂಡವು ಎಂಬುದು ಯಾರಿಗೂ ತಿಳಿಯದು. ವೇದದ ಒಂದೊಂದು ಅಕ್ಷರಕ್ಕೂ ಒಂದೊಂದು ಪದಕ್ಕೂ ಒಂದೊಂದು ಮಂತ್ರಕ್ಕೂ ಕನಿಷ್ಠ ನಾಲ್ಕೈದು ಅರ್ಥಗಳು ಇರುತ್ತವೆ. ಹೀಗೆ ಬೇರೆಬೇರೆಯವರು ಬೇರೆಬೇರೆ ಅರ್ಥಗಳನ್ನು ಹೇಳುತ್ತಿರುತ್ತಾರೆ. ವೇದಕ್ಕೆ ನಿಣ್ಯ ಎಂದೂ ಹೆಸರಿದೆ. ಆ ಶಬ್ದದ ಅರ್ಥ ರಹಸ್ಯ ಭಾಷೆ ಎಂದು. ಮಂತ್ರಗಳ ಅರ್ಥಗಳು ಅಷ್ಟು ರಹಸ್ಯವಾಗಿ ಇರಬೇಕಾದ ಆವಶ್ಯಕತೆ ಏನು?- ಎಂಬುದೊಂದು ಪ್ರಶ್ನೆ. ಅಥರ್ವಣವೇದದ ಮಂತ್ರಗಳು ಬಹುಮಟ್ಟಿಗೆ ಅತೀಂದ್ರಿಯ ಶಕ್ತಿಗಳಿಗೆ ಸಂಬಂಧಿಸಿದವು.
ಮನುಷ್ಯನು ಹುಟ್ಟುವುದು, ಬೆಳೆಯುವುದು, ಸಾಯುವುದು – ಇವನ್ನು ನೋಡುತ್ತಲೇ ಇದ್ದೇವೆ. ಆದರೆ ಮನುಷ್ಯರು ಎಲ್ಲಿಂದ ಬಂದರು, ಎಲ್ಲಿಗೆ ಹೋಗುತ್ತಾರೆ – ಎಂಬುದಕ್ಕೆ ಸಮರ್ಪಕ ಉತ್ತರ ನೀಡಿದವರು ಇಲ್ಲ. ಅವರವರ ಮೇಧಾಶಕ್ತಿಯನ್ನು ಅನುಸರಿಸಿ ಅವರವರು ಪ್ರತಿಪಾದಿಸಿದ್ದಾರೆ : ಕೆಲವರು ಜ್ಯೌತಿಷದಂತೆ, ಕೆಲವರು ಬೇರೆ ರೀತಿಗಳಲ್ಲಿ. ಕಠೋಪನಿಷತ್ತಿನಲ್ಲಿ ಯಮನಿಗೂ ನಚಿಕೇತನಿಗೂ ನಡುವೆ ಸಂವಾದ ನಡೆದಿದೆ. ಮೃತಿಹೊಂದಿದವರ ಬಗೆಗೆ ಆ ಉಪನಿಷತ್ತಿನಲ್ಲಿ ಸ್ವಲ್ಪ ಚರ್ಚೆ ಇದೆ. ಆತ್ಮಗಳೆಂಬವು ಇರುವವೆ? ಇದ್ದರೆ ಅವು ಹೇಗೆ ಪ್ರಯಾಣ ನಡೆಸುತ್ತವೆ? ನಾವು ಜೀವಾತ್ಮರು
ಎನಿಸಿದ್ದೇವೆ. ಕೆಲವರನ್ನು ಮಹಾತ್ಮರೆನ್ನುತ್ತೇವೆ. ಇದು ಎಲ್ಲರಿಗೂ ತಿಳಿದ ಸಂಗತಿಯೇ. ಭಾರತೀಯ ಸಾಹಿತ್ಯದಲ್ಲಿ ಮಾತ್ರವಲ್ಲದೆ ಗ್ರೀಕ್, ಈಜಿಪ್ಶಿಯನ್, ಚೀಣೀ ಮೊದಲಾದ ಅತ್ಯಂತ ಪ್ರಾಚೀನ ಸಂಸ್ಕೃತಿಗಳಲ್ಲೆಲ್ಲ ಆತ್ಮದೊಡನೆ ಹೇಗೆ ಸಂವಾದ ನಡೆಸಬೇಕೆಂಬ ಪ್ರಸ್ತಾವವಿದೆ. ನಮ್ಮ ಹದಿನೆಂಟು ಪುರಾಣಗಳಲ್ಲಿಯೂ ಈ ವಿಷಯಕ್ಕೆ ಸಂಬಂಧಿಸಿದ ಕಥೆ – ಉಪಕಥೆಗಳು ಹೇರಳವಾಗಿವೆ. ಉದಾಹರಣೆಗೆ : ತ್ರಿಶಂಕು ಸಶರೀರನಾಗಿ ಸ್ವರ್ಗ ಲೋಕಕ್ಕೆ ಹೋಗಲು ಪ್ರಯತ್ನಿಸಿ ವಿಫಲನಾದದ್ದು ಒಂದು ಕಥೆ.19ನೇ ಶತಮಾನದಲ್ಲಿ ಹಲವರು ವಿದೇಶೀ ಧೀಮಂತರು ಭಾರತಕ್ಕೆ ಸ್ಮರಣೀಯ ಸೇವೆ ಸಲ್ಲಿಸಿದರು: ಫರ್ಡಿನಾಂಡ್ ಕಿಟ್ಟಲ್, ಸಿ.ಪಿ. ಬ್ರೌನ್ ಮೊದಲಾದವರು ಭಾಷೆಯ ಕ್ಷೇತ್ರದಲ್ಲಿ; ಕಾಟನ್ ಮೊದಲಾದವರು ಕೃಷಿಕ್ಷೇತ್ರದಲ್ಲಿ; ಮೆಕೆನ್ಜೀ ಮೊದಲಾದವರು ಇತಿಹಾಸ ದಾಖಲೆಗಳ ಕ್ಷೇತ್ರದಲ್ಲಿ; ಮನ್ರೋ ಮೊದಲಾದವರು ಆಡಳಿತ ವ್ಯವಸ್ಥೆಗಳ ಕ್ಷೇತ್ರದಲ್ಲಿ; ನಿವೇದಿತಾ, ಶ್ರೀಮಾತೆ ಮೊದಲಾದವರುಸಂಸ್ಕೃತಿಯ ಉಜ್ಜೀವನದಲ್ಲಿ; ಇತ್ಯಾದಿ. ಆ ಪಂಕ್ತಿಗೆ ಸೇರಿದ ಮತ್ತೊಬ್ಬರು (ಸಂಯುಕ್ತ) ರಷ್ಯದಲ್ಲಿನ ಯುಕ್ರೇನ್ ಪ್ರಾಂತದಲ್ಲಿ ಜನಿಸಿದ ಹೆಲೀನಾ ಪೆತ್ರೋವ್ನಾ ಬ್ಲಾವಟ್ಸ್ಕಿ (೧೮೩೧-೧೮೯೧).
ಬ್ಲಾವಟ್ಸ್ಕಿ ಪ್ರಪಂಚದಲ್ಲೆಲ್ಲ ಪರ್ಯಟನ ಮಾಡಿದವರು; ಭಾರತದಲ್ಲಿಯೂ ಹಲವು ಕಾಲ ಇದ್ದವರು; ಆಗ ಇಲ್ಲಿ ಇದ್ದ ಮಹಾತ್ಮರೊಡನೆ ಮಾತ್ರವಲ್ಲದೆ ಅನ್ಯಲೋಕಗಳಲ್ಲಿದ್ದ ಅನೇಕ ಸಿದ್ಧಪುರುಷರೊಡನೆಯೂ ಅದೃಶ್ಯಶಕ್ತಿಗಳೊಡನೆಯೂ ಆತ್ಮಿಕ ಸಂವಾದ ನಡೆಸುತ್ತಿದ್ದವರು; ಭಾರತೀಯ ಪ್ರಾಚೀನ ಸಂಸ್ಕೃತಿಯ ಪುನರುಜ್ಜೀವನದಿಂದ ಸಮಸ್ತ ಮಾನವಲೋಕಕ್ಕೂ ಸುಖಶಾಂತಿಗಳು ಲಭಿಸುತ್ತವೆ ಎಂದು ವಿಶ್ವಾಸ ತಳೆದಿದ್ದವರು. ಅವರ ಜೀವನವನ್ನು ಕುರಿತು ಪಾಶ್ಚಾತ್ಯ ದೇಶಗಳಲ್ಲಿ ಸಂಶೋಧನೆಗಳು ನಡೆದಿವೆ. ಆದರೆ ಭಾರತದೊಳಗೆ ಅವರ ಜೀವನಘಟನೆಗಳನ್ನು ಕುರಿತು ಬಂದಿರುವ ಸಾಹಿತ್ಯ ಕಡಮೆ.
ಬ್ಲಾವಟ್ಸ್ಕಿ ದೇಹವನ್ನು ಬಿಟ್ಟದ್ದು ೧೮೯೧ರ ಮೇ ೯ರಂದು. ಆದರೆ ಶ್ರದ್ಧಾಸಕ್ತರು ಕೋರಿದರೆ ಅವರ ಅದೃಶ್ಯಶಕ್ತಿಯಿಂದ ಈಗಲೂ ಮಾರ್ಗದರ್ಶನ ಪಡೆಯಬಹುದಾಗಿದೆ.
೨೦೧೭ರ ಮೇ ೯ರಂದು – ಎಂದರೆ ಅವರ ಸ್ಮರಣದಿನದಂದು – ನಾನು ಈ ರಹಸ್ಯ ಲಿಪಿ ಕೃತಿಯ ರಚನೆಯನ್ನು ಕೈಗೊಂಡೆ. ಬ್ಲಾವಟ್ಸ್ಕಿಯವರೇ ನನ್ನಿಂದ ಈ ಬರಹವನ್ನು ಮೂಡಿಸುತ್ತಿದ್ದಾರೆನಿಸುವಂತೆ ಬರಹ ಸುಲಭವಾಗಿ ಸಾಗಿತು. ಲಭ್ಯವಿದ್ದ ಒಂದಷ್ಟು ಹಿನ್ನೆಲೆ ಸಾಮಗ್ರಿಯನ್ನು ಶೇಖರಿಸಿದೆ. ಡಾ|| ಕೊಚ್ಚೆರ್ಲಕೋಟ ಶ್ರೀಲೇಖ, ಡಾ. ವಾಸಿಲಿ ವಸಂತಕುಮಾರ್, ಮಹೀಧರ, ನಳಿನೀಮೋಹನ್ ಮೊದಲಾದವರ ಬರಹಗಳೂ ನೆರವಾದವು. ಡಾ|| ಎಕ್ಕಿರಾಲ ವೇದವ್ಯಾಸ್ ಗುರುಗಳ ಪ್ರಬಂಧಗಳೂ ಸಹಾಯಕವಾದವು. ಈ ರಚನೆಯನ್ನು ಪ್ರೋತ್ಸಾಹಿಸಿದ ಆಂಧ್ರಭೂಮಿ ವಾರಪತ್ರಿಕೆಯ ಸಂಪಾದಕರಾದ ಶ್ರೀಮತಿ ಎ.ಎಸ್. ಲಕ್ಷ್ಮೀ ಅವರಿಗೂ ನನ್ನ ಕೃತಜ್ಞತೆ ಸಲ್ಲುತ್ತದೆ.
ನಾನು ಬರೆದಿರುವುದು ಕಾಲ್ಪನಿಕವಲ್ಲ, ಕಟ್ಟುಕತೆಯಲ್ಲ. ಮೇಡಂ ಬ್ಲಾವಟ್ಸ್ಕಿಯವರೇ ಬರೆದ ಗ್ರಂಥಗಳನ್ನೂ ಅವರ ಬಗೆಗೆ ಸಂಶೋಧನೆ ನಡೆಸಿದವರ ಬರಹಗಳನ್ನೂ ಆಧಾರಗಳಾಗಿ ಇರಿಸಿಕೊಂಡು ಬರೆದಿದ್ದೇನೆ. ಇಲ್ಲಿಯ ಪಾತ್ರಗಳು, ಸನ್ನಿವೇಶಗಳು – ಯಾವುವೂ ಕಲ್ಪಿತವಲ್ಲ; ಎಲ್ಲವೂ ಯಥಾರ್ಥವಾದವೇ. ಒಂದು ಜೀವನಚರಿತ್ರೆಯನ್ನು ಕಥಾಪ್ರಧಾನ ವಿನ್ಯಾಸಕ್ಕೆ ಅಳವಡಿಸಿಕೊಂಡಿರುವುದಷ್ಟೆ ನನ್ನ ರಚನಾಶಿಲ್ಪ. ಬ್ಲಾವಟ್ಸ್ಕಿ ಜೀವನಕ್ಕೆ ಸಂಬಂಧಿಸಿದಂತೆ ಇಲ್ಲಿರುವುದಕ್ಕೂ ಮಿಗಿಲಾದ ವಿಪುಲ ಸಾಮಗ್ರಿ ಇದೆ. ಅದನ್ನೆಲ್ಲ ಹೇಳುತ್ತಹೋದರೆ ಅದು ಜೀವನಚರಿತ್ರೆಯಾದೀತೇ ಹೊರತು ಐತಿಹಾಸಿಕ ಕಾದಂಬರಿಯಾಗಲಾರದು. ಈ ಕಾರಣದಿಂದ ವಾಚಕರಿಗೆ ಆಸಕ್ತಿಕರವನ್ನಾಗಿಸುವುದ ಕ್ಕಾಗಿ ಅವಶ್ಯವೆನಿಸಿದ ಸನ್ನಿವೇಶಗಳನ್ನು ಸ್ವೀಕರಿಸಿ ಈ ಕಾದಂಬರಿಯನ್ನು ರೂಪಿಸಿದ್ದೇನೆ.
ಬ್ಲಾವಟ್ಸ್ಕಿ ಕುರಿತ ಕಾದಂಬರಿಯ ರಚನೆಗೆ ತೊಡಗುವ ಮೊದಲು ನಾನು ಪರಿಮಿತ ಸಮಯದಲ್ಲಿ ಮಾಸ್ಟರ್ ಸಿ.ವಿ.ವಿ. ಹೆಸರನ್ನು ಸ್ಮರಿಸಿ ಧ್ಯಾನದಲ್ಲಿ ತೊಡಗಿದೆ. ಸಿ.ವಿ.ವಿ. ಯವರ ಶಿಷ್ಯರಿಗೂ ಅತೀಂದ್ರಿಯಜ್ಞಾನ ಇದ್ದಿತೆಂಬುದಕ್ಕೆ ನಮಗೆ ಸಾಕ್ಷ್ಯಾಧಾರಗಳು ಲಬ್ಧವಿವೆ. ಒಂದು ವಾಸ್ತವಾನುಭವ: ಎಕ್ಕಿರಾಲ ಕೃಷ್ಣಮಾಚಾರ್ಯರ ಮನೆಯ ಮುಂದೆ ಸೊಪ್ಪು ಮಾರುವವನೊಬ್ಬ ಸೊಪ್ಪೂ ಎಂದು ಕೂಗುತ್ತ ಹೋಗುತ್ತಿದ್ದ. ಎಕ್ಕಿರಾಲ ಅವರು ಸೊಪ್ಪುಮಾರುತ್ತಿದ್ದವನನ್ನು ಒಳಕ್ಕೆ ಕರೆದು ಅವನ ಮಂಕರಿಯೊಳಗಿದ್ದ ಅಷ್ಟೂ ಸೊಪ್ಪನ್ನು ಕೊಂಡು ಹಣವನ್ನಿತ್ತು ಕಳಿಸಿದರು.
ಎಕ್ಕಿರಾಲ ಅವರ ಭಾರ್ಯೆ ಇಷ್ಟೊಂದು ಸೊಪ್ಪು ನಮಗೇಕೆ ಬೇಕಾಗಿತ್ತು ರೀ? – ಎಂದು ಆಕ್ಷೇಪದ ಧ್ವನಿಯಲ್ಲಿ ಕೇಳಿದಳು. ಸೊಪ್ಪಿನವನು ಎಕ್ಕಿರಾಲ ಅವರ ಮನೆಯಿಂದ ತೆರಳಿದ ಒಂದೇ ಗಂಟೆಯ ತರುವಾಯ ಮಂಚದ ಮೇಲೆ ಪವಡಿಸಿದ್ದಂತೆ ಮೃತಿಯನ್ನೈದಿದ. ಇದನ್ನು ಅಲ್ಲಿ ಇದ್ದವರೆಲ್ಲ ನೋಡಿದರು. ಎಕ್ಕಿರಾಲ ಅವರು ತಮ್ಮ ಭಾರ್ಯೆಗೆ ಈಗ ಹೇಳಿದರು – ಆತ ಸೊಪ್ಪೂ ಎಂದು ಕೂಗಿದಾಗ ಆ ಕೂಗಿನ ಧ್ವನಿಯನ್ನು ಗಮನಿಸಿದಾಗ ಇನ್ನೊಂದು ಗಂಟೆಯಷ್ಟರಲ್ಲಿ ಅವನು ಮೃತನಾಗಲಿದ್ದಾನೆಂದು ನನಗೆ ಗ್ರಹಿಕೆಯುಂಟಾಯಿತು. ನಾನು ಅವನನ್ನು ಒಳಕ್ಕೆ ಕರೆದು ಸೊಪ್ಪನ್ನು ಕೊಳ್ಳದೆ ಇದ್ದಿದ್ದರೆ ಅವನು ಮಾರಾಟ ಮುಂದುವರಿಸಲು ಬೀದಿಯಲ್ಲಿ ನಡೆದುಹೋಗಿರುತ್ತಿದ್ದ. ಸ್ವಲ್ಪ ದೂರ ಹೆಜ್ಜೆಹಾಕಿದ ಮೇಲೆ ರಸ್ತೆಯಲ್ಲಿಯೆ ಬಿದ್ದುಬಿಡುತ್ತಿದ್ದ. ಹೀಗೆ ಆಗಲಿದ್ದುದನ್ನು ನಿರೀಕ್ಷಿಸಿ ಅವನನ್ನು ತ್ವರೆಯಾಗಿ ಮನೆಗೆ ಕಳಿಸಿಕೊಟ್ಟೆ.
ಈಚಿನ ಕಾಲದಲ್ಲಿ ದಿವ್ಯಜ್ಞಾನ ಸಮಾಜದ (ಥಿಯೊಸಾಫಿಕಲ್ ಸೊಸೈಟಿ) ಶಾಖೆಗಳ ಪ್ರಭಾವವನ್ನು ಹಿಂದಿಕ್ಕಿ ಪಿರಮಿಡ್ ಧ್ಯಾನ, ವಿಪಸ್ಸನ, ಮಾಸ್ಟರ್ ಸಿ.ವಿ.ವಿ. ಯೋಗ ಕೇಂದ್ರಗಳು, ಬ್ರಹ್ಮಕುಮಾರಿ ರಾಜಯೋಗ ಮೊದಲಾದವು ಮುನ್ನೆಲೆಗೆ ಬಂದಿವೆ.
– ರಚಯಿತ
ಪ್ರೊ|| ಮುದಿಗೊಂಡ ಶಿವಪ್ರಸಾದ್
ತೆಲುಗು ಮೂಲ: ಪ್ರೊ|| ಮುದಿಗೊಂಡ ಶಿವಪ್ರಸಾದ್
ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ
ಮುನ್ನಿ ಆ ಮೂಳೆಯನ್ನು ಕೈಯಲ್ಲಿ ತೆಗೆದುಕೊಂಡು ಪರಿಶೀಲಿಸಿದಳು. ಒಂದೆರಡು ಗಳಿಗೆಯ
ತರುವಾಯ ಗಟ್ಟಿಯಾಗಿ ನಕ್ಕಳು. ಅಲ್ಲಿ ನೋಡು – ಕುದುರೆಗಳಿವೆ ಎಂದು ಕೇಕೆಹಾಕಿದಳು. ಉಳಿದವರು
ಸುತ್ತಲೂ ನೋಡಿದರು. ಆದರೆ ಅವರಾರಿಗೂ ಕುದುರೆಗಳು ಕಾಣಲಿಲ್ಲ.
“ಅಗೋ, ಅಲ್ಲಿ ಆಯುಧಧಾರಿ ಸೈನಿಕರು ಯುದ್ಧಕ್ಕೆ ಸಾಗುತ್ತಿದ್ದಾರೆ. ಯುದ್ಧವೆಂದರೆ ಏನು,
ಮರಣ ತಾನೆ” ಎಂದಳು ಮುನ್ನಿ.
“ಯುದ್ಧವೇ? ಸೈನಿಕರೆ? ಎಲ್ಲಿದ್ದಾರೆ?”
“ಅಗೋ – ಹಾಗೆ ಹೊರಟ ಸೈನಿಕರೆಲ್ಲ ಪಾಪ ಸತ್ತು ಹೋಗಿದ್ದಾರೆ” ಎಂದು ಕಣ್ಣೀರು ಸುರಿಸತೊಡಗಿದಳು, ಮುನ್ನಿ.
ಸಂಗಡಿಗರೆಲ್ಲ ಮುನ್ನಿಯನ್ನು ನೋಡಿ ನಗುತ್ತಿದ್ದಾರೆ, ಬಾಯಿಗೆ ಬಂದಂತೆ ಕೂಗುತ್ತಿದ್ದಾರೆ, ಬೊಗಸೆಗಳಲ್ಲಿ
ಮರಳನ್ನು ಎತ್ತಿಕೊಂಡು ಚಿಮ್ಮುತ್ತಿದ್ದಾರೆ.
ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳದೆ ಮುನ್ನಿ ಮುಂದುವರಿಸಿದಳು – ಇಲ್ಲಿ ನೋಡಿರಿ – ಆ ಯುದ್ಧದಲ್ಲಿ ಸತ್ತ ಒಬ್ಬ ಸೈನಿಕನ ಮೂಳೆಯೇ ಇಲ್ಲಿ ನನ್ನ ಕೈಯಲ್ಲಿರುವುದು.
ಮಕ್ಕಳೆಲ್ಲ ಚಪ್ಪಾಳೆ ತಟ್ಟಿ ಮತ್ತೊಮ್ಮೆ ಕೇಕೆಹಾಕಿದರು.
“ಅದು ಹಾಗಿರಲಿ, ಈ ಮೀನಿನ ಸಂಗತಿ ಏನು?” ಎಂದು ಪ್ರಶ್ನಿಸಿದಳು ನಟಾಶಾ.
ಮುನ್ನಿ ಮೀನನ್ನು ತೆಗೆದುಕೊಂಡು ದೃಷ್ಟಿಸತೊಡಗಿದಳು. ಹೌದು, ಈ ಮೀನು ಸತ್ತು ನೂರು ವರ್ಷಗಳಾಗಿವೆ. ಅದರ ಅವಶೇಷವನ್ನೇ ನಾವೀಗ ನೋಡುತ್ತಿರುವುದು. ಈ ಸತ್ತ ಮೀನು ಎಲ್ಲಿಯೋ ತಿಮಿಂಗಿಲವಾಗಿ ಜನಿಸಿದ್ದಿರಬೇಕು ಎಂದಳು, ಮುನ್ನಿ.
“ಭಲೇ ಭಲೇ “ಎಂದು ಚಪ್ಪಾಳೆ ತಟ್ಟಿದರು ಸಂಗಡಿಗರು.
ಈ ವೇಳೆಗೆ ಎಲ್ಲಿಂದಲೋ ಬಿರುಗಾಳಿ ಬಂದು ಮರಳನ್ನು ಮೇಲಕ್ಕೆತ್ತಿ ಹೊಯ್ದಾಡಿಸತೊಡಗಿತು.
ಮಕ್ಕಳೆಲ್ಲ ಎದ್ದುನಿಂತರು.
“ಹಾಗಾದರೆ ಈ ಗಾಳಿಯೂ ನೂರು ವರ್ಷಗಳದ್ದೆ?”
“ಅಲ್ಲ, ಇದು ಕೋಟ್ಯಂತರ ವ? ಹಿಂದಿನದು. ಆಗಿನಿಂದ ಹೀಗೆಯೇ ಬೀಸುತ್ತ ಈಗ ನಮ್ಮ ಹತ್ತಿರ ಬಂದಿದೆ.”
ಮಕ್ಕಳೆಲ್ಲ ಮುನ್ನಿಯೊಡನೆ ಚರ್ಚಿಸತೊಡಗಿದರು. ಭೂಮಿಯೂ ಆಕಾಶವೂ ನಿಜವಾಗಿ ಒಂದರೊಡನೊಂದು ಸೇರುವುದಿಲ್ಲ. ದೂರದಿಂದ ನೋಡಿದರೆ ಸೇರಿದಂತೆ ಭ್ರಾಂತಿಯುಂಟಾಗುತ್ತದೆ. ಅದನ್ನೇ ಕ್ಷಿತಿಜ(ದಿಗಂತ)ವೆಂದು ಕರೆಯುತ್ತಾರೆ.
ಕ್ರಮಕ್ರಮವಾಗಿ ಕತ್ತಲೆ ಆವರಿಸತೊಡಗಿತು. ಮಕ್ಕಳು ಒಬ್ಬೊಬ್ಬರಾಗಿ ಮನೆಗಳತ್ತ ಹೆಜ್ಜೆಹಾಕಿದರು.
“ಏ ಮುನ್ನಿ, ನೀನೇನು ಕದಲದೆ ಕುಳಿತಿದ್ದೀ?”
ಮುನ್ನಿ ಮಾತನಾಡಲಿಲ್ಲ. ಅವಳ ಕಣ್ಣು ದೂರದ ಏನನ್ನೋ ದಿಟ್ಟಿಸುವಂತಿತ್ತು. ದಿಗಂತದಾಚೆಗಿನ ಏನನ್ನೋ ನೋಡುತ್ತಿರುವಂತಿತ್ತು.
ಕತ್ತಲೆ ಇನ್ನಷ್ಟು ದಟ್ಟವಾಯಿತು. ಮುನ್ನಿ ಕುಳಿತಿದ್ದೆಡೆಯೇ ಮುಗಿಲಿನತ್ತ ನೋಟ ನೆಟ್ಟು ಸ್ತಬ್ಧಳಾಗಿದ್ದಳು.
ಸ್ವಲ್ಪ ಸಮಯವಾದ ಮೇಲೆ ಮುನ್ನಿಯನ್ನು ಹುಡುಕಿಕೊಂಡು ಅವಳ ತಂದೆ-ತಾಯಿ ಬಂದರು.
’ಮುನ್ನಿ’ಯ ನಿಜವಾದ ಹೆಸರು ’ಬ್ಲಾವಟ್ಸ್ಕಿ’. ಪೂರ್ತಿ ಹೆಸರು – ’ಹೆಲೀನಾ ಪೆತ್ರೋವ್ನಾ ಬ್ಲಾವಟ್ಸ್ಕಿ’.
-೨-
“ಹೋಗು, ದೂರ ಹೋಗು!” – ಮುನ್ನಿ ಗಟ್ಟಿಯಾಗಿ ಅರಚುತ್ತಿದ್ದಳು. ಕೋಪದಿಂದ ಮುಷ್ಟಿಯನ್ನು ಬಿಗಿದಿದ್ದಳು – ಯಾರ ಮೇಲೋ ಸಂಘ?ಕ್ಕೆ ಹೊರಡುತ್ತಿರುವಂತೆ. ಅವಳ ಅರಚಾಟ ಆಚೆಯ ಕೋಣೆಯಲ್ಲಿದ್ದ ಅವಳ ತಾಯಿಗೆ ಕೇಳಿಸಿತು. ತಾಯಿ ವೇಗವಾಗಿ ಮುನ್ನಿ ಇದ್ದ ಕೋಣೆಗೆ ಬಂದಳು.
“ಮಗು! ಯಾರೊಡನೆ ಜಗಳ ಮಾಡುತ್ತಿದ್ದೀ?”
“ಹೋಗು, ದೂರ ಹೊರಟುಹೋಗು!”
ತಾಯಿಗೆ ಭಯವಾಯಿತು. ಮುನ್ನಿ ಯಾರಿಗೆ ಹೊರಕ್ಕೆ ಹೋಗಲು ಹೇಳುತ್ತಿದ್ದಾಳೆ? ತನ್ನನ್ನೇ?
“ಮುನ್ನಿ, ಏಕೆ ಹೀಗೆ ಹುಚ್ಚು ಹಿಡಿದಂತೆ ಅರಚುತ್ತಿದ್ದೀ? ಯಾರಿಗೆ ದೂರ ಹೋಗಲು ಹೇಳುತ್ತಿದ್ದೀ? ಈ ಕೋಣೆಯಲ್ಲಿ ಯಾರೂ ಇಲ್ಲ!”
ಮುನ್ನಿ ತಾಯಿಯ ಕಡೆಗೆ ನೋಡಿದಳು. ಅವಳ ಕಣ್ಣಿನಲ್ಲಿ ಕ್ರೋಧ ತಗ್ಗಿರಲಿಲ್ಲ.
“ಕುದುರೆಯನ್ನೇರಿರುವ ಆ ಸವಾರ ಧಾವಿಸಿ ಬರುತ್ತಿದ್ದಾನೆ. ನಮ್ಮ ಜನರನ್ನೆಲ್ಲ ಮುಗಿಸಬೇಕೆಂದುಕೊಂಡಂತಿದೆ.”
ತಾಯಿಗೆ ಭಯವಾಯಿತು. ಏಕೆಂದರೆ ಅಲ್ಲಿ ಸವಾರನೂ ಇರಲಿಲ್ಲ, ಕುದುರೆಯೂ ಇರಲಿಲ್ಲ.
ಮುನ್ನಿಗೆ ತಿಂಡಿಯನ್ನು ನೀಡಿದಳು. ಮಗಳನ್ನು ಓಲೈಸಿ ಮಲಗಿಸಿದಳು. ರ?ನ್ ಭಾ?ಯ ಜೋಗುಳ ಹಾಡಿದಳು.
ಕೆಲವು ನಿಮಿಷ ಅರ್ಥವಿಲ್ಲದ ನೋಟ ಬೀರುತ್ತ ನಿಧಾನವಾಗಿ ನಿದ್ರೆಗೆ ಜಾರಿದಳು ಮುನ್ನಿ.
ನಿದ್ರೆಯಲ್ಲಿಯೂ ಏನೇನೋ ಕನವರಿಸುತ್ತಿದ್ದಳು, ಯಾರೊಡನೆಯೋ ಜಗಳಕ್ಕಿಳಿದಂತೆ.
ರಾತ್ರಿ ಕಳೆಯಿತು.
ಮರುದಿನ ಮುನ್ನಿಯ ತಾಯಿ ಹೆಲೀನಾ ಕ್ರೈಸ್ತಗುರುವಿನ ಬಳಿಗೆ ಹೋದಳು. ಆತನಿಗೆ ನಮಸ್ಕರಿಸಿ ತನ್ನ ಮಗಳ ವರ್ತನೆ ಕುರಿತು ಹೇಳಿದಳು.
“ಅವಳು ಇದ್ದಕ್ಕಿದಂತೆ ಅರಚುತ್ತಾಳೆ. ಆದರೆ ಕೋಣೆಯಲ್ಲಿ ಯಾರೂ ಇರುವುದಿಲ್ಲ. ಕುದುರೆಗಳೂ ಸೈನಿಕರೂ ಇರುವಂತೆ ಭ್ರಮಿಸುತ್ತಾಳೆ. ನಿದ್ರೆಯಲ್ಲಿಯೂ ಕನವರಿಸುತ್ತಿರುತ್ತಾಳೆ. ನನಗೆ ತುಂಬಾ ದಿಗಿಲಾಗುತ್ತಿದೆ. ಇದೇನಾದರೂ ಸೈತಾನನ ಕೈವಾಡ ಇರಬಹುದೆ – ಎನ್ನಿಸುತ್ತದೆ. ದಯವಿಟ್ಟು ನೀವೇ ದಾರಿ ತೋರಬೇಕು.”
“ನನ್ನನ್ನೂ ನಿಮ್ಮನ್ನೂ ಎಲ್ಲರನ್ನೂ ರಕ್ಷಿಸುವವನು ಆ ಪ್ರಭು. ನಿರ್ಭಯವಾಗಿರಿ. ನಾನು ಪ್ರಾರ್ಥಿಸಿ ಪ್ರಭುವಿನ ಆದೇಶ ಪಡೆದು ನಿಮ್ಮ ಮಗಳ ಸ್ಥಿತಿಯನ್ನು ಅರಿತು ನಿಮಗೆ ತಿಳಿಸುತ್ತೇನೆ. ಸದ್ಯಕ್ಕೆ ಇಲ್ಲಿ ಮೋಂಬತ್ತಿ ದೀಪ ಹಚ್ಚಿ ಪ್ರಾರ್ಥನೆ ಮಾಡಿ ತೆರಳಿರಿ.”
ಹೆಲೀನಾ ಹಾಗೆಯೆ ಮಾಡಿದಳು. ಅನಂತರ ಮುನ್ನಿ ಓದುತ್ತಿದ್ದ ಶಾಲೆಗೆ ಹೋದಳು. ಶಾಲೆಯ ಎಲ್ಲರಿಗೂ ಹೆಲೀನಾ ಬಗೆಗೆ ತುಂಬಾ ಗೌರವ.
“ಏನು ಹೀಗೆ ಇದ್ದಕ್ಕಿದ್ದಂತೆ ಬಂದಿರಿ?” ಎಂದು ವಿಚಾರಿಸಿದಳು ಶಾಲೆಯ ಮುಖ್ಯಸ್ಥೆ.
ಹೆಲೀನಾ ನಡೆದಿದ್ದುದೆಲ್ಲವನ್ನೂ ತಿಳಿಸಿದಳು. ಮುಖ್ಯಸ್ಥೆ ಒಬ್ಬ ಟೀಚರನ್ನು ಕರೆದು ಮುನ್ನಿಯ ಬಗೆಗೆ ವಿಚಾರಿಸಿದಳು. ಟೀಚರ್ ಹೇಳಿದ ಸಂಗತಿಗಳನ್ನು ಕೇಳಿ ಮುಖ್ಯಸ್ಥೆ ಅಚ್ಚರಿಗೊಂಡಳು.
ಟೀಚರ್ ಹೇಳಿದಳು: “ಮೇಡಂ, ಈ ಹುಡುಗಿ ’ಕೋತಿ ತಾನು ಕೆಟ್ಟದ್ದಲ್ಲದೆ ವನವನ್ನೆಲ್ಲ ಕೆಡಿಸಿತು’ ಎಂಬಂತೆ ನಡೆದುಕೊಳ್ಳುತ್ತಿದ್ದಾಳೆ. ಬೇರೆ ಮಕ್ಕಳಿಗೆ ಓದಲು ಬಿಡುತ್ತಿಲ್ಲ. ಅವರಿಗೆ ಏನೇನೋ ಪುರಾಣಕಥೆಗಳನ್ನು ಹೇಳುತ್ತಿರುತ್ತಾಳೆ. ’ನಿಮಗೆ ಯೇಸುಕ್ರಿಸ್ತನನ್ನು ತೋರಿಸುತ್ತೇನೆ ಬನ್ನಿ’ ಎಂದು ಕರೆಯುತ್ತಿರುತ್ತಾಳೆ. ಆ ಮಕ್ಕಳಿಂದ ಏನೇನೋ ಹಾಡುಗಳನ್ನು ಹಾಡಿಸುತ್ತಾಳೆ. ನಡುನಡುವೆ ’ನೋಡಿ, ನನಗಾಗಿ ಬಿಳಿಯ ಕುದುರೆ ಬಂದಿದೆ’ ಎಂದು ದೊಡ್ಡ ಧ್ವನಿಯಲ್ಲಿ ಅರಚುತ್ತಾಳೆ. ಅದು ಯಾವ ಬಿಳಿಕುದುರೆಯೋ ಎಲ್ಲಿಂದ ಬರುತ್ತದೋ ಯಾರನ್ನು ಕೂಡಿಸಿಕೊಂಡು ಹೋಗುತ್ತದೋ ಯಾರಿಗೂ ತಿಳಿಯುತ್ತಿಲ್ಲ. ಇಲ್ಲದ ಕುದುರೆ ಎಲ್ಲಿಂದ ಬಂದೀತು?”
ಮುಖ್ಯಸ್ಥೆ ಗೊಂದಲಕ್ಕೆ ಒಳಗಾದಳು.
“ಹೋಗಿ ಆ ಹುಡುಗಿಯನ್ನು ಕರೆದುಕೊಂಡು ಬನ್ನಿ” ಎಂದಳು.
ಒಂದೆರಡು ನಿಮಿ?ಗಳಾದ ಮೇಲೆ ಮುನ್ನಿ ಬಂದಳು.
ಮುಖ್ಯಸ್ಥೆ ಕೇಳಿದಳು: “ಮಗು, ನಮ್ಮ ಶಾಲೆಯ ಆವರಣದೊಳಕ್ಕೆ ಬಿಳಿಯ ಕುದುರೆ ಬಂದಿತ್ತೆ?”
“ಹೌದು ಮೇಡಂ. ಬಿಳಿಯ ಕುದುರೆ ಬಂದಿತ್ತು. ನನ್ನನ್ನು ಕರೆಯಿತು” ಎಂದಳು ಮುನ್ನಿ.
“ಆ ಕುದುರೆಯನ್ನು ಬೇರೆ ಯಾರಾದರೂ ನೋಡಿದರೆ?”
“ಸ್ವೆಟ್ಲಾನಾ ನೋಡಿದ್ದರೂ ನೋಡಿರಬಹುದು.”
“ನೀನು ಏನೋ ಕಟ್ಟುಕತೆ ಹೇಳುತ್ತಿದ್ದೀಯಮ್ಮ! ಅಂತಹ ಬಿಳಿಯ ಕುದುರೆಗಳೋ ಕಪ್ಪು ಕುದುರೆಗಳೋ ಆಕಾಶದಿಂದ ಉದುರುವುದು ಸಾಧ್ಯವೇ?”
“ಅದೇಕೆ ಮೇಡಂ ಹಾಗೆನ್ನುತ್ತೀರಿ? ಪ್ರವಾದಿ ಮಹಮ್ಮದರನ್ನು ಲೋಕಾಂತರಕ್ಕೆ ಒಯ್ಯಲು ಬಿಳಿಯ ಕುದುರೆ ಬಂದಿರಲಿಲ್ಲವೆ? ಅದನ್ನೇರಿಯೇ ಅಲ್ಲವೇ ಅವರು ನಿ?ಮಿಸಿದುದು? ಮೇಲಿನ ಲೋಕದಲ್ಲಿ ಯೇಸುವನ್ನೂ ಮೋಸೆಸನನ್ನೂ ದರ್ಶಿಸಿದ ತರುವಾಯವೆ ಅವರು ಸ್ವಗ್ರಾಮಕ್ಕೆ ಹಿಂದಿರುಗಿದರು, ಅಲ್ಲವೆ?”
ಮುಖ್ಯಸ್ಥೆಗೆ ವಿಷಯ ಅರ್ಥವಾಯಿತು. ಈ ಹುಡುಗಿ ತಾನು ಓದಿದ ಪುಸ್ತಕಗಳಲ್ಲಿ ಇದ್ದ ಕಥನಗಳನ್ನೆಲ್ಲ ವಾಸ್ತವವೆಂದು ನಂಬಿದ್ದಾಳೆ. ಇವೆಲ್ಲ ಭ್ರಾಂತಿಗಳು, ಅ?; ಹುಡುಗಾಟಿಕೆಗಳು. ಇವನ್ನು ಗಂಭೀರವಾಗಿ ಪರಿಗಣಿಸುವ ಆವಶ್ಯಕತೆ ಇಲ್ಲ – ಎನಿಸಿತು.
“ಹುಡುಗಿಗೆ ಸ್ವಲ್ಪ ವಯಸ್ಸಾದರೆ ಈ ಚೇಷ್ಟೆಗಳು ತಗ್ಗುತ್ತವೆ. ಇದರಲ್ಲಿ ಯಾವ ದೈವದ ಅಥವಾ ಭೂತದ ಕೈವಾಡವೂ ಇಲ್ಲ. ಇವೆಲ್ಲ ಮಕ್ಕಳ ಚಪಲದ ಚೇ?ಗಳ?” ಎಂದು ಹೆಲೀನಾಗೆ ಧೈರ್ಯ ಹೇಳಿ ಕಳಿಸಿದಳು, ಮುಖ್ಯಸ್ಥೆ.
-೩-
ಆಗ ಇದ್ದುದು ಅವಿಭಜಿತ ಸಂಯುಕ್ತ ರಷ್ಯಾ ಸಾಮ್ರಾಜ್ಯ. ಅದರಲ್ಲಿ ಯುಕ್ರೇನ್ ಸುಸಂಪನ್ನವಾದ ಪ್ರಾಂತ. ಸಮುದ್ರವೇ ಅದರ ಸ್ಥಿರ-ಆಸ್ತಿ, ಚರ-ಆಸ್ತಿ. ಸಮುದ್ರತೀರದಲ್ಲಿದ್ದ ಒಂದು ಗ್ರಾಮ ಎಕಟೆರಿನೊಸ್ಲಾವ್. ಆ ಭಾಗದಲ್ಲಿದ್ದ ಕುಟುಂಬಗಳೆಲ್ಲ ಸಮುದ್ರದಿಂದ ಲಬ್ಧವಾದ ಪದಾರ್ಥಗಳನ್ನು ಅವಲಂಬಿಸಿಯೆ ಜೀವನ ನಡೆಸುತ್ತಿದ್ದರು. ಆ ಕುಟುಂಬಗಳ ಪೈಕಿ ಮುನ್ನಿಯ ಕುಟುಂಬವೂ ಒಂದು; ಅನುಕೂಲವಂತ ಕುಟುಂಬ. ೧೮೩೧ರ ಜುಲೈ ೩೧ರಂದು ಅವಳು ಜನಿಸಿದಳು. ಆ ವಂಶಿಕರಲ್ಲಿ ರ?ನ್ ಮತ್ತು ಜರ್ಮನ್ ರಕ್ತಗಳೆರಡೂ ಬೆರೆತಿದ್ದವು. ಅವಳ ಪೂರ್ಣ ಹೆಸರು – ಹೆಲೀನಾ ಪೆತ್ರೋವ್ನಾ ಬ್ಲಾವಟ್ಸ್ಕಿ (ಅವಳ ಹೆಸರಿಗೆ ’ಬ್ಲಾವಟ್ಸ್ಕಿ’ ಸೇರಿಕೊಂಡದ್ದು ವಿವಾಹಾನಂತರ.)
ಆರ್ಥಿಕ ಮುಗ್ಗಟ್ಟುಗಳೇನೂ ಇರಲಿಲ್ಲ. ಹೀಗೆ ಮುದ್ದಾಗಿಯೆ ಬೆಳೆದಳು ಮುನ್ನಿ. ಬಂಧುವರ್ಗವೆಲ್ಲ ಅವಳನ್ನು ತುಂಬ ಪ್ರೇಮಾನುರಾಗಗಳಿಂದ ಕಾಣುತ್ತಿದ್ದರು. ಅವರಲ್ಲಿ ತಾಯಿಯ ಕಡೆಯ ನಂಟ ನಿಕೊಲಾಯ್. ಅವನು ಆಗಿಂದಾಗ ಮುನ್ನಿಯ ಮನೆಗೆ ಬಂದು ಹಣ ತೆಗೆದುಕೊಂಡು ಹೋಗುತ್ತಿದ್ದ. ಅವನು ತುಪ್ಪಟ ಉಡುಪುಗಳ ವ್ಯಾಪಾರ ಮಾಡುತ್ತಿದ್ದ. ಚಳಿಗಾಲದಲ್ಲಿ ಬಿರುಸಿನ ವ್ಯಾಪಾರ ಇರುತ್ತಿತ್ತು. ಸಾಲ ತೆಗೆದುಕೊಂಡಿದ್ದ ಹಣವನ್ನು ನಿಕೊಲಾಯ್ ಬಂದು ಮುನ್ನಿಯ ತಂದೆಗೆ ಹಿಂದಿರುಗಿಸುತ್ತಿದ್ದ. ಕುಟುಂಬವರ್ಗಕ್ಕೆ ಸೇರಿದ್ದುದರಿಂದ ನಿಕೊಲಾಯ್ ಹತ್ತಿರದವನಾಗಿದ್ದ. ನಿಕೊಲಾಯ್ಗೆ ಒಬ್ಬ ತಮ್ಮನಿದ್ದ. ಅವನು ಬೇರೆ ಊರಿನಲ್ಲಿ ನೆಲೆಸಿದ್ದ. ಅವನದು ರೈತಜೀವನ. ಅವನ ಹೆಸರು ಚೆಕೋವ್. ಬಾರ್ಲಿ ಬೆಳೆ ಬೆಳೆಯುತ್ತಿದ್ದ. ಅವನಿಗೂ ಸಂದರ್ಭವಿದ್ದಾಗ ನಿಕೊಲಾಯ್ ಆರ್ಥಿಕ ಸಹಾಯ ಮಾಡುತ್ತಿದ್ದ.
ಅದೊಂದು ದಿನ ಇದ್ದಕ್ಕಿದ್ದಂತೆ ನಿಕೊಲಾಯ್ ಮುನ್ನಿಯ ಮನೆಗೆ ಬಂದ.
“ಮಾಮಯ್ಯ!” ಎಂದು ನೀಲಿಕಣ್ಣಿನ ಮುನ್ನಿ ಆಪ್ಯಾಯತೆಯಿಂದ ಅವನನ್ನು ತಬ್ಬಿದಳು. ಕುಶಲ ಕೇಳಿದಳು. ನಿಕೊಲಾಯ್ “ಅರ್ಕತಾಯ್, ಅರ್ಕತಾಯ್” ಎನ್ನುತ್ತ ತಾನು ತಂದಿದ್ದ ಚರ್ಮದಿಂದ ಮಾಡಿದ್ದ ಗೌನನ್ನು ಮುನ್ನಿಗೆ ಉಡುಗೊರೆಯಾಗಿ ಕೊಟ್ಟ.
“ಚೆನ್ನಾಗಿ ಓದುತ್ತಿದ್ದೀ ತಾನೆ?” ಎಂದು ವಿಚಾರಿಸಿದ.
“ನಾನೇನೊ ಚೆನ್ನಾಗಿಯೆ ಓದಿಕೊಳ್ಳುತ್ತಿದ್ದೇನೆ ಮಾಮಯ್ಯ. ಆದರೆ ನಮ್ಮ ಟೀಚರುಗಳಿಗೇ ಅರಿವಿನ ಕೊರತೆ ಇದೆಯೆನಿಸುತ್ತದೆ” ಎಂದಳು ಮುನ್ನಿ ಸ್ವಲ್ಪ ಮುನಿಸಿನಿಂದ.
“ಓಹೋ! ಆಗಲೇ ಮೇಸ್ಟರುಗಳಲ್ಲಿ ತಪ್ಪನ್ನು ಕಾಣುವ ಮಟ್ಟಕ್ಕೆ ಬಂದಿದ್ದೀಯಾ!”
“ಮಾಮಯ್ಯ, ಅವರೆಲ್ಲ ನಿಜವಾಗಿ ’ಗುರು’ಗಳಲ್ಲ, ’ಲಘು’ಗಳು; ಕಡಮೆ ತಿಳಿವಳಿಕೆಯವರು. ನಾನು ಶಾಲೆಗೆ ಹೋಗುವುದನ್ನೇ ಬಿಡಬೇಕು ಅಂದುಕೊಳ್ಳುತ್ತಿದ್ದೇನೆ” ಎಂದಳು ಮುನ್ನಿ.
“ಅಯ್ಯೋ, ಅದೇಕೆ ಹಾಗೆನ್ನುತ್ತೀ? ನೀನು ರ?ನ್, ಜರ್ಮನ್ ಭಾ?ಗಳನ್ನು ಚೆನ್ನಾಗಿ ಕಲಿಯಬೇಡವೇ?”
“ಮಾಮಯ್ಯ, ಕಲಿಕೆ ಎಂದರೆ ಬರೀ ಅಕ್ಷರಗಳನ್ನು ಕಲಿಯುವುದೆ? ಜಗತ್ತಿನಲ್ಲಿ ಎಲ್ಲೆಲ್ಲಿ ಯಾವಾವ ಪಟ್ಟಣ ಇದೆ, ಎಲ್ಲೆಲ್ಲಿ ಸಮುದ್ರಗಳು ಇವೆ – ಇದನ್ನು ಕಲಿಯುವುದು ಮಾತ್ರವೆ?”
“ಕಲಿಯಲು ಬೇರೆ ಏನು ಇರುತ್ತದೆ?”
“ನಾವು ಪ್ರತಿದಿನ ಸಮುದ್ರತೀರದಲ್ಲಿ ಕುಳಿತಿರುತ್ತೇವೆ. ಅಲ್ಲಿ ಎ? ಜೀವಜಾತಿಗಳು ಕಾಣಿಸುತ್ತವೆ. ಅವು ಯಾವಾಗ ಹುಟ್ಟಿದವು, ಹುಟ್ಟುವುದಕ್ಕೆ ಮುಂಚೆ ಏನಾಗಿದ್ದವು? ಸಮುದ್ರತೀರದಲ್ಲಿ ಎ? ಯುದ್ಧಗಳು ಹಿಂದೆ ನಡೆದಿವೆ. ಆ ಸೈನಿಕರೆಲ್ಲ ಏನಾದರು? ಅವರೇ ತಿಮಿಂಗಿಲಗಳಾಗಿ ಹುಟ್ಟಿದರೆ? ಅಥವಾ ರ?ದಲ್ಲಿ ಸತ್ತವರು ಜರ್ಮನಿಗೆ ಹೊರಟುಹೋದರೆ?”
“ಮುನ್ನಿ! ನೀನು ಹುಚ್ಚುಹುಚ್ಚಾಗಿ ಮಾತನಾಡುತ್ತಿದ್ದೀ. ಸತ್ತವರನ್ನು ಮಣ್ಣ-ದಿಣ್ಣೆಗಳಲ್ಲಿ ಹೂಳುತ್ತಾರೆ. ಅಲ್ಲಿಂದ ಅವರಾರೂ ಹೊರಕ್ಕೆ ಬರುವುದಿಲ್ಲ.”
ನಿಕೊಲಾಯ್ ಇನ್ನೇನೂ ಮಾತನಾಡಲಿಲ್ಲ. ಒಳಗೆ ಹೋಗಿ ತಾನು ತಂದಿದ್ದ ಹಣವನ್ನು ತನ್ನ ಸೋದರಿಯ ಕೈಯಲ್ಲಿರಿಸಿದ.
“ಹೆಲೀ! ಇದು ಫರ್ ಉಡುಪುಗಳ ಮಾರಾಟದಿಂದ ಬಂದ ಹಣ. ಬಾರ್ಲಿ ಬೆಳೆಯಿಂದ ಬಂದ ಹಣವನ್ನು ಆನಂತರ ಚೆಕೋವ್ ಕಳಿಸುತ್ತಾನೆ.”
“ಪರವಾಗಿಲ್ಲ ಅಣ್ಣಯ್ಯ. ಈಗ ನಾವೇನೂ ಅವರಿವರಲ್ಲಿ ಕೋರಿ ಊಟ ಮಾಡುತ್ತಿದ್ದೇವೆಯೇ? ಈಗ ನಮಗೆ ಹಣದ ತೊಂದರೆಯೇನೂ ಇಲ್ಲವಲ್ಲ.”
“ಅದು ಸರಿಯೆ. ಮುನ್ನಿ ಹೇಗೆ ಓದುತ್ತಿದ್ದಾಳೆ?”
“ಓದು ಎಲ್ಲಿಂದ ಬಂತು! ಶಾಲೆಗೆ ಹೋಗಲು ಹೇಳಿದರೆ ಹೋಗದೆ ಬೇರೆ ಮಕ್ಕಳನ್ನು ಜೊತೆಹಾಕಿಕೊಂಡು ಸಮುದ್ರದ ದಂಡೆಗೆ ಹೋಗಿ ಕುಳಿತು ಏನೇನೋ ಕಟ್ಟುಕತೆಗಳನ್ನು ಹೇಳುತ್ತಿರುತ್ತಾಳೆ. ಯಾವಾವುದೋ ಪುರಾಣಕಥೆಗಳು. ತಾನು ಯಾರಾರೋ ರಾಜರುಗಳನ್ನು ನೋಡಿದೆನೆಂದು ಹೇಳುತ್ತಾಳೆ. ಅವರೆಲ್ಲ ಆಯುಧಗಳನ್ನು ಹಿಡಿದು ಸಮುದ್ರತೀರದಲ್ಲಿ ಯುದ್ಧಕ್ಕೆ ಹೋಗುತ್ತಿದ್ದಾರಂತೆ.”
“ತಂಗಿ, ನನಗನಿಸುತ್ತದೆ – ಮುನ್ನಿ ತಾನು ಕಥೆಗಳಲ್ಲಿ ಓದಿದುದನ್ನೆಲ್ಲ ವಾಸ್ತವಸಂಗತಿಗಳು ಎಂದು ಭಾವಿಸಿಕೊಂಡ ಹಾಗಿದೆ. ಇದು ಒಂದು ಮತಿಭ್ರಮಣೆ. ಇವಳನ್ನು ಕರೆದುಕೊಂಡು ಹೋಗಿ ಯಾರಾದರೂ ಭೂತವೈದ್ಯರಿಗೆ ತೋರಿಸು.”
“ಇವಳನ್ನು ಚರ್ಚಿಗೆ ಒಯ್ದು ಫಾದರ್ಗೆ ತೋರಿಸಿದ್ದಾಯಿತು. ಅವರು ಇವಳ ಕೈಯಲ್ಲಿ ದೀಪ ಹೊತ್ತಿಸಿ ಕಳಿಸಿದರು.”
“ಅದು ಪ್ರಯೋಜನವಿಲ್ಲವೆನಿಸುತ್ತದೆ. ನಾನು ಹಿಂದಿನ ಜನ್ಮದಲ್ಲಿ ತಿಮಿಂಗಲವಾಗಿದ್ದೆನೆ ಎಂದೆಲ್ಲ ಏನೇನೋ ಕೇಳುತ್ತಾಳೆ. ನನಗೇನು ಗೊತ್ತು!”
ಊಟದ ಸಮಯವಾಗಿದ್ದರಿಂದ ನಿಕೊಲಾಯ್ ಕುಳಿತು ಊಟ ಮಾಡಿದ. ಸ್ವಲ್ಪ ಸಮಯ ಅಲ್ಲಿದ್ದವರೊಡನೆ ಸಲ್ಲಾಪ ನಡೆಸಿದ.
“ನಾನಿನ್ನು ಹೊರಡುತ್ತೇನೆ” ಎಂದು ಎದ್ದು ನಿಂತ.
“ಆಯಿತು ಅಣ್ಣಯ್ಯ. ಚೆಕೋವ್ಗೆ ನಿಶ್ಚಿಂತವಾಗಿರಲು ಹೇಳು. ಹಣಕ್ಕೇನೂ ತರಾತುರಿ ಇಲ್ಲ” ಎಂದಳು, ಹೆಲೀನಾ.
“ಹಾಗೆಯೇ ಆಗಲಿ.”
ಇವರ ಮಾತುಕತೆಯನ್ನೆಲ್ಲ ಮುನ್ನಿ ಕೇಳಿಸಿಕೊಂಡಳು.
ಸ್ವಲ್ಪ ಕಾಲ ಶತಪಥ ಹಾಕಿದಳು. ಅನಂತರ ಇದ್ದಕ್ಕಿದ್ದಂತೆ ದನಿಯೆತ್ತರಿಸಿ ಹೇಳಿದಳು :
“ನಿಕೊಲಾಯ್ ಮಾಮಯ್ಯ! ನೀವು ಏಕೆ ಅಮ್ಮನ ಹತ್ತಿರ ಸುಳ್ಳು ಹೇಳುತ್ತಿದ್ದೀರಿ?”
“ನಾನೇ? ಸುಳ್ಳು ಹೇಳಿದೆನೆ?” ಎಂದ ನಿಕೊಲಾಯ್.
“ಹೌದು ನಿಕೊಲಾಯ್ ಮಾಮಾ. ನಿಮ್ಮ ತಮ್ಮ ಚೆಕೋವ್ ಮರಣಹೊಂದಿ ಆರು ತಿಂಗಳು ದಾಟಿವೆ. ಆದರೂ ನೀವು ಅವನನ್ನು ನೋಡಿದ್ದೆ, ಬಾರ್ಲಿ ಬೆಳೆ ಬಂದ ಮೇಲೆ ಅವನು ಹಣ ಕಳಿಸುತ್ತಾನೆ – ಎಂದು ಏಕೆ ಸುಳ್ಳು ಹೇಳುತ್ತಿದ್ದೀರಿ?”
ನಿಕೊಲಾಯ್ ದಿಗ್ಭ್ರಮೆಗೊಂಡ. ಹೆಲೀನಾ ಗಟ್ಟಿಯಾಗಿ ಕೇಳಿದಳು:
“ಮುನ್ನಿ! ಏನಿದು ಮತಿಗೆಟ್ಟ ಮಾತುಗಳು? ಚೆಕೋವ್ಗೆ ಏನಾಗಿದೆ?”
“ಹೌದಮ್ಮ. ಅವನು ಹೋಗಿಯಾಗಿದೆ. ಆದರೆ ಅವನ ಶರೀರ ಮಾತ್ರ ಇನ್ನೂ ಜಾರ್ಜಿಯಾದಲ್ಲಿ ಓಡಾಡುತ್ತಿದೆ. ಆದ್ದರಿಂದ ಅವನು ಇನ್ನೂ ಬದುಕಿದ್ದಾನೆ ಎಂದು ಎಲ್ಲರೂ ಭ್ರಮೆಪಡುತ್ತಿದ್ದಾರೆ.”
ಮುನ್ನಿಗೆ ಹುಚ್ಚು ಹಿಡಿದಿದೆ – ಎಂದುಕೊಂಡ, ನಿಕೊಲಾಯ್. ಮುಂದೆ ಏನೂ ಮಾತನಾಡದೆ ಅಲ್ಲಿಂದ ಹೊರಟುಹೋದ.
ಅಂದು ಸಂಜೆ ಮಾಮೂಲಿನಂತೆ ಮುನ್ನಿ ತನ್ನ ಸ್ನೇಹಿತೆಯರೊಡನೆ ಆಟವಾಡಲು ಸಮುದ್ರತೀರಕ್ಕೆ ಹೋದಳು. ಎಲ್ಲರೂ ಸೇರಿ ಹಾಡು ಹಾಡಿಕೊಂಡರು.
“ಸ್ವೆಟ್ಲಾನಾ, ಇವತ್ತು ನಮ್ಮ ಮಾಮಯ್ಯ ಬಂದಿದ್ದ. ನನಗೆ ಒಳ್ಳೆಯ ಗೌನು ತಂದುಕೊಟ್ಟ” ಎಂದಳು, ಮುನ್ನಿ.
“ನಿನಗೇನು ಕೊರತೆ! ಮಾವನೋ ನಂಟರೋ ನೀನು ಏನು ಕೇಳಿದರೂ ತಂದುಕೊಡುತ್ತಾರೆ. ಬೆಟ್ಟದ ಮೇಲಿಂದ ಕೋತಿಯನ್ನು ತಂದುಕೊಡುವಂತೆ ಕೇಳಿದರೆ ಅದನ್ನೂ ತಂದುಕೊಡುತ್ತಾರೆ.”
“ಹೌದೆನ್ನು. ಆದರೆ ಪಾಪ ನಮ್ಮ ಚಿಕ್ಕಮಾಮಯ್ಯ ಸತ್ತುಹೋಗಿದ್ದಾನೆ. ಅದು ನನಗೆ ಬಾಧೆ ತಂದಿದೆ.”
“ಈ ಸಂಗತಿ ನಿಮ್ಮ ಮನೆಯವರಿಗೆ ಗೊತ್ತೆ?”
“ಗೊತ್ತಿಲ್ಲ. ದೊಡ್ಡಮಾಮಯ್ಯನಿಗೇ ಗೊತ್ತಾಗಿಲ್ಲ. ಆದರೆ ನನಗೆ ಗೊತ್ತಾಗಿದೆ.”
“ನಿನಗೆ ಹೇಗೆ ತಿಳಿಯಿತು? ನೀನೇನು ಜಾರ್ಜಿಯಾಕ್ಕೆ ಹೋಗಿಲ್ಲವಲ್ಲ?”
“ನಾನು ಹೋಗಿಲ್ಲವೆನ್ನು. ಆದರೆ ಜಾರ್ಜಿಯಾದಿಂದ ಆಕಾಶಮಾರ್ಗದಲ್ಲಿ ಬಂದ ಒಂದು ಸಂದೇಶ ನನಗೆ ಕೇಳಿಸಿತು.”
“ನಿನ್ನ ಮುಖ! ಎಲ್ಲವೂ ಕಟ್ಟುಕತೆ” ಎಂದಳು ನಿಕಿಟಾ ನಕ್ಕು.
ಎಲ್ಲರೂ ಅವರವರ ಮನೆಗಳಿಗೆ ಹಿಂದಿರುಗಿದರು.
ಅದಾದ ಮರುದಿನ ಜಾರ್ಜಿಯಾದಿಂದ ಸುದ್ದಿಬಂದಿತು – ಚೆಕೋವ್ ತೀರಿಕೊಂಡಿದ್ದಾನೆ – ಎಂದು.
(ಸಶೇಷ)