
ಕಂಪ್ಯೂಟರ್ಗಳಲ್ಲಿ ಮನುಷ್ಯನು ತನ್ನ ಜ್ಞಾನ, ಶ್ರಮ ಮತ್ತು ಸಮಯ ವ್ಯಯಗಳಿಂದ ಉತ್ಪಾದಿಸುವ ಡಿಜಿಟಲ್ ನಾಣ್ಯವನ್ನು ಕ್ರಿಪ್ಟೋಕರೆನ್ಸಿ ಎಂದು ಸರಳವಾಗಿ ಕರೆಯಬಹುದಾಗಿದೆ. ಕ್ರಿಪ್ಟೋಕರೆನ್ಸಿಯ ಮೌಲ್ಯೀಕರಣ, ವಿನಿಮಯ ಮತ್ತು ಅದರಿಂದ ತೆರಬೇಕಾದ ಸಂಭಾವನೆ ಇತ್ಯಾದಿ ಚಟುವಟಿಕೆಗಳ ಸಂಸ್ಕರಣೆಗೆ ಮೈನಿಂಗ್ (ಗಣಿಗಾರಿಕೆ) ಎಂದು ಹೆಸರಿಸಲಾಗಿದೆ. ಅಂತರ್ಜಾಲದ ಬೃಹದ್ರೂಪ ಅನಾವರಣಗೊಳ್ಳುತ್ತ, ಅದರ ಉಪಯೋಗದ ಆಯಾಮಗಳೂ ವಿಶ್ವವ್ಯಾಪಿ ವಿಸ್ತಾರಗೊಳ್ಳುತ್ತ, ಅದೀಗ ಕ್ರಿಯಾಶೀಲ ಚಟುವಟಿಕೆಗಳ ಒಂದು ಅಂಗವೆನಿಸಿರುವುದು ವಾಸ್ತವ. ಪ್ರಸ್ತುತ ಸಾಮಾಜಿಕ ಜೀವನದಲ್ಲಿ ಅದು ತನ್ನ ಅವಿನಾಭಾವ ಸಂಬಂಧವನ್ನು ಸ್ಥಾಪಿಸಿರುವುದೂ ಸತ್ಯ. ಇಂಟರ್ನೆಟ್ ತನ್ನ ಜಾಲದಿಂದ […]