ಡೀಗೋ ಮತ್ತು ಸಂಗಡಿಗರು ಮಲಪು ತೀರದಿಂದ ಯಾರೋ ಒಬ್ಬನನ್ನು ಎತ್ತಿಹಾಕಿಕೊಂಡು ಬರುತ್ತಿರುವುದನ್ನು ದೂರದಿಂದಲೇ ದುರ್ಬೀನು ಇಟ್ಟುಕೊಂಡು ನೋಡುತ್ತಿದ್ದ ನಾವಿಕರು ಮಸ್ಕರೇನ್ಯಾಸನಿಗೆ ತಿಳಿಸಿದ್ದರು. ಹಾಗಾಗಿ ಅವನೂ ಕುತೂಹಲದಿಂದಲೇ ದೋಣಿಯ ಆಗಮನವನ್ನು ನಿರೀಕ್ಷಿಸುತ್ತಿದ್ದ. ದೋಣಿ ಹಡಗಿನ ಪಕ್ಕಕ್ಕೆ ಬಂದು ಅದರಲ್ಲಿದ್ದವರೆಲ್ಲ ಹಡಗಿಗೆ ಹತ್ತಿದಾಗ ವಿಜಯಧ್ವಜ ಸ್ವಾಮಿಗಳನ್ನು ಕೂಡ ಹಡಗಿನ ಅಟ್ಟಕ್ಕೆ ಹತ್ತಿಸಿದರು. ಸ್ವಾಮಿಗಳು ಕೋಪ, ಭಯ ಹಾಗೂ ಆತಂಕಗಳಿಂದ ಏದುಸಿರುಬಿಡುತ್ತಿದ್ದರು. ದೇವರು ಇದು ಯಾವ ಪರೀಕ್ಷೆಯನ್ನು ತಮಗಾಗಿ ಏರ್ಪಡಿಸಿದ್ದಾನೆಂದು ಅವರಿಗೆ ತಿಳಿಯಲಿಲ್ಲ. ಅಥವಾ ಯಾವ ತಪ್ಪಿಗಾಗಿ ಈ ಶಿಕ್ಷೆ ತನಗೆ […]
ಮಸ್ಕರೇನ್ಯಾಸ್ ಮತ್ತು ವಿಜಯಧ್ವಜ
Month : November-2024 Episode : Author : ಡಾ. ಬಿ. ಜನಾರ್ದನ ಭಟ್