
ಈಚೆಗಷ್ಟೇ ನಮ್ಮನ್ನಗಲಿ ತಾವು ಸೃಜಿಸುತ್ತಿದ್ದ ವರ್ಣ–ರೇಖೆಗಳ ಲೋಕದಲ್ಲಿ ಶಾಶ್ವತವಾಗಿ ಸೇರಿಹೋದ ಚಿತ್ರಬ್ರಹ್ಮ ಬಿ.ಕೆ.ಎಸ್. ವರ್ಮ ಅವರ ಅನುಪಸ್ಥಿತಿಯ ನಷ್ಟವನ್ನು ಮತ್ತಾವ ಕಲಾವಿದರೂ ತುಂಬಿಕೊಡಲಾರರು. ವರ್ಮರು ಕಣ್ಮರೆಯಾದದ್ದು ಅವರ ಅಭಿಮಾನಿಗಳೂ ಕಲಾರಾಧಕರೂ ಆದ ಅಶೇಷ ಸಹೃದಯರ ಪಾಲಿಗೆ ಚೇತರಿಸಿಕೊಳ್ಳಲಾಗದ ಆಘಾತ. ಶ್ರೇಷ್ಠ ಕಲಾವಿದರಾಗಿ ಮಾತ್ರವಲ್ಲದೆ ಉತ್ತಮ ವ್ಯಕ್ತಿಯಾಗಿಯೂ ವರ್ಮ ಮರೆಯಲಾಗದ ಮಹನೀಯರು. ಇವರ ಪುಣ್ಯಸ್ಮರಣೆಯ ನಿಮಿತ್ತವಾಗಿ ಈ ಲೇಖನ ಹವಣುಗೊಂಡಿದೆ. ಸುಮಾರು ೧೯೬೮-೬೯ರ ಆಸುಪಾಸಿನ ದಿನಗಳವು. ಆಗ ನನಗಿನ್ನೂ ಬಾಲ್ಯ. ಅಕ್ಷರಗಳನ್ನು ಕೂಡಿಸಿಕೊಂಡು ಪ್ರತಿಯೊಂದು ಪದವನ್ನೂ ಮೆಲ್ಲಮೆಲ್ಲನೆ ಓದಿಕೊಳ್ಳುವ […]