
ಒಂದು ಮುಂಜಾನೆ ತುಂಟಿಗೆ ಚಪಾತಿ ಹಾಕೋಣ ಅಂತ ಹೊರ ಬಂದ್ರೆ ನಾಯಿ ಕಾಣಿಸದು. ಪಕ್ಕದ ಮನೆ ಹೇಮಕ್ಕ ಅಂದಿದ್ದು ನೆನಪಾಯ್ತು, “ದಿನಾ ಬೆಳಗ್ಗೆ ನಮ್ಮ ಮನೆಗೆ ಬರುತ್ತೆ, ನಾನೂ ಬಿಸ್ಕತ್ ಕೊಡುವುದಿದೆ..” ಹೆಚ್ಚೇನೂ ಚಿಂತಿಸದೆ ನನ್ನ ಇನ್ನಿತರ ಮನೆಕಲಸಗಳ ಬಗ್ಗೆ ಗಮನ ಹರಿಸಿದೆ. ಮಧ್ಯಾಹ್ನ ಆದ್ರೂ ತುಂಟಿ ನಾಪತ್ತೆ. “ನಾಯಿ ಎಲ್ಹೋಯ್ತು? ಸ್ವಲ್ಪ ನೋಡ್ತೀರಾ…” ಎಂದು ನಮ್ಮವರ ಮುಂದೆ ಒದರಿದ್ದು ಗೋರ್ಕಲ್ಲ ಮೇಲೆ ನೀರೆರೆದ ಹಾಗಾಯ್ತು. “ಅದು ನಾಯಿಯಲ್ಲವೇ, ಎಲ್ಲೋ ತಿರುಗಾಟಕ್ಕೆ ಹೋಗಿರಬೇಕು.” ಒಂದು ನಾಯಿ ಇರಲೇ […]