
ಇಲ್ಲಿಯ ಮನೆಗಳು, ಹೊಲಗಳು, ಮರಗಳು ಎಲ್ಲವೂ ಸೇರಿ ಇಡೀ ಗ್ರಾಮವನ್ನು ಅದು ಇರುವ ಹಾಗೆ ಮಾರಾಟ ಮಾಡಲಾಗುತ್ತದೆ. ಇಡೀ ಗ್ರಾಮವನ್ನು ಒಟ್ಟಿಗೇ ಆಗಲಿ ಎರಡೋ ಮೂರೋ ಭಾಗಗಳಾಗಿಯಾಗಲಿ ಕೊಳ್ಳಬಹುದು. ಆಸಕ್ತರು ಇಲ್ಲಿಯ ಸರ್ಪಂಚ್ರನ್ನು ಸಂಪರ್ಕಿಸಬಹುದು. ದಿನಪತ್ರಿಕೆಯಲ್ಲಿನ ಒಂದು ಸುದ್ದಿಯನ್ನು ನೋಡಿ ದೂರದರ್ಶನ ವರದಿಗಾರ್ತಿ ಮಂಜರಿ ವಿಚಲಿತಳಾದಳು. ಅವಳ ಕಣ್ಣುಗಳು ತೇವಗೊಳ್ಳತೊಡಗಿದವು. ಅವಳು ಕೂಡಲೆ ಪ್ರೋಗ್ರಾಂ ಎಕ್ಸಿಕ್ಯೂಟಿವ್ ಕ್ಯಾಬಿನ್ನಿಗೆ ಹೋಗಿ ಇದನ್ನು ಕುರಿತು ಪ್ರೋಗ್ರಾಂ ಮಾಡಲೆ, ಸಾರ್? ಎಂದು ಕೇಳಿದಳು. ಇದನ್ನು ಕುರಿತೇ? ನಿನಗೇನಾದರೂ ಹುಚ್ಚು ಹಿಡಿದಿದೆಯೆ? ಇದು […]