ಬೆಂಗಳೂರಿನ ಕೈಕೊಂಡ್ರನಹಳ್ಳಿ ಕೆರೆ ಪುನಶ್ಚೇತನಗೊಂಡ ಕಥೆ ನಗರೀಕರಣದ ಧಾವಂತದಲ್ಲಿ ಅನೇಕ ಕೆರೆಗಳು ಕುಖ್ಯಾತಿಯನ್ನೂ ತಂದುಕೊಟ್ಟಿವೆ. ಇವೆಲ್ಲವುಗಳ ನಡುವೆ ಪರಿಸರದ ಬಗ್ಗೆ ಕಾಳಜಿಯುಳ್ಳ ಒಂದಿಷ್ಟು ನಾಗರಿಕರ ಪ್ರಯತ್ನದಿಂದ ಕಸ ಕೊಳಚೆಯ ತೊಟ್ಟಿಗಳಾಗಿದ್ದ ಕೆರೆಗಳು ಪುನಃ ’ಕೆರೆ’ಗಳಾಗಿ ಪುನಶ್ಚೇತನಗೊಂಡ ಉದಾಹರಣೆಗಳೂ ಇವೆ. ಉದ್ಯಾನನಗರಿಯೆಂದು ಹೆಸರಾದ ಬೆಂಗಳೂರು ಕೆರೆಗಳ ನಗರಿಯೂ ಹೌದು. ಬೇಸಾಯ, ನಾಗರಿಕರ ಬಳಕೆ ಹಾಗೆಯೇ ನಗರದ ಸೌಂದರ್ಯಕ್ಕಾಗಿ ಜಲಮೂಲಗಳ ಸಂರಕ್ಷಣೆಯ ಅಗತ್ಯವನ್ನು ಮನಗಂಡಿದ್ದ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಅನೇಕ ಕೆರೆಗಳನ್ನು ಮತ್ತು ಹರಿಯುವ ನೀರನ್ನು ಹಿಡಿದಿಡಲು ಒಡ್ಡುಗಳನ್ನು ನಿರ್ಮಿಸಿದ್ದರು. […]
ಕಾಂಕ್ರೀಟ್ ಕಾಡಿನಲ್ಲಿ ಪುನರ್ಜೀವ ಪಡೆದ ಪುರಾತನ ಕೆರೆ
Month : January-2018 Episode : Author : ಸತ್ಯನಾರಾಯಣ ಶಾನುಭಾಗ್