
ಜನಪ್ರಿಯ ಕಲಾವಿದರಾಗಿರುವುದರ ಜೊತೆಗೆ ಮಹಾನ್ ಕಲಾವಿದ ಕೂಡ ಆಗಿರುವವರು ಹಿಂದೂಸ್ತಾನಿ ಸಂಗೀತದ ಬಾನ್ಸುರಿ (ಕೊಳಲು) ವಾದಕ ಪಂಡಿತ್ ಪ್ರವೀಣ್ ಗೋಡ್ಖಿಂಡಿ. ವಿಶೇಷವೆಂದರೆ ಬಹಳ ಬೇಗ ಅವರು ಸಾಧನೆಯ ಶಿಖರವನ್ನೇರಿದ್ದಾರೆ. ತಂದೆ ಪಂಡಿತ್ ವೆಂಕಟೇಶ್ ಗೋಡ್ಖಿಂಡಿಯವರು ಬಾನ್ಸುರಿಯಲ್ಲಿ ಕೈಗೊಂಡ ಪ್ರಯೋಗಗಳನ್ನು ಸಮರ್ಥವಾಗಿ ಮುಂದುವರಿಸಿ ಗಾಯಕಿ ಶೈಲಿಯ ಅಪ್ರತಿಮ ಬಾನ್ಸುರಿ ವಾದಕರೆನಿಸಿದ್ದಾರೆ. ಭಾರತವಷ್ಟೇ ಅಲ್ಲ; ಜಗತ್ತಿನಾದ್ಯಂತ ಬಹುಬೇಡಿಕೆಯ ಸಂಗೀತಗಾರರಾಗಿರುವ ಪ್ರವೀಣ್ ಗೋಡ್ಖಿಂಡಿ ಎಲ್ಲವನ್ನೂ ನಿಭಾಯಿಸುತ್ತಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಆಧಾರದಲ್ಲೇ ಫ್ಯೂಶನ್ ಸಂಗೀತದ ಪ್ರಸ್ತುತಿಯನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೊಂದು […]