ಇದೀಗ ಭಾರತದ ಕ್ರೀಡಾಪ್ರತಿಭೆಗಳು ಗಮನಾರ್ಹವಾಗಿ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಗೋಚರಿಸುತ್ತಿದೆ. ಇನ್ನು ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಾಂತರ ಮಟ್ಟದಲ್ಲಿಯೂ ಅಗಣಿತ ಕ್ರೀಡಾಪ್ರತಿಭೆಗಳಿವೆ. ಆಗಾಗ ಅವರೆಲ್ಲ ಸುದ್ದಿ ಮಾಡುತ್ತಲೇ ಇರುತ್ತಾರೆ. ಅವರಿಗೆಲ್ಲ ಸೂಕ್ತ ತರಬೇತಿ, ಅಗತ್ಯ ಸವಲತ್ತು, ಅವಕಾಶ ಒದಗಿಸಿದಲ್ಲಿ ಭಾರತೀಯ ಕ್ರೀಡಾಕ್ಷಿತಿಜ ಇನ್ನಷ್ಟು ಪ್ರಕಾಶಿಸಿ, ಇಡೀ ಜಗತ್ತು ಭಾರತದತ್ತ ಬೆರಗುಗಣ್ಣಿನಿಂದ ನೋಡುವುದರಲ್ಲಿ ಅಚ್ಚರಿಯೇನಿಲ್ಲ. ಸ್ವಾಮಿ ವಿವೇಕಾನಂದರ ಒಂದು ಪ್ರಸಿದ್ಧ ಹೇಳಿಕೆ ಸದಾ ಕಾಲಕ್ಕೂ ವಿಚಾರಾರ್ಹ: ‘You will be nearer to heaven through football than […]













