ನಮ್ಮ ಭಾವ ಬುದ್ಧಿಯು ಕೂಡಾ ದೇಶ-ಕಾಲದಲ್ಲಿ ಮಾತ್ರ ಕೆಲಸ ಮಾಡುತ್ತವೆ. ಅವು ದೇಶ-ಕಾಲಗಳ ಮಿತಿಯನ್ನು ಮೀರಿ ಹರಿಯಲಾರವು. ನಮ್ಮ ಬುದ್ಧಿಯು ಒಂದು ವಸ್ತುವನ್ನು ನೋಡಿದಾಗ ಅದನ್ನು ಇನ್ನೊಂದು ವಸ್ತುವಿನೊಂದಿಗೆ ಹೋಲಿಸುತ್ತದೆ. ಮೌಲ್ಯಮಾಪನ ಮಾಡಿ ಒಂದು ಹೆಚ್ಚು ಇನ್ನೊಂದು ಕಡಮೆ ಎಂದು ಹೇಳುತ್ತದೆ. ಬೆಲೆ ಕಟ್ಟುತ್ತದೆ. ಈ ಬುದ್ಧಿಯ ಹೋಲಿಸುವ ಸ್ವಭಾವದಿಂದಾಗಿಯೇ ಮನುಷ್ಯ ಎಷ್ಟೆಲ್ಲ ತಾಪತ್ರಯಕ್ಕೆ ಒಳಗಾಗುವುದನ್ನು ನೋಡುತ್ತೇವೆ. ಒಬ್ಬರು ಹೊಸ ಬಟ್ಟೆಯನ್ನೋ ವಾಹನವನ್ನೋ ಖರೀದಿಸುತ್ತಾರೆ. ಸಂತೋಷದಿಂದ ಅದನ್ನು ಇನ್ನೊಬ್ಬರಿಗೆ ತೋರಿಸುತ್ತಾರೆ. ನೋಡಿದವರು ಇದು ತುಂಬಾ ಚೆನ್ನಾಗಿದೆ ಎಂದರೆ […]
ಭೇದಬುದ್ಧಿಯ ಅವಾಂತರಗಳು
Month : November-2024 Episode : Author : ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ