ಗೊನೆ ಮಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿ – ಅಡಿಗ ಅಂದು ಆಗಸದ ಹಂಡೆಗಳಿಗೆ ತೂತುಬಿದ್ದಂತೇ ಬೆಳಗ್ಗಿನಿಂದಲೇ ಜೋರುಮಳೆ ಸುರಿಯತೊಡಗಿತ್ತು. ಬಾಳೂರಿನ ಕರುಣಾನದಿಯು ಸೊಕ್ಕಿ ಹರಿಯುವ ಹುಮ್ಮಸ್ಸಿನಲ್ಲಿದ್ದಳು. ಸಂಜೆ ನಾಲ್ಕರ ಸುಮಾರಿಗೆ ಲೈಟುಕಂಬಕ್ಕೆ ಬಡಿದ ಸಿಡಿಲಿನ ನೆಪದಲ್ಲಿ ಮತ್ತೆ ವಿದ್ಯುತ್ ಕೈಕೊಟ್ಟಿತ್ತು. ಲಾಟೀನು ಹೊತ್ತಿಸಿಟ್ಟುಕೊಂಡು ಹೊರಜಗುಲಿಯಲ್ಲಿ ಕುಳಿತು ಅಂಗಳದಲ್ಲಿ ಕತ್ತಲು ಸುರಿಯುವುದನ್ನೇ ನೋಡುತ್ತಿದ್ದರು ಮೋನಪ್ಪ ಮಾಸ್ತರರು. ಮಾಡಿನಿಂದ, ಎಲೆಗಳಿಂದ ಹನಿಯುತ್ತಿದ್ದ ಚಿಟಪಟ ನೀರಿನ ಶಬ್ದವನ್ನು ಬಿಟ್ಟರೆ ಮತ್ತೇನೂ ಸದ್ದಿರಲಿಲ್ಲ. ಆ ದಿನದ ತನ್ನ ಕೋಟ […]
ಬಾಳೆಮರ
Month : June-2021 Episode : Author : ತೇಜಸ್ವಿನಿ ಹೆಗಡೆ