
ಮಲೆನಾಡೆಂದರೆ ಹಳ್ಳ, ಕೊಳ್ಳ, ತಗ್ಗು, ದಿಣ್ಣೆ, ಗುಡ್ಡ, ಬೆಟ್ಟ, ಅಡವಿ; ಅದರೊಳಗೆ ಅವಿತುಕೊಂಡಿರುವ ಮನೆ ತೋಟಗಳು, ಪುಟ್ಟ ಹೊಂಡ, ಪುಟ್ಟಪುಟ್ಟ ಹಳ್ಳ, ಕಾಲುವೆ, ಕಾದಿಗೆ, ಹೆಗ್ಗಾದಿಗೆಗಳು. ಅವಿತುಕೊಂಡ ಮನೆಗಳನ್ನೇ ಸೇರಿಸಿ ಒಂದು ಗ್ರಾಮವನ್ನಾಗಿಸಿ ಅಲ್ಲಿ ಒಂದು ದೇವಸ್ಥಾನ, ಶಾಲೆ; ಸಂಜೆಯಾದರೆ ಅವುಗಳ ಮುಂದಿರುವ ಅರಳಿಕಟ್ಟೆ ಮೇಲೆ ಎಲ್ಲರ ಹರಟೆ ಪಟ್ಟಾಂಗ. ಶಿರಸಿಯ ಶಂಕರಹೊಂಡದಲ್ಲಿ ಹುಟ್ಟಿ, ಹೊಳೆಯಾಗಿ, ನದಿಯಾಗಿ ಸಮುದ್ರ ಸೇರುವ ಅಘನಾಶಿನಿ ನಮ್ಮೂರಿನಿಂದಲೂ ಹಾದುಹೋಗುವ, ಬದುಕನ್ನು ಸೇರಿಸುವ ಹೊಳೆ. ಅದರ ಒಂದು ಭಾಗಕ್ಕೆ ನಮ್ಮ ಮನೆ ತೋಟ […]