ಅಹೋ ಏಷಾಂ ವರಂ ಜನ್ಮ ಸರ್ವಪ್ರಾಣ್ಯುಪಜೀವನಮ್| ಸುಜನಸ್ಯೇವ ಯೇಷಾಂ ವೈ ವಿಮುಖಾ ಯಾನ್ತಿ ನಾರ್ಥಿನಃ|| – ಭಾಗವತ ಸಾರ್ಥಕವಾದ ಜನ್ಮವೆಂದರೆ ಈ ಮರಗಳದು. ಇವು ಎಲ್ಲ ಪ್ರಾಣಿಗಳಿಗೂ ಜೀವನವನ್ನು ಕಲ್ಪಿಸುತ್ತವೆ. ಸಜ್ಜನರಲ್ಲಿಗೆ ಬಂದ ಯಾಚಕರು ಹೇಗೆ ಎಂದೂ ಬರಿಗೈಯಾಗಿ ಹಿಂದಿರುಗುವುದಿಲ್ಲವೋ ಹಾಗೆ ಈ ಮರಗಳಲ್ಲಿ ಆಸರೆ ಕೋರಿ ಬಂದವರಾರೂ ನಿರಾಶೆಗೊಳ್ಳುವುದಿಲ್ಲ.












