ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
61ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಸರ್ವಾಃ ಸಂಪತ್ತಯಸ್ತಸ್ಯ
ಸಂತುಷ್ಟಂ ಯಸ್ಯ ಮಾನಸಂ |
ಉಪಾನದ್ಗೂಢಪಾದಸ್ಯ
ನನು ಚರ್ಮಾವೃತೇವ ಭೂಃ ||
– ಹಿತೋಪದೇಶ, ಮಿತ್ರಲಾಭ

1_2
ಯಾರ ಮನಸ್ಸು ಸ್ವಯಂತೃಪ್ತವಾಗಿರುತ್ತದೋ ಅವನು ಎಲ್ಲ ಸಂಪತ್ತುಗಳನ್ನೂ ಪಡೆದಂತೆ ಆನಂದಮಯನಾಗಿರುತ್ತಾನೆ. ಕಾಲಿಗೆ ಪಾದರಕ್ಷೆಯನ್ನು ತೊಟ್ಟಿರುವವನ ಪಾಲಿಗೆ ನೆಲಕ್ಕಷ್ಟೂ ಚರ್ಮ ಹಾಸಿದಂತೆಯೇ ಅಲ್ಲವೆ!”
ಎಲ್ಲ ದೇಹಭಾವವನ್ನೂ ಮೀರಿ ಆತ್ಮರತನಾಗಿರುವವನನ್ನು ಯಾವ ಲೋಭ-ಮೋಹಗಳಾಗಲಿ ಇಷ್ಟಾನಿಷ್ಟಗಳಾಗಲಿ ಬಾಧಿಸಲಾರವು. ಅವನು ಸದಾ ಆನಂದಮಯ. ಅಂತಹವನ ಮನಶ್ಚರ್ಯೆಯೇ ಮೇಲಣ ಶ್ಲೋಕದಲ್ಲಿ ವಿವರಣೆಗೊಂಡಿರುವುದು. ಸಂತೃಪ್ತಭಾವವು ವ್ಯಾವಹಾರಿಕ ಜೀವನದಲ್ಲಿಯೂ ನೆಮ್ಮದಿ ತರುವಂತಹದೇ – ಎಂಬುದಂತೂ ಅನುಭವಸಿದ್ಧವಿದೆಯಷ್ಟೆ. ಈ ಆದರ್ಶವನ್ನು ಗ್ರಂಥಸ್ಥಮಾತ್ರವೆಂದು ಭಾವಿಸಬೇಕಾಗಿಲ್ಲ. ಈಗಿನ ಭೌತವಾದಪ್ರಧಾನ ಪರಿಸರದಲ್ಲಿಯೂ ವಿರಳವಾಗಿ ಇಂತಹ ಅವಧೂತಪ್ರಜ್ಞೆಯವರು ಇಲ್ಲದಿಲ್ಲ.
ಈಗ್ಗೆ ಹತ್ತು ವರ್ಷ ಹಿಂದೆ ಋಷಿಕೇಶದಲ್ಲಿ ತಮ್ಮ ೧೦೩ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದ ರಾಮಸುಖದಾಸರೆಂಬ ಸಂತರಿದ್ದರು. ಅವರು ಜನಿಸಿದ್ದು ಎಲ್ಲಿ, ಅವರ ಮನೆತನ ಎಲ್ಲಿಯದು – ಎಂಬ ಯಾವ ವಿವರಗಳೂ ಯಾರಿಗೂ ತಿಳಿದಿಲ್ಲ. ಹೇಗೋ ಅವರು ಗೋರಖಪುರ ‘ಗೀತಾ ಪ್ರೆಸ್’ ಪ್ರವರ್ತಕ ಹನುಮಾನ್ ಪ್ರಸಾದ್ ಪೋದ್ದಾರರ ಸಂಪರ್ಕಕ್ಕೆ ಬಂದರು. ‘ಗೀತಾ ಪ್ರೆಸ್’ ನಡೆಸುತ್ತಿದ್ದ ಸಂಸ್ಕಾರಕಾರಿ ಕಾರ್ಯಕ್ರಮಗಳಿಂದ ಆಕರ್ಷಿತರಾಗಿ ಅವುಗಳಲ್ಲಿ ತೊಡಗಿಕೊಂಡರು. ‘ಕಲ್ಯಾಣ’ ಪತ್ರಿಕೆಯ ಸಂಪಾದನದ ಹೊಣೆಯನ್ನೂ ತಾವಾಗಿ ವಹಿಸಿಕೊಂಡರು. ಕೆಲ ವರ್ಷಗಳ ತರುವಾಯ ಶ್ರದ್ಧಾವಂತ ಭಕ್ತರ ಆಗ್ರಹದಂತೆ ಊರೂರಿಗೆ ಹೋಗಿ ಭಗವದ್ಗೀತಾ ಪ್ರವಚನ ಮಾಡಿದರು; ಗೋವು, ಗಂಗಾ, ಗೀತಾ, ಗೋಪಾಲ, ಗಾಯತ್ರೀ – ಇವೇ ಹಿಂದೂಧರ್ಮದ ಜೀವಾಳವೆಂದು ಪ್ರಚಾರ ಮಾಡಿದರು. ಎಂದೂ ಯಾರಿಂದಲೂ ಒಂದು ದಮ್ಮಡಿಯನ್ನೂ ಸ್ವೀಕರಿಸುತ್ತಿರಲಿಲ್ಲ. ಎಂದೂ ತಮ್ಮದೊಂದು ಫೋಟೋ ತೆಗೆಯಲೂ ಯಾರಿಗೂ ಅವಕಾಶ ಕೊಡಲಿಲ್ಲ. ದೂರದರ್ಶನದ ಬೇಡಿಕೆಯಂತೆ ಪ್ರಸಾರವಾಗುತ್ತಿದ್ದ ಅವರ ಧಾರ್ಮಿಕ ಪ್ರವಚನಗಳಲ್ಲಿ ಅವರ ಧ್ವನಿ ಮಾತ್ರ ಇರುತ್ತಿತ್ತು. ಅವರದು ಎಷ್ಟು ಸರಳ ಜೀವನರೀತಿಯಾಗಿತ್ತೆಂದರೆ – ಕನಿಷ್ಠ ಸೌಕರ್ಯಗಳ ಮಾತಿರಲಿ, ತಮ್ಮ ವಸತಿಗಾಗಿ ಕೆಲವೇ ಅಡಿಗಳ ಕೋಣೆಯನ್ನೂ ಬೇಡವೆಂದು ನಿರಾಕರಿಸಿದ್ದರು. ತಮ್ಮ ಶಿಷ್ಯರೆನಿಸಿಕೊಳ್ಳಲೂ ಯಾರಿಗೂ ಆಸ್ಪದ ನೀಡಲಿಲ್ಲ. ತಮ್ಮ ಯಾವ ಸ್ಮೃತಿಶೇಷವೂ ಉಳಿಯಬಾರದೆಂದಿದ್ದ ಅವರ ನಿರ್ದೇಶನದಂತೆ ಅವರ ಅವಸಾನದ ನಂತರ ಒಂದು ಚಿತೆಯಲ್ಲಿ ಅವರ ಶರೀರವನ್ನೂ ಇನ್ನೊಂದರಲ್ಲಿ ಅವರು ಬಳಸುತ್ತಿದ್ದ ಜಪಮಾಲಾದಿಗಳನ್ನೂ ದಹನಮಾಡಲಾಯಿತು. ಆ ಜ್ವಾಲೆ ಶಾಂತವಾಗುತ್ತಿದ್ದಂತೆ ದೈವಿಕವೆಂಬಂತೆ ಗಂಗಾಪ್ರವಾಹ ಬಂದು ಆ ಎಲ್ಲ ಅವಶೇಷಗಳನ್ನು ಬಗಲಿಗೆ ಹಾಕಿಕೊಂಡು ಹೊರಟುಹೋಯಿತು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat