ಇಸ್ರೇಲಿನ ಗುಪ್ತಚರ ಸಂಸ್ಥೆ, ’ಮೊಸಾದ’ದ ಹೆಸರನ್ನು ಬಹಳಷ್ಟು ಜನರು ಕೇಳಿರಲಾರರು. ಅದಕ್ಕೆ ಕಾರಣ ಅದು ಪ್ರಚಾರದಿಂದ ದೂರವಿರಲು ಇಷ್ಟಪಡುತ್ತದೆ. ಅದು ತೆರೆಯ ಮರೆಯಲ್ಲಿ ಇದ್ದೇ ತನ್ನ ಕಾಯಕದಲ್ಲಿ ತೊಡಗಿರುತ್ತದೆ. ಎರಡನೇ ಮಹಾಯುಧ್ಧದ ಕಾಲದಲ್ಲಿ ಯಹೂದಿ ಜನರ ನರಮೇಧ ಮಾಡಿದ ಪಾಪಿಗಳನ್ನು ಶೋಧಮಾಡಿ ಅವರನ್ನು ನ್ಯಾಯಾಲಯದ ಕಟ್ಟೆಗೆ ತಂದು ನಿಲ್ಲಿಸುವುದು, ಇಲ್ಲವೇ ಅವರನ್ನು ಹತ್ಯೆಗೈಯುvuದು, ಇದು ಅದರ ಪ್ರಾರಂಭಿಕ ಗುರಿಯಾಗಿತ್ತು. ಇಸ್ರೇಲ್ ತನ್ನದೇ ಅಸ್ತಿತ್ವ ಕಂಡುಕೊಂಡ ಮೇಲೆ ಅದರ ಶತ್ರುಗಳ ಸಂಖ್ಯೆ ಬೆಳೆಯತೊಡಗಿತು. ಈಗ ಅದಕ್ಕೆ ಅನಿವಾರ್ಯವಾಗಿ ಅಂತರರಾಷ್ಟ್ರೀಯ ರಾಜಕಾರಣದಲ್ಲಿ […]













